Cash Transaction: ನಾಳೆಯಿಂದಲೇ ಬ್ಯಾಂಕಿನ ಈ ರೂಲ್ಸ್ ಬದಲಾಗ್ತಿದೆ, ಕ್ಯಾಶ್ ಡ್ರಾ ಮಾಡೋರು ತಪ್ಪದೇ ಗಮನಿಸಿ

ಮೇ 26 ರಿಂದ ನಗದು ಹಿಂಪಡೆಯಲು ಅಥವಾ ಠೇವಣಿ ಮಾಡಲು ನಾಗರಿಕರು ತಮ್ಮ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸುವುದನ್ನು ಕೇಂದ್ರವು ಈಗ ಕಡ್ಡಾಯಗೊಳಿಸಿದೆ. ಒಂದು ಆರ್ಥಿಕ ವರ್ಷದಲ್ಲಿ ಸಹಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಂದ 20 ಲಕ್ಷ ರೂ. ಗಿಂತಲೂ ಅಧಿಕ ಮೊತ್ತವನ್ನು ಹಿಂಪಡೆಯುವಾಗ ಈ ನಿಯಮ ಕಡ್ಡಾಯವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದಲ್ಲಿ (India) ನಗದು ಹಿಂಪಡೆಯುವಿಕೆ (Cash Withdrawal) ಮತ್ತು ಠೇವಣಿ ವ್ಯವಸ್ಥೆಯು ಇಂದಿನಿಂದ ಬದಲಾವಣೆಗೆ ಒಳಪಟ್ಟಿದೆ, ಅಂದರೆ ಮೇ 26 ರಿಂದ ನಗದು ಹಿಂಪಡೆಯಲು ಅಥವಾ ಠೇವಣಿ ಮಾಡಲು ನಾಗರಿಕರು ತಮ್ಮ ಪ್ಯಾನ್ (PAN Card) (ಶಾಶ್ವತ ಖಾತೆ ಸಂಖ್ಯೆ) ಅಥವಾ ಆಧಾರ್ ಸಂಖ್ಯೆಯನ್ನು (Aadhar Number) ನಮೂದಿಸುವುದನ್ನು ಕೇಂದ್ರವು ಈಗ ಕಡ್ಡಾಯಗೊಳಿಸಿದೆ (Mandatory). ಒಂದು ಆರ್ಥಿಕ ವರ್ಷದಲ್ಲಿ ಸಹಕಾರಿ ಬ್ಯಾಂಕ್‌ಗಳು (Cooperative Bank) ಮತ್ತು ಅಂಚೆ ಕಚೇರಿಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಂದ 20 ಲಕ್ಷ ರೂ. ಗಿಂತಲೂ ಅಧಿಕ ಮೊತ್ತವನ್ನು ಹಿಂಪಡೆಯುವಾಗ ಈ ನಿಯಮ ಕಡ್ಡಾಯವಾಗಿದೆ. ಈ ನಿಯಮಗಳು ಚಾಲ್ತಿ ಖಾತೆ ತೆರೆಯುವಾಗಲೂ ಅನ್ವಯವಾಗುತ್ತವೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಈ ತಿಂಗಳ ಆರಂಭದ ಅಧಿಸೂಚನೆಯಲ್ಲಿ ತಿಳಿಸಿದೆ.

ಶಾಶ್ವತ ಖಾತೆ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಕಡ್ಡಾಯ
“ಪ್ರತಿಯೊಬ್ಬ ವ್ಯಕ್ತಿಯು, ಕೆಳಗಿನ ಕೋಷ್ಟಕದ ಕಾಲಮ್ (2) ರಲ್ಲಿ ನಿರ್ದಿಷ್ಟಪಡಿಸಿದ ವಹಿವಾಟಿಗೆ ಪ್ರವೇಶಿಸುವ ಸಮಯದಲ್ಲಿ, ಅಂತಹ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಮತ್ತು ನಿರ್ದಿಷ್ಟಪಡಿಸಿದ ಪ್ರತಿಯೊಬ್ಬ ವ್ಯಕ್ತಿಯು ಸಂದರ್ಭಾನುಸಾರವಾಗಿ ತನ್ನ ಶಾಶ್ವತ ಖಾತೆ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬೇಕು. ಅಂತಹ ದಾಖಲೆಯನ್ನು ಸ್ವೀಕರಿಸುವ ಸದರಿ ಕೋಷ್ಟಕದ ಕಾಲಂ (3) ರಲ್ಲಿ, ಹೇಳಿದ ಸಂಖ್ಯೆಯನ್ನು ಸರಿಯಾಗಿ ಉಲ್ಲೇಖಿಸಲಾಗಿದೆ ಮತ್ತು ದೃಢೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು, ”ಎಂದು CBDT ಮೇ 10 ರ ತನ್ನ ನೋಟೀಸ್‌ನಲ್ಲಿ ತಿಳಿಸಿದೆ.

ಇಲ್ಲಿ ಉಲ್ಲೇಖಿಸಲಾಗಿರುವ 2 ಮತ್ತು 3 ಕಾಲಮ್‌ಗಳು ಹಾಗೂ ಅದರ ನಿಯಮಗಳು ನಿರ್ದಿಷ್ಟವಾಗಿ ಎಲ್ಲಿಗೆ ಅನ್ವಯಿಸುತ್ತವೆ ಮತ್ತು ಈ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಸ್ವೀಕರಿಸುವ ವ್ಯಕ್ತಿಗಳು ಅವುಗಳನ್ನು ದೃಢೀಕರಿಸಲಾಗಿದೆ ಎಂದು ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸುತ್ತದೆ.

ಇದನ್ನೂ ಓದಿ:  Modi@8: ಪ್ರಧಾನಿ ಮೋದಿ ಸರ್ಕಾರಕ್ಕೆ 8 ವರ್ಷ: ಷೇರುಪೇಟೆಯ ಗೂಳಿ ನೆಗೆತದ ವೇಗ ಹೇಗಿದೆ?

ಈ ಹಿಂದೆ ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ಮೊತ್ತ ಜಮಾ ಮಾಡುವ ಸಂದರ್ಭದಲ್ಲಿ ಮಾತ್ರ ಪ್ಯಾನ್ ಕಾರ್ಡ್ ಅಗತ್ಯವಿತ್ತು, ಆದರೆ ನಿಯಮ 114 ಬಿ ಪ್ರಕಾರ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗೆ ವಾರ್ಷಿಕ ಮಿತಿ ಇರಲಿಲ್ಲ. ಇದರ ಹೊರತಾಗಿ, ಬ್ಯಾಂಕಿನಲ್ಲಿ ಮಾಡಿದ ಠೇವಣಿ ಮೇಲೆ ಮಾತ್ರ ಮಿತಿ ಅನ್ವಯಿಸುತ್ತಿತ್ತು.

“ಖಾಯಂ ಖಾತೆ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಜನಸಂಖ್ಯಾ ಮಾಹಿತಿ ಅಥವಾ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಆದಾಯ ತೆರಿಗೆ (ಸಿಸ್ಟಮ್ಸ್) ಪ್ರಧಾನ ಮಹಾನಿರ್ದೇಶಕರಿಗೆ ಅಥವಾ ಆದಾಯ ತೆರಿಗೆ (ಸಿಸ್ಟಮ್ಸ್) ಮಹಾನಿರ್ದೇಶಕರಿಗೆ ಅಥವಾ 139A ನಲ್ಲಿ ಉಲ್ಲೇಖಿಸಲಾದ ದೃಢೀಕರಣದ ಉದ್ದೇಶಗಳಿಗಾಗಿ ಅವರಿಂದ ಅನುಮೋದನೆ ಪಡೆದ ವ್ಯಕ್ತಿಗೆ ಸಲ್ಲಿಸಬೇಕಾಗಿರುತ್ತದೆ" ಎಂದು ಕೇಂದ್ರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

“ಸೆಕ್ಷನ್ 139A ಪ್ಯಾನ್‌ಗೆ ಅರ್ಜಿ ಸಲ್ಲಿಸುವ ಮತ್ತು ಉಲ್ಲೇಖಿಸಬೇಕಾದ ವ್ಯಕ್ತಿಗಳು ಅಥವಾ ವಹಿವಾಟುಗಳನ್ನು ನಿರ್ದಿಷ್ಟಪಡಿಸುತ್ತದೆ. ಆದಾಗ್ಯೂ, ಇದು ಎಲ್ಲಾ ರೀತಿಯ ವ್ಯಕ್ತಿಗಳು ಮತ್ತು ವಹಿವಾಟುಗಳನ್ನು ಒಳಗೊಳ್ಳಲು ಸಾಧ್ಯವಾಗದ ಕಾರಣ, ಇದನ್ನು ಕೇಂದ್ರ ಸರ್ಕಾರಕ್ಕೆ ನಿಯೋಜಿಸಿದೆ. ಆದ್ದರಿಂದ ಸಿಬಿಡಿಟಿ ಅಂತಹ ವಹಿವಾಟುಗಳನ್ನು ಮತ್ತು ವ್ಯಕ್ತಿಗಳನ್ನು ಸೂಚಿಸಬಹುದು. ಸಿಬಿಡಿಟಿ, ಈ ಸುತ್ತೋಲೆಯ ಮೂಲಕ ಪ್ಯಾನ್‌ಗೆ ಅರ್ಜಿ ಸಲ್ಲಿಸಲು ನಿರ್ದಿಷ್ಟ ವಹಿವಾಟುಗಳಾಗಿ ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆಯನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ಠೇವಣಿ ಮತ್ತು ಹಿಂಪಡೆಯುವಿಕೆಯ ವಹಿವಾಟುಗಳಿಗಾಗಿ ಸೂಚಿಸಿದೆ" ಎಂದು Taxbuddy.com ಸಂಸ್ಥಾಪಕ ಸುಜಿತ್ ಬಂಗಾರ್ ಹೇಳಿದರು.

ವಹಿವಾಟು ಕೈಗೊಳ್ಳಲು ಉದ್ದೇಶಿಸಿರುವ ಒಂದು ವಾರ ಮೊದಲು ಪ್ಯಾನ್‌ಗೆ ಅರ್ಜಿ ಸಲ್ಲಿಸಬೇಕು
"ಅಂತಹ ವಹಿವಾಟುಗಳಿಗೆ ಪ್ರವೇಶಿಸುವ ವ್ಯಕ್ತಿಗಳು ಈ ವಹಿವಾಟುಗಳನ್ನು ಕೈಗೊಳ್ಳಲು ಉದ್ದೇಶಿಸಿರುವ ಕನಿಷ್ಠ 7 ದಿನಗಳ ಮೊದಲು ಪ್ಯಾನ್‌ಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪ್ಯಾನ್ ಹೊಂದಿರುವ ವ್ಯಕ್ತಿಯು ರೂ.20 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿ/ಹಿಂಪಡೆಯುವಿಕೆ ಮತ್ತು ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆಯನ್ನು ತೆರೆಯುವಾಗ ಅವನ/ಆಕೆಯ ಪ್ಯಾನ್ ಅನ್ನು ಉಲ್ಲೇಖಿಸುವ ಅಗತ್ಯವಿದೆ" ಎಂದು ಬಂಗಾರ್ ಹೇಳಿದ್ದಾರೆ.

ಈ ಹೊಸ ನಗದು ಹಿಂಪಡೆಯುವಿಕೆ ಮತ್ತು ಠೇವಣಿ ನಿಯಮಗಳು ಮುಖ್ಯವಾಗಿ ಹಣಕಾಸಿನ ವಿಷಯಗಳಲ್ಲಿ ಆಗಬಹುದಾದ ವಂಚನೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ, ಏಕೆಂದರೆ ಆದಾಯ ತೆರಿಗೆ ಇಲಾಖೆಯು ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ ಹಣದ ಚಲನೆಯನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. “ಪ್ಯಾನ್-ಆಧಾರ್" ಪರಸ್ಪರ ಸಂಬಂಧವು ಪ್ಯಾನ್ ಹೊಂದಿಲ್ಲದವರಿಗೆ ವಿವರಗಳನ್ನು ದಾಖಲಿಸಲು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:  RBI: ನೆನಪಿಡಿ, ಶೀಘ್ರದಲ್ಲಿಯೇ ರಿಸರ್ವ್ ಬ್ಯಾಂಕ್ ನೀಡಲಿದೆ ಮತ್ತೊಂದು ಆಘಾತ

ಅಲ್ಲದೆ ಈ ನಿಯಮ ತೆರಿಗೆ ಇಲಾಖೆಯು ಇರುವ ಕೆಲವು ಲೋಪದೋಷಗಳನ್ನು ಸುಧಾರಿಸಲು ಮಾಡಲು ಸಹಾಯ ಮಾಡಬಹುದು, ಉದಾಹರಣೆಗೆ ಹೆಚ್ಚಿನ ಮೌಲ್ಯದ ಠೇವಣಿಗಳು ಮತ್ತು ಅವರು ಪ್ಯಾನ್ ಹೊಂದಿಲ್ಲವೆಂದು ಹೇಳಿ ಪಡೆಯುವ ಹಿಂಪಡೆಯುವಿಕೆಗಳನ್ನು ಇದರಿಂದ ಈಗ ನಿರ್ವಹಿಸಬಹುದಾಗಿದೆ. ಇದನ್ನು ಕೃಷಿಕರು ಅಥವಾ ಆದಾಯ ತೆರಿಗೆ ಪಾವತಿದಾರರಲ್ಲದವರಿಗೆ ಅನ್ವಯಿಸಬಹುದು" ಎಂದು ನೀರಜ್ ಭಗತ್ & ಕಂ ಎಂಡಿ, ಸಿಎ ರುಚಿಕಾ ಭಗತ್ ಹೇಳಿದ್ದಾರೆ.
Published by:Ashwini Prabhu
First published: