ಕರ್ನಾಟಕ ಲೋಕಾಯುಕ್ತ (Karnataka Lokayukta) ಭರ್ಜರಿ ಬೇಟೆಯಾಡಿದೆ. ಕಂತೆ ಕಂತೆ ಹಣದೊಂದಿಗೆ ಭ್ರಷ್ಟ ಅಧಿಕಾರಿಯೊಬ್ಬ (corrupt officer) ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಜಲಮಂಡಳಿಯಲ್ಲಿ (BWSSB) ಚೀಫ್ ಅಕೌಂಟೆಂಟ್ (Chief Accountant) ಆಗಿದ್ದ ಮಾಡಾಳು ಪ್ರಶಾಂತ್ (Madalu Prashant) ಡೀಲ್ (Deal) ಒಂದಕ್ಕೆ ಸಂಬಂಧಿಸಿದಂತೆ 80 ಲಕ್ಷ ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಆದರೆ 40 ಲಕ್ಷ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಂದಹಾಗೆ ಈತ ಬೇರೆ ಯಾರೂ ಅಲ್ಲ, ಬಿಜೆಪಿ ಹಿರಿಯ ನಾಯಕನೂ (BJP Senior Leader) ಆಗಿರುವ ಚನ್ನಗಿರಿ ಶಾಸಕ (Channagiri MLA) ಮಾಡಾಳು ವಿರೂಪಾಕ್ಷಪ್ಪ (Madalu Virupakshappa) ಅವರ ಪುತ್ರ! ಇದೀಗ ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಬರೋಬ್ಬರಿ 6 ಕೋಟಿಯಷ್ಟು (6 Crore) ಹಣ ಪತ್ತೆಯಾಗಿದ್ಯಂತೆ! ಹಾಗಾದರೆ ಈ ಮಾಡಾಳು ಪ್ರಶಾಂತ್ ಹಿನ್ನೆಲೆಯೇನು? ಆತನ ಕಚೇರಿಯಲ್ಲಿ ಕಂತೆ ಕಂತೆ ಹಣ ಬಂದಿದ್ದೆಲ್ಲಿಂದ? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
ಯಾರು ಈ ಮಾಡಾಳು ಪ್ರಶಾಂತ್?
ಮಾಡಾಳು ಪ್ರಶಾಂತ್ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ. ಈತ ಕೆಎಎಸ್ ಅಧಿಕಾರಿ ಎನ್ನಲಾಗುತ್ತಿದೆ. ಆದರೆ ಬೆಂಗಳೂರು ಜಲಮಂಡಳಿಯ ಚೀಫ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತಾನೇ ಖಾಸಗಿ ಕಚೇರಿ ಇಟ್ಟುಕೊಂಡು, ಅಲ್ಲಿ ಡೀಲ್ ಮಾಡುತ್ತಿದ್ದ ಎನ್ನಲಾಗಿದೆ.
ತಂದೆ ನಿಗಮಕ್ಕಾಗಿ ಡೀಲ್ ಮಾಡಿದ್ದನಾ ಮಾಡಾಳು ಪ್ರಶಾಂತ್?
ಮಾಡಾಳು ಪ್ರಶಾಂತ್ ತಂದೆ ಅಂದರೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಂದರೆ ಕರ್ನಾಟಕ ಸೋಪ್ ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಎಸ್‌ಡಿಎಲ್‌ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಡೀಲ್ ನಡೆಸಿದ್ದನಾ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ಓದಿ: Government Employees Salary: ಶೇಕಡಾ 17ರಷ್ಟು ಸಂಬಳ ಏರಿಕೆಯಲ್ಲಿ ಯಾರಿಗೆಷ್ಟು ಸಿಗಲಿದೆ? ಇದರ ಲೆಕ್ಕಾಚಾರ ಹೇಗೆ ಗೊತ್ತಾ?
ಲಂಚ ಪಡೆದಿದ್ದು ಏಕೆ?
ಬಿಲ್ಡರ್‍ಗಳಿಗೆ ಹಾಗೂ ತಮ್ಮ ಆಪ್ತರಿಗೆ ತಮಗೆ ಬೇಕಾದಷ್ಟು ಹಣ ಕೊಡುವವರಿಗೆ ಟೆಂಡರ್ ಕೊಡಿಸಲು ಪ್ರಶಾಂತ್ ಡೀಲ್ ನಡೆಸುತ್ತಿದ್ದ ಎನ್ನಲಾಗಿದೆ. ಬೇಡವಾದವರಿಗೆ ಟೆಂಡರ್ ಸಿಗದಂತೆ ನೋಡಿಕೊಳ್ಳಲು ಬೆದರಿಕೆ ಹಾಗೂ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದರು ಎಂಬ ಆರೋಪವೂ ಇದೆ.
ಟೆಂಡರ್ ಕೊಡಿಸುವುದರಲ್ಲಿ ಗೋಲ್ಮಾಲ್
ತಮ್ಮ ಅಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್ ಕಚೇರಿಯಲ್ಲಿ ಪ್ರಶಾಂತ್ ದರ್ಬಾರ್ ಮಾಡುತ್ತಿದ್ದನಂತೆ. ಯಾರಾದರೂ ಕಾನೂನಾತ್ಮಕವಾಗಿ ಟೆಂಡರ್ ಸಲ್ಲಿಸಿದರೆ ಅವರಿಗೆ ಟೆಂಡರ್ ಸಿಗದಂತೆ ನೋಡಿಕೊಳ್ಳುವುದು ಮತ್ತು ತಮಗೆ ಬೇಕಾದವರಿಗೆ ಹಾಗೂ ಹಣ ಕೊಟ್ಟವರಿಗೆ ಟೆಂಡರ್ ದೊರೆಯುವಂತೆ ಮಾಡುವುದನ್ನು ರಾಜಾರೋಷವಾಗಿ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
80 ಲಕ್ಷಕ್ಕೆ ಬೇಡಿಕೆ, 40 ಲಕ್ಷ ಹಣದೊಂದಿಗೆ ಪ್ರಶಾಂತ್ ಲಾಕ್
ನಿನ್ನೆ ಮಾಡಾಳು ಪ್ರಶಾಂತ್ ಬರೋಬ್ಬರಿ 40 ಲಕ್ಷ ಹಣದೊಂದಿಗೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈತ ಡೀಲ್ ಒಂದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಈ ವೇಳೆ 40 ಲಕ್ಷ ರೂಪಾಯಿ ಹಣ ಸಂದಾಯವಾಗಿದ್ದು, ಈ ವೇಳೆ ನಿನ್ನೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿ, ಮಾಡಾಳು ಮಗನನ್ನು ರೆಡ್‌ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.
ಪ್ರಶಾಂತ್ ಕಚೇರಿಯಲ್ಲಿ 8 ಕೋಟಿ ನಗದು ಪತ್ತೆ
ಸತತ ಒಂಬತ್ತುವರೆ ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರು ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಸುದೀರ್ಘ ಪರಿಶೀಲನೆ ನಡೆಸಿದ್ದಾರೆ. ಗುರುವಾರ (ಮಾರ್ಚ್ 2, 2023) ಸಂಜೆ 6.30ಕ್ಕೆ ಲೋಕಾಯುಕ್ತ ಪರಿಶೀಲನೆ ಪ್ರಾರಂಭಿಸಿದ ಲೋಕಾಯುಕ್ತ ಅಧಿಕಾರಿಗಳು, ಇಂದು ಬೆಳಗಿನ ಜಾವ 4 ಗಂಟೆಗೆ ಪರಿಶೀಲನೆ ಕೊನೆಗೊಳಿಸಿದ್ದಾರೆ. ಅತ್ತ ಡಾಲರ್ಸ್ ಕಾಲನಿಯಲ್ಲಿರುವ ಪ್ರಶಾಂತ್ ಕಚೇರಿಯಲ್ಲೂ ಲೋಕಾಯುಕ್ತ ಪೊಲೀಸರು ಜಾಲಾಡಿದ್ರು. ಈ ವೇಳೆ ಬರೋಬ್ಬರಿ 6 ಕೋಟಿ ರೂಪಾಯಿಗಳಷ್ಟು ಹಣ ಸಿಕ್ಕಿದೆ ಅಂತ ಹೇಳಲಾಗುತ್ತಿದೆ. ಇದರ ಜೊತೆಗೆ ಕಚೇರಿಯಲ್ಲಿ 2 ಕೋಟಿ ನಗದು ಸೇರಿದಂತೆ ಒಟ್ಟು 8 ಕೋಟಿ ಕ್ಯಾಶ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಇನ್ನು ಮನೆಯಲ್ಲಿ ಚಿನ್ನಾಭರಣ ಮತ್ತು ಆಸ್ತಿಪತ್ರ ಎಷ್ಟೆಷ್ಟು ಸಿಕ್ಕಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ