Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?

ಇತ್ತೀಚಿಗೆ ಜಾಗತಿಕ ತಾಪಮಾನ ಮಿತಿ ಮೀರಿ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ಹೆಚ್ಚಾಗಿ ಅದರಲ್ಲಿನ ಪರ್ಟಿಕ್ಯೂಲೆಟ್ ಮ್ಯಾಟರ್ ಪ್ರಮಾಣ ಏರಿಕೆಯಾದ್ರೆ ಪ್ರವಾಹ, ಸುನಾಮಿ, ಚಂಡಮಾರುತ, ಕಾಡ್ಗಿಚ್ಚು ಹೆಚ್ಚಾಗಿ ಜನರು ನಲುಗಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚೆಗೆ ಜಾಗತಿಕ ತಾಪಮಾನ (Global Warming) ಮಿತಿ ಮೀರಿ ಹೆಚ್ಚಾಗುತ್ತಿದ್ದು, ಮುಂದಿನ 5 ವರ್ಷದಲ್ಲಿ ಭೂಮಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಹವಾಮಾನ ಶಾಸ್ತ್ರಜ್ಞರ ತಂಡವೊಂದು ವರದಿ ಮಾಡಿದೆ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕೆಂದು ಮಾಡಿಕೊಂಡ ಅಂತರಾಷ್ಟ್ರೀಯ ಒಪ್ಪಂದದಿಂದ (International Agreement) ಯಾವುದೇ ರೀತಿಯ ತಾಪಮಾನ ಕಡಿಮೆ ಯಾಗುವ ಲಕ್ಷಣಗಳು (Features) ಕಂಡು ಬರುತ್ತಿಲ್ಲಾ. ಇನ್ನು ಒಪ್ಪಂದದ ಪ್ರಕಾರ ತಾಪಮಾನ ಕಡಿಮೆ ಆಗದೆ ಹೋದರೆ ಮುಂದೆ 2026ಕ್ಕೆ ಇಡೀ ಜಗತ್ತಿಗೆ ಕಂಟಕ ತಪ್ಪಿದ್ದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಯುಮಾಲಿನ್ಯ ಹೆಚ್ಚಾಗಿ ಅದರಲ್ಲಿನ ಪರ್ಟಿಕ್ಯೂಲೆಟ್ ಮ್ಯಾಟರ್ ಪ್ರಮಾಣ ಏರಿಕೆಯಾದ್ರೆ ಪ್ರವಾಹ, ಸುನಾಮಿ, ಚಂಡಮಾರುತ, ಕಾಳ್ಗಿಚ್ಚು ಹೆಚ್ಚಾಗಿ ಜನರು ನಲುಗಬೇಕಾಗುತ್ತದೆ.  

ಮಾನವ ತನ್ನ ಸ್ವಾರ್ಥಕ್ಕಾಗಿ ಇಡೀ ಹವಾಮಾನವನ್ನೆ ಕಲುಷಿತಗೊಳಿಸುತ್ತಿದ್ದಾನೆ. ಹಲವು ಕಾರ್ಖಾನೆಗಳ ನಿರ್ಮಾಣ, ಕಾಡು ನಾಶ ಮುಂತಾದ ಅಭಿವೃದ್ಧಿ ವಿಚಾರದಲ್ಲಿ ಇಡೀ ಪ್ರಕೃತಿಯನ್ನೆ ಹದಗೆಡಿಸುತ್ತಿದ್ದು, ಭವಿಷ್ಯತ್ತಿನಲ್ಲಿ ಎದುರಾಗುವ ಆಪತ್ತುಗಳಿಗೆ ಎಡೆ ಮಾಡಿಕೊಡುತ್ತಿದ್ದಾನೆ. ಹೀಗೆ ಪರಿಸ್ಥಿತಿ ಮುಂದುವರೆದರೆ 48% ತಾಪಮಾನ ಈಗಾಗಲೇ ಹೆಚ್ಚಾಗಿದ್ದು, ಪ್ರತಿವರ್ಷ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿ 50%ಕ್ಕೆ ಬಂದು ತಲುಪುತ್ತದೆ. ಇದರಿಂದ ಮಾನವ ಕುಲಕ್ಕೆ ಆಪತ್ತು ಕಟ್ಟಿಟ್ಟಬುತ್ತಿ ಎನ್ನುತ್ತಾರೆ ವಿಜ್ಞಾನಿಗಳು.

2026ಕ್ಕೆ 93% ದಷ್ಟು ಜಾಗತಿಕ ತಾಪಮಾನ ಹೆಚ್ಚಾಗಲಿದೆ
ಯುನೈಟೆಡ್ ಕಿಂಗಡಮ್ ಹವಾಮಾನಶಾಸ್ತ್ರಜ್ಞರ ಪ್ರಕಾರ ಕಳೆದ ವರ್ಷದಲ್ಲಿ ಬರಿ 40% ಇದ್ದ ತಾಪಮಾನ ಈ ವರ್ಷ 10% ದಷ್ಟು ಹೆಚ್ಚಾಗಿದೆ. ಹೀಗೆ ಪ್ರತಿವರ್ಷ ಹಮಾನಾನದಲ್ಲಿ ಬದಲಾವಣೆ ಕಾಣುತ್ತಿದ್ದರೆ ಇನ್ನು ಮುಂದಿನ 5 ವರ್ಷದಲ್ಲಿ ಅಂದ್ರೆ 2026ಕ್ಕೆ ಜಾಗತಿಕಮಟ್ಟದಲ್ಲಿ 93% ಉಷ್ಣಾಂಶ ಹೆಚ್ಚಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆಗ ಭೂಮಿ ಮೇಲೆ ಬದುಕಲು ಸಾಧ್ಯವೇ ಇಲ್ಲಾ ಎಂದು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿ ಕುಂಠಿತಗೊಳ್ಳುವ ಸಾಧ್ಯತೆ
 ಈಗಾಗಲೇ ಭೂಮಿ ಮೇಲೆ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ಹಲವು ಬೆಳೆಗಳು ನಾಶಗೊಳ್ಳುತ್ತಿವೆ. ಜೊತೆಗೆ  ಅಭಿವೃದ್ಧಿಪರ ಕ್ಷೇತ್ರಗಳ ಮೇಲೆ ದೊಡ್ಡ ಪರಿಣಾಮ ಬೀಳಲಿದೆ ಎಂದು ಹಿರಿಯ ವಿಜ್ಞಾನಿ ಲಿಯನ್ ಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹವಾಮಾನ ವ್ಯತಿರಿಕ್ತದಿಂದ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಪ್ಯಾರಿಸ್ ಒಪ್ಪಂದಂತೆ ತಾಪಮಾನ ಕಡಿಮೆ ಮಾಡಲು ಆಗಲಿಲ್ಲ
2015ರಲ್ಲಿ ನಡೆದ ಪ್ಯಾರಿಸ್ ಒಪ್ಪಂದದಂತೆ ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕಾಗಿತ್ತು. ಒಪ್ಪಂದಂತೆ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‍ ನಷ್ಟು ಕಡಿಮೆ ಮಾಡಬೇಕು. ಅದಕ್ಕಾಗಿ ಕಾರ್ಖಾನೆಗಳು ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸಲು ಎಲ್ಲಾ ದೇಶಗಳು ಶತ ಪ್ರಯತ್ನ ಮಾಡಲೇಬೇಕು. ಆದ್ರೆ 1.1 ಇದ್ದ ತಾಪಮಾನ ಈಗ 1.5 ಡಿಗ್ರಿ ಸೆಲ್ಸಿಯಸ್‍ವರೆಗೆ ಬಂದು ನಿಂತಿದೆ. ಮುಂದೊಂದು ದಿನ ಪ್ಯಾರಿಸ್ ಒಪ್ಪಂದದ ಅನುಸಾರ ತಾಪಮಾನ ಕಡಿಮೆ ಮಾಡದಿದ್ದರೆ  ಮುಂದೆ 2 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ಹೆಚ್ಚಾಗಿ ಇಡೀ ಜಗತ್ತಿಗೆ ಕಂಟಕ ಎದುರಾಗಲಿದೆ.

ಇದನ್ನೂ ಓದಿ: Explained: ಕ್ಯಾನ್ಸರ್ ಕೊಲ್ಲುವ ವೈರಸ್‌ಗಳನ್ನು ಮಾನವರ ದೇಹಕ್ಕೆ ಸೇರಿಸಿದ ವಿಜ್ಞಾನಿಗಳು! ಆ ವೈರಸ್ ಯಾವುದು? ಮಾರಕ ರೋಗಕ್ಕೆ ಸಿಗುವುದೇ ಮುಕ್ತಿ?

ಮಾನವರ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ
ಕೆಲವು ಹವಾಮಾನ ಶಾಸ್ತ್ರಜ್ಞರು ಹೇಳುವ ಪ್ರಕಾರ ಭೂಮಿಯ ಉಷ್ಣಾಂಶ ಕನಿಷ್ಠ 1.5 ಡಿಗ್ರಿ ಸೆಲ್ಷಿಯೆಸ್‍ನಷ್ಟು  ಏರಿಕೆಯನ್ನು ತಡೆಯಲು ಆರಂಭದಿಂದಲೇ ವಿಜ್ಞಾನಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದ್ರೆ ಭೂಮಿಯ ಉಷ್ಣಾಂಶ ಈಗಾಗಲೇ 1.1 ಡಿ.ಸೆ. ನಷ್ಟು ಏರಿಕೆಯಾಗಿದೆ. ಮುಂದೆ ಇದೇ ಹಾದಿಯಲ್ಲಿ ನಾವು ಸಾಗಿದರೆ 2030ರ ವೇಳೆಗೆ ಭೂಮಿಯ ಉಷ್ಣಾಂಶವು 1.5 ಡಿ.ಸೆ.ನಷ್ಟು ಉಷ್ಣಾಂಶ ಹೆಚ್ಚಾಗಲಿದೆ. ಅಷ್ಟೆ ಅಲ್ಲದೆ ಇದು ಮಾನವೀಯತೆ ಪಾಲಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Climate change: ಹವಾಮಾನ ಬದಲಾವಣೆ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯಂತೆ! ಹೇಗೆ ಗೊತ್ತಾ?

ಒಟ್ಟಿನಲ್ಲಿ ಭೂಮಿ ಮೇಲೆ ಏರಿಕೆಯಾಗುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಯೋಚನೆ ಮಾಡದೆ ಹೋದ್ರೆ ಭವಿಷ್ಯತ್ತಿನಲ್ಲಿ ಹವಾಮಾನದಲ್ಲಿ ವ್ಯತಿರಿಕ್ತ ಉಂಟಾಗಿ ಇಡೀ ಭೂಮಿಯೇ ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹಲವು ಹಿರಿಯ ವಿಜ್ಞಾನಿಗಳು ತಮ್ಮ ತಮ್ಮ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
Published by:Ashwini Prabhu
First published: