• ಹೋಂ
  • »
  • ನ್ಯೂಸ್
  • »
  • Explained
  • »
  • Gyaneshwer Chaubey: ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿದು ಜಗತ್ತನ್ನೇ ಬೆರಗುಗೊಳಿಸಿದ ವಿಜ್ಞಾನಿ!

Gyaneshwer Chaubey: ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿದು ಜಗತ್ತನ್ನೇ ಬೆರಗುಗೊಳಿಸಿದ ವಿಜ್ಞಾನಿ!

ಜ್ಞಾನೇಶ್ವರ್ ಚೌಬೆ

ಜ್ಞಾನೇಶ್ವರ್ ಚೌಬೆ

ನಾನು ಯಾರು? ಈ ಪ್ರಶ್ನೆಯು ಜ್ಞಾನೇಶ್ವರ್ ಚೌಬೆಯವರ ಮನಸ್ಸಿನಲ್ಲಿ ನಿರಂತರವಾಗಿ ಪುಟಿದೇಳುತ್ತಲೇ ಇತ್ತು. 2000ನೇ ಇಸ್ವಿ ಆರಂಭದಲ್ಲಿ ಅವರು ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಯುವ ವಿಜ್ಞಾನಿ ತನ್ನ ಹಿರಿಯರಿಂದ ಅನುಮತಿ ಪಡೆದುಕೊಂಡು, ಡಿಎನ್‌ಎ ಪರೀಕ್ಷೆಗೆ ಒಳಗಾದರು. ಕೊನೆಗೂ ಇದಕ್ಕೆ ಉತ್ತರ ಕಂಡುಕೊಂಡಿದ್ದಾರೆ ನೋಡಿ!

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Varanasi, India
  • Share this:

ಎಷ್ಟೇ ಪ್ರಾಕ್ಟಿಕಲ್‌ ಆಗಿದ್ದರೂ ಕೆಲವೊಮ್ಮೆ ಆಧ್ಯಾತ್ಮಿಕ, ಕೆಲವೊಮ್ಮೆ ತಾತ್ವಿಕ ಹೀಗೆ ಮನಸ್ಸಿನಲ್ಲಿ ಆಗಾಗ ಕೆಲವೊಂದಿಷ್ಟು ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ನಾನು ಯಾರು? ಈ ಪ್ರಶ್ನೆಯು ಜ್ಞಾನೇಶ್ವರ್ ಚೌಬೆಯವರ (Gyaneshwer Chaubey) ಮನಸ್ಸಿನಲ್ಲಿ ನಿರಂತರವಾಗಿ ಪುಟಿದೇಳುತ್ತಲೇ ಇತ್ತು. 2000 ರ ಆರಂಭದಲ್ಲಿ ಅವರು ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಯುವ ವಿಜ್ಞಾನಿ (Young Scientist) ತನ್ನ ಹಿರಿಯರಿಂದ ಅನುಮತಿಯನ್ನು ಪಡೆದುಕೊಂಡು, ಡಿಎನ್‌ ಎ ಪರೀಕ್ಷೆಗೆ ಒಳಗಾದರು. ಆದರೆ ಅದರಿಂದ ಹೊಸಬಂದ ಫಲಿತಾಂಶ ಮಾತ್ರ ನಿರೀಕ್ಷೆಗೂ ಮೀರಿತ್ತು! ಅವರ ತಾಯಿಯ ವಂಶಸ್ಥರು ದಕ್ಷಿಣ ಭಾರತದ (South India) ಬುಡಕಟ್ಟು ಕೋಯಾ ಜನಾಂಗಕ್ಕೆ ಸೇರಿದ್ದರು.


ಅದೂ 18,000 ವರ್ಷಗಳ ಹಿಂದಕ್ಕೆ ಹೋಗಿದೆ ಮತ್ತು ಅವರ ತಂದೆಯ ಮನೆತನವು ಸ್ಥಳೀಯ ಜನಸಂಖ್ಯೆಗೆ ಸೇರಿದ್ದು, ಇದು ಕನಿಷ್ಠ 30,000 ವರ್ಷಗಳ ಕಾಲ ಭಾರತದಲ್ಲಿ ಬೇರುಗಳನ್ನು ಹೊಂದಿದೆ ಎಂಬುದಾಗಿ ಬಂದಿತ್ತು.


ನಾನು ಯಾರೆಂಬುದರ ಕುರಿತಾದ ಸಂಶೋಧನೆ
"ನಾನು ಯಾರೆಂಬುದರ ಕುರಿತಾದ ಸಂಶೋಧನೆಯು ನನಗೆ ಆಶ್ಚರ್ಯ ಉಂಟು ಮಾಡಿದೆ. ಇದು ನನ್ನ ಆರಂಭಿಕ ಪಠ್ಯಪುಸ್ತಕಗಳನ್ನು ಮರುಪರಿಶೀಲಿಸುವಂತೆ ಮತ್ತು ಮರು ಮೌಲ್ಯಮಾಪನ ಮಾಡುವಂತೆ ಮಾಡಿತು. ಆ ಕ್ಷಣದಿಂದ, ನಾನು ಆಣ್ವಿಕ ಮಾನವಶಾಸ್ತ್ರ (Molecular Anthropology) ಕ್ಷೇತ್ರದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದೆ” ಎಂದು ನಗುತ್ತಾ ಹೇಳುತ್ತಾರೆ ಖ್ಯಾತ ವಿಜ್ಞಾನಿ ಜ್ಞಾನೇಶ್ವರ್ ಚೌಬೆ.


ಅಷ್ಟಕ್ಕೂ ಇವರು ಜೈವಿಕ ಮಾನವಶಾಸ್ತ್ರ, ವೈದ್ಯಕೀಯ ಜೆನೆಟಿಕ್ಸ್ ಮತ್ತು ಫೋರೆನ್ಸಿಕ್ಸ್ ಕ್ಷೇತ್ರಗಳಲ್ಲಿನ ಅಸಾಧಾರಣ ಕೆಲಸಕ್ಕಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ.


ಮೊದಲಿನಿಂದಲೂ ಕಂಡಿದ್ದು ವಿಜ್ಞಾನಿಯಾಗುವ ಕನಸು!
"ಸಂಶೋಧನೆಯು ಎಂದಿಗೂ ಮುಗಿಯದ ಪ್ರಕ್ರಿಯೆ” ಎನ್ನುತ್ತಾರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಜ್ಞಾನೇಶ್ವರ್‌ ಚೌಬೆ. ವಾರಣಾಸಿಯ ಚೌಬೆಪುರದ ಒಣಹುಲ್ಲಿನ ಮಣ್ಣಿನ ಮನೆಯಲ್ಲಿ ಬೆಳೆದ ಅವರು ವಿಜ್ಞಾನ ಮತ್ತು ಮುಂದೊಂದು ದಿನ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದರು.


ಆದರೆ ಕಾಲೇಜಿನಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿದ್ದ ಅವರ ತಂದೆ ಸಚ್ಚಿದಾನಂದ್ ಚೌಬೆ ಅವರು ಮಗ ಡಾಕ್ಟರ್‌ ಆಗಲಿ ಎಂದು ಬಯಸಿದ್ದರು. ಆದ್ರೆ ಚೌಬೆ, ಎರಡು ಬಾರಿ ಪ್ರಯತ್ನಿಸಿದರೂ MBBS ಪ್ರವೇಶ ಪರೀಕ್ಷೆಯಲ್ಲಿ ಸಫಲತರಾಗಲು ಸಾಧ್ಯವಾಗಿಲ್ಲ. 1997 ರಲ್ಲಿ ತನ್ನ ಬಿಎಸ್ಸಿ (ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ) ಪೂರ್ಣಗೊಳಿಸಿದ ಚೌಬೆ ಬಯೋಟೆಕ್‌ನಲ್ಲಿ MSc ಗಾಗಿ ಜೌನ್‌ಪುರದ VBS ಪೂರ್ವಾಂಚಲ್ ವಿಶ್ವವಿದ್ಯಾಲಯದಲ್ಲಿ ಸೇರಿಕೊಂಡರು (2001- 2003).


ಇದನ್ನೂ ಓದಿ: Oldest Technology: ಪುರಾತನ ತಂತ್ರಜ್ಞಾನಾಧಾರಿತ ಅದ್ಭುತಗಳಿವು, ವಿಜ್ಞಾನಕ್ಕೆ ಸವಾಲೆಸೆದಿರುವ ವಿಸ್ಮಯಗಳಿವು!


ತಮ್ಮ ಸ್ನಾತಕೋತ್ತರ ಮೊದಲ ವರ್ಷದಲ್ಲಿದ್ದಾಗ, ಸದಾ ಜಿಜ್ಞಾಸೆಯ ಚೌಬೆ ಅವರು ಮುಂದೆ ಬೇಸಿಗೆ ಸಂಶೋಧನಾ ಇಂಟರ್ನ್‌ಶಿಪ್ ಆಯ್ಕೆಯನ್ನು ಹೊಂದಿದ್ದರು. ಅವರು ಸಮಯ ವ್ಯರ್ಥ ಮಾಡದೇ BHU ನಲ್ಲಿ ಸೈಟೊಜೆನೆಟಿಕ್ಸ್ ಲ್ಯಾಬ್‌ಗೆ ಸೇರಿದರು.


ನೊಣಗಳ ಬಗ್ಗೆ ಸಂಶೋಧನೆ
ಡ್ರೊಸೊಫಿಲಾ (Fruit flies) ಅನ್ವೇಷಿಸುವ ಆರು ತಿಂಗಳ ಯೋಜನೆಯಲ್ಲಿ ಅಲ್ಲಿ ಕೆಲಸ ಮಾಡಿದರು. ಈ ನೊಣಗಳನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದ ಅವರು, ಅದರ ಬಗ್ಗೆಯೇ ಸಂಶೋಧನೆ ಮುಂದುವರಿಸಲು ನಿರ್ಧರಿಸಿದ್ದಾಗಿ ಹೇಳುತ್ತಾರೆ. ಆದಾಗ್ಯೂ, ಅವರ MSc ಕಾರ್ಯಕ್ರಮದ ಕೊನೆಯ ಸೆಮಿಸ್ಟರ್‌ನಲ್ಲಿ ಕಡ್ಡಾಯ ಸಂಶೋಧನಾ ಕಾರ್ಯವಿತ್ತು. ಅಲ್ಲಿ ಅವರು CSIR-CCMB ನಲ್ಲಿ ಮಾನವ ವೈವಿಧ್ಯ ಯೋಜನೆಯಲ್ಲಿ ಕೆಲಸ ಮಾಡಲು ಆಯ್ಕೆಯಾದರು. ಈ ಕೆಲಸವು ಉತ್ತರ ಭಾರತದ ಬ್ರಾಹ್ಮಣ ಜಾತಿ ಮತ್ತು ಜಾರ್ಖಂಡ್‌ನ ಸಂತಾಲ್ ಬುಡಕಟ್ಟಿನ ರಕ್ತದ ಮಾದರಿಗಳ ಮೇಲೆ ಇತ್ತು, ಅದನ್ನು ಅವರು ಸ್ವತಃ ಸಂಗ್ರಹಿಸಿದರು.


"ಆರಂಭದಲ್ಲಿ, ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಡ್ರೊಸೊಫಿಲಾ ಬಗ್ಗೆ ಮಾತ್ರ ಕನಸು ಕಾಣುತ್ತಿದ್ದೆ" ಎನ್ನುತ್ತಾರೆ ಚೌಬೆ. ಆದರೆ ಕೊನೆ ಕೊನೆಗೆ ಅಂದರೆ ಜನವರಿ 2003 ರ ಹೊತ್ತಿಗೆ ಎಲ್ಲಾ ವಿಶ್ಲೇಷಣೆಗಳನ್ನು ಪೂರ್ಣಗೊಳಿಸಿದ ಮೇಲೆ ವಿಧಿವಿಜ್ಞಾನವು ಅವರಲ್ಲಿ ಆಸಕ್ತಿಯನ್ನುಂಟುಮಾಡಲು ಪ್ರಾರಂಭಿಸಿತು. ಅದರ ನಂತರ, ಅವರ ಜೀವನವು ಸಂಶೋಧನೆ ಮತ್ತು ಪ್ರಯೋಗಾಲಯಗಳ ಸುತ್ತ ಸುತ್ತುತ್ತದೆ. ಆರಂಭದಲ್ಲಿ, ಚೌಬೆ ಮತ್ತು ಅವರ ಹಿರಿಯರಿಗೆ ಡಿಎನ್‌ಎಯನ್ನು ಪ್ರತ್ಯೇಕಿಸಲು 2000 ಮಾದರಿಗಳನ್ನು ನೀಡಲಾಯಿತು, ಇದು ಆರು ತಿಂಗಳ ಕಾರ್ಯವಾಗಿತ್ತು.


ನಂತರ ಅವರು ಉನ್ನತ ಮೈಟೊಕಾಂಡ್ರಿಯದ DNA ತಜ್ಞ ಪ್ರೊಫೆಸರ್ ಟೂಮಾಸ್ ಕಿವಿಸಿಲ್ಡ್ ಅವರಿಗೆ ಪತ್ರ ಬರೆದು ಅವರ ಅಭಿಪ್ರಾಯ ಕೇಳುತ್ತಾರೆ. ಅವರ ಸಹಾಯದಿಂದಲೇ ಚೌಬೆ ಅವರು ಪತ್ರಿಕೆಯನ್ನು ಪೂರ್ಣಗೊಳಿಸ್ತಾರೆ. ಈ ಪತ್ರಿಕೆಯು ಚೌಬೆ ಅವರನ್ನು ಪ್ರೊಫೆಸರ್ ಟೂಮಾಸ್ ಕಿವಿಸಿಲ್ಡ್ ಅವರೊಂದಿಗೆ ನೇರ ಸಂಪರ್ಕಕ್ಕೆ ತರುತ್ತದೆ. ಅದರ ನಂತರ, ಅವರು ಒಟ್ಟಾಗಿ ಭಾರತದ ಪೂರ್ವ ಇತಿಹಾಸದ ಬಗ್ಗೆ ಐದಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸ್ತಾರೆ.


ಎಸ್ಟೋನಿಯಾಗೆ ಹೊರಟ ಚೌಬೆ!
ಕೊನೆಗೂ ಚೌಬೆಯವರ ಒಂದು ಕನಸು-ನನಸಾಗುವ ಕ್ಷಣ ಬಂದೇ ಬಿಟ್ಟಿತ್ತು. ಪ್ರೊ.ಕಿವಿಸಿಲ್ಡ್ ಅವರ ಬಳಿ ಪಿಎಚ್‌ಡಿ ಮಾಡುವುದಕ್ಕಾಗಿ ಅವರು ಎಸ್ಟೋನಿಯಾಗೆ ತೆರಳಿದರು. ಅಲ್ಲಿನ ಟಾರ್ಟು ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಅಲ್ಲಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಲಿಸಲು ಉಪನ್ಯಾಸಕರಾಗಿ ಆಯ್ಕೆಯಾದರು. ತಮ್ಮ ಪಿಎಚ್‌ಡಿಯನ್ನು ಪೂರ್ಣಗೊಳಿಸಿದ ನಂತರ, ಚೌಬೆ ಅವರು ಸಂದರ್ಶಕ ವಿಜ್ಞಾನಿಯಾಗಿ ಕೇಂಬ್ರಿಡ್ಜ್‌ಗೆ (Sanger Institute UK) ಹೋಗ್ತಾರೆ.


ಜೀನೋಮ್ ವಿಶ್ಲೇಷಣೆಯ ಕಂಪ್ಯೂಟೇಶನಲ್ ವಿಧಾನದ ಬಗ್ಗೆ ಹೆಚ್ಚು ಕಲಿಯುತ್ತಾರೆ. ನಂತರ, ಅವರು ಎಸ್ಟೋನಿಯಾಕ್ಕೆ ಹಿಂದಿರುಗಿ ಎಸ್ಟೋನಿಯನ್ ಬಯೋಸೆಂಟರ್‌ನಲ್ಲಿ ಹಿರಿಯ ವಿಜ್ಞಾನಿಯಾಗಿ ಸೇರಿಕೊಂಡು 2016 ರವರೆಗೆ ಕೆಲಸ ಮಾಡಿದರು.


ಇದನ್ನೂ ಓದಿ:  Explained: ಇನ್ಮೇಲೆ ಪಂಚ ಮಹಾಸಾಗರ ಅಲ್ಲ, ಪತ್ತೆಯಾಯ್ತು 6 ನೇ ಸಮುದ್ರ!


ಅವರು ನೇಚರ್, PNAS, ಜೀನೋಮ್ ರಿಸರ್ಚ್ ಮತ್ತು ಅಮೇರಿಕನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್‌ನಂತಹ ಪ್ರಮುಖ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿದರು. 2016 ರಲ್ಲಿ, ಚೌಬೆ ಅವರ ಪತ್ನಿ ಡಾ. ಚಂದನಾ ಬಸು ಅವರಿಗೆ ಜೆನೆಟಿಸಿಸ್ಟ್, ಪ್ರತಿಷ್ಠಿತ ಮೇರಿ-ಕ್ಯೂರಿ ಫೆಲೋಶಿಪ್ ಕೂಡ ಸಿಗುತ್ತದೆ.


ಬ್ಯಾಕ್‌ ಟು ಇಂಡಿಯಾ!
ನಂತರ 2017 ರಲ್ಲಿ ಚೌಬೆ ಅವರ ತಂದೆಯ ಅನಾರೋಗ್ಯವು ಅವರನ್ನು ಭಾರತಕ್ಕೆ ವಾಪಸ್ಸಾಗುವಂತೆ ಮಾಡಿತು. ಅದೃಷ್ಟವಶಾತ್ ಅವರು BHU ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣವೇ ಆಯ್ಕೆಯಾದರು. ವರ್ಷಗಳಲ್ಲಿ, ಅಂಡಮಾನ್, ಆಸ್ಟ್ರೋಯಾಸಿಯಾಟಿಕ್, ಭಾರತೀಯ ಯಹೂದಿಗಳು ಮತ್ತು ಪಾರ್ಸಿಗಳು ಸೇರಿದಂತೆ ದಕ್ಷಿಣ ಏಷ್ಯಾದ ಹಲವಾರು ಜನಾಂಗೀಯ ಗುಂಪುಗಳ ಕುರಿತು ಅವರ ಆಳವಾದ ಕೆಲಸವು ಪ್ರಪಂಚದಾದ್ಯಂತದ ಎಲ್ಲಾ ಪ್ರಮುಖ ವಿಜ್ಞಾನಿಗಳ ಗಮನ ಸೆಳೆಯಿತು.


ಕೋವಿಡ್ ಪ್ರಭಾವವನ್ನು ನಿಖರವಾಗಿ ಊಹಿಸಿತ್ತು ಚೌಬೆ ತಂಡ!
ಇನ್ನು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಸಾಧಾರಣ ಕೆಲಸ ಮಾಡಿದ ಕೀರ್ತಿಯೂ ಚೌಬೆ ಅವರಿಗೆ ಸಲ್ಲುತ್ತದೆ. "ವಂಶವಾಹಿಗಳು ಮತ್ತು ಪೂರ್ವಜರ ಜ್ಞಾನದಲ್ಲಿನ ನಮ್ಮ ಅಗತ್ಯ ಹಿನ್ನೆಲೆಯು COVID ನ ಸವಾಲುಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಹಾಯ ಮಾಡಿತು ಎನ್ನುತ್ತಾರೆ ಚೌಬೆ.


ಅವರ ತಂಡ, ಜನಸಂಖ್ಯೆಯ ಮಟ್ಟದ ಸೂಕ್ಷ್ಮತೆ ಅರ್ಥಮಾಡಿಕೊಳ್ಳಲು ಹೊಸ ವಿಧಾನ ಬಳಸಿತಲ್ಲದೇ ಅದರ ಮೇಲೆ 15 ಕ್ಕೂ ಹೆಚ್ಚು ಉನ್ನತ-ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿತು. ಹಾಗಾಗಿ ಅವರು ಕೋವಿಡ್‌ ನ 3 ನೇ ಅಲೆ ಮತ್ತು ಭಾರತೀಯ ಜನಸಂಖ್ಯೆಯ ಮೇಲೆ ಅದರ ಪ್ರಭಾವವನ್ನು ನಿಖರವಾಗಿ ಊಹಿಸಿದ್ದರು.


ನಡೆಯುತ್ತಿದೆ ಗೋತ್ರ ವ್ಯವಸ್ಥೆಯ ತಳಿಶಾಸ್ತ್ರ ಅಧ್ಯಯನ
ಅವರು ಇನ್ನೂ ಮಾಡುತ್ತಿರುವ ಅತ್ಯಂತ ಸವಾಲಿನ ಕೆಲಸವೆಂದರೆ ಭಾರತೀಯ ಗೋತ್ರ ವ್ಯವಸ್ಥೆಯ ತಳಿಶಾಸ್ತ್ರ ಅಧ್ಯಯನ. "2006 ರಲ್ಲಿ ನಾನು ಎಸ್ಟೋನಿಯಾಗೆ ಸೇರಿದಾಗ ನಾವು ಈ ಕೆಲಸವನ್ನು ಪಿಎಚ್‌ಡಿ ವಿಷಯವಾಗಿ ಪ್ರಾರಂಭಿಸಿದ್ದೇವೆ, ಆದರೆ ಅದರ ಸಂಕೀರ್ಣ ಸ್ವಭಾವದಿಂದಾಗಿ ಇದು ಇನ್ನೂ ನಡೆಯುತ್ತಿದೆ" ಎಂದಿದ್ದಾರೆ.


ನಾವು ಅಜ್ನಾಲಾ ಹುತಾತ್ಮರ ಪಟ್ಟಿಯನ್ನು ನಮಗೆ ಒದಗಿಸುವ ಬ್ರಿಟಿಷ್ ಹೈಕಮಿಷನ್‌ಗಾಗಿ ಕಾಯುತ್ತಿದ್ದೇವೆ. ಆದ್ದರಿಂದ ನಾವು ಅವರ ಕೊನೆಯ ಆಚರಣೆಗಳನ್ನು ಪೂರ್ಣಗೊಳಿಸಬೇಕು. ಇದಲ್ಲದೆ, ನಾವು ವಿವಿಧ ಭಾರತೀಯ ಮುಸ್ಲಿಂ ಗುಂಪುಗಳ ಮೂಲದ ಬಗ್ಗೆ ವಿವರವಾದ ಪೇಪರ್‌ ತರುತ್ತಿದ್ದೇವೆ ಮತ್ತು ಲಡಾಖ್‌ನಲ್ಲಿ ಜೀನೋಮಿಕ್ ಪೂರ್ವಜರ ಬಗ್ಗೆ ವಿವರವಾದ ಕೆಲಸವೂ ನಡೆಯುತ್ತಿದೆ ಎನ್ನುತ್ತಾರೆ ಚೌಬೆ. ಅಲ್ಲದೇ ಅವರು BHU ನಲ್ಲಿನ ವೈದ್ಯರೊಂದಿಗೆ ಗಂಗಾ ಬಯಲು ಪ್ರದೇಶದ ರೋಗಗಳು ಮತ್ತು ಅವುಗಳ ಆನುವಂಶಿಕ ಕಾರಣಗಳನ್ನು ಸಹ ಪಟ್ಟಿ ಮಾಡುತ್ತಿದ್ದಾರೆ.


ಇದನ್ನೂ ಓದಿ: Trash on Mars: ಮಂಗಳ ಗ್ರಹದಲ್ಲಿ 7,000 ಕೆಜಿ ಮಾನವನಿರ್ಮಿತ ಕಸದ ರಾಶಿ!


ಇನ್ನು ತಮ್ಮ ಬಾಲ್ಯದ ಬಗ್ಗೆ ಹೇಳುವ ಚೌಬೆ, "ನಾನು ಹಲವು ವರ್ಷ ಹಳ್ಳಿಯಲ್ಲಿ ವಾಸ ಮಾಡಿದ್ದೇನೆ. ಗ್ರಾಮೀಣ ಆಟವಾದ ಗಿಲ್ಲಿ ದಾಂಡು ಸೇರಿದಂತೆ ಕಬಡ್ಡಿ, ಕ್ರಿಕೆಟ್, ಹಾಕಿ ಮತ್ತು ಬ್ಯಾಡ್ಮಿಂಟನ್ ಆಟಗಳನ್ನೂ ಆಡಿದ್ದೇನೆ ಎನನುತ್ತಾರೆ. ಅಲ್ಲದೇ ಅವರು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುತ್ತಾರೆ. ಒಟ್ಟಾರೆ, ಜಗತ್ತಿನಲ್ಲಿಯೇ ಗುರುತಿಸಿಕೊಂಡ ವಿಜ್ಞಾನಿ ಜ್ಞಾನೇಶ್ವರ ಚೌಬೆ ಅವರು ತಮ್ಮ ಸಾಧನೆಗಾಗಿ ಅನೇಕರಿಗೆ ಸ್ಪೂರ್ತಿಯಾಗುತ್ತಾರೆ.

Published by:Ashwini Prabhu
First published: