• Home
 • »
 • News
 • »
 • explained
 • »
 • Gold Mine: ಕೆಜಿಎಫ್ ಅನ್ನೇ ಮೀರಿಸುವಷ್ಟು ಚಿನ್ನ ಇಲ್ಲಿದ್ಯಂತೆ! ಈ ಅಣೆಕಟ್ಟಿನೊಳಗೇ ಹುದುಗಿದೆಯಾ ಸಂಪತ್ತು?

Gold Mine: ಕೆಜಿಎಫ್ ಅನ್ನೇ ಮೀರಿಸುವಷ್ಟು ಚಿನ್ನ ಇಲ್ಲಿದ್ಯಂತೆ! ಈ ಅಣೆಕಟ್ಟಿನೊಳಗೇ ಹುದುಗಿದೆಯಾ ಸಂಪತ್ತು?

ಕೆಜಿಎಫ್‌ ಚಿನ್ನದ ಗಣಿ

ಕೆಜಿಎಫ್‌ ಚಿನ್ನದ ಗಣಿ

ಕನ್ನಡದ ಸೂಪರ್ ಹಿಟ್ ಚಿತ್ರ ‘ಕೆಜಿಎಫ್’ ನಲ್ಲಿ ಚಿನ್ನದ ಗಣಿ ಹೇಗೆ ಕಣ್ಮರೆಯಾಗಿ ಹೋಯಿತೋ, ಹಾಗೆಯೇ ನದಿ ನೀರೊಳಗಿನ ಥರಿಯೊಡೆಯ ಚಿನ್ನದ ಪ್ರದೇಶವೂ ಮರೆಯಾಗಿ ಹೋಗಿದೆ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ.

 • Trending Desk
 • 5-MIN READ
 • Last Updated :
 • Share this:

  ವಿಶ್ವದಲ್ಲಿ ಅತಿ ಹೆಚ್ಚಿನ ಚಿನ್ನದ ಆಭರಣಗಳನ್ನು (gold jewellery) ಕೊಳ್ಳುವ ದೇಶವೆಂದರೆ ಭಾರತ. ಇಲ್ಲಿನ ಎಲ್ಲಾ ಧರ್ಮಗಳಲ್ಲಿಯೂ ಚಿನ್ನಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ಇದು ಸೌಂದರ್ಯಕ್ಕೂ ಮಿಗಿಲಾಗಿ, ಆ ಕುಟುಂಬದ (Family) ಪ್ರತಿಷ್ಠೆ, ಶ್ರೀಮಂತಿಕೆ, ಸಮೃದ್ಧಿಯ ಸಂಕೇತವಾಗಿದೆ. ದೇವರಿಗೆ (God) ತೊಡಿಸುವ ಮೂಲಕ ಈ ಲೋಹಕ್ಕೆ ಧಾರ್ಮಿಕ ಮೌಲ್ಯವೂ ಇದೆ. ಚಿನ್ನದ ಕುಸುರಿ ಕೆಲಸದಲ್ಲಿ ಭಾರತದ (India) ಕುಸುರಿಯನ್ನು ಸರಿಗಟ್ಟುವ ಕಲೆ ಈ ಜಗತ್ತಿನಲ್ಲಿಲ್ಲ ಎಂದೇ ಹೇಳಬಹುದು. ಇವತ್ತು ನಾವು ಚಿನ್ನದ ಅನ್ವೇಷಣೆ ಹೇಗೆಲ್ಲ ಆಗಿದೆ? ಹಾಗೂ ಭಾರತದಲ್ಲಿ ಚಿನ್ನದ ಗಣಿಗಾರಿಕೆ ಬಗ್ಗೆ ವಿಸ್ತಾರವಾದ ಮಾಹಿತಿ ತಿಳಿಯೋಣ ಬನ್ನಿ…


  ಭಾರತದಲ್ಲಿ ಚಿನ್ನಕ್ಕೆ ಮಹತ್ವ


  ಭಾರತ ದೇಶದಲ್ಲಿ ಚಿನ್ನಕ್ಕೆ ಇರುವಷ್ಟು ವ್ಯಾಮೋಹ ಬೇರೆ ಯಾವ ದೇಶಗಳಲ್ಲೂ ಕಾಣ ಸಿಗುವುದಿಲ್ಲ. ಅನಾದಿ ಕಾಲದಿಂದಲೂ ಮನುಷ್ಯನಿಗೆ ಚಿನ್ನದ ಮೇಲೆ ಸಾಕಷ್ಟು ಅಭಿಮಾನ ಇರೋದು ಅಕ್ಷರಶಃ ನಿಜ. ಇದನ್ನು ಹಳದಿ ಲೋಹ ಅಂತಲೂ ಕರೆಯುತ್ತಾರೆ. ಇದರ ಅನ್ವೇಷಣೆಯ ಉತ್ತರವೇ ಗಣಿಗಾರಿಕೆ ಮತ್ತು ನದಿ ನೀರಿನಿಂದ ಚಿನ್ನವನ್ನು ಫಿಲ್ಟರ್‌ ಮಾಡುವ ಅನೇಕ ವಿಧಾನಗಳನ್ನು ಅನುಸರಿಸುವ ಮೂಲಕ ಚಿನ್ನವನ್ನು ಹೊರ ತೆಗೆಯುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.


  ಕೆಜಿಎಫ್‌ ಚಿನ್ನದಗಣಿ


  ಚಿನ್ನದ ಬಗ್ಗೆ ಇತಿಹಾಸ ಏನು ಹೇಳುತ್ತದೆ?


  ಕ್ರಿಸ್ತ ಪೂರ್ವದ ಕಾಲದಲ್ಲಿ ಭಾರತದ ಮಲಬಾರಿನಲ್ಲಿ ಚಿನ್ನ ಕಂಡುಬಂದಿದ್ದು, ಆ ಕಾಲವನ್ನು ಹಸಿರಿನಿಂದ ಕಂಗೊಳಿಸುವ ನದಿಯ ನೀರಿನಲ್ಲಿ ಚಿನ್ನದ ಸೂಕ್ಷ್ಮ ಕಣಗಳು ಹೊಳೆಯುತ್ತಿದ್ದ ಕಾಲ ಎಂದು ಇತಿಹಾಸ ಉಲ್ಲೇಖಿಸುತ್ತದೆ. ಆ ಸ್ಥಳದ ನದಿಗಳಲ್ಲಿ ಚಿನ್ನದ ಧೂಳಿನ ಮೂಲವನ್ನು ಶೋಧಿಸಿದ ಜನರು ನಂತರ ಚಿನ್ನದ ಜಾಲವನ್ನು ಹುಡುಕಿ ವಯನಾಡು ಮತ್ತು ನೀಲಗಿರಿ ಪ್ರದೇಶಗಳನ್ನು ತಲುಪಿದರು ಎಂದು ಇತಿಹಾಸದಲ್ಲಿ ಹೇಳಲಾಗಿದೆ.


  ಬಾಣಾಸುರ ಡ್ಯಾಂ


  ಚಿನ್ನದ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದ ಬ್ರಿಟಿಷರು


  ಆಗ ಬ್ರಿಟಿಷರು ಚಿನ್ನದ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದರು. ವಯನಾಡಿನ ವಿವಿಧ ಭಾಗಗಳಲ್ಲಿ ಬೃಹತ್ ಚಿನ್ನದ ನಿಕ್ಷೇಪಗಳಿವೆ ಎಂದು ಕಂಡುಹಿಡಿದ ಬ್ರಿಟಿಷರು ಅಮೂಲ್ಯವಾದ ಹಳದಿ ಲೋಹವನ್ನು ಹೊರತೆಗೆಯಲು ಗಣಿಗಾರಿಕೆಯನ್ನು ಪ್ರಾರಂಭಿಸಿದರು.


  ಬಾಣಾಸುರ ಅಣೆಕಟ್ಟಿನಿಂದ ಜನ ವಸತಿ ತೆರವು


  ಇತಿಹಾಸವನ್ನು ಮೆಲುಕು ಹಾಕಿದಾಗ ತಿಳಿದು ಬರುವ ಮುಖ್ಯ ವಿಷಯವೇನೆಂದರೆ ಅಲ್ಲಿನ ಸ್ಥಳಿಯ ಜನರು ವಯನಾಡ್‌ನಿಂದ ಥರಿಯೋಡೆ ಪ್ರದೇಶಕ್ಕೆ ಮೊದಲಿಗೆ ವಲಸೆ ಹೋಗಲು ಬಯಸಿದ್ದರು ಎಂದು ಇತಿಹಾಸದಲ್ಲಿ ಪತ್ತೆಹಚ್ಚಲಾಗಿತ್ತು.


  ಕೆಜಿಎಫ್ ಸಿನಿಮಾ


  ಹೀಗೆ ತಿರುವಾಂಕೂರು ಮತ್ತು ಮಲಬಾರ್ ಸೇರಿದಂತೆ ವಿವಿಧ ಪ್ರದೇಶಗಳ ಜನರು ಥರಿಯೋಡೆ ಪ್ರದೇಶಕ್ಕೆ ತಮ್ಮ ವಸತಿಯನ್ನು ಬದಲಾಯಿಸಲು ಪ್ರಾರಂಭಿಸಿದರು. ಆದರೆ ಬಾಣಾಸುರ ಅಣೆಕಟ್ಟು ನಿರ್ಮಾಣಕ್ಕಾಗಿ ಅವರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು ಎಂದು ಹೇಳಲಾಗುತ್ತದೆ.


  ಇದನ್ನೂ ಓದಿ: Dharavi Slum: ಏಷ್ಯಾದ ಅತೀ ದೊಡ್ಡ ಸ್ಲಂ ಅಭಿವೃದ್ಧಿ ಸಾಧ್ಯವೇ? ಧಾರಾವಿ ಪುನರ್‌ ನಿರ್ಮಾಣ ಅದಾನಿ ಗ್ರೂಪ್‌ಗೆ ಚಾಲೆಂಜಿಂಗ್ ಏಕೆ?


  ಥರಿಯೋಡೆ ಪ್ರದೇಶ ಈಗೇನಾದ್ರೂ ಇದ್ದಿದ್ದರೆ, ಇದು ವಯನಾಡಿನ ದೊಡ್ಡ ಪಟ್ಟಣಗಳಲ್ಲಿ ಒಂದಾಗಬಹುದಿತ್ತು. ಥರಿಯೋಡೆ ಜಿಲ್ಲೆಯಲ್ಲಿ ಪ್ರಥಮವಾಗಿ ಬಸ್ ಸೇವೆ, ಬ್ಯಾಂಕ್ ಮತ್ತು ಪೊಲೀಸ್ ಠಾಣೆ ಸ್ಥಾಪಿಸಿರುವುದು, ಈ ಪ್ರದೇಶ ಎಷ್ಟು ಮುಖ್ಯವಾಗಿತ್ತು ಎಂಬುದು ತಿಳಿದು ಬರುತ್ತದೆ.


  ನೀರೊಳಗೆ ಮರೆಯಾಯ್ತಾ ಸಂಪತ್ತು?


  ಕನ್ನಡದ ಸೂಪರ್ ಹಿಟ್ ಚಿತ್ರ ‘ಕೆಜಿಎಫ್’ ನಲ್ಲಿ ಚಿನ್ನದ ಗಣಿ ಹೇಗೆ ಕಣ್ಮರೆಯಾಗಿ ಹೋಯಿತೋ , ಹಾಗೆಯೇ ನದಿ ನೀರೊಳಗಿನ ಥರಿಯೊಡೆಯ ಚಿನ್ನದ ಪ್ರದೇಶವೂ ಮರೆಯಾಗಿ ಹೋಗಿದೆ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ.


  ಭಾರತದಲ್ಲಿ ಚಿನ್ನದ ಗಣಿಗಾರಿಕೆ


  ಭಾರತದಲ್ಲಿ ಚಿನ್ನದ ಗಣಿಗಾರಿಕೆಯು ಕ್ರಿ.ಶ. 200 ರಲ್ಲಿ ಪ್ರಾರಂಭವಾಯಿತು ಮತ್ತು ಕರ್ನಾಟಕದ ಕೋಲಾರದಿಂದ ಚಿನ್ನವನ್ನು ಹೊರತೆಗೆಯುವ ಚಟುವಟಿಕೆಗಳು 3 ನೇ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಅಧಿಕೃತ ದಾಖಲೆಗಳು ಸೂಚಿಸುತ್ತವೆ.


  ಚಿನ್ನದ ಗಣಿಗಾರಿಕೆ


  ಬ್ರಿಟಿಷರ ಆಗಮನದ ನಂತರ ಚಿನ್ನದ ಗಣಿಗಾರಿಕೆ ಹೆಚ್ಚು ವಿಸ್ತಾರವಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1800 ರ ದಶಕದಲ್ಲಿ ಕೋಲಾರದಲ್ಲಿ ದೊಡ್ಡ ರೀತಿಯಲ್ಲಿ ಚಿನ್ನವನ್ನು ಸಂಗ್ರಹಿಸಲು ಪ್ರಾರಂಭಿಸಿತು.


  ಕರ್ನಾಟಕದ ಹೊನ್ನಾಳಿ, ಆಂಧ್ರಪ್ರದೇಶದ ರಾಮಗಿರಿ ಮತ್ತು ಹಟ್ಟಿ, ಗೋವಾದ ಗದಗ್ ಮತ್ತು ಮಲಬಾರ್ ಇತರ ಪ್ರಮುಖ ಗಣಿಗಳು ಚಿನ್ನದ ಗಣಿಗಾರಿಕೆ ತಾಣಗಳಾಗಿವೆ. ವಿಶ್ವದ ಎರಡನೇ ಆಳವಾದ ಚಿನ್ನದ ಗಣಿ ಕೋಲಾರ ಎಂಬುದು ಗಮನಾರ್ಹ.


  ಕೆಜಿಎಫ್‌ನಲ್ಲಿ ಸಿಗುತ್ತಿತ್ತು ವ್ಯಾಪಕವಾದ ಚಿನ್ನ


  1802 ರಲ್ಲಿ ಬ್ರಿಟಿಷರು ಈ ಪ್ರದೇಶದಲ್ಲಿ ಸಮೀಕ್ಷೆಯನ್ನು ನಡೆಸಿದ ನಂತರ ಕೋಲಾರದಲ್ಲಿ ವ್ಯಾಪಕವಾಗಿ ಚಿನ್ನದ ಗಣಿಗಾರಿಕೆ ಮಾಡಲಾಯಿತು. ಜಾನ್ ಟೈಲ್ ಮತ್ತು ಕಂಪನಿ, ಮೈನಿಂಗ್ ಮೂಲಕ 1890 ರ ದಶಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಅಗೆದು 1905 ರಲ್ಲಿ ಸುಮಾರು 19.5 ಟನ್ಗಳಷ್ಟು ಚಿನ್ನವನ್ನು ಉತ್ಪಾದಿಸಲಾಯಿತು.


  ನಿರ್ಮಲ್ ಬೇಬಿ ವರ್ಗೀಸ್ ಅವರು ನಿರ್ದೇಶಿಸಿದ ಮತ್ತು 2020 ರ ರಾಜ್ಯ ದೂರದರ್ಶನ ಪ್ರಶಸ್ತಿಯನ್ನು ಗೆದ್ದಿರುವ 'ಥರಿಯೊಡೆ' ಸಾಕ್ಷ್ಯಚಿತ್ರವು ಗೋಲ್ಡ್ ಫೀಲ್ಡ್ ಹೊಂದಿರುವ ಈ ಕುಗ್ರಾಮದ ಇತಿಹಾಸವನ್ನು ಒಂದು ಸ್ನೀಕ್ ಪೀಕ್ ಎಂದು ಪರಿಗಣಿಸುತ್ತದೆ.


  ಮಲಬಾರಿನ ಹೊಳೆಯುವ ಚಿನ್ನ


  ಕ್ರಿ.ಪೂ.500ರಲ್ಲಿ ವಯನಾಡು ಮತ್ತು ನೀಲಗಿರಿಯಲ್ಲಿನ ನದಿ ನೀರಿನಿಂದ ಚಿನ್ನದ ಕಣಗಳನ್ನು ಶೋಧಿಸಲಾಗಿತ್ತು ಎಂಬುದು ಇತಿಹಾಸ. ಚಿನ್ನದ ಗಣಿಗಾರಿಕೆಯ ಅಧ್ಯಯನವನ್ನು ಕೋಲಾರದಲ್ಲಿ ಮಾಡುವ ಮೊದಲು ವಯನಾಡಿನಲ್ಲಿ ನಡೆಸಲಾಯಿತು.


  ವಿಲಿಯಂ ಲೋಗನ್ ಅವರ 'ಮಲಬಾರ್ ಮ್ಯಾನುಯಲ್' ಮತ್ತು ಸ್ಯಾಮ್ಯುಯೆಲ್ ಜೆನ್ನಿಂಗ್ಸ್ ಅವರ 'ಮೈ ವಿಸಿಟ್ ಟು ದಿ ಗೋಲ್ಡ್ ಫೀಲ್ಡ್ಸ್ ಇನ್ ಸೌತ್ ಈಸ್ಟ್ ವಯನಾಡ್' ನಲ್ಲಿ ಚಿನ್ನದ ನಿಕ್ಷೇಪಗಳನ್ನು ಉಲ್ಲೇಖಿಸಲಾಗಿದೆ.


  ಆಸ್ಟ್ರೇಲಿಯಾದಿಂದ ಬಂದ ವಿದರ್ಸ್, 1874 ರಲ್ಲಿ ʼಆಲ್ಫಾ ಗೋಲ್ಡ್ ಮೈನ್ʼ ಎಂಬ ಹೆಸರಿನ ಕಂಪನಿಯನ್ನು ಪ್ರಾರಂಭಿಸಿದರು ಮತ್ತು ಇದು ವಯನಾಡಿನಲ್ಲಿ ಚಿನ್ನದ ಗಣಿಗಾರಿಕೆ ಮಾಡಿದ ಮೊದಲ ಕಂಪನಿಯಾಗಿದೆ. ಈ ಸಮಯದಲ್ಲಿ 33 ಕಂಪನಿಗಳು ವಯನಾಡಿನಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.


  ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಥರಿಯೋಡೆ, ಚೂರಲ್ಮಲಾ, ತವಿಂಜಲ್, ಮೆಪ್ಪಾಡಿ, ವೈತಿರಿ, ದೇವಲಾ, ಚೇರಂಬಾಡಿ ಮತ್ತು ಪಂದಳೂರಿನಲ್ಲಿ ಕೇಂದ್ರೀಕೃತವಾಗಿವೆ. ಯುರೋಪಿನ ಪತ್ರಿಕೆಗಳು ವಯನಾಡಿನ ಚಿನ್ನದ ಗಣಿಗಾರಿಕೆಯನ್ನು ‘ದಿ ಮಲಬಾರ್ ಗೋಲ್ಡ್ ರಶ್’ ಮತ್ತು ‘ದಿ ಮಲಬಾರ್ ಗೋಲ್ಡ್ ಮೇನಿಯಾ’ ಎಂದು ಕರೆದಿವೆ.


  ಸ್ಮಿತ್ ಮೂನ್ ಆಗಮನ


  ಬ್ರಿಟಿಷ್ ದೇಶದ ಸ್ಮಿತ್ ಮೂನ್ ಒಡೆತನದ ಮತ್ತು ಬ್ರಿಟನ್‌ನಲ್ಲಿ ನೋಂದಾಯಿಸಲಾದ ಗೋಲ್ಡ್ ಮೈನ್ಸ್ ಇಂಡಿಯಾ ಕಂಪನಿಯು ಥರಿಯೋಡೆನಲ್ಲಿ ತನ್ನ ಚಿನ್ನದ ಗಣಿಕಾರಿಕೆಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಈ ಪ್ರದೇಶದಿಂದ ಚಿನ್ನದ ಸಂಪನ್ಮೂಲಗಳನ್ನು ಹೊರತೆಗೆಯುವ ಅನೇಕ ಪ್ರಯತ್ನಗಳು ಹೊಸ ರೂಪವನ್ನು ಪಡೆದವು.


  ತಾಂಡಿಯೋಡು, ವಟ್ಟಂ, ಕಟ್ಟಿಮಲ ಮತ್ತು ಕರಿಂಬಿನ್ ತೋಡುಗಳಲ್ಲಿ ಗಣಿಗಾರಿಕೆ ಕಾರ್ಯಗಳು ಪ್ರಾರಂಭವಾದವು. ಆದರೆ ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಲಾಭದಾಯಕವಲ್ಲದ ಕಾರಣ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಲು ಪ್ರಾರಂಭಿಸಿತು.


  ‘ಥರಿಯೊಡೆ’ ಸಾಕ್ಷ್ಯಚಿತ್ರದಲ್ಲಿ ವಯನಾಡಿನ ಚಿನ್ನದ ಗಣಿಗಾರಿಕೆ ಚಟುವಟಿಕೆಗಳ ಉಲ್ಲೆಖಗಳ ದಾಖಲೆಗಳು


  ಈ ಸಾಕ್ಷ್ಯಚಿತ್ರದಲ್ಲಿ ಚಿನ್ನದ ಗಣಿಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ. ಥರಿಯೋಡೆ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಮತ್ತು ರೈಲ್ವೇ ಮೂಲಸೌಕರ್ಯಗಳನ್ನು ಸ್ಥಾಪಿಸಲು ದೊಡ್ಡ ಪ್ರಮಾಣದ ಅರಣ್ಯನಾಶ ಸಂಭವಿಸಿದರೂ, ಇದು ಪ್ರದೇಶದ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತು. ಪೊಲೀಸ್ ಠಾಣೆ, ಬ್ಯಾಂಕ್ ಮತ್ತು ಚರ್ಚ್ ಸ್ಥಾಪಿಸಲಾಯಿತು. ಪ್ರಪಂಚದ ಅನೇಕ ಭಾಗಗಳಿಂದ ಈ ಪ್ರದೇಶಕ್ಕೆ ಜನರು ವಲಸೆ ಬಂದರು.


  ವಯನಾಡಿನ ಮೊದಲ ಪೊಲೀಸ್ ಠಾಣೆಗಳಲ್ಲಿ ಒಂದಾಗಿರುವ ವೈತಿರಿ ಪೊಲೀಸ್ ಠಾಣೆಯನ್ನು ಸ್ಮಿತ್ ಅವರ ಆಶ್ರಯದಲ್ಲಿ ಥರಿಯೋಡೆಯಲ್ಲಿ ಸ್ಥಾಪಿಸಲಾಯಿತು.


  1899 ರಲ್ಲಿ ಅಸ್ತಿತ್ವಕ್ಕೆ ಬಂದ ನೆಡುಂಗಾಡಿ ಬ್ಯಾಂಕ್ ದಕ್ಷಿಣ ಭಾರತದ ಮೊದಲ ಖಾಸಗಿ ವಲಯದ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಸ್ಮಿತ್ ಅವರ ಬೆಂಬಲದೊಂದಿಗೆ ಸ್ಥಾಪಿತವಾದ ಥರಿಯೋಡೆ ಬ್ಯಾಂಕ್ 1880 ರ ದಶಕದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬುದಕ್ಕೆ ಅಧಿಕೃತ ದಾಖಲೆಗಳಿವೆ.


  ಚಿನ್ನವನ್ನು ಅಗೆಯುವಲ್ಲಿ ಕೈಸುಟ್ಟುಕೊಂಡ ಅನೇಕ ಕಂಪನಿಗಳು


  ಸ್ವಲ್ಪ ಇತ್ತೀಚಿನ ಇತಿಹಾಸವನ್ನು ನೋಡಿದಾಗ ಚಿನ್ನದ ಗಣಿಕಾರಿಕೆಯ ಕಾರ್ಯಾಚರಣೆಯನ್ನು ಅನೇಕ ಕಂಪನಿಗಳು ಬಹಳ ಉತ್ಸಾಹದಿಂದ ಪ್ರಾರಂಭಿಸಿದರೂ, ಅಕ್ಷರಶಃ ಅವು ಬಯಸಿದ ರೀತಿಯಲ್ಲಿ ಚಿನ್ನವನ್ನು ಹೊರತೆಗೆಯಲು ಆಗದೇ ಕೈಸುಟ್ಟುಕೊಂಡರು ಎಂದು ಹೇಳಬಹುದು. ಚಿನ್ನ ಸರಿಯಾಗಿ ಸಿಗದಿದ್ದ ಕಾರಣ ಗಣಿಗಾರಿಕೆ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸಿವೆ ಎಂದು ಹೇಳಲಾಗುತ್ತದೆ.


  ಆಗ ನಡೆಸಿದ ಅಧ್ಯಯನಗಳು ಈ ಪ್ರದೇಶದಿಂದ ಹೊರತೆಗೆಯಲಾದ ಚಿನ್ನವು 70 ವರ್ಷಗಳ ನಂತರವೇ ಉತ್ತಮವಾದ ಚಿನ್ನ ಆಗುತ್ತದೆ ಎಂದು ಕಂಡುಹಿಡಿದಿದೆ.


  ಆಗ ಲಭ್ಯವಿರುವ ತಾಂತ್ರಿಕ ಪರಿಣತಿಯೊಂದಿಗೆ ವಾಣಿಜ್ಯ ಉದ್ದೇಶಗಳಿಗಾಗಿ ಚಿನ್ನವನ್ನು ಗಣಿಗಾರಿಕೆ ಮಾಡುವುದು ಕಾರ್ಯಸಾಧ್ಯವಲ್ಲ ಎಂದು ಗಣಿಗಾರಿಕೆ ಸಂಸ್ಥೆಗಳು ಅರಿತುಕೊಂಡವು.


  ನಂತರ, ಗಣಿಗಾರಿಕೆ ಕಂಪನಿಗಳು ಕೋಲಾರಕ್ಕೆ ಸ್ಥಳಾಂತರಗೊಂಡವು ಮತ್ತು 1890 ರ ದಶಕದಲ್ಲಿ ಅಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆಗೆ ಹೆಚ್ಚಿನ ಚಾಲನೆ ದೊರೆಯಿತು.


  ನೀರೊಳಗಿನ ಚಿನ್ನದ ನಿಕ್ಷೇಪಗಳು


  1952ರಲ್ಲಿ ಥರಿಯೊಡೆಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪವಿರುವುದನ್ನು ಕೇಂದ್ರ ಭೂವಿಜ್ಞಾನ ಇಲಾಖೆ ಪತ್ತೆ ಹಚ್ಚಿದ್ದು, ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅನುಮತಿ ನೀಡಿದ್ದರು. ಆದರೆ ಗಣಿಗಾರಿಕೆ ನಡೆಸಲೇ ಇಲ್ಲ.


  ಪ್ರಸ್ತುತ ಆಧುನಿಕ ತಂತ್ರಜ್ಞಾನದಿಂದ ಥರಿಯೊಡೆಯಿಂದ ಚಿನ್ನವನ್ನು ಲಾಭದಾಯಕವಾಗಿ ಹೊರತೆಗೆಯಬಹುದು ಎಂಬುದು ಕೇಂದ್ರ ಭೂವಿಜ್ಞಾನ ಇಲಾಖೆಯ ಸದ್ಯದ ವಾದ ಎಂದೇ ಹೇಳಬಹುದು.


  ಆದರೆ ಅಲ್ಲಿನ ವಾಸ್ತವವಾದವೆಂದರೆ ಥರಿಯೊಡೆಯಲ್ಲಿ ಚಿನ್ನದ ಗಣಿಗಾರಿಕೆ ಎಂದಿಗೂ ನಡೆಯುವುದಿಲ್ಲ, ಏಕೆಂದರೆ ಚಿನ್ನದ ಹೊರತೆಗೆಯುವಿಕೆ ನೈಸರ್ಗಿಕ ಭೂದೃಶ್ಯ ಮತ್ತು ಪರಿಸರ ವ್ಯವಸ್ಥೆಗೆ ವ್ಯಾಪಕ ಹಾನಿಯನ್ನುಂಟುಮಾಡುತ್ತದೆ.


  ಈಗ ಯಾರೂ ಚಿನ್ನದ ಗಣಿಗಾರಿಕೆಗಾಗಿ ಅರಣ್ಯ ನಾಶವನ್ನು ಯೋಚಿಸಲು ಸಾಧ್ಯವೇ ಇಲ್ಲ. ಇದಲ್ಲದೆ, ಬಾಣಾಸುರ ಸಾಗರ್ ಅಣೆಕಟ್ಟು ಯೋಜನೆಯಿಂದ ಥರಿಯೋಡೆಯ ಚಿನ್ನದ ನಿಕ್ಷೇಪಗಳು ನಾಶವಾಗಿವೆ ಮತ್ತು ಪ್ರಸ್ತುತ ತೈರ್ಯೋಡ್ ಪಟ್ಟಣವು ಕೂಡ ಜಲಾವೃತವಾಗಿದೆ.


  ಇದನ್ನೂ ಓದಿ: Explained: ಸಮಾಜದಲ್ಲಿ ನಡೆಯುವ ಭೀಕರ ಹತ್ಯೆಗಳಿಗೆ ಸಿನಿಮಾ ನಂಟಿದೆಯಾ? ತಜ್ಞರು ಹೇಳೋದೇನು?


  ಬಾಣಸುರ್‌ ಸಾಗರ್‌ ಅಣೆಕಟ್ಟಿನ ಕೆಳಭಾಗದಲ್ಲಿ ಚಿನ್ನವಿದೆ. ಆದರೆ ವಿಶ್ವದ ಎರಡನೇ ಅತಿ ದೊಡ್ಡ ಮಣ್ಣಿನ ಅಣೆಕಟ್ಟಾಗಿರುವ ಬಾಣಾಸುರ ಸಾಗರ್ ಅಣೆಕಟ್ಟನ್ನು ಕೆಡವಿದ ನಂತರವೇ ಚಿನ್ನದ ಗಣಿಗಾರಿಕೆ ಮಾಡಬಹುದಾದ್ದರಿಂದ ಮನುಕುಲಕ್ಕೆ ಈ ಚಿನ್ನ ಸಿಗುವುದು ನಿಜಕ್ಕೂ ಅಸಾಧ್ಯ ಕೆಲಸ.


  ಮೇಲಾಗಿ ಸಾವಿರಾರು ಎಕರೆ ಅರಣ್ಯ ಭೂಮಿ ನಾಶವಾಗಬೇಕು. ಈ ಸ್ಪಷ್ಟವಾದ ಕಾರಣಗಳಿಗಾಗಿ ಎರಡೂ ಕೆಲಸಗಳು ಕೂಡ ಅಸಾಧ್ಯವೆಂದು ತಜ್ಞರ ಅಭಿಪ್ರಾಯವಾಗಿದೆ.


  ಆದ್ದರಿಂದ ಕೋಲಾರದ ಚಿನ್ನದ ನಿಕ್ಷೇಪಗಳಿಗಿಂತ ಬಹುಶಃ ದೊಡ್ಡದಾದ ಬೃಹತ್ ಚಿನ್ನದ ನಿಕ್ಷೇಪಗಳು, ಬಾಣಾಸುರ ಅಣೆಕಟ್ಟಿನ ಅಡಿಯಲ್ಲಿ ಇವೆ ಎಂಬುದು ನಿಜ. ಆದ್ದರಿಂದ ಆ ಕನಸು ಕನಸಾಗಿಯೇ ಉಳಿಯುತ್ತದೆ. ಪ್ರಕೃತಿ ಮುಂದೆ ನಾವೆಲ್ಲ ಶೂನ್ಯವೆಂಬುದು ಮತ್ತೆ ಸಾಬೀತಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು