ಇಂದಿನ Google doodle ನಲ್ಲಿರುವ ವ್ಯಕ್ತಿ ಯಾರು ಗೊತ್ತಾ? ಇವರ ಬಗ್ಗೆ ನೀವು ತಿಳಿಯಬೇಕಾಗಿರುವುದು ಇಲ್ಲಿದೆ

ಇಂದು ಅಂದರೆ ಜೂನ್ 4 ರಂದು ಗೂಗಲ್ ಒಂದು ಡೂಡಲ್ ರೂಪಿಸಿದ್ದು ಈ ಡೂಡಲ್ ಭಾರತದ ಪ್ರಖ್ಯಾತ ಗಣಿತಜ್ಞ ಹಾಗೂ ಭೌತಶಾಸ್ತ್ರಜ್ಞರಾದ ಸತ್ಯೇಂದ್ರ ನಾಥ್ ಬೋಸ್ ಅವರಿಗೆ ಮುಡಿಪಾಗಿದೆ.

ಗಣಿತಜ್ಞ ಹಾಗೂ ಭೌತಶಾಸ್ತ್ರಜ್ಞ ಸತ್ಯೇಂದ್ರ ನಾಥ್ ಬೋಸ್

ಗಣಿತಜ್ಞ ಹಾಗೂ ಭೌತಶಾಸ್ತ್ರಜ್ಞ ಸತ್ಯೇಂದ್ರ ನಾಥ್ ಬೋಸ್

  • Share this:
ಜಗತ್ತಿನ ದೈತ್ಯ ಸರ್ಚ್ ಎಂಜಿನ್ (Search engines) ಆಗಿರುವ ಗೂಗಲ್ (Google) ಆಗಾಗ ಎಲ್ಲ ರಂಗಗಳಲ್ಲಿ ಸಂಬಂಧಿಸಿದಂತೆ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿರುವ ಅತಿ ಶ್ರೇಷ್ಠ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅವರಿಗೆ ಮುಡಿಪಾಗಿ ತನ್ನದೆ ಆದ ಗೌರವವನ್ನು ವ್ಯಕ್ತಪಡಿಸುತ್ತಿರುತ್ತದೆ ಹಾಗೂ ಇದನ್ನು ಸಾಮಾನ್ಯವಾಗಿ ಗೂಗಲ್ ಡೂಡಲ್ (Google Doodle) ಎಂದು ಕರೆಯಲಾಗುತ್ತದೆ. ಇಂದು ಅಂದರೆ ಜೂನ್ 4 ರಂದು ಗೂಗಲ್ ಒಂದು ಡೂಡಲ್ ರೂಪಿಸಿದ್ದು ಈ ಡೂಡಲ್ ಭಾರತದ ಪ್ರಖ್ಯಾತ ಗಣಿತಜ್ಞ (Mathematician) ಹಾಗೂ ಭೌತಶಾಸ್ತ್ರಜ್ಞರಾದ (physicist) ಸತ್ಯೇಂದ್ರ ನಾಥ್ ಬೋಸ್ (Satyendra Nath Bose) ಅವರಿಗೆ ಮುಡಿಪಾಗಿದೆ.

ಗಣಿತಜ್ಞ ಹಾಗೂ ಭೌತಶಾಸ್ತ್ರಜ್ಞ ಸತ್ಯೇಂದ್ರ ನಾಥ್ ಬೋಸ್
ಬೋಸ್ ಅವರು 1920 ರಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ವಿಷಯಕ್ಕೆ ಸಂಬಂಧಿಸಿದಂತೆ ತಾವು ಮಾಡಿರುವ ಅದ್ಭುತ ಕೆಲಸಗಳು ಹಾಗೂ ಬೋಸ್-ಐನ್ಸ್ಟೀನ್ ಕಂಡನ್ಸೇಟ್ ಕುರಿತಾದ ಅವರ ಕೊಡುಗೆಯ ಬಗ್ಗೆ ಜಗತ್ತಿನಾದ್ಯಂತ ಖ್ಯಾತಿಗಳಿಸಿದ್ದಾರೆ. ಇಂದು ಈ ಮಹಾನ್ ವ್ಯಕ್ತಿಗೆ ತನ್ನ ಗೌರವ ಸಲ್ಲಿಸುವ ನಿಮಿತ್ತ ಗೂಗಲ್ ಸಂಸ್ಥೆ ಸೃಜನಾತ್ಮಕವಾಗಿ ತನ್ನ ಡೂಡಲ್ ರೂಪಿಸಿ ಸಮರ್ಪಿಸಿದೆ. ಸುಮಾರು 98 ವರ್ಷಗಳ ಹಿಂದೆ ಇದೇ ದಿನದಂದು ಅಂದರೆ ಜೂನ್ 4, 1924 ರಂದು ಬೋಸ್ ಅವರು ತಾವು ಸಿದ್ಧಪಡಿಸಿದ್ದ ಕ್ವಾಂಟಮ್ ವಿಷಯಕ್ಕೆ ಸಂಬಂಧಿಸಿದ ರಚನೆಗಳನ್ನು ಅಲ್ಬರ್ಟ್ ಐನ್ಸ್ಟೀನ್ ಅವರಿಗೆ ಕಳುಹಿಸಿಕೊಟ್ಟಿದ್ದರು.

ಇದನ್ನು ಸಮಗ್ರವಾಗಿ ಅವಲೋಕಿಸಿದ್ದ ಮಹಾನ್ ಐನ್ಸ್ಟೀನ್ ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ವಿಷಯದಲ್ಲಿ ಇದೊಂದು ಮೈಲಿಗಲ್ಲು ಎನ್ನಬಹುದಾದಂತಹ ಆವಿಷ್ಕಾರ ಎಂದು ಮನಗಂಡರು ಹಾಗೂ ಅಂದಿನಿಂದ ಬೋಸ್ ಅವರು ಜಗತ್ತಿನಾದ್ಯಂತ ಬೋಸ್-ಐನ್ಸ್ಟೀನ್ ಕಂಡನ್ಸೇಟ್ ಗಾಗಿ ನೀಡಿದ ಅಪಾರ ಕೊಡುಗೆಯಿಂದಾಗಿ ಹೆಸರುವಾಸಿಯಾದರು.

ಬೋಸ್ ಅವರ ಕುರಿತ ವಿವರ
ಸತ್ಯೇಂದ್ರ ನಾಥ್ ಬೋಸ್ ಅವರು ಕೋಲ್ಕತ್ತಾದಲ್ಲಿ ಜನವರಿ ಒಂದು 1894 ರಲ್ಲಿ ಜನಿಸಿದರು. ಕೋಲ್ಕತ್ತಾದ ಅಂದಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಹಿಂದೂ ಸ್ಕೂಲ್ ಹಾಗೂ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪಡೆದರು. ಕೆಲ ಸುದ್ದಿ ಮಾಧ್ಯಮ ವರದಿಗಳ ಪ್ರಕಾರ, ಬೋಸ್ ಅವರಲ್ಲಿ ಗಣಿತಶಾಸ್ತ್ರದ ಬಗ್ಗೆ ಅತೀವ ಆಸಕ್ತಿ ಮೂಡುವಂತೆ ಕಿಡಿ ಹಚ್ಚಿದ್ದೇ ಅಕೌಂಟಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರ ತಂದೆ. ಅವರುಪ್ರತಿನಿತ್ಯ ತಮ್ಮ ಕೆಲಸಕ್ಕೆ ತೆರಳುವ ಮುಂಚೆ ಬೋಸ್ ಅವರಿಗೆ ಅಂಕಗಣಿತದ ಒಂದು ಸಮಸ್ಯೆಯನ್ನು ನೀಡಿ ಅವರು ಬರುವವರೆಗೆ ಅದನ್ನು ಪರಿಹರಿಸುವಂತೆ ಹೇಳಿ ಹೋಗುತ್ತಿದ್ದರಂತೆ. ಇದರಿಂದಲೇ ಬೋಸ್ ಅವರಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿತೆನ್ನಲಾಗುತ್ತದೆ.

ಇದನ್ನೂ ಓದಿ: Explained: ಕನ್ನಡಿಗರು ಬೆಳಗೆದ್ದು ನೆನೆಯಲೇ ಬೇಕಾದ ನಾಲ್ವಡಿ ಕೃಷ್ಣರಾಜ ಒಡೆಯರ್, 'ರಾಜರ್ಷಿ' ಹೆಜ್ಜೆ ಗುರುತು ಇಲ್ಲಿದೆ

ತದನಂತರ ಬೋಸ್ ಅವರು ಪ್ರೆಸಿಡೆನ್ಸಿ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದು ಆನಂತರ ಕಲ್ಕತ್ತಾ ವಿವಿಯಿಂದ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಬ್ರಿಟಾನಿಕಾ ಪ್ರಕಾರ, ಬೋಸ್ ಅವರು ಡಕ್ಕಾ ವಿವಿಯಲ್ಲಿ 1921-45ರವರೆಗೂ ಕಲ್ಕತ್ತಾ ವಿವಿಯಲ್ಲಿ 1945-56ರವರೆಗೂ ಬೋಧನಾ ವೃತ್ತಿ ಮಾಡಿದರು. 1918-56ರವರೆಗೆ ಅವರು ತಮ್ಮ ಹತ್ತು ಹಲವು ತಾಂತ್ರಿಕ ಹಾಗೂ ವೈಜ್ಞಾನಿಕ ಪೇಪರ್ ಗಳನ್ನು ಸಿದ್ಧಪಡಿಸಿದ್ದು ಅವು ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್, ಎಲೆಖ್ಟ್ರೋಮ್ಯಾಗ್ನೆಟಿಕ್ ಗುಣಲಕ್ಷಣಗಳು ಹಾಗೂ ಎಕ್ಸ್-ರೆ ಕ್ರಿಸ್ಟಲೋಗ್ರಾಫಿ ವಿಷಯಗಳನ್ನು ಅರಿಯುವಲ್ಲಿ ಸಾಕಷ್ಟು ಸಹಕರಿಸಿವೆ ಎನ್ನಲಾಗಿದೆ.

ಐನ್ಸ್ಟೀನ್ ಹಾಗೂ ಬೋಸ್
ಬೋಸ್ ಅವರ ಪ್ಲ್ಯಾಂಕ್ಸ್ ನಿಯಮ ಹಾಗೂ ಲೈಟ್ ಕ್ವಾಂಟಾ (1924) ಮೇಲಿನ ಹೈಪೋಥಿಸಿಸ್ ಗಳು ಐನ್ಸ್ಟೀನ್ ಅವರು ಬೋಸ್ ಬಳಿ ಬರುವಂತೆ ಮಾಡಿ ಅವರೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ಕಾರಣವಾಯಿತೆಂದು ಹೇಳಲಾಗುತ್ತದೆ.

ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಅವರಿಗೆ ಅಂಚೆ ಕಲಿಸುತ್ತಿದ್ದ ಬೋಸ್
1917 ರಲ್ಲಿ ಬೋಸ್ ಅವರು ಭೌತಶಾಸ್ತ್ರದ ಪಠ್ಯದ ಪ್ಲ್ಯಾಂಕ್ಸ್ ರೆಡಿಯೇಷನ್ ಸೂತ್ರದ ಬಗ್ಗೆ ಬೋಧಿಸಲು ಪ್ರಾರಂಭಿಸಿದಾಗ ಅವರಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಲಾರಂಭಿಸಿದವು. ಇದರಲ್ಲಿ ಧಾತುಗಳನ್ನು ಎಣಿಸುವ ಬಗೆಯನ್ನು ಬೋಸ್ ಪ್ರಶ್ನಿಸಿದರು. ತದನಂತರ ಅವರು ಈ ಕುರಿತು ತಮ್ಮದೆ ಆದ ಪ್ರಯೋಗ ಹಾಗೂ ಪ್ರಯತ್ನಗಳನ್ನು ಮಾಡಿ ಕೊನೆಗೆ ಪ್ಲ್ಯಾಂಕ್ಸ್ ನಿಯಮ ಮತ್ತು ಲೈಟ್ ಕ್ವಾಂಟಾ ರಚಿಸಿ ಅದನ್ನು ಅಂದಿನ ಪ್ರಸಿದ್ಧ ವಿಜ್ಞಾನದ ಜರ್ನಲ್ ಆದ ಫಿಲಾಸಾಫಿಕಲ್ ಮ್ಯಾಗಜೀನ್ ಗೆ ಕಳುಹಿಸಿದರು. ಆದರೆ, ಆ ಜರ್ನಲ್ ಬೋಸ್ ಅವರ ಪೇಪರ್ ಗಳನ್ನು ತೀರಸ್ಕರಿಸಿತು. ಆದರೆ, ಎದೆಗುಂದದ ಬೋಸ್ ಆ ಎಲ್ಲ ರಚನೆಗಳನ್ನು ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಅವರಿಗೆ ಅಂಚೆ ಮೂಲಕ ಕಳುಹಿಸಿದರು.

ಇದನ್ನೂ ಓದಿ: Explained: ಮಕ್ಕಳು ಓದುವ ಪುಸ್ತಕದಲ್ಲೂ ಯಾಕೆ ವಿವಾದ? ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದ್ದೇಕೆ?

ಬೋಸ್ ಅವರ ಕೆಲಸದಿಂದ ಪ್ರಭಾವಿತರಾದ ಅಲ್ಬರ್ಟ್ ಅವರು ವಾಗ್ವಾನದಂತೆ ತಮ್ಮ ಹಲವು ಪರಿಕಲ್ಪನೆಗಳಿಗೆ ಬೋಸ್ ಅವರ ವಿಚಾರ ತತ್ವಗಳನ್ನು ಅಳವಡಿಸಿದರು ಹಾಗೂ ಬೋಸ್ ಅವರ ರಚನೆಗಳನ್ನು ಜರ್ಮನ್ ಭಾಷೆಯಲ್ಲಿ ತರ್ಜುಮೆ ಮಾಡಿಸಿ ಬೋಸ್ ಅವರ ಹೆಸರಿನಲ್ಲಿಯೇ ಪ್ರಕಾಶಿಸಲು ಕ್ರಮ ಕೈಗೊಂಡರು. ಆ ನಂತರ ಬೋಸ್ ಅವರ ಮಹಾನ್ ಸಾಧನೆಯನ್ನು ಜಗತ್ತಿನಾದ್ಯಂತ ಪರಿಗಣಿಸಲಾಯಿತು ಹಾಗೂ ಅದರಂತೆ ಭಾರತದಲ್ಲೂ ಸಹ ಅವರ ಕೊಡುಗೆಯನ್ನು ಗುರುತಿಸಿ ಅಂದಿದ್ದ ಭಾರತದ ಅತಿ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣದಿಂದ ಅವರನ್ನು ಗೌರವಿಸಲಾಯಿತು.
Published by:Ashwini Prabhu
First published: