Hal Shashti: ಇಂದು ಬಲರಾಮ ಜಯಂತಿ- ಈ ಪವಿತ್ರ ದಿನದ ಮಹತ್ವವೇನು, ಹಬ್ಬ ಹೇಗೆ ಆಚರಿಸಬೇಕು?

ಇಂದು ಬಲರಾಮ ಜಯಂತಿ. ಬಲರಾಮ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು ಶ್ರೀಕೃಷ್ಣನ ಅಣ್ಣ ಅಂತ ಅಷ್ಟೇ.ಇಂದಿನ ಈ ಪವಿತ್ರ ದಿನವಾದ ಬಲರಾಮನ ಜಯಂತಿಯ ಶುಭ ಮುಹೂರ್ತ, ಮಹತ್ವ, ಆಚರಣೆ ಬಗ್ಗೆ ನಾವಿಲ್ಲಿ ಸವಿವರವಾಗಿ ತಿಳಿದುಕೊಳ್ಳೋಣ

ಹಾಲ ಷಷ್ಠಿ 2022

ಹಾಲ ಷಷ್ಠಿ 2022

  • Share this:
ರೋಹಿಣಿ ಮತ್ತು ವಸುದೇವರ ಏಳನೇ ಪುತ್ರ, ಭಗವಾನ್ ಶ್ರೀ ಕೃಷ್ಣನ (Shri Krishna) ಅಣ್ಣ ಬಲರಾಮ ಅವರತಾರವೆತ್ತಿ ಭೂಮಿಗೆ ಬಂದ ದಿನವನ್ನು ಹಾಲ ಷಷ್ಠಿ ಅಥವಾ ಬಲರಾಮ (Balaram) ಜಯಂತಿಯನ್ನಾಗಿ ಆಚರಿಸಲಾಗುತ್ತದೆ.  ಭಾದ್ರಪದ ಮಾಸದ ಕೃಷ್ಣ ಪಕ್ಷದ ಆರನೆಯ ದಿನದಂದು ಈ ಪವಿತ್ರ ದಿನವನ್ನು (Holy day) ವಿಶೇಷವಾಗಿ ಕೃಷಿ ಕುಟುಂಬದವರು (farming family) ಆಚರಿಸುತ್ತಾರೆ. ದೇಶದ ಬೇರೆ ಬೇರೆ ಭಾಗದಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ರಾಜಸ್ಥಾನದಲ್ಲಿ (Rajastan) ಇದನ್ನು 'ಚಂದ್ರ ಷಷ್ಠಿ' ಎಂದು ಆಚರಿಸಿದರೆ, ಗುಜರಾತ್‌ನಲ್ಲಿ ಈ ದಿನವನ್ನು 'ರಂಧನ್ ಛಾತ್' (Randhan chhath) ಎಂದು ಆಚರಿಸಲಾಗುತ್ತದೆ. ಮತ್ತು ಬ್ರಿಜ್‌ನಲ್ಲಿ ಇದನ್ನು 'ಬಲದೇವ ಛಾತ್' ಎಂದು ಕರೆಯಲಾಗುತ್ತದೆ.

ಇಂದು ಬಲರಾಮ ಜಯಂತಿ. ಇಂದಿನ ಈ ಪವಿತ್ರ ದಿನವಾದ ಬಲರಾಮನ ಜಯಂತಿಯ ಶುಭ ಮುಹೂರ್ತ, ಮಹತ್ವ, ಆಚರಣೆ ಬಗ್ಗೆ ನಾವಿಲ್ಲಿ ಸವಿವರವಾಗಿ ತಿಳಿದುಕೊಳ್ಳೋಣ.

  • ಷಷ್ಠಿ ತಿಥಿ ಆರಂಭ - ಮಂಗಳವಾರ, 16ನೇ ಆಗಸ್ಟ್, 2022 - 08:17 PM ರಿಂದ ಪ್ರಾರಂಭ

  • ಷಷ್ಠಿ ತಿಥಿ ಅಂತ್ಯ - ಬುಧವಾರ, 17ನೇ ಆಗಸ್ಟ್, 2022 - 08:24PM ವರೆಗೆ ಷಷ್ಠಿ ತಿಥಿ ಇರುತ್ತದೆ.


ಹಾಲ ಷಷ್ಠಿ ಮಹತ್ವ
ಬಲರಾಮ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು ಶ್ರೀಕೃಷ್ಣನ ಅಣ್ಣ ಅಂತ ಅಷ್ಟೇ. ಆದರೆ ಈ ವಿಚಾರಗಳಿಗಿಂತಲೂ ಮಿಗಿಲಾಗಿ ಸಾಕಷ್ಟು ಸಂಗತಿಗಳು ಬಲರಾಮನ ಕಥೆಯಲ್ಲಿವೆ. ಅತ್ಯಂತ ಶಕ್ತಿ ಶಾಲಿಯಾದ ಬಲರಾಮನು ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣುವಿನ 8ನೇ ಅವತಾರ.

ಭಗವಾನ್ ಬಲರಾಮನು ಭಗವಾನ್ ವಿಷ್ಣುವು ವಿಶ್ರಮಿಸುವ ಶೇಷ ನಾಗನ ಅವತಾರ ಎನ್ನಲಾಗಿದೆ. ಶ್ರೀ ವಿಷ್ಣುವಿನ ಅವತಾರದ ಜೊತೆಗೆ ಅನೇಕ ಗ್ರಂಥಗಳು ಬಲರಾಮನನ್ನು ಆದಿ ಅನಂತ ಶೇಷ ನಾಗ ಅವತಾರ ಎಂದು ಹೇಳಿವೆ. ನಂತರ ದ್ವಾಪರ ಯುಗದಲ್ಲಿ ಶೇಷ ನಾಗನು ಮಾನವನಾಗಿ ಬಲರಾಮನ ಅವತಾರ ಎತ್ತಿದನು ಎನ್ನಲಾಗಿದೆ. ಬಲರಾನನನ್ನು ಬಲಭದ್ರ ಮತ್ತು ಹಲಧರ ಎಂದು ಸಹ ಕರೆಯಲಾಗುತ್ತದೆ.

ಲಕ್ಷ್ಮಣನು ಬಲರಾಮನಾಗಿ ಪುನರ್ಜನ್ಮ ಪಡೆದನು
ರಾಮಾಯಣದಲ್ಲಿ ಲಕ್ಷ್ಮಣನು ರಾಮನ ತಮ್ಮನಾಗಿದ್ದನು. ತನ್ನ ಸಹೋದರನಿಗೆ ಹಿರಿಯ ಸಹೋದರನಾಗಿ ಇರಬೇಕು ಎಂದು ಬಯಸಿದ್ದನು. ಹಾಗಾಗಿಯೇ ನಂತರದ ಜನ್ಮದಲ್ಲಿ ಶ್ರೀಕೃಷ್ಣ ಹಿರಿಯ ಸಹೋದರ ಬಲರಾಮನಾಗಿ ಅವತರಿಸಿ ಬಂದನು. ರಾಮಾಯಣದಲ್ಲಿ ರಾಮ ಲಕ್ಷ್ಮಣರಂತೆ ಮಹಾ ಭಾರತದಲ್ಲಿ ಕೃಷ್ಣ ಬಲರಾಮನು ಅತ್ಯಂತ ಪ್ರೀತಿಯ ಸಹೋದರರಾಗಿ ಇದ್ದರು.

ಬಲರಾಮನ ಆಯುಧ ನೇಗಿಲು
ಬಲರಾಮನನ್ನು ಕೃಷಿಯ ದೇವ ಎಂದು ಕರೆಯಲಾಗುವುದು. ಬಲಶಾಲಿಯಾದ ಬಲರಾಮನ ಆಯುಧ ನೇಗಿಲು. ಯಾರು ಕೃಷಿಯಲ್ಲಿ ಏಳಿಗೆ ಹೊಂದಲು ಬಯಸುತ್ತಾರೋ ಅವರು ಬಲರಾಮನ ಪೂಜೆ ಮಾಡಬೇಕು ಎಂದು ವಿಷ್ಣುಧರ್ಮೋತ್ತರ ಪುರಾಣವು ತಿಳಿಸುತ್ತದೆ. ಭಗವಾನ್ ಬಲರಾಮನ ಆಯುಧ ನೇಗಿಲಾಗಿರುವುದರಿಂದ ಈ ಹಬ್ಬವನ್ನ ಹಾಲ ಷಷ್ಟಿ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Krishna Janmashtami 2022: ಕೃಷ್ಣನಿಗೆ ಬೆಣ್ಣೆ ಅಂದ್ರೆ ಯಾಕ್ ಅಷ್ಟು ಇಷ್ಟ? ಅದಕ್ಕೂ ಒಂದು ಮಹತ್ವವಿದೆಯಂತೆ

ಹಿಂದೂ ಭಕ್ತರು, ವಿಶೇಷವಾಗಿ ಕೃಷಿಗೆ ಸೇರಿದ ಸಮುದಾಯ, ಈ ದಿನದಂದು ಬಲರಾಮನ ಪವಿತ್ರ ಸಾಧನ ನೇಗಿಲನ್ನು ಪೂಜಿಸುತ್ತಾರೆ. ಈ ದಿನದಂದು ಮಹಿಳೆಯರು ಹಾಲ ಷಷ್ಠಿ ವ್ರತವನ್ನು ಆಚರಿಸುತ್ತಾರೆ ಮತ್ತು ಅರ್ಪಿಸುತ್ತಾರೆ.

ಹಾಲ ಷಷ್ಠಿ ಆಚರಣೆಗಳು:

  1. ಮಹಿಳೆಯರು ಬೆಳಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡುತ್ತಾರೆ.

  2. ಒಂದು ಸಣ್ಣ ಕೊಳವನ್ನು ನಿರ್ಮಿಸಿ ಪೂಜೆಗೆ ತಯಾರಿ ಮಾಡುತ್ತಾರೆ,

  3.  ಹುಲ್ಲು ಮತ್ತು ಪಲಾಶಾದಿಂದ ನೇಗಿಲನ್ನು ಹೋಲುವ ಬಲರಾಮನ ಆಯುಧ ಮಾಡುತ್ತಾರೆ.

  4. ಬಲರಾಮನಿಗೆ ಗೋಧಿ, ಕಾಳು, ಭತ್ತ, ಜೋಳ, ಬೇಳೆ, ರಾಗಿ, ಬಾರ್ಲಿ ಎಲ್ಲವನ್ನೂ ಭಗವಂತನಿಗೆ ಅರ್ಪಿಸಲಾಗುತ್ತದೆ.

  5. ಮಹಿಳೆಯರು ಹಾಲ ಷಷ್ಠಿ ಕಥಾ ಪಠಿಸುತ್ತಾರೆ.

  6. ಮಹಿಳೆಯರು ತಮ್ಮ ಮಕ್ಕಳ ಮತ್ತು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಯಾರು ಗಂಡು ಮಗುವನ್ನು ಬಯಸುತ್ತಾರೋ ಅವರು, ಭಗವಂತ ಬಲರಾಮನ ಬಳಿ ಕೋರಿಕೊಳ್ಳುತ್ತಾರೆ.

  7. ಈ ದಿನ ಹಸುವಿನ ಹಾಲು ಮತ್ತು ಮೊಸರು ಬಳಸುವುದನ್ನು ಸಹ ನಿಷೇಧಿಸಲಾಗಿದೆ. ಆದರೆ
    ಎಮ್ಮೆ ಹಾಲು ಮತ್ತು ಮೊಸರು ಬಳಸಬಹುದು.

  8. ಮಹಿಳೆಯರು ಈ ದಿನ ಹಣ್ಣುಗಳು, ಧಾನ್ಯಗಳು ಮತ್ತು ಹಸುವಿನ ಹಾಲನ್ನು ಸೇವಿಸುವಂತಿಲ್ಲ.

  9. ಮಹಿಳೆಯರು ರಾತ್ರಿ ಸಾತ್ವಿಕ ಊಟ ಮಾಡುವ ಮೂಲಕ ತಮ್ಮ ಉಪವಾಸವನ್ನು ಮುರಿಯಬಹುದು.


ಇದನ್ನೂ ಓದಿ:  Krishna Janmashtami 2022: ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎಷ್ಟೆಲ್ಲಾ ಲಾಭ ಇದೆ ನೋಡಿ

ಈ ಹಾಲ ಷಷ್ಠಿ ವ್ರತವನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಈ ವ್ರತವನ್ನು ಶ್ರೀ ಕೃಷ್ಣನು ಮಹಾಭಾರತದಲ್ಲಿ ಬರುವ ಉತ್ತರೆಗೆ ಈ ವ್ರತದ ಪ್ರಾಮುಖ್ಯತೆಯನ್ನು ತಿಳಿಸಿ ಯುದ್ಧದಲ್ಲಿ ಅವಳ ಗರ್ಭಕ್ಕೆ ಬಿದ್ದ ಬಾಣದಿಂದ ಆಕೆಯ ಗರ್ಭವನ್ನು ರಕ್ಷಿಸುತ್ತಾನೆ ಎಂಬ ಕಥೆ ಇದೆ. ಹೀಗಾಗಿ ಈ ಮಂಗಳಕರ ವ್ರತ ಮತ್ತು ವಂಶ ವೃದ್ಧಿಯಲ್ಲಿ ಅತ್ಯಂತ ಶ್ರೇಷ್ಠವಾಗಿದೆ.
Published by:Ashwini Prabhu
First published: