Explained: ಕ್ಯಾನ್ಸರ್ ಕೊಲ್ಲುವ ವೈರಸ್‌ಗಳನ್ನು ಮಾನವರ ದೇಹಕ್ಕೆ ಸೇರಿಸಿದ ವಿಜ್ಞಾನಿಗಳು! ಆ ವೈರಸ್ ಯಾವುದು? ಮಾರಕ ರೋಗಕ್ಕೆ ಸಿಗುವುದೇ ಮುಕ್ತಿ?

ಕ್ಯಾನ್ಸರ್ ಕಾಯಿಲೆ ಒಂದು ಮಾರಕ ಕಾಯಿಲೆಯಾಗಿದ್ದು ಅದಕ್ಕಾಗಿ ಅತ್ಯಂತ ಪರಿಣಾಮಕಾರಿ ಎನ್ನಬಹುದಾದ ಚಿಕಿತ್ಸೆ ದುರ್ಲಭವಾಗಿದೆ. ಸದ್ಯ ಈಗ ಮೊದಲ ಬಾರಿಗೆ, ವಿಜ್ಞಾನಿಗಳು ಹೊಸ ಮತ್ತು ಪ್ರಾಯೋಗಿಕ ಸ್ತರದಲ್ಲಿ ಕ್ಯಾನ್ಸರ್-ಕೊಲ್ಲುವ ವೈರಸ್‌ ಅನ್ನು ಮಾನವನಲ್ಲಿ ಸೇರಿಸಿದ್ದಾರೆ. ಹಾಗಿದ್ರೆ ಆ ವೈರಸ್ ಯಾವುದು? ಅದರಿಂದ ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ?

ಮಾನವನಲ್ಲಿ ಕ್ಯಾನ್ಸರ್ ಕೊಲ್ಲುವ ವೈರಸ್

ಮಾನವನಲ್ಲಿ ಕ್ಯಾನ್ಸರ್ ಕೊಲ್ಲುವ ವೈರಸ್

  • Share this:
ಇಂದು ವೈದ್ಯಕೀಯ ವಿಜ್ಞಾನ (Medical Science) ಜಗತ್ತಿನಲ್ಲೂ ಸಹ ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಹಲವಾರು ಆಧುನಿಕ ಲಸಿಕೆಗಳು (Vaccine), ಚುಚ್ಚುಮದ್ದುಗಳ (Injections) ಆವಿಷ್ಕಾರಕ್ಕೆ ವೈದ್ಯ ಜಗತ್ತಿನ ವಿಜ್ಞಾನಿಗಳು ನಿತ್ಯ ಕೆಲಸ ಮಾಡುತ್ತಲೇ ಇದ್ದಾರೆ. ಕೋವಿಡ್ (Covide) ಸಂಕಷ್ಟದ ಸಮಯದಲ್ಲಿ ವೈರಾಣುವನ್ನು ಹತೋಟಿಗೆ ತರಲು ಅತಿ ವೇಗದಲ್ಲಿ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿದ್ದು ಕಡಿಮೆ ಸಾಧನೆಯೇನಲ್ಲ. ಕ್ಯಾನ್ಸರ್ ಕಾಯಿಲೆ (Cancer Disease) ಒಂದು ಮಾರಕ ಕಾಯಿಲೆಯಾಗಿದ್ದು ಅದಕ್ಕಾಗಿ ಅತ್ಯಂತ ಪರಿಣಾಮಕಾರಿ ಎನ್ನಬಹುದಾದ ಚಿಕಿತ್ಸೆ (Treatment) ದುರ್ಲಭವಾಗಿದೆ. ಸದ್ಯ ಈಗ ಮೊದಲ ಬಾರಿಗೆ, ವಿಜ್ಞಾನಿಗಳು ಹೊಸ ಮತ್ತು ಪ್ರಾಯೋಗಿಕ ಸ್ತರದಲ್ಲಿ ಕ್ಯಾನ್ಸರ್-ಕೊಲ್ಲುವ ವೈರಸ್‌ ಅನ್ನು ಮಾನವನಲ್ಲಿ ಸೇರಿಸಿದ್ದಾರೆ.

ವ್ಯಾಕ್ಸಿನಿಯಾ ವೈರಾಣು
ಈ ವೈರಾಣುವನ್ನು ವ್ಯಾಕ್ಸಿನಿಯಾ ಎಂದು ಕರೆಯಲಾಗಿದೆ. ಯುಎಸ್ಸಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ವೈರಾಣುವಿನ ಪ್ರಯೋಗ ಈಗಾಗಲೇ ಪ್ರಾಣಿಗಳ ಮೇಲೆ ಮಾಡಲಾಗಿದೆ. ಇದನ್ನು ಪ್ರಾಣಿಗಳ ಮೇಲೆ ಮೊದಲು ಇಂಜೆಕ್ಟ್ ಮಾಡಿ ಪರೀಕ್ಷಿಸಿದಾಗ ಅದು ಯಶಸ್ವಿಯಾಗಿದೆ.

ಇದನ್ನೂ ಓದಿ:  Vulvar Cancer: ಹೆಣ್ಣುಮಕ್ಕಳನ್ನು ಕಾಡುವ ಈ ವಿಚಿತ್ರ ಕ್ಯಾನ್ಸರ್ ಬಗ್ಗೆ ಎಲ್ಲರೂ ತಿಳಿದಿರಲೇಬೇಕು

ಈ ಮೂಲಕ ಸಿಟಿ ಆಫ್ ಹೋಪ್ - ದೇಶದ ಅತಿದೊಡ್ಡ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾಗಿದೆ - ವೈರಸ್ "ಕೊಲೊನ್, ಶ್ವಾಸಕೋಶ, ಸ್ತನ, ಅಂಡಾಶಯ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗೆಡ್ಡೆಗಳನ್ನು ಪೂರ್ವಭಾವಿ ಪ್ರಯೋಗಾಲಯ ಮತ್ತು ಪ್ರಾಣಿ ಮಾದರಿಗಳಲ್ಲಿ ಕುಗ್ಗಿಸುತ್ತದೆ" ಎಂದು ತೋರಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಕೊಲಿಟಿಕ್ ವೈರಸ್‌ಗಳು
"ನಮ್ಮ ಹಿಂದಿನ ಸಂಶೋಧನೆಯು ಆಂಕೊಲಿಟಿಕ್ ವೈರಸ್‌ಗಳು ಕ್ಯಾನ್ಸರ್‌ಗೆ ಪ್ರತಿಕ್ರಿಯಿಸಲು ಮತ್ತು ಕೊಲ್ಲಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಜೊತೆಗೆ ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳು ಸೇರಿದಂತೆ ಇತರ ಇಮ್ಯುನೊಥೆರಪಿಗಳಿಗೆ ಹೆಚ್ಚು ಸ್ಪಂದಿಸುವಂತೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ" ಎಂದು ನಗರದ ಸಿಟಿ ಆಫ್ ಹೋಪ್ಸಿನ ಮೆಡಿಕಲ್ ಆಂಕೊಲಾಜಿ & ಥೆರಪ್ಯೂಟಿಕ್ಸ್ ರಿಸರ್ಚಿನ ಪ್ರಧಾನ ತನಿಖಾಧಿಕಾರಿ ಡಾ. ಡಾನೆಂಗ್ ಲಿ ಹೇಳಿದ್ದಾರೆ.

ಕ್ಯಾನ್ಸರ್ ವಿರುದ್ಧ ಇದು ಹೇಗೆ ಕಾರ್ಯನಿರ್ವಹಿಸುತ್ತದೆ
"ಈಗ ಇಮ್ಯುನೊಥೆರಪಿಯ ಶಕ್ತಿಯನ್ನು ಹೆಚ್ಚಿಸುವ ಸಮಯ, ಮತ್ತು CF33-hNIS (ವ್ಯಾಕ್ಸಿನಿಯಾ) ನಮ್ಮ ರೋಗಿಗಳಿಗೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಫಲಿತಾಂಶಗಳನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ನಂಬುತ್ತೇವೆ" ಎಂದು ಲೀ ಹೇಳಿದ್ದು ಈ ಸಂದರ್ಭದಲ್ಲಿ ಅವರು ಕನಿಷ್ಠ ಎರಡು ರೀತಿಯ ಆರೈಕೆ ಚಿಕಿತ್ಸೆಯ ಮಾನದಂಡಗಳನ್ನು ಹೊಂದಿರುವ ಮೆಟಾಸ್ಟಾಟಿಕ್ ಅಥವಾ ಸುಧಾರಿತ ಘನ ಗೆಡ್ಡೆಗಳನ್ನು ಹೊಂದಿರುವ ಕ್ಯಾನ್ಸರ್ ರೋಗಿಗಳಿಗೆ ವೈರಸ್‌ನ ಕಡಿಮೆ ಪ್ರಮಾಣವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಚಿಕಿತ್ಸೆಯನ್ನು ನೇರವಾಗಿ ಗೆಡ್ಡೆಗಳಿಗೆ ಚುಚ್ಚುಮದ್ದಿನ ರೂಪದಲ್ಲಿ ಅಥವಾ ಅಭಿದಮನಿ ಮೂಲಕ ನೀಡಲಾಗುತ್ತದೆ.

ವೈದ್ಯರಿಗೆ ಮಹತ್ವದ ಮೈಲಿಗಲ್ಲು
ಏತನ್ಮಧ್ಯೆ "ನಮ್ಮ ವ್ಯಾಕ್ಸಿನಿಯಾ ಅಧ್ಯಯನದಲ್ಲಿ ಮೊದಲ ರೋಗಿಯ ಡೋಸಿಂಗ್ ಇಮ್ಯುಜಿನ್ ಮತ್ತು ಮೆಟಾಸ್ಟಾಟಿಕ್ ಸುಧಾರಿತ ಘನ ಗೆಡ್ಡೆಗಳಿಗೆ ಚಿಕಿತ್ಸೆಯ ಸವಾಲನ್ನು ಎದುರಿಸುತ್ತಿರುವ ವೈದ್ಯರಿಗೆ ಮಹತ್ವದ ಮೈಲಿಗಲ್ಲು" ಎಂದು ಇಮುಜೆನ್ ಎಂಡಿ ಮತ್ತು ಸಿಇಒ ಲೆಸ್ಲಿ ಚಾಂಗ್ ಹೇಳಿದ್ದಾರೆ. ಪ್ರಯೋಗವು ಸುಮಾರು ಎರಡು ವರ್ಷಗಳವರೆಗೆ ನಡೆಯುವ ನಿರೀಕ್ಷೆಯಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದಾದ್ಯಂತ 100 ರೋಗಿಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ:   Explained: ಫ್ಯಾಟ್ ಸರ್ಜರಿ ಎಂದರೇನು? ಇದು ಕೊಬ್ಬು ಕರಗಿಸುತ್ತಾ ಅಥವಾ ಪ್ರಾಣವನ್ನೇ ತೆಗೆಯುತ್ತಾ?

ಇದು ನಿಜಕ್ಕೂ ಒಂದು ಅದ್ಭುತ ಪ್ರಯೋಗವಾಗಿದ್ದು ಇದರ ಯಶಸ್ಸು ಮಾನವ ಕುಲಕ್ಕೆ ಒಂದು ವರದಾನವಾಗಿ ಪರಿಣಮಿಸಬಹುದು. ಈಗಾಗಲೇ ಕ್ಯಾನ್ಸರ್ ಕಾಯಿಲೆ ತನ್ನ ಗಂಭೀರ ಮಾರಣಾಂತಿಕ ಪರಿಣಾಮದಿಂದಾಗಿ ಆತಂಕದ ಛಾಯೆ ಸಾಕಷ್ಟು ಮೂಡಿಸಿದೆ. ಇನ್ನೊಂದೆಡೆ ಇದರ ಚಿಕಿತ್ಸಾ ವೆಚ್ಚವೂ ಅಧಿಕವಿದ್ದು ಈ ರೀತಿಯ ಪ್ರಯೋಗಗಳು ಯಶಸ್ವಿಯದರೆ ಭವಿಷ್ಯದಲ್ಲಿ ಈ ಕಾಯಿಲೆಯನ್ನು ಪರಿಣಾಮಕಾರಿಯಾಗಿ ದೂರವಿಡಬಹುದಾಗಿದೆ ಹಾಗೂ ಇದರ ಲಾಭ ಎಲ್ಲರಿಗೂ ಸಿಗಲಿದೆ. ಹಾಗಾಗಿ ಈ ನಿಟ್ಟಿನಲ್ಲಿ ಈ ಪ್ರಯೋಗ ಯಶಸ್ವಿಯಾಗಲೆಂದಷ್ಟೇ ಕೇಳಿಕೊಳ್ಳಬಹುದಾಗಿದ್ದು ಕಾದು ನೋಡಬೇಕಾಗಿದೆ.
Published by:Ashwini Prabhu
First published: