• ಹೋಂ
  • »
  • ನ್ಯೂಸ್
  • »
  • Explained
  • »
  • AI ನಿರ್ವಹಣೆ ಬಗ್ಗೆ ಮಹಾಭಾರತದಲ್ಲಿ ಸಿಗುತ್ತಾ ಐಡಿಯಾ? ಅಧ್ಯಯನಕಾರರು ಹೇಳೋದೇನು?

AI ನಿರ್ವಹಣೆ ಬಗ್ಗೆ ಮಹಾಭಾರತದಲ್ಲಿ ಸಿಗುತ್ತಾ ಐಡಿಯಾ? ಅಧ್ಯಯನಕಾರರು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾಭಾರತ ಹಾಗೂ ಕೃತಕ ಬುದ್ಧಿಮತ್ತೆಗೆ ಇರುವ ಸಂಬಂಧವೇನು ಎಂಬುದನ್ನು ನೋಡುವುದಾದರೆ ಈ ಕ್ಷೇತ್ರವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಮಹಾನ್ ಗ್ರಂಥ ತಿಳಿಸುತ್ತದೆ. ಕೃತಕ ಬುದ್ಧಿಮತ್ತೆಯ ಕುರಿತು ಗ್ರಂಥವು ನಮಗೆ ಕೆಲವೊಂದು ಪಾಠಗಳನ್ನು ಉಪದೇಶಿಸುತ್ತದೆ ಎಂಬುದು ಆಶ್ಚರ್ಯಕರ ಅಂಶವಾದರೂ ಸತ್ಯವಾಗಿದೆ. ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

    ಅಪಾರ ಪಾಂಡಿತ್ಯ ಹಾಗೂ ಶ್ರೀಮಂತ ಸಂಸ್ಕೃತಿಯಿಂದ (Culture) ಭಾರತ ವಿಶ್ವನಾಯಕನಾಗಿ ಮನ್ನಣೆ ಗಳಿಸುತ್ತಿದೆ ಎಂದರೆ ತಪ್ಪಾಗದು. ನಮ್ಮಲ್ಲಿರುವ ಸಂಸ್ಕೃತ ಮಹಾಕಾವ್ಯಗಳ ವಿಚಾರಧಾರೆಯಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಪವಿತ್ರ ಗ್ರಂಥವಾಗಿರುವ ಭಗವದ್ಗೀತೆಯು (Bhagavad Geeta) ಜೀವನದ ಸಾರವನ್ನು ಬೋಧಿಸುತ್ತದೆ ಹಾಗೂ ಆಡಳಿತಾತ್ಮಕ ಅಂಶದ ಬಗ್ಗೆಯೂ ಮಾಹಿತಿ ನೀಡುತ್ತದೆ. ಇದೀಗ ಕೃತಕ ಬುದ್ಧಿಮತ್ತೆಯ (Artificial Intelligency) ಕುರಿತು ಗ್ರಂಥವು ನಮಗೆ ಕೆಲವೊಂದು ಪಾಠಗಳನ್ನು ಉಪದೇಶಿಸುತ್ತದೆ ಎಂಬುದು ಆಶ್ಚರ್ಯಕರ ಅಂಶವಾದರೂ ಸತ್ಯವಾಗಿದೆ. ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


    ಕೃತಕ ಬುದ್ಧಿಮತ್ತೆಯ ನಿರ್ವಹಣೆಗೆ ಮಹಾಭಾರತದ ತತ್ವಗಳ ಬಳಕೆ


    ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್​ ಇಂಟೆಲಿಜೆನ್ಸಿ ಇಂದಿನ ದಿನಗಳಲ್ಲಿ ಮಾನವನ ಪರಿಣಾಮಕಾರಿತ್ವ, ಸಾಮರ್ಥ್ಯಗಳನ್ನು ಸುಧಾರಿಸುತ್ತದೆ ಹಾಗೂ ಅವಕಾಶಗಳ ವಿಶಾಲ ಜಗತ್ತನ್ನೇ ನಮ್ಮ ಮುಂದಿಡುತ್ತದೆ ಎಂಬುದು ತಜ್ಞರ ನಂಬಿಕೆಯಾಗಿದೆ. ಮಹಾಭಾರತ ಹಾಗೂ ಕೃತಕ ಬುದ್ಧಿಮತ್ತೆಗೆ ಇರುವ ಸಂಬಂಧವೇನು ಎಂಬುದನ್ನು ನೋಡುವುದಾದರೆ ಈ ಕ್ಷೇತ್ರವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಮಹಾನ್ ಗ್ರಂಥ ತಿಳಿಸುತ್ತದ ಎಂದಾಗಿದೆ.


    ಮಹಾಭಾರತದಲ್ಲಿ ಉಲ್ಲೇಖವಾಗಿರುವ ಕೆಲವೊಂದು ಅಂಶಗಳು


    ಮಹಾಭಾರತದಲ್ಲಿ ಮೊಟ್ಟಮೊದಲು ಗಮನಸೆಳೆಯುವ ಅಂಶವೆಂದರೆ ಪಾಂಡವರು ಹಾಗೂ ಕೌರವರ ನಡುವಿನ ಚದುರಂಗದಾಟವಾಗಿದೆ. ಶಕುನಿ (ದುರ್ಯೋಧನನ ಚಿಕ್ಕಪ್ಪ) ಇಲ್ಲಿ ಕುಶಾಗ್ರಮತಿಯ ಆಟಗಾರ ದುರ್ಯೋಧನನನ್ನು ಪ್ರತಿನಿಧಿಸಿದರೆ ಯುಧಿಷ್ಟರ ಪಾಂಡವರನ್ನು ಪ್ರತಿನಿಧಿಸುತ್ತಾರೆ. ಆ ದಿನಗಳಲ್ಲಿ ಚದುರಂಗದಾಟ ಒಂದು ರೀತಿಯ ಸ್ಪರ್ಧೆಯನ್ನು ರಾಜರುಗಳಲ್ಲಿ ಉಂಟುಮಾಡಿತ್ತು. ಹೀಗಾಗಿ ಯುಧಿಷ್ಟಿರನಿಗೆ ಕೂಡ ಚದುರಂಗ ಪ್ರಿಯವಾಗಿತ್ತು.


    ಇದನ್ನೂ ಓದಿ: 'ಕನಸಿನ ಮನೆ' ನಿರ್ಮಿಸಿದ ಸಿವಿಲ್ ಇಂಜಿನಿಯರ್; ತಿಂಗಳಿಗೆ ಕೇವಲ 20 ರೂ ಕರೆಂಟ್ ಬಿಲ್!


    ಈ ಆಟದಲ್ಲಿ ಬಾಜಿ ಪಣಕ್ಕಿಡುವುದು ಸಾಮಾನ್ಯವಾಗಿತ್ತು ಹಾಗಾಗಿ ಆಭರಣ ಮತ್ತು ಭೂಮಿಯನ್ನು ಆಟಕ್ಕೆ ಪಂಥವಾಗಿ ಇಡಲಾಗುತ್ತಿತ್ತು ಹೀಗಾಗಿ ಯುಧಿಷ್ಟಿರ ಪಂಥದಲ್ಲಿ ಒಂದೊಂದೇ ವಸ್ತುಗಳನ್ನಿರಿಸುತ್ತಾ ಕೊನೆಯದಾಗಿ ತನ್ನ ಪತ್ನಿ ಹಾಗೂ ಸಹೋದರರನ್ನು ಪಂಥದಲ್ಲಿಟ್ಟು ಸೋಲುಣ್ಣುತ್ತಾರೆ.


    ಬಾಜಿ ಕಟ್ಟುವ ಭರದಲ್ಲಿ ಹಾಗೂ ಆಟದಲ್ಲಿ ಗೆಲ್ಲಲೇಬೇಕೆಂಬ ಕೆಟ್ಟ ಹಟದಿಂದ ಯುಧಿಷ್ಟಿರ ತನ್ನ ಸರ್ವ ಸಂಪತ್ತನ್ನು ಕೌರವರಿಗೆ ಸಮರ್ಪಿಸುತ್ತಾರೆ. ರಾಜರಾಗಿದ್ದ ಪಾಂಡು ಪುತ್ರರು ಕೌರವರ ಸೇವಕರಾಗುತ್ತಾರೆ. ಹಾಗೂ ಪಾಂಡವರು ಮತ್ತು ದ್ರೌಪದಿಯ ಮೇಲೆ ಸೇಡು ತೀರಿಸಿದ ಖುಷಿಯಲ್ಲಿ ದುರ್ಯೋಧನ ಆನಂದದಿಂದ ಇರುತ್ತಾನೆ.


    ಒಬ್ಬ ಸೇವಕನಾದ ಪತಿ ಪತ್ನಿಯನ್ನು ಹೇಗೆ ಬಾಜಿ ಕಟ್ಟಬಹುದು?


    ಆಟದ ನಂತರ, ಕೋಪಗೊಂಡ ದ್ರೌಪದಿ ತನ್ನ ಪತಿ ಮತ್ತು ಕುರು ಹಿರಿಯರ ಮುಂದೆ ಹಲವಾರು ಪ್ರಶ್ನೆಗಳನ್ನು ಹಾಕುತ್ತಾಳೆ. ಯುಧಿಷ್ಟಿರ ತನ್ನನ್ನು ಕಳೆದುಕೊಂಡು ಗುಲಾಮನಾಗಿದ್ದೇ ಎಂದು ಸಭಿಕರನ್ನು ಪ್ರಶ್ನಿಸುತ್ತಾಳೆ. ಆ ಸಮಯದಲ್ಲಿ ಒಬ್ಬ ಸೇವಕ ಸ್ವತಂತ್ರ ವ್ಯಕ್ತಿ ಎಂದೆನಿಸುವುದಿಲ್ಲ ಹಾಗೂ ತನ್ನ ಬಳಿ ಏನನ್ನೂ ಹೊಂದಿರುವುದಿಲ್ಲ. ಹಾಗಿದ್ದಾಗ ಆತ ತನ್ನನ್ನು ಹೇಗೆ ಪಣಕ್ಕಿಡಲು ಸಾಧ್ಯ ಎಂದು ಪ್ರಶ್ನಿಸುತ್ತಾಳೆ. ಇದು ಧರ್ಮದ ಉಲ್ಲಂಘನೆ ಹಾಗೂ ಕಾನೂನುಬಾಹಿರ ಕ್ರಮ ಮತ್ತು ಸಂಪೂರ್ಣ ತಪ್ಪು ಎಂದು ಖಂಡಿಸುತ್ತಾಳೆ.


    ಇದಕ್ಕೆ ಉತ್ತರಿಸಿದ ಕಾನೂನು ತಜ್ಞ ಭೀಷ್ಮ ಪಿತಾಮಹ ಇದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸುತ್ತಾರೆ, ಏಕೆಂದರೆ ಪತ್ನಿಯು ಪತಿಯ ಸ್ವತ್ತಾಗಿರುವುದರಿಂದ ಆಕೆಯನ್ನು ಪಣಕ್ಕಿಡಬಹುದು ಎಂದು ಹೇಳುತ್ತಾರೆ. ಹೀಗೆ ದ್ರೌಪದಿಯ ಪ್ರಶ್ನೆಗೆ ಸರಿಯಾದ ಉತ್ತರ ದೊರಕುವುದಿಲ್ಲ ಹಾಗೂ ನಮಗೆ ತಿಳಿದಂತೆ ಚದುರಂಗದಾಟವನ್ನು ತಮಗೆ ಬೇಕಾದಂತೆ ಕೌರವರು ಸಜ್ಜುಗೊಳಿಸಿರುತ್ತಾರೆ.


    ಕೃತಕ ಬುದ್ಧಿಮತ್ತೆಯಲ್ಲಿರುವ ಸಮಸ್ಯೆಗಳು ಹಿಂದೆ ಮಹಾಭಾರತದಲ್ಲಿ ಕೂಡ ಪ್ರಸ್ತುತವಿದೆ


    ಮಹಾಭಾರತದ ಈ ಸನ್ನಿವೇಶ ನೈತಿಕ, ಕಾನೂನು ಮತ್ತು ಆಡಳಿತಾತ್ಮಕ ಸವಾಲುಗಳನ್ನು ಮುನ್ನಲೆಗೆ ತಂದಿತು ಎಂದೇ ಹೇಳಬಹುದು. ಇಲ್ಲಿಯೇ ಕೃತಕ ಬುದ್ಧಿಮತ್ತೆ ಹಾಗೂ ಮಹಾಭಾರತದ ನಡುವಿನ ಸಂಪರ್ಕವನ್ನು ತಿಳಿಸುತ್ತದೆ. ಇಂದು AI (ಕೃತಕ ಬುದ್ಧಿಮತ್ತೆ) ಕೂಡ ನೈತಿಕ, ಕಾನೂನು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಹೊಂದಿವೆ. ಉಳಿವು ಅಳಿವಿನ ನಿರ್ಧಾರಗಳನ್ನು ತೆಗೆದುಕೊಳ್ಳಲು AI ಸಹಾಯ ಮಾಡಬಲ್ಲುದೇ?


    ಕೃತಕ ಬುದ್ಧಿಮತ್ತೆ ಸಾವು ಬದುಕಿನ ನಡುವಿನ ಸರಿಯಾದ ನಿರ್ಧಾರಗಳನ್ನು ಸೂಚಿಸಬಲ್ಲುದೇ? ಯಾವುದೇ ಹಂತದಲ್ಲಿ ಮಾನವನ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದೇ? ಮೊದಲಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.


    ಮಹಾಭಾರತದ ಪಾಠಗಳನ್ನು AI ಅನ್ನು ನಿರ್ವಹಿಸಲು ಬಳಸಬಹುದೇ?


    ಮಹಾಭಾರತದಲ್ಲಿ ಉಲ್ಲೇಖಿಸಲಾಗಿರುವ ಕೆಲವೊಂದು ಅಂಶಗಳನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯನ್ನು ನಿರ್ವಹಿಸಬಹುದೇ ಹಾಗಿದ್ದರೆ ಆ ವಿಧಾನಗಳಾವುವು ಎಂದು ರ್ನ್ ಸ್ಕೂಲ್ ಆಫ್ ಬ್ಯುಸಿನೆಸ್ (NYU) ನ ಪ್ರೊಫೆಸರ್ ವಿ ಶ್ರೀವತ್ಸನ್ ಅವರನ್ನು ಕೇಳಿದಾಗ ಅವರು ಕೃತಕ ಬುದ್ಧಿಮತ್ತೆಯನ್ನು ನಿರ್ವಹಿಸುವಲ್ಲಿ ಕೆಲವೊಂದು ಸವಾಲುಗಳನ್ನು ಮುಂದಿಡುತ್ತಾರೆ.


    ಸಾಂದರ್ಭಿಕ ಚಿತ್ರ


    ಮನುಕುಲದ ಪ್ರಸ್ತುತ ಕೊರತೆ ಎಂದರೆ ಆಲೋಚನೆಯನ್ನು ಹಂಚಿಕೊಳ್ಳುವಲ್ಲಿ ಏಕೀಕೃತ ತಾತ್ವಿಕ ವಿಧಾನವಾಗಿದೆ. ತಾತ್ವಿಕವಾಗಿ ಕಠಿಣ ಚಿಂತನೆ; ವಿಶ್ವಾದ್ಯಂತ ಉನ್ನತ ಶಿಕ್ಷಣ ಪಡೆದವರಿಗೆ ಅದನ್ನು ಸಂವಹನ ಮಾಡಲು ತುಲನಾತ್ಮಕವಾಗಿ ಸುಲಭವಾದ ಮಾರ್ಗ; ಮತ್ತು ವಿವಿಧ ರೀತಿಯ ರಾಷ್ಟ್ರೀಯ ಮತ್ತು ವಲಯದ ಸಂದರ್ಭಗಳಿಗಾಗಿ ಅದನ್ನು ಹೇಗೆ ಮಾರ್ಪಡಿಸುವುದು ಎಂಬುದರ ಕುರಿತು ಒಳನೋಟಗಳು, ಹೀಗೆ ಮೇಲಿನ ಎಲ್ಲವನ್ನು ಸಾಧಿಸಲು ಮಹಾಭಾರತವು ಮಹೋನ್ನತ ಸೇತುವೆಯಾಗಿದೆ ಎಂದು ತಿಳಿಸಿದ್ದಾರೆ.


    ಮನುಕುಲದ ಅಧ್ಯಯನಕ್ಕೆ ಕೃತಕ ಬುದ್ಧಿಮತ್ತೆ ಸಹಕಾರಿ


    ಕೃತಕ ಬುದ್ಧಿಮತ್ತೆಗೆ ಎಷ್ಟು ಸ್ವಾಯತ್ತತೆಯನ್ನು ನೀಡಬಹುದು ಎಂಬುದನ್ನು ಕೇಳಿದಾಗ ಶ್ರೀವತ್ಸನ್, ಡೊಮೇನ್‌ಗೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ ಬದಲಾಗುತ್ತದೆ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. ಇದಕ್ಕೂ ಮೊದಲು ಮನುಕುಲದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಬೇಕಾಗುತ್ತದೆ ಎಂದು ಅಲೆಕ್ಸಾಂಡರ್ ಪೋಪ್ ಅವರ ಚಿಂತನೆಯನ್ನು ತಿಳಿಸಿದ್ದಾರೆ.


    ಮಾನವಕುಲದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಶ್ರೇಷ್ಠ ಸಾಹಿತ್ಯವನ್ನು ಬಳಸಿಕೊಳ್ಳಬಹುದು ಎಂದು ಶ್ರೀವತ್ಸನ್ ಸಲಹೆ ನೀಡುತ್ತಾರೆ. ಮನಸ್ಸು ಉತ್ತಮವಾಗಿದ್ದರೆ ಆಲೋಚನೆಗಳು ಶ್ರೇಷ್ಠವಾಗಿರುತ್ತವೆ ಎಂದು ತಿಳಿಸಿದ್ದಾರೆ.


    ಮಹಾಭಾರತ ನವಶಿಲಾಯುಗದ ನಾಗರಿಕತೆಯ ಸಾಮೂಹಿಕ ಕಲಿಕೆಯನ್ನು ಒಳಗೊಂಡಿದ್ದು - ಆ ಮಾನದಂಡವನ್ನು ಪೂರೈಸುತ್ತದೆ; ಎರಡು ಡಜನ್‌ಗಿಂತಲೂ ಹೆಚ್ಚು ವ್ಯಕ್ತಿಗಳನ್ನು ಹೊಂದಿರುವುದರಿಂದ ಅವರ ಹಿನ್ನೆಲೆ, ವಿಶಿಷ್ಟತೆಗಳು ಮತ್ತು ಆಂತರಿಕ ಪಾತ್ರದ ಬೆಳವಣಿಗೆಯ ವಿವರಗಳನ್ನು ಹೊಂದಿದೆ, ಎಂದು ಪ್ರೊಫೆಸರ್ ಶ್ರೀವಾಸ್ತನ್ ತಿಳಿಸಿದ್ದಾರೆ.


    ಡೇವಿಡ್ ಬ್ರೂಕ್ಸ್ ನ್ಯೂಯಾರ್ಕ್ ಟೈಮ್ಸ್‌ಗೆ AI ಯುಗದಲ್ಲಿ ನಾವು ಹೇಗೆ ಮಾನವರಾಗಬೇಕೆಂದು ಕಲಿಯಬೇಕು ಎಂಬುದರ ಕುರಿತು ಲೇಖನವನ್ನು ಬರೆದಿದ್ದಾರೆ ಎಂಬುದನ್ನು ಶ್ರೀವಾಸ್ತನ್ ತಿಳಿಸಿದ್ದಾರೆ.


    ಕೃತಕ ಬುದ್ಧಿಮತ್ತೆ ಮಾನವನಿಗೆ ಹೇಗೆ ವೇದಿಕೆಯನ್ನೊದಗಿಸಿದೆ?


    ಮಾನವರು ಮಾತ್ರ ಹೊಂದಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ದ್ವಿಗುಣಗೊಳಿಸಲು AI ವೇದಿಕೆಯನ್ನೊದಗಿಸುತ್ತದೆ. ಕೃತಕ ಬುದ್ಧಿಮತ್ತೆಯ ಸಾಧನೆ ಏನೆಂದರೆ ನಮಗೆ ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅದು ನಮಗೆ ತೋರಿಸುತ್ತದೆ ಹಾಗೂ ನಾವು ಯಾರು ಮತ್ತು ನಾವು ಏನು ಕೊಡುಗೆ ನೀಡಬಹುದು ಎಂಬುದನ್ನು ಬಹಿರಂಗಪಡಿಸುತ್ತದೆ.


    ವೈಯಕ್ತಿಕ ಧ್ವನಿ, ಪ್ರಸ್ತುತಿ ಕೌಶಲ್ಯಗಳು, ಸೃಜನಶೀಲತೆಗಾಗಿ ಮಗುವಿನಂತಹ ಪ್ರತಿಭೆ, ಅಸಾಮಾನ್ಯ ವಿಶ್ವ ದೃಷ್ಟಿಕೋನಗಳು, ಸಹಾನುಭೂತಿ ಮತ್ತು ಸಾಂದರ್ಭಿಕ ಅರಿವಿನಂತಹ ವಿಭಿನ್ನ ಮಾನವ ಕೌಶಲ್ಯಗಳನ್ನು ಡೇವಿಡ್ ಪಟ್ಟಿಮಾಡಿದ್ದು ಕೃತಕ ಬುದ್ಧಿಮತ್ತೆಗೆ ಈ ಅಂಶಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


    ಸುದರ್ಶನ ಚಕ್ರ ಹಾಗೂ AI ತಂತ್ರಜ್ಞಾನ


    ಮಹಾಭಾರತದಲ್ಲಿ ಯಂತ್ರದ ಸ್ವತಂತ್ರತೆ ಹಾಗೂ ಬುದ್ಧಿವಂತಿಕೆಗೆ ಉದಾಹರಣೆ ಎಂದರೆ ಅದು ಶ್ರೀಕೃಷ್ಣನ ಸುದರ್ಶನ ಚಕ್ರವಾಗಿದೆ. ತನ್ನ ಗುರಿಯನ್ನು ಪತ್ತೆಹಚ್ಚಿ ಆ ಕೆಲಸವನ್ನು ಮುಗಿಸಿ ಪುನಃ ತನ್ನ ಮಾಲೀಕನ ಬಳಿ ಹಿಂತಿರುತ್ತದೆ. ಕೃಷ್ಣನು ಭಗವಾನ್ ಆಗಿರುವುದರಿಂದ ಯುದ್ಧ ನಿಯಮಗಳ ಪ್ರಕಾರ ತನ್ನ ಆಯುಧವನ್ನು ಬುದ್ಧಿವಂತಿಕೆಯಿಂದ ಬಳಸುತ್ತಿದ್ದ ಎನ್ನಬಹುದು.


    ಯುದ್ಧಗಳು ತಂತ್ರಜ್ಞಾನದಿಂದ ರೂಪುಗೊಂಡಿವೆ ಮತ್ತು ಈಗ ಯುದ್ಧದಲ್ಲಿ AI ಅನ್ನು ಬಳಸುವ ಸವಾಲು ಅದು ಯಾವ ಆಧಾರದ ಮೇಲೆ ಆಯುಧವನ್ನು ನಿಯೋಜಿಸುತ್ತದೆ ಮತ್ತು ಹೆಚ್ಚು ಮುಖ್ಯವಾಗಿ, ಮಾನವರು ಈ ಸಾಧ್ಯತೆಯನ್ನು ಸಹ ಅನುಮತಿಸಬೇಕೇ? ಎಂಬುದು ಮುಂದಿರುವ ಪ್ರಶ್ನೆಯಾಗಿದೆ.




    ಸಾಕಷ್ಟು ಅಧ್ಯಯನ ನಡೆಸಬೇಕು


    ಮಾಜಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಎ ಕಿಸ್ಸಿಂಜರ್, ಎರಿಕ್ ಸ್ಮಿತ್ ಮತ್ತು ಡೇನಿಯಲ್ ಹಟ್ಟನ್‌ಲೋಚರ್ ಅವರು 'ದಿ ಏಜ್ ಆಫ್ ಎಐ: ಅಂಡ್ ಅವರ್ ಹ್ಯೂಮನ್ ಫ್ಯೂಚರ್' ಎಂಬ ಪುಸ್ತಕದಲ್ಲಿ ಕೃತಕ ಬುದ್ಧಿಮತ್ತೆಯ ಒಳಿತು ಹಾಗೂ ಕೆಡುಕಗಳ ಬಗ್ಗೆ ತಿಳಿಸಿದ್ದಾರೆ. ಮಾನವ ಜನಾಂಗವು ಯಾವುದೇ ತಾಂತ್ರಿಕ ಅಭಿವೃದ್ಧಿಗೆ ತಾವು ನೀಡುವ ಕೊಡುಗೆ ಪ್ರಯೋಜನಕಾರಿ ಹಾಗೂ ನಿರ್ವಹಿಸಲು ಸಾಧ್ಯವಿದೆ ಎಂದು ಭಾವಿಸಿದ್ದಾರೆ.


    ಆದರೆ ಯಾವುದೇ ತಂತ್ರಜ್ಞಾನವನ್ನು ಬಳಕೆಗೆ ತರುವ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕಾಗಿದೆ ಹಾಗೂ ಪ್ರಯೋಗಗಳನ್ನು ಕೈಗೊಳ್ಳಬೇಕಾಗುತ್ತದೆ. ಮತ್ತೊಬ್ಬ ಲೇಖಕರಾದ ಎರಿಕ್ ಸ್ಮಿತ್ ತಿಳಿಸಿರುವಂತೆ ತಂತ್ರಜ್ಞಾನದ ಮಿತಿಗಳು ಹೇಗೆ ಪ್ರಯೋಗಗೊಳ್ಳಬೇಕು ಎಂಬ ತಿಳುವಳಿಕೆಗಳ ಗುಂಪನ್ನು ವಿಜ್ಞಾನಿಗಳು ಮತ್ತು ನೀತಿಯನ್ನು ರೂಪಿಸುವವರು ನಿರ್ಮಿಸಬೇಕು ಎಂದು ತಿಳಿಸಿದ್ದಾರೆ.


    AI ಮಾನವೀಯತೆಯ ಭವಿಷ್ಯವನ್ನು ರೂಪಿಸುವುದರೊಂದಿಗೆ, AI ಕಾರ್ಯನಿರ್ವಹಿಸುವ ತತ್ತ್ವಶಾಸ್ತ್ರವನ್ನು ಅಭಿವೃದ್ಧಿಪಡಿಸುವುದು ಮಾನವರು ಒಳಗೊಳ್ಳಬೇಕಾಗಿರುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು