Explained| 2023ರ ಚುನಾವಣೆಗೆ ಈಗಿನಿಂದಲೇ ಸಜ್ಜಾಗುತ್ತಿದ್ದಾರಾ ಡಿ.ಕೆ. ಶಿವಕುಮಾರ್​?; ಎಲ್ಲರ ಹುಬ್ಬೇರಿಸುತ್ತಿರುವ ಟ್ರಬಲ್ ಶೂಟರ್​

ಜುಲೈ 2 ರ ಪತ್ರಿಕೆಯಲ್ಲಿ 'ನಾಯಕತ್ವದ ಜೀವನ' ಎಂಬ ಶೀರ್ಷಿಕೆಯೊಂದಿಗೆ ಡಿ.ಕೆ. ಶಿವಕುಮಾರ್ ಬಗ್ಗೆ ಹಲವಾರು ಲೇಖನಗಳನ್ನು ಪ್ರಕಟ ಮಾಡಲಾಗಿತ್ತು. ಶಿವಕುಮಾರ್ ಅವರನ್ನು "ಬದಲಾವಣೆಯ ಮುಂಚೂಣಿ ನಾಯಕ" ಎಂದು ಬಣ್ಣಿಸಲಾಗಿತ್ತು.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

 • Share this:
  ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಜನ ಕಳೆದ ಹಲವು ತಿಂಗಳುಗಳಿಂದ ಗಮನಿಸುತ್ತಿದ್ದಾರೆ. ಇಡೀ ರಾಜ್ಯ ಕೊರೋನಾದಿಂದ ತತ್ತರಿಸುತ್ತಿದ್ದ ಸಂದರ್ಭದಲ್ಲೂ ಸಹ ಬಿಜೆಪಿ ನಾಯಕರು ಕುರ್ಚಿಗಾಗಿ ಕಿತ್ತಾಡುತ್ತಿರುವುದು ಬಿಜೆಪಿ ವರ್ಚಸ್ಸನ್ನು ಕುಗ್ಗಿಸುತ್ತಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತದಿಂದ ಗೆಲುವು ಸಾಧಿಸುವುದು ಖಚಿತ ಎಂದೇ ಹಲವು ರಾಜಕೀಯ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿದೆ. ಆದರೆ, ಹೀಗೊಂದು ಮಾತು ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿಯೂ ಹೆಚ್ಚಾಗಿದೆ ಒಂದೆಡೆ ಡಿ.ಕೆ. ಶಿವಕುಮಾರ್ ಬಣ ಮತ್ತೊಂದೆಡೆ ಸಿದ್ದರಾಮಯ್ಯ ಬಣ ಸಿಎಂ ಸ್ಥಾನಕ್ಕೆ ಈಗಿನಿಂದಲೇ ಕಸರತ್ತು ನಡೆಸುತ್ತಿದೆ. ಈ ನಡುವೆ ಜುಲೈ.2 ರಂದು ಡಿ.ಕೆ. ಶಿವಕುಮಾರ್ ಮಾಡಿದ್ದ ಆ ಒಂದು ಕೆಲಸ ಇದೀಗ ಇಡೀ ಕೈ ಪಾಳಯದಲ್ಲಿ ಬಿಸಿ ವಾತಾವರಣಕ್ಕೆ ಕಾರಣವಾಗಿದೆ.

  ಜುಲೈ 2 ರಂದು ಡಿ.ಕೆ. ಶಿವಕುಮಾರ್​ ಆಂಗ್ಲ ಸುದ್ದಿ ಪತ್ರಿಕೆಗೆ ಪೂರ್ಣ ಪುಟದ ಜಾಹೀರಾತನ್ನು ನೀಡಿದ್ದರು. ಈ ಜಾಹೀರಾತಿನಲ್ಲಿ "ನಾಯಕತ್ವದ ಜೀವನ" ಎಂಬ ಶೀರ್ಷಿಕೆಯ ಅಡಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಲಾಗಿತ್ತು.  ಹೈಕಮಾಂಡ್​ ಗಮನಕ್ಕೆ ಬರಲಿ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಇಂಗ್ಲಿಷ್ ಪತ್ರಿಕೆಗೆ ಜಾಹೀರಾತು ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಈ ಕೆಲಸ ಇದೀಗ ಅನೇಕ ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಾಗಿಸಿದೆ. ಅನೇಕ ಮುಖಂಡರು ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂಬುದು ತಿಳಿದುಬಂದಿದೆ.

  ಜುಲೈ 2 ರ ಪತ್ರಿಕೆಯಲ್ಲಿ 'ನಾಯಕತ್ವದ ಜೀವನ' ಎಂಬ ಶೀರ್ಷಿಕೆಯೊಂದಿಗೆ ಡಿ.ಕೆ. ಶಿವಕುಮಾರ್ ಬಗ್ಗೆ ಹಲವಾರು ಲೇಖನಗಳನ್ನು ಪ್ರಕಟ ಮಾಡಲಾಗಿತ್ತು. ಶಿವಕುಮಾರ್ ಅವರನ್ನು "ಬದಲಾವಣೆಯ ಮುಂಚೂಣಿ ನಾಯಕ" ಎಂದು ಬಣ್ಣಿಸಲಾಗಿತ್ತು. ಸಾಂಕ್ರಾಮಿಕ ಸಮಯದಲ್ಲಿ ಶಿವಕುಮಾರ್ ಅವರು ಮಾಡಿದ ಕೆಲಸದ ಬಗ್ಗೆ ಅಂಕಣಗಳನ್ನು ಬರೆಯಲಾಗಿತ್ತು. ಆದರೆ, ಡಿಕೆಶಿ ಅವರ ಈ ಸ್ವ-ಪ್ರಚಾರ ಈಗ ಕಾಂಗ್ರೆಸ್​ನಲ್ಲಿ ಚರ್ಚೆಗೆ ಕಾರಣವಾಗಿದೆ.

  ದಿ ನ್ಯೂಸ್ ಮಿನಿಟ್‌ನೊಂದಿಗೆ ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಮೂಲಗಳು,​ "ಡಿ.ಕೆ. ಶಿವಕುಮಾರ್​ ಅವರ ಸಾರ್ವಜನಿಕ ಚಿತ್ರಣವನ್ನು ನಿಭಾಯಿಸುತ್ತಿರುವ ಪಿಆರ್​ ಕಂಪೆನಿಯ ಉಪಾಯದಿಂದಾಗಿ ಈ ಸ್ವ-ಪ್ರಚಾರ ಕಾರ್ಯಕ್ರಮವನ್ನು ಮಾಡಲಾಗಿದೆ" ಎಂದು ತಿಳಿದುಬಂದಿದೆ.

  "ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ತಾವು ಮಾಡಿದ ಕೆಲಸದ ಬಗ್ಗೆ ಜನರಿಗೆ ತಿಳಿಸುವುದು ಸಾಮಾನ್ಯ ವಿಚಾರ" ಎಂದು ಕಾಂಗ್ರೆಸ್ ವಕ್ತಾರ ಲಾವನ್ಯಾ ಬಲ್ಲಾಲ್ ಅವರು ಟಿಎನ್‌ಎಂಗೆ ಹೇಳಿದ್ದಾರೆ.

  ಇದನ್ನೂ ಓದಿ: Drone Attack| ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ; ಗಡಿಯಲ್ಲಿ ಕಟ್ಟೆಚ್ಚರ, ಹೆಚ್ಚುವರಿ ಸೇನೆ ನಿಯೋಜನೆ!

  ಅಲ್ಲದೆ, "ಜಾಹೀರಾತುಗನ್ನು ಹೆಚ್ಚು ಓದುವ ಅಗತ್ಯವಿಲ್ಲ ಎಂದು ಒತ್ತಿಹೇಳಿದ ಲಾವಣ್ಯ ಬಲ್ಲಾಲ್, ಸೇವೆ ಎಂಬುದು ರಾಜಕಾರಣಿಗಳ ಧರ್ಮ ಮತ್ತು ಡಿ.ಕೆ. ಶಿವಕುಮಾರ್ ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. 2020 ರ ಜುಲೈನಲ್ಲಿ ಡಿಕೆಶಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಕಾರ್ಯಕರ್ತರ ಉತ್ಸಾಹದಲ್ಲಿ ಭಾರಿ ಏರಿಕೆ ಕಂಡಿದೆ" ಎಂದು ಲಾವಣ್ಯ ಬಲ್ಲಾಲ್ ತಿಳಿಸಿದ್ದಾರೆ.

  ಆದರೆ, ಈ ಎಲ್ಲಾ ಚರ್ಚೆಗಳ ಹೊರತಾಗಿಯೂ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷದ ಸಿಎಂ ಮುಖವಾಗಿ ಪ್ರಕ್ಷೇಪಿಸಲು ಡಿಕೆಶಿ ನಡೆಸುತ್ತಿರುವ ಆಂತರಿಕ ಪೈಪೋಟಿಗಳಿಗೆ ಈ ಎಲ್ಲಾ ಘಟನೆಗಳು ಸಾಕ್ಷಿ ನುಡಿಯುತ್ತಿವೆ.

  ಇದನ್ನೂ ಓದಿ: Delta Plus| ಕೊರೋನಾ ಒಂದು ಡೋಸ್ ಲಸಿಕೆ ಪಡೆದವರು ಡೆಲ್ಟಾ ಪ್ಲಸ್ ವೈರಸ್​ನಿಂದ ಸುರಕ್ಷಿತ; ಐಸಿಎಂಆರ್

  “ಕಾಂಗ್ರೆಸ್ ಪಕ್ಷದ ಕಾರ್ಯಕ್ಕಾಗಿ ಅವರನ್ನು ಪ್ರಶಂಸಿಸಲಾಗುತ್ತಿದೆ. ಹೌದು, ಅಧ್ಯಕ್ಷರಾಗಿ, ಸಾಂಕ್ರಾಮಿಕ ಸಮಯದಲ್ಲಿ ಅವರು ಅನೇಕ ಚಟುವಟಿಕೆಗಳನ್ನು ಕೈಗೊಂಡರು. ಇದು ಜನಮನ್ನಣೆಯನ್ನೂ ಪಡೆದಿತ್ತು. ಆದರೆ, ಡಿಕೆಶಿ ಅವರ ಈ ಏಳಿಕೆ ಪಕ್ಷದಲ್ಲಿ ಹಲವರಿಗೆ ಇರಿಸು ಮುರಿಸಿಗೆ, ಅಭದ್ರತೆ  ಕಾರಣವಾಗಿದೆ" ಎನ್ನಲಾಗುತ್ತಿದೆ.

  ಇದೇ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಸಿಎಂ ಮುಖವೆಂದು ಘೋಷಿಸಬೇಕು ಎಂದು ಎರಡು ಬಣಗಳು ಈಗಿನಿಂದಲೇ ಪೈಪೋಟಿಗೆ ಮುಂದಾಗಿದ್ದರೆ, ಇದರ ನಡುವೆ ಮೂರನೇ ಗುಂಪಾಗಿ ಈಗ ದಲಿತ ನಾಯಕನನ್ನು ಘೋಷಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ, ಈ ಎಲ್ಲಾ ರಾಜಕೀಯ ಭರಾಟೆಗಳು ಕೊನೆಗೆ ಯಾರಿಗೆ ಸಿಎಂ ಸ್ಥಾನ ನೀಡಲಿದೆ? ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: