ಕರ್ನಾಟಕ (Karnataka) ರಾಜ್ಯ ಚುನಾವಣೆ ಹೊಸ್ತಿಲಲ್ಲಿ ನಿಂತಿದೆ. ಈಗಾಗಲೇ ವಿಧಾನಸಭಾ ಚುನಾವಣಾ (Assembly Election) ಜ್ವರ ರಾಜ್ಯಾದ್ಯಂತ ಏರುತ್ತಾ ಇದೆ. ಹಾಲಿ ಶಾಸಕರು (MLA) ಈ ಬಾರಿಯೂ ಟಿಕೆಟ್ (Ticket) ಪಡೆಯುಬೇಕು ಅಂತ ಸರ್ಕಸ್ ಮಾಡುತ್ತಾ ಇದ್ದರೆ, ಹಲವು ಕ್ಷೇತ್ರಗಳಲ್ಲಿ ಹೊಸಬರು ಟಿಕೆಟ್ ಬಯಸಿದ್ದಾರೆ. ಈ ನಡುವೆ ಗೆಲ್ಲುವ ಅಭ್ಯರ್ಥಿಗಳಿಗೆ (Candidates) ಟಿಕೆಟ್ ನೀಡಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ನಿರ್ಧರಿಸಿವೆ. ಇನ್ನು ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾದ ಬೆಂಗಳೂರಿನ (Bengaluru) ಚಾಮರಾಜಪೇಟೆ (Chamarajapet) ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಸೈಲೆಂಟ್ ಸುನೀಲ! ಸದ್ಯ ಚಾಮರಾಜಪೇಟೆಯಲ್ಲಿ ಮಾಜಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ (B.Z. Zameer Ahmed Khan) ಅವರು ಶಾಸಕರಾಗಿದ್ದಾರೆ. ಜೆಡಿಎಸ್ನಲ್ಲಿದ್ದು (JDS) ಸಚಿವರೂ ಆಗಿದ್ದ ಜಮೀರ್, ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ (Congress) ಸೇರಿದ್ದರು. ಅವರನ್ನು ಸೋಲಿಸಲೇ ಬೇಕು ಅಂತ ಜೆಡಿಎಸ್ ಶಪಥ ಮಾಡಿದ್ದರೂ, ಜಮೀರ್ ಗೆದ್ದು ಬೀಗಿದ್ದರು. ಅಲ್ಲಿಗೆ ಜಮೀರ್ ಗೆಲ್ಲುವ ಕುದುರೆ ಎನ್ನುವುದು ಸಾಬೀತಾಗಿದ್ದು. ಇದೀಗ ಜಮೀರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ರಣತಂತ್ರ ರೂಪಿಸಿದೆ. ಇದೀಗ ಬೆಂಗಳೂರಿನ ರೌಡಿ ಶೀಟರ್ (Rowdy Sheeter) ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ್ನನ್ನು ಕಣಕ್ಕೆ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಮತ್ತೊಂದೆಡೆ ಮಂಡ್ಯದ ನಾಗಮಂಗಲದಲ್ಲಿ (Nagamangala) ಫೈಟರ್ ರವಿ (Fighter Ravi) ಎಂಬ ರೌಡಿಶೀಟರ್ನನ್ನು ಕಣಕ್ಕಿಳಿಸೋದಕ್ಕೆ ತಂತ್ರ ರೂಪಿಸಿದೆ. ಇದೀಗ ಈ ಇಬ್ಬರು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಸೈಲೆಂಟ್ ಸುನೀಲ ಯಾರು?
ಬೆಂಗಳೂರು ಎಂಬ ಮಹಾನಗರಿ ಅದೆಷ್ಟೋ ರೌಡಿಗಳಿಗೆ, ಭೂಗತ ಪಾತಕಿಗಳಿಗೆ, ಅಪರಾಧಿಗಳಿಗೆ ಆಶ್ರಯ ಕೊಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪೈಕಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ ಕೂಡ ಒಬ್ಬ. ಸದ್ಯ ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ ಸೈಲೆಂಟ್ ಸುನೀಲ ಮೂಲತಃ ಕೇರಳದವನು. ಹತ್ತನೇ ತರಗತಿ ಓದುವಾಗಲೇ 'ಬಾಲಾಪರಾಧಿ'ಯಾಗಿ ಜೈಲುವಾಸ ಅನುಭವಿಸಿದಾತ ಈ ಸೈಲೆಂಟ್ ಸುನೀಲ.
20ರ ಆಸುಪಾಸಿನಲ್ಲೇ ರೌಡಿಶೀಟರ್ ಆಗಿದ್ದ ಸುನೀಲ
ಈತನ ಮೂಲ ಹೆಸರು ಸುನೀಲ್ ಕುಮಾರ್. ರೌಡಿಸಂಗೆ ಬರುತ್ತಿದ್ದಂತೆ ಸೈಲೆಂಟ್ ಸುನೀಲ ಅಂತಾನೆ ಕುಖ್ಯಾತಿ ಪಡೆದ. ನೀವು ನಂಬಲ್ಲ, ಈತ ಬಾಲಾಪರಾಧಿ ಆದ ಮೇಲೆ ಕೇವಲ 20 ವರ್ಷದ ಆಸುಪಾಸಲ್ಲೇ ಈತನ ಮೇಲೆ ರೌಡಿಶೀಟ್ ತೆರೆಯಲಾಗಿತ್ತು!
ಇದನ್ನೂ ಓದಿ: Karnataka Assembly Elections: ಗಣೇಶನ ಗದ್ದಲ, ಈದ್ಗಾ ಕೋಲಾಹಲ! ಹೇಗಿದೆ ಚಾಮರಾಜಪೇಟೆಯಲ್ಲಿ ಚುನಾವಣಾ ಕಾವು?
ಕುಖ್ಯಾತ ರೌಡಿಗಳ ಬಲಗೈ ಬಂಟ
ಜೈಲುವಾಸ ಅನುಭವಿಸಿದ ಬಳಿಕ ಪ್ರಕಾಶ್ ನಗರದ ಕುಖ್ಯಾತ ರೌಡಿ ಶೀಟರ್ ಗಳಾದ ನಾಗರಾಜ, ಒಂಟೆ ಮತ್ತು ಪ್ರಸಾದಿ ಎಂಬುವರ ಗುಂಪಿಗೆ ಸುನೀಲ ಸೇರಿಕೊಳ್ಳುತ್ತಾನೆ. ಬಸವೇಶ್ವರನಗರದ ಪೊಲೀಸ್ ಒಬ್ಬರ ಮೇಲೆ ಅಟ್ಯಾಕ್ ಮಾಡಿದ ಆರೋಪದಲ್ಲಿ ಮತ್ತೆ ಅಂದರ್ ಆಗುತ್ತಾನೆ. ಅಲ್ಲಿಂದ ಒಂದೊಂದೇ ಪ್ರಕರಣದಲ್ಲಿ ಈತನ ಹೆಸರು ಕೇಳುತ್ತಾ ಬರುತ್ತದೆ.
ಸೈಲೆಂಟ್ ಅಂತ ಹೆಸರು ಬಂದಿದ್ದು ಏಕೆ?
ರೌಡಿಸಂನಲ್ಲಿ ಅಬ್ಬರಿಸೋ ಸುನೀಲನಿಗೆ ಸೈಲೆಂಟ್ ಸುನೀಲ ಅಂತ ಹೆಸರು ಬರೋದಕ್ಕೂ ಕಾರಣಗಳಿವೆ. ಈತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುವ ವೇಳೆ ಸುನೀಲ ಸೈಲೆಂಟ್ ಆಗೇ ಇರ್ತಿದ್ದ. ಏನೇ ಪ್ರಶ್ನೆ ಮಾಡಿದ್ರು, ಗಪ್ ಚುಪ್ ಆಗಿ ಇರ್ತಿದ್ದ. ಇದೇ ಕಾರಣಕ್ಕೆ ಆತನಿಗೆ ಸೈಲೆಂಟ್ ಸುನೀಲ ಅನ್ನೋ ಹೆಸರು ಬಂತು.
ಕೋಕಾ ಕಾಯ್ದೆಯಡಿ ಬಂಧನ
ಈತನ ಮೇಲೆ ಮೊದಲು ಬೆಂಗಳೂರಿನ ಸುಬ್ರಮಣ್ಯನಗರ ಠಾಣೆಯಲ್ಲಿ ರೌಡಿಶೀಟ್ ಓಪನ್ ಆಯ್ತು. ಬಳಿಕ ಅಮೃತಹಳ್ಳಿ, ಹೌಗ್ರೌಂಡ್ಸ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಆಗಿತ್ತು. 2017 ರಲ್ಲಿ ಸೈಲೆಂಟ್ ಸುನೀಲನ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಜೊತೆಗೆ ಕೋಕಾ ಕಾಯ್ದೆಯಡಿ ಬಂಧನ ಮಾಡಲಾಗಿತ್ತು.
ಸುನೀಲನ ಮೇಲೆ ಹಲವಾರು ಕೇಸ್
ಸದ್ಯ 41 ವರ್ಷದ ಸೈಲೆಂಟ್ ಸುನಿಲನ ಮೇಲೆ ಹಲವಾರು ಕೇಸ್ಗಳಿದ್ದವು. ಸೈಲೆಂಟ್ ಸುನೀಲನ ಮೇಲೆ ಕೊಲೆ, ದರೋಡೆ, ಕಿಡ್ನಾಪ್, ಹಣಕ್ಕೆ ಬೆದರಿಕೆ, ಭೂ ಮಾಫಿಯಾ ಪ್ರಕರಣಗಳಿದ್ದವು.
ಸೈಲೆಂಟ್ ಭಾಗಿಯಾಗಿದ್ದಾನೆ ಎನ್ನಲಾದ ಪ್ರಮುಖ ಕೇಸ್ಗಳು
1996ರಲ್ಲಿ ಕೊಲೆಯತ್ನ ಪ್ರಕರಣ (307) - ರಾಜಾಜಿನಗರ ಠಾಣೆ, 1996ರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶೆಟ್ನಾಳಪ್ಪ ಅವರ ಕೊಲೆ (ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ, ಸುನೀಲ, ಮೋಹನ, ಲಚ್ಚಿ ಕೇಸಲ್ಲಿ ಸಿಕ್ಕಿಬಿದ್ದಿದ್ದರು), 2000ರಲ್ಲಿ ಕೊಲೆಯತ್ನ ಕೇಸ್ - ಪುಸಾದಿ ಹುಡುಗರ ಮೇಲೆ ಅಟ್ಯಾಕ್, ಸುಬ್ರಹ್ಮಣ್ಯನಗರ ಠಾಣೆ (ವಿಜಿ, ಬಲರಾಮ, ಯೋಗೀಶ, ಸುನೀಲ ಸಿಕ್ಕಿಕೊಂಡಿದ್ರು), 2000ರಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ (ಸುನೀಲ, ಬಲರಾಮ, ಯೋಗೀಶ, ಶ್ರೀನಿವಾಸ, ಮಂಜುನಾಥ್, ಲಕ್ಷ್ಮಿ ನರಸಿಂಹ ಅಲಿಯಾಸ್ ಲಕ್ಷ್ಮಿ, ವಿಜಿಕುಮಾರ್ ಅಲಿಯಾಸ್ ಸಪೋಟಾ ವಿಜಿ) ಇತ್ಯಾದಿ ಕೇಸ್.
2000ರಲ್ಲಿ ಕೊಲೆಯತ್ನ ಕೇಸ್-ಸುಬ್ರಹ್ಮಣ್ಯನಗರ ಠಾಣೆ(ಸುನೀಲ, ಬಲರಾಮ, ವಿಜಿ, ಹನುಮಂತರಾಜು, ಶ್ರೀನಿವಾಸ), 2004ರಲ್ಲಿ ಡಕಾಯಿತಿ ಯತ್ನ ಕೇಸ್-ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ (ಸುನೀಲ, ಗಿರೀಶ, ಲೋಹಿತ್), 2003ರಲ್ಲಿ 307 ಕೇಸ್ - ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ, 2010ರಲ್ಲಿ ಆರ್ಮ್ಸ್ ಆಕ್ಟ್ -ಸುಬ್ರಹ್ಮಣ್ಯನಗರ ಠಾಣೆ(ಸುನೀಲ, ಗೆಡಾ ನಾಗ, ಕಿರಿಕ್ ಮಂಜ, ಬಾಲಾ, ಶ್ರೀನಿವಾಸ), 2001ರಲ್ಲಿ ಡಕಾಯತಿ ಯತ್ನ ಪುಕರಣ- ಶಂಕರಪುರ ಪೊಲೀಸ್ ಠಾಣೆಯಲ್ಲಿ (ಒಂಟೆ ಲೋಹಿತ್, ಸುನೀಲ) ದಾಖಲಾಗಿತ್ತು.
ರೌಡಿಸಂ ತೊರೆದು ಸಮಾಜಸೇವೆ
ಇನ್ನು ಬಹುತೇಕ ಎಲ್ಲಾ ರೌಡಿಗಳಂತೆ ಸುನೀಲ ರೌಡಿಸಂ ತೊರೆದಿದ್ದ ಎನ್ನಲಾಗುತ್ತಿದೆ. ಸಮಾಜಸೇವೆ, ಅದು ಇದು ಅಂತ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದ. ಇದೀಗ ಸುನೀಲನ ಎಲ್ಲಾ ಕೇಸ್ ಗಳು ಕ್ಲಿಯರ್ ಆಗಿದೆ ಎನ್ನಲಾಗುತ್ತಿದೆ. ಆತನ ಮೇಲೆ ಸದ್ಯ ಒಂದೇ ಕೇಸ್ ಇದ್ದು ಅದು ಕೂಡಾ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಹೀಗಾಗಿಯೇ ರಾಜಕೀಯ ಪ್ರವೇಶ ಮಾಡೋದಕ್ಕೆ ಸುನಿಲ ಸೈಲೆಂಟ್ ಆಗೇ ಸಜ್ಜಾಗಿದ್ದಾನೆ.
ಬಿಜೆಪಿ ಸೇರಿದ ಫೈಟರ್ ರವಿ ಯಾರು?
ಇನ್ನು ಫೈಟರ್ ರವಿ ಎಂಬ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಬಿಜೆಪಿ ಸೇರಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಟಿಕೆಟ್ ಬಯಸಿರುವ ರವಿ, ಬಿಜೆಪಿಗೆ ಎಂಟ್ರಿ ಆಗಿದ್ದಾರೆ. ಇವರ ಈತನ ಮೇಲೇನೂ ಕೊಲೆ, ಸುಲಿಗೆ ದರೋಡೆ ಕೇಸ್ ಗಳು ಇಲ್ಲ, ಆದ್ರೆ ಕ್ರಿಕೆಟ್ ಬುಕ್ಕಿಂಗ್ನಲ್ಲಿ ಕುಖ್ಯಾತಿ ಪಡೆದಿದ್ದ. 2010 ರಿಂದಲೂ ಕ್ರಿಕೆಟ್ ಬುಕ್ಕಿಯಾಗಿದ್ದ ರವಿ, ಹಲವು ಬಾರಿ ಕ್ರಿಕೆಟ್ ಬುಕ್ಕಿ ಕೇಸಲ್ಲಿ ಅರೆಸ್ಟ್ ಆಗಿ, ಜಾಮೀನು ತಗೊಂಡು ಹೊರಗಡೆ ಬಂದಿದ್ದ.
ಈತನ ಮೇಲೂ ರೌಡಿಶೀಟ್ ಓಪನ್
ಇನ್ನು ಪದೇ ಪದೇ ಈ ರೀತಿ ಕೃತ್ಯ ಮಾಡ್ತಾ ಇದ್ದಿದ್ದಕ್ಕೆ ರೌಡಿಶೀಟರ್ ಓಪನ್ ಮಾಡಲಾಗಿತ್ತು. ಈತನ ಮೇಲೆ 2012-13 ರಲ್ಲಿ ಬೆಂಗಳೂರಿನ ವೈಯ್ಯಾಲಿ ಕಾವಲ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಆಗಿತ್ತು. ಬಳಿಕ 2018 ರಲ್ಲಿ ಅಲೋಕ್ ಕುಮಾರ್ ಹೆಚ್ಚುವರಿ ಪೊಲೀಸ್ ಆಯುಕ್ತರಾದಾಗ ಬಂಧಿಸಿ, ಜೈಲಿಗೂ ಕಳಿಸಲಾಗಿತ್ತು. ಕುಮಾರಸ್ವಾಮಿ ಸರ್ಕಾರ ಇದ್ದಾಗ ಬೆಂಗಳೂರು ಬಿಟ್ಟಿದ್ದ ಫೈಟರ್ ರವಿ, ನಂತ್ರ ಮತ್ತೆ ಕ್ರಿಕೆಟ್ ಬುಕ್ಕಿಯಾಗಿ ಆಕ್ಟೀವ್ ಆಗಿದ್ದ.
ಇದನ್ನೂ ಓದಿ: Crime Story: ಸರಸದ ಸಮಯದಲ್ಲೇ 67ರ ಮುದುಕನಿಗೆ ಹೃದಯಾಘಾತ! ನಿಗೂಢ ಸಾವಿನ ಕಥೆ ಹೇಳಿದ ಲಾಸ್ಟ್ ಕಾಲ್!
ಕೋವಿಡ್ಗೂ ಮುನ್ನ ಕ್ಲಬ್ ನಡೆಸುತ್ತಿದ್ದ ರವಿ
ಕೋವಿಡ್ ಗೂ ಮೊದಲು ಕ್ಲಬ್ ಒಂದನ್ನು ನಡೆದುಸುತ್ತಿದ್ದ ಫೈಟರ್ ರವಿ, ಕೋವಿಡ್ ಬಳಿಕ ಕ್ಲಬ್ ಕೂಡ ಬಂದ್ ಮಾಡಿದ್ದ. ಆದ್ರೆ ಈತನ ಮೇಲೆ 2018 ರಿಂದ ಇದುವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ. ಆದ್ರೂ ಪೊಲೀಸರು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ರೌಡಿಪರೇಡ್ ಇದ್ದಾಗ ಕರೆಸಿ ವಾರ್ನ್ ಮಾಡ್ತಾ ಇದ್ರು. ಇತ್ತೀಚಿಗಷ್ಟೇ ಶೇಷಾದ್ರಿಪುರಂ ಎಸಿಪಿ ಚಂದನ್ ಅವರು ಈತನನ್ನು ಕರೆಸಿ ವಾರ್ನ್ ಮಾಡಿದ್ರು. ಇದೀಗ ಈತ ಬಿಜೆಪಿ ಸೇರಿದ್ದಾನೆ.
(ಮಾಹಿತಿ: ವಿವಿಧ ಮೂಲಗಳಿಂದ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ