Explained: ಹೆಣ್ಮಕ್ಕಳೇ, ನಿಮ್ಮಲ್ಲೂ ಅಳವಡಿಸಿಕೊಳ್ಳಿ ಸ್ತ್ರೀ ವಾದಿ ಪಾಲನೆಯ ಈ ಎಂಟು ಅಂಶಗಳು!

ಸ್ತ್ರೀ ವಾದಿ ಪಾಲನೆಯಲ್ಲಿ ಪೋಷಕರು ತಮ್ಮ ಮಕಳ್ಳನ್ನು ಕಲಿಸಬೇಕಾದ ಆ 8 ಅಂಶಗಳನ್ನು ಯಾವು ಎಂಬುದು ತಿಳಿದುಕೊಳ್ಳಲು ಮುಂದೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪುರುಷ ಪ್ರಧಾನ ಸಮಾಜದಲ್ಲಿಂದು ಮಹಿಳೆ ಕೂಡ ಯಾರಿಗಿಂತಲೂ ಕಡಿಮೆ ಇಲ್ಲಾ ಎಂಬುದನ್ನು ಪದೆ ಪದೆ ಸಾಬೀತು ಪಡಿಸುತ್ತಲೇ ಬಂದಿದ್ದಾಳೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ( Achievement) ಮಾಡುವ ಮೂಲಕ ತನ್ನ ಸಾಮರ್ಥ್ಯ ( Ability) ಎನೆಂಬುದನ್ನು ತೋರಿಸುತ್ತಲೇ ಇದ್ದಾಳೆ. ಆದ್ರೆ ಇತ್ತಿಚೆಗೆ ಸ್ತ್ರೀ ವಾದಿ ಪಾಲನೆ (Feminist Upbringing) ಮಹಿಳೆಯರಲ್ಲಿ ತುಂಬ ವಿರಳವಾಗಿ ಕಂಡು ಬರುತ್ತಿದೆ. ಇಂದಿನ ಕಾಲದಲ್ಲಿ ಮಹಿಳೆ ( Women) ತನ್ನ ಶಾರೀರಿಕವಾಗಿ, ಮಾನಸಿಕವಾಗಿ( Mentality) ಸದೃಡವಾಗಿ ಬಾಳಬೇಕಾದ ಅನಿವಾರ್ಯತೆ ಬಂದೊದಗಿದೆ. ಸಂಸಾರಿಕವಾಗಿ ಏನೇ ತಪ್ಪುಗಳಾದ್ರೂ ಮೊದಲು ಹೆಣ್ಣಿನ ಕಡೆಗೆ ಬೊಟ್ಟು ಮಾಡಿ ತೋರಿಸುವ ಈಗಿನ ಪರಿಸ್ಥಿತಿಯಲ್ಲಿ ಹೆಣ್ಣು ಹೇಗೆ ಬಾಳಬೇಕೆಂಬುದು ತಿಳಿದುಕೊಳ್ಳಲು ಸ್ತ್ರೀ ವಾದಿ ಪಾಲನೆ ತುಂಬ ಮುಖ್ಯವಾಗಿದೆ. ಹಾಗಾದ್ರೆ ಆ ಸ್ತ್ರೀ ವಾದಿ ಪಾಲನೆಯಲ್ಲಿ ಪೋಷಕರು (Parents) ತಮ್ಮ ಮಕಳ್ಳನ್ನು ಕಲಿಸಬೇಕಾದ ಆ 8 ಅಂಶಗಳನ್ನು ಯಾವು ಎಂಬುದು ತಿಳಿದುಕೊಳ್ಳಲು ಮುಂದೆ ಓದಿ.

ಹೌದು ಇಂದು ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಎಷ್ಟೆ ಮುಂದುವರೆದರೂ ಕೂಡ ಆಕೆಯ ಸ್ವತಂತ್ರತೆಗೆ ದಕ್ಕೆ ಬರುತ್ತಿದೆ. ಮನುಷ್ಯನಿಗೆ ತನ್ನ ಸ್ವತಂತ್ರದ ಬದುಕು ನಡೆಸಲು ಸಮಾಜ ಪ್ರಾಮುಖ್ಯತೆ ನೀಡುತ್ತದೆ. ಆದ್ರೆ ಅದೆ ಹೆಣ್ಣು ತನ್ನ ಸ್ವತಂತ್ರವಾಗಿ ಬದುಕಲು ಈ ಸಮಾಜ ಅವಕಾಶ ನೀಡಲ್ಲಾ. ಹೆಣ್ಣು ಅಂದ್ರೆ ಅಡುಗೆ ಮನೆಗೆ ಸೀಮಿತ ಎಂದು ನಂಬುವ ಈ ಸಮಾಜದಲ್ಲಿ ಮಹಿಳಾ ಸಮಲಿಕರಣದಂತಹ ಅಸ್ತ್ರದಿಂದ ಇಂದು ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಸದಾ ಕಸರತ್ತು ನಡೆಸುತ್ತಲೇ ಇದ್ದಾಳೆ. ಹಾಗಾಗಿ ಹೆಣ್ಣನ್ನು ಕೀಳಾಗಿ ನೋಡುವುದನ್ನು ಬಿಟ್ಟು ಆಕೆಯನ್ನು ಸಮಾನತೆಯ ದೃಷ್ಟಿಯಿಂದ ನೋಡಬೇಕಾಗಿದೆ.

ಹೆಣ್ಣು ಮಕ್ಕಳನ್ನು ಛಲಗಾತಿಯಾಗಿ ಬೆಳೆಸಬೇಕು
ಯಾರು ತಪ್ಪು ಮಾಡಿದ್ರು ಅದನ್ನು ಯಾರು ಸಹಿಸುವುದಿಲ್ಲಾ. ಅಂತಹದರಲ್ಲಿ ಸಂಸಾರದಲ್ಲಿ ಏನಾದ್ರು ತಪ್ಪುಗಳಾದ್ರೆ ಮೊದಲು ಹೆಣ್ಣು ಕಡೆ ಬೊಟ್ಟು ಮಾಡುವ ಪರಂಪರೆ ಇನ್ನು ಮುಂದುವರೆದಿದೆ. ಮಹಿಳಾ ಸಮಬಲಿಕರಣವಾಗುತ್ತಿದ್ದರೂ ಮಹಿಳೆಗೆ ಮಾತ್ರ ಇನ್ನೂ ಸ್ವತಂತ್ರತೆ ಸಿಕ್ಕಿಲ್ಲಾ. ಹಾಗಾಗಿ ಇವತ್ತು ಮಹಿಳೆ ತನ್ನ ಸ್ವಂತ ಬುದಿಯಿಂದ ಮನ್ನೆಡೆಯಲು ಅವಕಾಶ ನೀಡಬೇಕು.

ಲೈಂಗಿಕ ಕಿರುಕುಳ ವಿರುದ್ಧ ಧ್ವನಿ ಎತ್ತಲು ಪ್ರೋತ್ಸಾಹಿಸಿ
ಹೌದು ಇಂದು ಮಹಿಳೆ ಹಲವು ಕ್ಷೇತ್ರದಲ್ಲಿ ಸಾಧನೆಯ ಶಿಖರವನ್ನು ಏರುತ್ತಲೆ ಇದ್ದಾಳೆ. ಆದ್ರೆ ಮಹಿಳೆ ಮಾನಸಿಕವಾಗಿ, ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾಳೆ. ಆದ್ರೆ ಪುರುಷ ಪ್ರಧಾನ ಈ ಸಮಾಜದಲ್ಲಿ ಮಹಿಳೆಯ ಸಬಲಿಕರಣ ಸಹಿಸದ ಕೆಲವರು ಮಹಿಳೆಯನ್ನು ದೋಷಿಸುವ ಚಾಳಿ ಮಾತ್ರ ಬಿಟ್ಟಿಲ್ಲಾ. ಆದ್ರೆ ಪೋಷಕರಾದವರು ಇಂದು ತಮ್ಮ ಮಕ್ಕಳನ್ನು ಸರಿ ಮತ್ತು ತಪ್ಪು ಬಗ್ಗೆ ತಿಳಿವಳಿಕೆ ನೀಡೋದು ತುಂಬ ಮುಖ್ಯವಾಗಿದೆ. ಅಷ್ಟೆ ಅಲ್ಲದೆ ಹೆಣ್ಣು ಮಕ್ಕಳಲ್ಲಿ ಪ್ರೋತ್ಸಾಹ ತುಂಬಿ ಇಂತಹ ಹದಗೆಟ್ಟ ಸಮಾಜದಲ್ಲಿ ಹೇಗೆ ಬದುಕಬೇಕು ಮತ್ತು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದು ಮಕ್ಕಳಿಗೆ ಹೇಳಿಕೊಡುವುದು ತುಂಬ ಮುಖ್ಯವಾಗಿದೆ.

ಇದನ್ನೂ ಓದಿ: ಅಂದು ಭಿಕ್ಷುಕಿ, ಇಂದು SSLC ಫಲಿತಾಂಶ ಸಾಧಕಿ! ಹೆತ್ತವರಿಲ್ಲದ ನೋವಿನಲ್ಲಿಯೂ ಸೋನು ಸಾಧನೆ!

ಸ್ವತಂತ್ರವಾಗಿ ನಿರ್ಧಾರಕೈಗೊಳ್ಳಲು ಅವಕಾಶ ಕೊಡಿ
ಹೆಣ್ಣು ಹುಟ್ಟಿತು ಅಂದ್ರೆ ಮನೆ ಮನೆಗೆ ಲಕ್ಷ್ಮೀ ಬಂದಳಮ್ಮ ಅಂತಾರೆ. ಆದ್ರೆ ಕೆಲ ಪೋಷಕರು ಹೆಣ್ಣು ಹುಟ್ಟಿತು ಅಂದ್ರೆ ಹೇಗಪ್ಪ ಮುಂದೆ, ಹೇಗೆ ಸಾಕೋದು ಎಂದು ಚಿಂತಿತರಾಗುತ್ತಾರೆ. ಮುಂದೆ ಮಗಳ ಮದುವೆ ಬಗ್ಗೆ ಆಗಲಿ, ಆಕೆಯ ಸಂಸಾರದ ಬಗ್ಗೆ ಆಗಲಿ ವಿಚಾರಗಳನ್ನು ಮಾಡಲು ಶುರು ಮಾಡುತ್ತಾರೆ. ಮಗಳನ್ನು ಬೇಗನೆ ಮದುವೆ ಮಾಡಿ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಾರೆ. ಆದ್ರೆ ನಾವು ಇವತ್ತು ಅವರ ಆಸೆಯ ಬಗ್ಗೆ ಯಾವತ್ತು ವಿಚಾರ ಮಾಡಲ್ಲಾ. ಹಾಗಾಗಿ ಹೆಣ್ಣು ಮಕ್ಕಳನ್ನು ಅವರ ಆಸೆಗೆ ತಕ್ಕಂತ್ತೆ ಬದುಕಲು ಬಿಡಿ.

ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರು ಜಾಣರು
ಇಂದು ಮಹಿಳೆ ಹಲವು ಕ್ಷೇತ್ರದಲ್ಲಿ ಮುಂದುವರೆದಿದ್ದಾಳೆ. ಇಡೀ ಮನೆಯ ಜವಾಬ್ದಾರಿಯನ್ನೆ ಹೊತ್ತುಕೊಂಡಿರುವ ಮಹಿಳೆ ಹಣಕಾಸು ನಿರ್ವಹಣೆಯಲ್ಲಿಯೂ ಕೂಡ ಎತ್ತಿದಕೈ. ಹಾಗಾಗಿ ಮಹಿಳೆಯನ್ನು ಹಣಕಾಸು ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಮಹಿಳೆ ಕೂಡ ಸಬಲವಾಗಿದ್ದಾಳೆ. ಹಾಗಾಗಿ ಮಹಿಳೆಗೆ ಹಣಕಾಸು ಜವಾಬ್ದಾರಿಯನ್ನು ನೀಡುವುದು ಕುಟುಂಬದಲ್ಲಿ ಪ್ರಾಥಮಿಕ ಅಂಶವಾಗಿದೆ.

ಆಕೆಯ ಸಾಧನೆಗೆ ಯಾವತ್ತು ಅಡ್ಡ ಬರಬೇಡಿ
ಇವತ್ತು ನಾವು ಮಹಿಳೆಯ ಸಾಧನೆ ಬಗ್ಗೆ ಅರಿತಿದ್ರೂ ಕೂಡ ನಾವು ನಮ್ಮ ಹೆಣ್ಣು ಮಕ್ಕಳ ಸಾಧನೆಗೆ ಅಡೆತಡೆ ಉಂಟು ಮಾಡುತ್ತಲೇ ಇದ್ದೇವೆ. ಸಾಧನೆಗೆ ಯಾವತ್ತು ಲಿಂಗ ಪ್ರಾಮುಖ್ಯತೆ ಪಡೆಯಲ್ಲಾ. ಇಲ್ಲಿ ಹೆಣ್ಣಾಗಲಿ ಗಂಡಾಗಲಿ ಸಾಧನೆಯ ಯಾರು ಮಾಡಿದ್ದಾರೆ ಎಂಬುದು ಮುಖ್ಯವಾಗಿರತ್ತದೆ. ಹಾಗಾಗಿ ಇವತ್ತು ನಾವು ನಮ್ಮ ಮಕ್ಕಳನ್ನು ಚೆನ್ನಾಗಿ ವಿದ್ಯೆ ಕಲಿಸಿ ಆಕೆಯನ್ನು ಸಾಧನೆಗೈಯಲ್ಲು ಪ್ರೋತ್ಸಾಹಿಸಬೇಕಾದ ಅನಿವರ‍್ಯತೆ ಇದೆ.

ಇದನ್ನೂ ಓದಿ: Viral Video: ಈ 80 ವರ್ಷದ ಅಜ್ಜಿಯ ಸಾಹಸ ನೋಡಿ ನೀವೇ ಬೆರಗಾಗಿ ಬಿಡ್ತೀರಾ! ಅಂತಿಂಥಾ ಅಜ್ಜಿ ಇವರಲ್ಲಾ

ಪುರುಷನ ಸಾಧನೆಯ ಹಿಂದೆ ಮಹಿಳೆಯ ತ್ಯಾಗವು ಕೂಡ ಇದೆ
ಹೌದು ಒಬ್ಬ ಮನುಷ್ಯ ಸಾಧನೆ ಮಾಡಿದ್ದಾನೆ ಅಂದ್ರೆ ಸಾಧನೆಯ ಹಿಂದೆ ಹೆಣ್ಣಿನ ಕೈವಾಡ ಇರುತ್ತೆ ಎಂಬುದು ನಾವು ನೀವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಅಷ್ಟೊಂದು ತ್ಯಾಗ ಮಾಡಿದ ಆ ಹೆಣ್ಣು ಸಾಧನೆ ಮಾಡುವ ಛಲವು ಕೂಡ ಹೊಂದಿದ್ದಾಳೆ ಎಂಬುದು ಮರೆಯಬಾರದು. ಇನ್ನು ಮಹಿಳೆಯ ಸಾಧನೆ ಇಡೀ ಆಕೆಯ ಮನೆತನವನ್ನೆ ಸಮಾಜ ಗುರುತಿಸುವಂತೆ ಮಾಡುತ್ತದೆ.

ಒಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಜ್ಞಾನವನ್ನು ನೀಡಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಲು ಪ್ರೋತ್ಸಾಹಿಸಬೇಕು. ಜೊತೆಗೆ ಅವರು ಮಾಡಿದ ತಪ್ಪುಗಳ ಬಗ್ಗೆ ಅರಿವು ಮೂಡಿಸಿ, ಸ್ವತಂತ್ರವಾಗಿ ಬದುಕಲು ಬೀಡಬೇಕು.
Published by:Ashwini Prabhu
First published: