• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಸರೋಗೇಟ್ ಆ್ಯಡ್ಸ್‌ಗೆ ನಿರ್ಬಂಧ ಹಾಕಿದೆಯಾ ಸರ್ಕಾರ? ಹಾಗಾದ್ರೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

Explained: ಸರೋಗೇಟ್ ಆ್ಯಡ್ಸ್‌ಗೆ ನಿರ್ಬಂಧ ಹಾಕಿದೆಯಾ ಸರ್ಕಾರ? ಹಾಗಾದ್ರೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸರೋಗೇಟ್ ಆ್ಯಡ್ಸ್ ಎಂಬ ಪದದ ಬಗ್ಗೆ ಕೇಳಿದ್ದೀರಾ? ಹೌದು, ಇಂತಹ ವರ್ಗದ ಜಾಹೀರಾತುಗಳೂ ಸಹ ಇದ್ದು ಈಗ ಸರ್ಕಾರ ತಂದಿರುವ ಹೊಸ ಮಾರ್ಗದರ್ಶಿಗಳ ಅನ್ವಯ ದಾರಿ ತಪ್ಪಿಸುವಂತಹ ಅಂಶಗಳನ್ನು ತಡೆಯುವ ದೃಷ್ಟಿಯಿಂದ ಸರೋಗೇಟ್ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಅದರಿಂದಾಗಿ ಇಂತಹ ಜಾಹೀರಾತುಗಳನ್ನೇ ತಮ್ಮ ಬ್ರ್ಯಾಂಡ್ ಪ್ರಚಾರಕ್ಕಾಗಿ ಅವಲಂಬಿಸಿರುವ ಉದ್ದಿಮೆಗಳು ಈಗ ಸರ್ಕಾರವನ್ನು ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿವೆ.

ಮುಂದೆ ಓದಿ ...
  • Share this:

ನೀವು ಬಾಡಿಗೆ ತಾಯಿ ಅಥವಾ ಸರೋಗೇಟ್ (Surrogate) ತಾಯಿ ಎಂಬ ಪದದ ಬಗ್ಗೆ ಈಗಾಗಲೇ ತಿಳಿದಿರುತ್ತೀರಿ. ಆದರೆ, ಸರೋಗೇಟ್ ಆಡ್ಸ್ (Surrogate Ads) ಎಂಬ ಪದದ ಬಗ್ಗೆ ಕೇಳಿದ್ದೀರಾ? ಹೌದು, ಇಂತಹ ವರ್ಗದ ಜಾಹೀರಾತುಗಳೂ (Advertisement) ಸಹ ಇದ್ದು ಈಗ ಸರ್ಕಾರ ತಂದಿರುವ ಹೊಸ ಮಾರ್ಗದರ್ಶಿಗಳ ಅನ್ವಯ ದಾರಿ ತಪ್ಪಿಸುವಂತಹ ಅಂಶಗಳನ್ನು ತಡೆಯುವ ದೃಷ್ಟಿಯಿಂದ ಸರೋಗೇಟ್ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಅದರಿಂದಾಗಿ ಇಂತಹ ಜಾಹೀರಾತುಗಳನ್ನೇ ತಮ್ಮ ಬ್ರ್ಯಾಂಡ್ (Brand) ಪ್ರಚಾರಕ್ಕಾಗಿ ಅವಲಂಬಿಸಿರುವ ಉದ್ದಿಮೆಗಳು ಈಗ ಸರ್ಕಾರವನ್ನು (Government) "ಬಾಡಿಗೆ/ಪರ್ಯಾಯ ಜಾಹೀರಾತು" ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸುತ್ತಿವೆ.


ಏನಿದು ಸರೋಗೇಟ್ ಜಾಹೀರಾತು?
ಹೇಗೆ ಕೆಲವರು ಬಾಡಿಗೆ ತಾಯಿಯ ಮೂಲಕ ಸಂತಾನ ಪಡೆದು ತಾವು ತಾಯಿಯಾಗಬಯಸುತ್ತಾರೋ ಅದೇ ಒಂದು ರೀತಿಯಲ್ಲಿ ಕೆಲವು ನಿಯಂತ್ರಿಸಲಾದ ಅಥವಾ ಸಾರ್ವಜನಿಕವಾಗಿ ಮುಕ್ತ ರೂಪದಲ್ಲಿ ಹೇಳಿಕೊಳ್ಳಲಾಗದಂತಹ ಕೆಲವು ಉತ್ಪನ್ನಗಳನ್ನು ಪರೋಕ್ಷವಾಗಿ ಪ್ರಚಾರ ಮಾಡುವುದಕ್ಕಾಗಿ ಬಳಸುವಂತಹ ಜಾಹೀರಾತುಗಳನ್ನು ಸರೋಗೇಟ್ ಜಾಹೀರಾತುಗಳು ಎಂದು ಕರೆಯುತ್ತಾರೆ.


ಉದಾಹರಣೆಗೆ ಮದ್ಯದ ಜಾಹೀರಾತುಗಳಾದ ಕ್ಲಬ್ ಸೋಡಾ ಅಥವಾ ಇಂಪೆರಿಯಲ್ ಬ್ಲ್ಯೂ. ಇವೆರಡನ್ನು ಸಾಮಾನ್ಯವಾಗಿ ಸೋಡಾದ ರೂಪದಲ್ಲೂ ಅಥವಾ ಹಿಟ್ ಮ್ಯೂಸಿಕ್ ಸಿಡಿ ಎಂತಲೂ ಜಾಹೀರಾತುಗಳಲ್ಲಿ ತೋರಿಸುತ್ತಾರಾದರೂ ಇದರ ಹಿಂದಿರುವ ಮೂಲ ಉದ್ದೇಶ ಆ ಬ್ರ್ಯಾಂಡಿನ ಪ್ರಮುಖವಾದ ಅಲ್ಕೋಹಾಲ್ ಉತ್ಪನ್ನದ ಬಗ್ಗೆ ಜನರ ಗಮನಸೆಳೆಯುವುದೇ ಆಗಿರುತ್ತದೆ. ಅದರಂತೆ ತಂಬಾಕುವಿನ ಉತ್ಪನ್ನದ ಬಗ್ಗೆ ಜನರಲ್ಲಿ ಅರಿವು ಉಂಟಾಗುವಂತೆ ಅದನ್ನು ಕೇವಲ ಪಾನ್ ಮಸಾಲಾ ಎಂಬ ರೂಪದಲ್ಲಿ ತೋರಿಸುವುದು ಸಹ ಸರೋಗೇಟ್ ಜಾಹೀರಾತಿಗೆ ಉದಾಹರಣೆಯಾಗಿದೆ.


ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?


ಭಾರತದಲ್ಲಿ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಸಿಗರೆಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಆಕ್ಟ್ 2003ರ ಅಡಿಯಲ್ಲಿ, ಭಾರತದಲ್ಲಿ ಸಿಗರೆಟ್ ಅಥವಾ ತಂಬಾಕುವಿನ ಯಾವುದೇ ಉತ್ಪನ್ನಗಳನ್ನು ಮುಕ್ತವಾಗಿ ಪ್ರಚಾರ ಮಾಡುವಂತಿಲ್ಲ ಅಥವಾ ಆ ಬಗ್ಗೆ ನೇರವಾಗಿ ಉತ್ಪನ್ನದ ಪ್ರಚಾರ ಮಾಡುವ ಜಾಹೀರಾತುಗಳನ್ನು ಬಿತ್ತರಿಸುವಂತಿಲ್ಲ. ಹಾಗಾಗಿ, ಅಲ್ಕೋಹಾಲ್ ಅಥವಾ ಇತರೆ ತಂಬಾಕು ಉತ್ಪನ್ನಗಳ ಬ್ರ್ಯಾಂಡುಗಳು ಜನರಿಗೆ ತಮ್ಮ ಉತ್ಪನ್ನಗಳ ಬಗ್ಗೆ ಗಮನ ಸೆಳೆಯಲೆಂದು ಪರೋಕ್ಷವಾಗಿ ಪ್ರತ್ಯೇಕ ಇತರೆ ಸಾಮಾನ್ಯ ಉತ್ಪನ್ನಗಳಾದಂತಹ ನೀರು, ಸೋಡಾ ಅಥವಾ ಇತರೇ ಪಾನೀಯ ಇಲ್ಲವೇ ಕೇವಲ ಮಸಾಲಾ ಅಡಿಕೆಗಳನ್ನು ತೋರಿಸುವ ಜಾಹೀರಾತುಗಳನ್ನು ಸಿದ್ಧಪಡಿಸಿ ಬಿತ್ತರಿಸುತ್ತಾರೆ. ಇವುಗಳನ್ನು ವೀಕ್ಷಿಸುವ ಜನರು ತಮ್ಮ ಬ್ರ್ಯಾಂಡಿನ ಪ್ರಮುಖ ಉತ್ಪನ್ನದೆಡೆ ಅವರು ಆಕರ್ಷಿತರಾಗುವಂತೆ ಮಾಡುವುದೇ ಈ ಸರೋಗೇಟ್ ಜಾಹೀರಾತುಗಳ ಮುಖ್ಯ ಉದ್ದೇಶವಾಗಿರುತ್ತದೆ.


ಹೊಸ ಮಾರ್ಗದರ್ಶಿ
ಅಷ್ಟಕ್ಕೂ ಜೂನ್ 10 ರಂದು ಸೆಂಟ್ರಲ್ ಕನ್ಸ್ಯೂಮರ್ ಪ್ರೊಟೆಕ್ಷನ್ ಅಥಾರಿಟಿ (CCPA)ಯು ಹೊಸ ಮಾರ್ಗದರ್ಶಿಗಳನ್ನು ಜಾರಿ ಮಾಡಿದ್ದು ಇದನ್ನು ಪ್ರಥಮ ಬಾರಿಗೆ ಉಲ್ಲಂಘಿಸುವವರ ವಿರುದ್ಧ ಹತ್ತು ಲಕ್ಷ ರೂಪಾಯಿಯ ದಂಡ ಹಾಗೂ ಆ ನಂತರ ಮತ್ತೆ ಉಲ್ಲಂಘಿಸಿದರೆ ಐವತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಲಿದೆ ಎಂದುತಿಳಿದುಬಂದಿದೆ. ಇತ್ತೀಚೆಗೆ ಪರ್ಫ್ಯೂಮ್ ಜಾಹೀರಾತೊಂದರ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಎಚ್ಚೆತ್ತುಕೊಂಡಿದ್ದು ಹೊಸ ಮಾರ್ಗದರ್ಶಿಗಳನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.


ಹೊಸ ಜಾಹೀರಾತು ಮಾರ್ಗದರ್ಶಿಗಳು ಹೇಳುವುದೇನು?
ದಾರಿತಪ್ಪಿಸುವ ಜಾಹೀರಾತುಗಳ ತಡೆಗಟ್ಟುವಿಕೆ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳು 2022 ಕುರಿತು ಹೊಸ ಮಾರ್ಗದರ್ಶಿಗಳನ್ನು "ಗ್ರಾಹಕರ ಸುರಕ್ಷತೆ" ಹಾಗೂ "ಆಧಾರರಹಿತ ಹಕ್ಕುಗಳು, ಉತ್ಪ್ರೇಕ್ಷಿತ ಭರವಸೆಗಳು, ತಪ್ಪು ಮಾಹಿತಿ ಮತ್ತು ಸುಳ್ಳು ಕ್ಲೈಮ್‌ಗಳಿಂದ ಗ್ರಾಹಕರು ಮೋಸಹೋಗದಂತೆ ಖಚಿತಪಡಿಸಿಕೊಳ್ಳಲು" ಜಾರಿಗೆ ತರಲಾಗಿದೆ.


ಇದನ್ನೂ ಓದಿ: Explained: ರೇವ್ ಪಾರ್ಟಿ ಎಂದರೇನು? ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯೋದು ಹೇಗೆ? ಇಲ್ಲಿದೆ ಸ್ಫೋಟಕ ಮಾಹಿತಿ


ಮಕ್ಕಳನ್ನು ಗುರಿಯಾಗಿಸಿಕೊಂಡ ಜಾಹೀರಾತುಗಳಲ್ಲಿ, ಕೆಲವು ಜಾಹೀರಾತುಗಳನ್ನು ಅನರ್ಹಗೊಳಿಸಲು ವಿವರವಾದ ಮಾನದಂಡಗಳನ್ನು ವಿವರಿಸಲಾಗಿದೆ, ಅವುಗಳ ಪೈಕಿ ಒಂದು ಉದಾಹರಣೆಗೆ ತೆಗೆದುಕೊಳ್ಳುವುದಾದರೆ: ಮಕ್ಕಳ ದೈಹಿಕ ಆರೋಗ್ಯ ಅಥವಾ ಮಾನಸಿಕ ಯೋಗಕ್ಷೇಮಕ್ಕೆ ಹಾನಿಕಾರಕ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಜಾಹೀರಾತುಗಳು, ಇದರಿಂದ ಮಕ್ಕಳು "ಅಪಹಾಸ್ಯಕ್ಕೊಳಗಾಗುವ ಅಥವಾ ಕಡಿಮೆ ಜನಪ್ರಿಯರಾಗುವ ಸಾಧ್ಯತೆಯಿದೆ" ಎಂದು ಇದು ಸೂಚಿಸುತ್ತದೆ.


ಇನ್ನೊಂದು ಉದಾಹರಣೆ ಎಂದರೆ ಸರಕುಗಳನ್ನು ಖರೀದಿಸುವಾಗ "ಕೇವಲ" ಅಥವಾ "ಮಾತ್ರ" ಎಂಬ ಪದಗಳನ್ನು ಬಳಸುವಿಕೆ. ಅದಾಗಲೇ ಕೆಲವು ಸರಕುಗಳ ಮೇಲೆ ಹೆಚ್ಚುವರಿ ಶುಲ್ಕಗಳು ಇರುವಾಗಲೂ ಆ ಸರಕುಗಳ ಬೆಲೆ ಕಡಿಮೆ ವೆಚ್ಚದಾಯಕವೆಂದು ತೋರಲು 'ಕೇವಲ' ಅಥವಾ 'ಮಾತ್ರ' ನಂತಹ ಅರ್ಹತಾ ಮಾನದಂಡಗಳನ್ನುಳ್ಳ ಪದಗಳನ್ನು ಬಳಸುವ ಜಾಹೀರಾತುಗಳು.


ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರಾಸ್ನನ್ ಮಾಡಿದ್ದ ಪಾನ್ ಮಸಾಲಾ ಜಾಹೀರಾತು
ನಿಮಗೆಲ್ಲ ಗೊತ್ತಿರುವ ಹಾಗೆ ಕೆಲ ವರ್ಷಗಳ ಹಿಂದೆ ಜನಪ್ರೀಯ ಹಾಲಿವುಡ್ ನಟ ಹಾಗೂ ಜೇಮ್ಸ್ ಬಾಂಡ್ ಖ್ಯಾತಿಯ ನಟ ಪಿಯರ್ಸ್ ಬ್ರಾಸ್ನನ್ ಎಂಬುವವರು ಭಾರತೀಯ ಪಾನ್ ಮಸಾಲಾ ಒಂದರ ಜಾಹೀರಾತಿನಲ್ಲಿ ಅಭಿನಯಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಬ್ರಾಸ್ನನ್ ಅವರನ್ನು ದೆಹಲಿ ನ್ಯಾಯಾಲಯ ಪ್ರಶ್ನಿಸಿತ್ತು. ನ್ಯಾಯಾಲಯವು ಅಡಿಕೆ ಅಥವಾ ಸುಪಾರಿ ಎಂಬುದು ಕ್ಯಾನ್ಸರ್ ಉಂಟು ಮಾಡುವ ಪದಾರ್ಥವಾಗಿದೆ ಎಂದು ಹೇಳಿತ್ತು.


ಈ ಸಂದರ್ಭದಲ್ಲಿ ಬ್ರಾಸ್ನನ್ ಅವರು ತಮಗೆ ಕಂಪನಿಯು "ಮೋಸ" ಮಾಡಿದೆ, ಇದು "ಮೌತ್ ಫ್ರೆಶ್ನರ್" ಒಂದರ ಜಾಹೀರಾತು ಎಂದು ಮಾಹಿತಿ ನೀಡಿ, ನಂಬಿಸಿ ತನ್ನನ್ನು ಈ ಜಾಹೀರಾತಿನಲ್ಲಿ ಬಳಸಿಕೊಂಡಿದೆ, ತಮಗೆ ಇದೊಂದು ಸುಪಾರಿ ಎಂಬ ವಿಷಯ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಇದು ಸರೋಗೇಟ್ ಜಾಹೀರಾತಿಗೆ ಒಂದು ಉದಾಹರಣೆಯಾಗಿದ್ದು ದಾರಿ ತಪ್ಪಿಸುವಂತಹ ಅಂಶ ಇದು ಒಳಗೊಂಡಿದೆ ಎಂದು ಇದರಿಂದ ತಿಳಿದುಬರುತ್ತದೆ.


ಜಾಹೀರಾತುದಾರರಿಗೆ ಏಕೆ ಬೇಕಾಗಿದೆ ಸ್ಪಷ್ಟನೆ?
ಈಗಾಗಲೇ ನಿಮಗೆ ಈ ಸರೋಗೇಟ್ ಜಾಹೀರಾತುಗಳು ತೋರಿಸುವುದೊಂದು ಆದರೆ ಅದು ಹೇಳುತ್ತಿರುವುದು ಇನ್ನೊಂದರ ಬಗ್ಗೆ ಎಂಬ ವಿಷಯ ಗೊತ್ತಾಗಿದೆ. ಇಂತಹ ಜಾಹೀರಾತಿನಲ್ಲಿ ಬ್ರ್ಯಾಂಡಿನ ಪ್ರಮುಖ ಉತ್ಪನ್ನದ ಲೋಗೊ, ನಿರ್ದಿಷ್ಟ ಬಣ್ಣ ಇತ್ಯಾದಿ. ಗಳನ್ನು ಯಥಾವತ್ತಾಗಿ ಬಳಸಲಾಗಿರುತ್ತದೆ ಆದರೆ ತೋರಿಸುವ ಜಾಹೀರಾತು ಉತ್ಪನ್ನ ಮಾತ್ರವೇ ಭಿನ್ನವಾಗಿರುತ್ತದೆ. ಹಾಗಾಗಿ, ಹೊಸ ನಿಯಮದ ಅನ್ವಯ ಇನ್ನು ಮುಂದೆ ಆ ಬ್ರ್ಯಾಂಡಿನ ಪ್ರಮುಖ ಉತ್ಪನ್ನದ ಬಗ್ಗೆ ಗೊತ್ತಾಗುವಂತೆ ಅದಕ್ಕೆ ಬಳಸಲಾದ ಲೊಗೊ, ಬಣ್ಣ ಇತ್ಯಾದಿಗಳನ್ನೂ ಸಹ ಬಳಸಲು ಅನುಮತಿಸಲಾಗಿಲ್ಲ.


ಪ್ರಸ್ತುತ ಮದ್ಯ ಮಾರಾಟಗಾರರಿಗೆ ಗೊಂದಲ ಉಂಟಾಗಿರುವ ಅಂಶವೆಂದರೆ ಇದೇ ಆಗಿದ್ದು ಈ ಬಗ್ಗೆ ಅವರಿಗೆ ಹೆಚ್ಚಿನ ಸ್ಪಷ್ಟನೆ ಬೇಕಾಗಿದೆ. ಕಂಪನಿಗಳು ತಮ್ಮ ಲೋಗೋ ಅಥವಾ ಕಂಪನಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ನೀರಿನ ಬಾಟಲ್ ಹಾಗೂ ಹಲವು ಸಂಗೀತ ಅಥವಾ ಯಾವುದೇ ಸಮಾರಂಭದಲ್ಲಿ ಲಗತ್ತಿಸಿರುತ್ತವೆ. ಇವುಗಳಲ್ಲಿ ಕೆಲ ಸಾಮಾನ್ಯ ಉತ್ಪನ್ನಗಳು ಸಹ ಕಂಪನಿಯಿಂದ ಉತ್ಪಾದಿಸಲ್ಪಡುತ್ತವೆ. ಇಂತಹ ಸಂದರ್ಭದಲ್ಲಿ ಕಂಪನಿ ತಮ್ಮ ಲೊಗೊ ಬಳಸಿ ನೀರಿನಂತಹ ಉತ್ಪನ್ನಗಳನ್ನೂ ಸಹ ಜಾಹೀರಾತಿನ ಮೂಲಕ ತೋರಿಸಲಾಗದೇ ಎಂದು ಸದ್ಯ ಎದ್ದಿರುವ ಪ್ರಶ್ನೆಯಾಗಿದೆ.


ಇದನ್ನೂ ಓದಿ: Explained: ಪ್ರತಿಯೊಬ್ಬರೂ ಮಾಂಸಹಾರ ಬಿಟ್ಟು ಸಸ್ಯಾಹಾರಿಗಳಾದರೆ ಪರಿಣಾಮ ಏನಾಗಬಹುದು ಗೊತ್ತಾ?


ಒಟ್ಟಾರೆಯಾಗಿ ಇದು ಒಂದು ಹಂತದಲ್ಲಿ ಗೊಂದಲಮಯ ವಾತಾವರಣ ಮೂಡಿಸುವಂತಹ ಸ್ಥಿತಿಯಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರವು ಈ ಬಗ್ಗೆ ಮಾರಾಟಗಾರರಿಗೆ ಅವರಿಗೆ ಬೇಕಾದ ಸ್ಪಷ್ಟನೆ ನೀಡುವಲ್ಲಿ ಸಮರ್ಥವಾಗುತ್ತದೋ ಅಥವಾ ಇನ್ನೇನಾದರೂ ಪರ್ಯಾಯ ಮಾರ್ಗದ ಹುಡುಕಾಟಕ್ಕೆ ನಿಲ್ಲಬೇಕಾಗುತ್ತದೋ ಎಂಬುದನ್ನು ಕಾದು ನೋಡಬೇಕಷ್ಟೆ. ಆದರೆ ಇಲ್ಲಿ ಅಂತಿಮವಾಗಿ ಗಮನಿಸಬೇಕಾಗಿರುವ ಒಂದು ಅಂಶವೆಂದರೆ ಈಗಾಗಲೇ ಬಹು ಜನರಿಗೆ ಯಾವ ಬ್ರ್ಯಾಂಡ್ ಯಾವುದಕ್ಕೆ ಹೆಸರುವಾಸಿ ಎಂಬುದು ಈಗಾಗಲೇ ತಲೆಯಲ್ಲಿ ಅಚ್ಚಳಿಯದೆ ಕುಳಿತಿರುವುದು ಸತ್ಯ.

Published by:Ashwini Prabhu
First published: