Eidgah Maidan: ಹುಬ್ಬಳ್ಳಿಯಲ್ಲಿ ಗಣೇಶೋತ್ಸವ, ಚಾಮರಾಜಪೇಟೆಯಲ್ಲಿ ಇಲ್ಲ ಅವಕಾಶ! ಎರಡು ವಿವಾದ, ಎರಡು ತೀರ್ಪು

ಈ ನಡುವೆಯೇ ಇಡೀ ರಾಜ್ಯವೇ ನಿರೀಕ್ಷಿಸುತ್ತಿದ್ದ ಎರಡು ವಿವಾದಗಳ ತೀರ್ಪುಗಳನ್ನು ನ್ಯಾಯಪೀಠ ಕೊಟ್ಟಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಬೇಕಾ, ಬೆೇಡವಾ ಎಂಬ ವಿವಾದದ ಕುರಿತಂತೆ ಹೈಕೋರ್ಟ್ ತೀರ್ಪು ನೀಡಿದ್ದರೆ, ಇತ್ತ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಮಾಡಬೇಕಾ ಬೇಡವಾ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶಾದ್ಯಂತ ಗಣೇಶ ಚತುರ್ಥಿ (Ganesh Chaturthi) ಸಂಭ್ರಮ ಕಳೆಗಟ್ಟಿದೆ. ಮನೆ ಮನೆಯಲ್ಲಿ ವಿನಾಯಕನ (Vinayaka) ಆರಾಧನೆ ನಡೆಯುತ್ತಿದೆ. ಜನರೆಲ್ಲ ಗಣಪತಿಯ ಆರಾಧನೆಯಲ್ಲಿ, ಹಬ್ಬದ (Festival) ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಈ ನಡುವೆಯೇ ಇಡೀ ರಾಜ್ಯವೇ ನಿರೀಕ್ಷಿಸುತ್ತಿದ್ದ ಎರಡು ವಿವಾದಗಳ (Row) ತೀರ್ಪುಗಳನ್ನು (Judgment) ನ್ಯಾಯಪೀಠ ಕೊಟ್ಟಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Hubballi Eidgah Maidan) ಗಣೇಶೋತ್ಸವ (Ganeshotsava) ಮಾಡಬೇಕಾ, ಬೆೇಡವಾ ಎಂಬ ವಿವಾದದ ಕುರಿತಂತೆ ಹೈಕೋರ್ಟ್ (High Court) ತೀರ್ಪು ನೀಡಿದ್ದರೆ, ಇತ್ತ ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ (Chamarajapet) ಗಣೇಶೋತ್ಸವ ಮಾಡಬೇಕಾ ಬೇಡವಾ ಎಂಬ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು (Judgment) ಹೊರಡಿಸಿದೆ. ಕೋರ್ಟ್ ತೀರ್ಪಿನಿಂದ ಹಿಂದೂ (Hindu) ಹಾಗೂ ಮುಸ್ಲಿಂ (Muslim) ಸಂಘಟನೆಗಳಿಗೆ ಸಿಹಿ-ಕಹಿ ಸಿಕ್ಕಿದಂತಾಗಿದೆ. ಒಂದೇ ರೀತಿಯ ವಿವಾದ ಆಗಿದ್ದರೂ ಎರಡು ಉನ್ನತ ನ್ಯಾಯಾಲಯಗಳು, ಎರಡು ರೀತಿಯ ತೀರ್ಪು ನೀಡಿದೆ.

ಹುಬ್ಬಳ್ಳಿ ಈದ್ಗಾ ಮೈದಾನದ ಹಿನ್ನೆಲೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನವನ್ನು 1921ರಲ್ಲಿ ಹುಬ್ಬಳ್ಳಿ ನಗರಸಭೆಯವರು ಅಂಜುಮನ್-ಎ- ಇಸ್ಲಾಂ ಸಂಸ್ಥೆಗೆ ಭೋಗ್ಯಕ್ಕೆ ನೀಡಿತ್ತು. ಭೋಗ್ಯ ಕರಾರಿನ ಪ್ರಕಾರ ದಿನಕ್ಕೆ ಎರಡು ಬಾರಿ ಪ್ರಾರ್ಥನೆ ವರ್ಷಕ್ಕೆ ಒಂದು ರೂಪಾಯಿ ಬಾಡಿಗೆ ಒಪ್ಪಂದದೊಂದಿಗೆ ಸಂಸ್ಥೆಗೆ ವಹಿಸಿದ್ದರು.

ಸಂಘರ್ಷಕ್ಕೆ ಎಡೆಮಾಡಿಕೊಟ್ಟ ನಿರ್ಧಾರ

ಹುಬ್ಬಳ್ಳಿ ನಗರಸಭೆ ಶಿಫಾರಸಿನ ಮೇರೆಗೆ 1961ರಲ್ಲಿ ಸರ್ಕಾರವು ಅಂಜುಮನ್ ಎ- ಇಸ್ಲಾಂನವರಿಗೆ ಅಂಗಡಿ ಕಟ್ಟಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂಪರ ಸಂಘಟಣೆಗಳು ಪಿಐಎಲ್ ಹಾಕಿದ್ದವು. ಪ್ರಕರಣ ನ್ಯಾಯಾಲಯದ ಕಟಕಟೆಯಲ್ಲಿರುವಾಗಲೇ 1992ರ ಆಗಸ್ಟ್ 15ರಂದು ಬಿಜೆಪಿ ಪ್ರತಿಭಟನೆ ನಡೆಸಿತು. ಆ ವೇಳೆ ಬಿ ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಅನಂತಕುಮಾರ್‌, ಪ್ರಲ್ಹಾದ್‌ ಜೋಶಿ ಮೊದಲಾದವರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರ ಮುಂದಾಗಿತ್ತು. ಇದು ಸಂಘರ್ಷಕ್ಕೆ ಮುನ್ನುಡಿಯಾಯಿತು.

ಇದನ್ನೂ ಓದಿ: Temple: ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಮಾಂಸಾಹಾರ ತಿಂದು ದೇವರ ದರ್ಶನ ಮಾಡಬಹುದೇ?

ಗಣೇಶೋತ್ಸವದ ವಿರುದ್ಧ ಕೋರ್ಟ್‌ಗೆ ಅರ್ಜಿ

ಹಿಂದೂ ಪರ ಸಂಘಟನೆಗಳು, ಕೆಲವು ಗಣೇಶೋತ್ಸವ ಸಮಿತಿ ಇಲ್ಲಿ ಗಣಪತಿ ಮೂರ್ತಿ ಕೂರಿಸಿ, ಗಣೇಶೋತ್ಸವ ನಡೆಸಲು ಸಿದ್ಧತೆ ಮಾಡಿದ್ದರು. ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿಯನ್ನೂ ನೀಡಿತ್ತು. ಇದನ್ನು ವಿರೋಧಿಸಿ ಹುಬ್ಬಳ್ಳಿಯ ಅಂಜುಮನ್-ಇ-ಇಸ್ಲಾಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಮಧ್ಯರಾತ್ರಿ ಆದೇಶ ನೀಡಿದ ಹೈಕೋರ್ಟ್‌

ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಚ್‌ಡಿಎಂಸಿಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಅಂಗೀಕರಿಸಲು ನಿರಾಕರಿಸಿ ಹುಬ್ಬಳ್ಳಿಯ ಅಂಜುಮನ್-ಇ-ಇಸ್ಲಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರು ರಾತ್ರಿ 11.30ಕ್ಕೆ ಮಧ್ಯಂತರ ಆದೇಶ ನೀಡಿದರು.

ಈ ಪ್ರಕರಣದಲ್ಲಿ ನ್ಯಾಯಪೀಠ ಹೇಳಿದ್ದೇನು?

ಗೌರಿ-ಗಣೇಶ ಹಬ್ಬದ ನಿಮಿತ್ತ ಆಗಸ್ಟ್ 29 ರಿಂದ ಆಗಸ್ಟ್ 31 ರವರೆಗೆ ಹೈಕೋರ್ಟ್‌ಗೆ ರಜೆ ಇದ್ದರೂ, ಅರ್ಜಿಯ ವಿಚಾರಣೆಗೆ ನ್ಯಾಯಾಲಯವು ನಿನ್ನೆ ಬೆಳಿಗ್ಗೆ 11 ಗಂಟೆಗೆ ವಿಶೇಷ ವಿಚಾರಣೆ ನಡೆಸಿತು. ಹುಬ್ಬಳ್ಳಿಯ ಈದ್ಗಾ ಮೈದಾನದ ವಿಚಾರಕ್ಕೂ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಸಮಸ್ಯೆಗೂ ವ್ಯತ್ಯಾಸವಿದೆ ಎಂದು ನ್ಯಾಯಾಲಯದ ಪ್ರಧಾನ ಪೀಠ ಅಭಿಪ್ರಾಯಪಟ್ಟಿದೆ.

ನಿನ್ನೆ ಬೆಳಗ್ಗೆಯಿಂದಲೇ ವಿಚಾರಣೆ

ಬೆಳಗ್ಗೆ 11 ಗಂಟೆಗೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಇದೇ ವಿಷಯವನ್ನು ಮಂಗಳವಾರ ಸುಪ್ರೀಂ ಕೋರ್ಟ್ ಪರಿಗಣಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹಾಗೂ ಎಚ್‌ಡಿಎಂಸಿ ತಿಳಿಸಿದ್ದರಿಂದ ನ್ಯಾಯಮೂರ್ತಿ ಕಿಣಗಿ ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 3.30 ಕ್ಕೆ ಮುಂದೂಡಿದರು. ನಂತರ ಚಾಮರಾಜಪೇಟೆಯ ಈದ್ಗಾ ಮೈದಾನದ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಸಂಜೆ 6.15ರ ಸುಮಾರಿಗೆ ತನ್ನ ಆದೇಶವನ್ನು ನೀಡಿತು. ಈ ಆದೇಶವು ಮಧ್ಯಾಹ್ನ 5 ಗಂಟೆ ಸುಮಾರಿಗೆ ನೀಡಲಾದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮರುಪರಿಶೀಲಿಸುವಂತೆ ಅರ್ಜಿದಾರರು ಮನವಿ ಮಾಡಿದರು.

ಹೈಕೋರ್ಟ್ತೀರ್ಪಿನಲ್ಲಿ ಹೇಳಿದ್ದೇನು?

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಏರ್ಪಡಿಸಲಾದ ಗಣೇಶೋತ್ಸವಕ್ಕೆ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್​ ಸುಪ್ರೀಂ ಕೋರ್ಟ್‌ನಲ್ಲಿ ವಿವಾದದಲ್ಲಿರುವ ಚಾಮರಾಜಪೇಟೆ ಈದ್ಗಾ ಮೈದಾನದಂತೆ, ಹುಬ್ಬಳ್ಳಿಯಲ್ಲಿ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಇದನ್ನು ಪೂಜಾಸ್ಥಳ ಎಂದು ಘೋಷಿಸಿಲ್ಲ. ಈದ್ಗಾ ಮೈದಾನವು ನಿಗಮದ ಆಸ್ತಿಯಾಗಿದ್ದು. ಜಾಗದ ಮೇಲೆ ಸರ್ಕಾರಕ್ಕೆ ಎಲ್ಲಾ ಹಕ್ಕುಗಳು ಇದೆ. ನಿಯಮಿತ ಚಟುವಟಿಕೆಗಳನ್ನು ಕೈಗೊಳ್ಳಲು ಈ ಆಸ್ತಿಯನ್ನು ಬಳಸಲಾಗುತ್ತಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯ ಕೈಗೊಳ್ಳಬಹುದು. ಪ್ರತಿವಾದಿಯು 1991ರ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದರೆ, ಅರ್ಜಿದಾರರಿಗೆ ಪರಿಹಾರವಿರುತ್ತದೆ ಎಂಬುವುದನ್ನು ಸ್ಪಷ್ಟಪಡಿಸಿದೆ.

ಚಾಮರಾಜಪೇಟೆ ಗಣೇಶೋತ್ಸವ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎರಡು ದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿದೆ. ಸುಪ್ರೀಂ ಈ ಆದೇಶ ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವ ಆಚರಣೆಗೆ ಬ್ರೇಕ್ ಹಾಕಿದೆ. ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್​ ಅನುಮತಿ ನೀಡಿದ ಹಿನ್ನೆಲೆ ಮುಸ್ಲಿಂ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ: POCSO Act: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಬುಧವಾರ ಗಣೇಶ ಹಬ್ಬ ಆಚರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ ಅಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್‌ ತ್ರಿದಸ್ಯ ಪೀಠ ಹೇಳಿದೆ. ಇದರಿಂದ ಆದೇಶ ಪ್ರಶ್ನಿಸಿದ್ದ ವಕ್ಫ್ ಮಂಡಳಿಗೆ ಗೆಲುವು ಸಿಕ್ಕಿದ್ರೆ, ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ನ್ಯಾ. ಅಭಯ್ ಓಕಾ ಮತ್ತು ನ್ಯಾ. ಎಂಎಂ ಸುಂದರೇಶ್ ಅವರನ್ನು ಒಳಗೊಂಡ ತ್ರಿದಸ್ಯ ಪೀಠ, ಪೂಜೆಯನ್ನು ಬೇರೆ ಎಲ್ಲಿಯಾದರೂ ಮಾಡಿ. ಆದರೆ ಆ ಭಾಗದಲ್ಲಿ ಯಥಾಸ್ಥಿತಿ ಕಾಪಾಡಿ ಎಂದು ಹೇಳಿದೆ.
Published by:Annappa Achari
First published: