HOME » NEWS » Explained » FIVE THINGS YOU NEED TO KNOW ABOUT WORLDS LARGEST OLA E SCOOTERS FACTORY HG

ವಿಶ್ವದ ಅತಿ ದೊಡ್ಡ ಓಲಾ ಇ-ಸ್ಕೂಟರ್​​ ಫ್ಯಾಕ್ಟರಿ ಬಗ್ಗೆ ತಿಳಿಯಬೇಕಾದ 5 ಸಂಗತಿಗಳು

Ola e-scooters: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿದೆ ಫ್ಯಾಕ್ಟರಿ ತೆರೆದಿದ್ದು, ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ. ಫ್ಯಾಕ್ಟರಿ ಸುಮಾರು 500 ಎಕರೆ ವಿಸ್ತೀರ್ಣದಲ್ಲಿದೆ.

news18-kannada
Updated:March 11, 2021, 11:42 AM IST
ವಿಶ್ವದ ಅತಿ ದೊಡ್ಡ ಓಲಾ ಇ-ಸ್ಕೂಟರ್​​ ಫ್ಯಾಕ್ಟರಿ ಬಗ್ಗೆ ತಿಳಿಯಬೇಕಾದ 5 ಸಂಗತಿಗಳು
Ola
  • Share this:
ನಗರ ಪ್ರದೇಶದಲ್ಲಿ ಕ್ಯಾಬ್​ ಸೇವೆಯನ್ನು ಒದಗಿಸುತ್ತಿದ್ದ ಓಲಾ ಸಂಸ್ಥೆ ಇದೀಗ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಜೊತೆಗೆ ವಿಶ್ವದಾದ್ಯಂತ ಮಾರುಕಟ್ಟೆ ವಿಸ್ತರಣೆ ಮಾಡಲು ಮುಂದಾಗಿದೆ. ಅದಕ್ಕಾಗಿ ಅತಿ ದೊಡ್ಡ ಫ್ಯಾಕ್ಟರಿಯನ್ನು ತಮಿಳುನಾಡಿನಲ್ಲಿ ನಿರ್ಮಿಸುತ್ತಿದೆ. ಅನೇಕರಿಗೆ ಓಲಾ ಸಂಸ್ಥೆಯ ಬಗ್ಗೆ ತಿಳಿದಿದೆ. ಆದರೆ ಓಲಾ ಫ್ಯಾಕ್ಟರಿ ಬಗ್ಗೆ ತಿಳಿದಿಲ್ಲ. ಹಾಗಾಗಿ ಜನರಿಗೆ ತಿಳಿಯದೆ ಕೆಲವು ಸಂಗತಿಯಲ್ಲಿ ಇಲ್ಲಿ ನೀಡಲಾಗಿದೆ.

ಓಲಾ ಇ-ಸ್ಕೂಟರ್​ ಅನ್ನು ಉತ್ಪಾದಿಸಲು ಮುಂದಾಗಿದೆ. ಅದಕ್ಕಾಗಿ ಓಲಾ ಕ್ಯಾಬ್​ ನೆದರ್​ಲ್ಯಾಂಡ್​ ಮೂಲದ ಎಲೆಕ್ಟ್ರಿಕ್​ ಸ್ಕೂಟರ್​​  ಕಂಪೆನಿಯಾದ ಎಟೆರ್ಗೊವನ್ನು 2020, ಮೇ ತಿಂಗಳಿನಲ್ಲಿ ಸ್ವಾಧೀನಪಡಿಸಿಕೊಂಡಿದೆ. ಓಲಾ ಇ- ಸ್ಕೂಟರ್​​ ಎಟರ್ಗೊ ಆ್ಯಪ್​ಸ್ಕೂಟರ್​ ಆಧರಿಸಿ ಉತ್ಪಾದಿಸುವ ಸಾಧ್ಯತೆ ಹೆಚ್ಚಿದೆ. ಅಷ್ಟು ಮಾತ್ರವಲ್ಲದೆ, ಒಂದು ಬಾರಿ ಚಾರ್ಜ್​ ಮಾಡಿದರೆ 240 ಕಿಲೋ ಮೀಟರ್​​ ಚಲಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.

ತಮಿಳುನಾಡಿನಲ್ಲಿ ಒಲಾ ಫ್ಯಾಕ್ಟರಿಯನ್ನು ತೆರೆದಿದ್ದು, ಅದರ ನಿರ್ಮಾಣವನ್ನು ವೇಗವಾಗಿ ಮಾಡುತ್ತಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿದೆ ಫ್ಯಾಕ್ಟರಿ ತೆರೆದಿದ್ದು, ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ. ಫ್ಯಾಕ್ಟರಿ ಸುಮಾರು 500 ಎಕರೆ ವಿಸ್ತೀರ್ಣದಲ್ಲಿದೆ.

2,400 ಕೋಟಿ ರೂನಲ್ಲಿ ಫ್ಯಾಕ್ಟರಿ  ನಿರ್ಮಿಸಲಾಗುತ್ತಿದೆ. ಸುಮಾರು 10 ಮಿಲಿಯನ್​ ಜನರು ಇಲ್ಲಿ ಕೆಲಸ ಮಾಡುವಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನಾಗುತ್ತಿದೆ.

ಸುಮಾರು 10 ಸಾವಿರ ಕೆಲಸಗಾರರಿಂದ 20 ಲಕ್ಷ ಎಲೆಕ್ಟ್ರಿಕ್​ ಸ್ಕೂಟರ್​ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. 3 ಸಾವಿರದಿಂದ 5 ಸಾವಿರದವರೆಗೆ ರೋಬೊಟ್​ಗಳು ಸ್ಕೂಟರನ್ನು ತಯಾರಿಸಲಿದೆ.
Youtube Video

ಓಲಾ ನಿಸ್ಸಂಶಯವಾಗಿ ಇ-ಸ್ಕೂಟರ್​ ವಿಭಾಗದಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಮುಂದಾಗಿದೆ. ಸಾಗರೋತ್ತರದಲ್ಲಿರುವ ಯುರೋಪ್​, ಇಂಗ್ಲೇಂಡ್​, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ದೇಶಗಳ ಮಾರುಕಟ್ಟೆಗಳಿಗೆ ರವಾನಿಸಲ್ಟಡುತ್ತದೆ ಎನ್ನಲಾಗುತ್ತಿದೆ.
Published by: Harshith AS
First published: March 11, 2021, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories