Mysore Silk Sarees: ಮೈಸೂರು ಸಿಲ್ಕ್ ಸೀರೆಯ ಇತಿಹಾಸ ಗೊತ್ತಾ? ಮೈಸೂರು ಸಿಲ್ಕ್ ಯಾಕೆ ಅಷ್ಟೊಂದು ದುಬಾರಿ?

Mysore Silk Sarees History: ಮೈಸೂರು ರೇಷ್ಮೆ ಎನ್ನುವ ಹೆಸರು ಮೈಸೂರಿನ ಪರಂಪರೆಗೆ ತಕ್ಕುದಾದ ಗೌರವ. ಈ ರಾಜ ಪರಂಪರೆಯನ್ನು ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಕಳೆದ ಒಂಬತ್ತು ದಶಕಗಳಿಂದ ಕಾಯ್ದುಕೊಳ್ಳುತ್ತಾ ಹೆಮ್ಮೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೆಣ್ಣು(Women) ಮಕ್ಕಳಿಗೆ ಸೀರೆ (Saree)ಅಂದ್ರೆ ಅಚ್ಚು ಮೆಚ್ಚು. ಅದ್ರಲ್ಲೂ ರೇಷ್ಮೆ ಸೀರೆ ಅಂದ್ರೆ ಮಹಿಳೆಯರ ಪಾಲಿಗೆ ಏನೋ ಹಿಗ್ಗು. ಅದರಲ್ಲೂ ನಮ್ಮ ಭಾಗದ ಮೈಸೂರು ಸಿಲ್ಕ್ ಸೀರೆ(Mysore Silk),   ನೀರೆಯರಿಗೆ ಭವ್ಯ ಪಾರಂಪರಿಕ ಉಡುಗೆಯ (Clothes)ಪ್ರತೀಕ ಎಂದೇ ಭಾವನೆ.  ಇತ್ತೀಚೆಗೆ ವಿದೇಶಿಗರಿಗೂ ಸೀರೆ ಉಡುಗೆಗೆ ಆಕರ್ಷಿತರಾಗುತ್ತಿದ್ದಾರೆ.  ಇದರಿಂದಾಗಿಯೇ ಮೈಸೂರು ಸಿಲ್ಕ್ ಸೀರೆಗಳು ವಿದೇಶಗಳಲ್ಲಿ(Foreign) ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿವೆ.  ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ.  ಭಾರತೀಯ ಮಹಿಳೆಯರಿಗೆ ಸೀರೆ ಎಂದರೆ ಅಚ್ಚು-ಮೆಚ್ಚು, ಮದುವೆ(Marriage) ಮುಂತಾದ ಶುಭ ಕಾರ್ಯಗಳಲ್ಲಿ ರೇಷ್ಮೆ ಸೀರೆ ಉಡುಗೆಗೆ ಅಗ್ರಸ್ಥಾನ.

  ಎರಡು ಹೆಸರಿನ ಸೀರೆ ತುಂಬಾ ಫೇಮಸ್

  ನಮ್ಮ ದೇಶದಲ್ಲಿ ರೇಷ್ಮೆ ಎಂದರೆ ಎರಡು ಹೆಸರು ಕಣ್ಣೆದುರು ಕಾಣಿಸಿಕೊಳ್ಳುತ್ತದೆ. ಕಾಂಜೀವರಂ ಹಾಗೂ ಮೈಸೂರು ಜಗತ್ತಿನ ಮೂಲೆ ಮೂಲೆಯಲ್ಲೂ ಗುಣಮಟ್ಟದ ರೇಷ್ಮೆಗೆ ಹೆಸರುವಾಸಿ.

  ಮೈಸೂರು ರೇಶಿಮೆ ಇಂದು ಜಗತ್ತಿನಲ್ಲಿ ಮಣ್ಣನ್ನೇ ಸಿಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತವೇ ಕಾರಣ ಎನ್ನಬೇಕು. ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನನಿಗೆ ಸಲ್ಲಬೇಕು ಆದರೆ ಅದಕ್ಕೊಂದು ಉದ್ಯಮದ ಮಾನ್ಯತೆ ದೊರಕಿಸಿಕೊಟ್ಟವರು ನಾಲ್ವಡಿಯವರು.

  ಇದನ್ನೂ ಓದಿ: ನೀವು ತೆಳ್ಳಗಿದ್ರೆ ಈ ಬಟ್ಟೆಗಳು ಸ್ಟೈಲಿಶ್​ ಲುಕ್​ ನೀಡುತ್ತೆ

  ಮೈಸೂರು ಸಿಲ್ಕ್ ಇತಿಹಾಸ

  ಮೈಸೂರು ಸಿಲ್ಕ್ ಸೀರೆಯ ಉಗಮದ ಕುರಿತು ಚರಿತ್ರೆಯನ್ನು ಅವಲೋಕಿಸಿದರೆ ಮೊತ್ತಮೊದಲು ಕ್ರಿಸ್ತಶಕ 1780-1790ರ ಸಮಯದಲ್ಲಿ ಟಿಪ್ಪು ಸುಲ್ತಾನನ ಕಾಲದಲ್ಲಿ ಇದರ ಆರಂಭವಾಯಿತು. ಆದರೆ ತದನಂತರ ವಿದೇಶಗಳಿಂದ ಆಮದಾಗುವ ವಿವಿಧ ರೇಶ್ಮೆ ಹಾಗೂ ರೆಯಾನ್‌ ಬಟ್ಟೆಗಳೇ ಆದ್ಯತೆ ಹಾಗೂ ಜನಪ್ರಿಯತೆ ಪಡೆದುದರಿಂದ, ಮೈಸೂರು ಸಿಲ್ಕ್ ನ ತಯಾರಿ ಹಾಗೂ ಜನಪ್ರಿಯತೆ ಅತೀವವಾಗಿ ಕುಗ್ಗಿತು.

  ತದನಂತರದ ಕಾಲದಲ್ಲಿ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ಪುನಃ ಜನಪ್ರಿಯತೆಯ ಉತ್ತುಂಗ ತಲುಪಿದ ಈ ಸೀರೆಗಳು ಇಂದಿಗೂ ಅದೇ ರೀತಿಯ ಬೇಡಿಕೆಯನ್ನು ಪಡೆದಿದೆ.

  ಆರಂಭದಲ್ಲಿ “ಮೈಸೂರು ಸಿಲ್ಕ್ ಫ್ಯಾಕ್ಟರಿ’ಯಲ್ಲಿ 1912ರಲ್ಲಿ ಮೈಸೂರು ಮಹಾರಾಜರ ಆಸಕ್ತಿ ಹಾಗೂ ಒಲುಮೆಯಿಂದ ಆರಂಭವಾಗಿ (1932)ರಲ್ಲಿ ಅಧಿಕ ತಯಾರಿ ಶುರುವಾಯಿತು.

  ಮಹಾರಾಜರು 32 ಹ್ಯಾಂಡ್‌ಲೂಮ್‌ಗಳನ್ನು ಸ್ವಿಜರ್‌ಲ್ಯಾಂಡ್‌ನಿಂದ ಆಮದು ಮಾಡಿಸಿದ್ದರು. ಆ ಕಾಲದಲ್ಲಿ ಇದು ಇಡೀ ಭಾರತದಲ್ಲಿಯೇ ಪ್ರಥಮ ವಿಶೇಷತೆಯಾಗಿತ್ತು.

  ಯಂತ್ರ ತರಿಸಿದ್ದು ಯಾಕೆ..?

  1912ರಲ್ಲಿ ಬ್ರಿಟನ್ನಲ್ಲಿ ನಡೆದ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತೆರಳಿದ್ದರು. ಆಗ ಅಲ್ಲಿನ ರಾಜ ಮನೆತನದವರು ಧರಿಸಿದ್ದ ಯಂತ್ರ ನಿರ್ಮಿತ ರೇಷ್ಮೆ ವಸ್ತ್ರಗಳು ಅವರ ಗಮನಸೆಳೆಯಿತು.

  ಇದನ್ನು ಮೈಸೂರಿನಲ್ಲೇ ಏಕೆ ತಯಾರಿಸಬಾರದು ಎಂದು ಆಲೋಚಿಸಿದ ಅವರು ಆ ಕುರಿತಂತೆ ಮಾಹಿತಿ ಪಡೆದು, ಸ್ವಿಟ್ಜರ್ಲ್ಯಾಂಡ್ ನಿಂದ 23 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡು, ರೇಷ್ಮೆ ಸೀರೆ ತಯಾರಿಸುವ ಕಾರ್ಖಾನೆಗೆ ಚಾಲನೆ ನೀಡಿದರು.

  ಆರಂಭದಲ್ಲಿ ಮೈಸೂರು ಸಿಲ್ಕ್ ಸೀರೆಯ ತಯಾರಿ ಕೇವಲ ರಾಜಮನೆತನದ ಬಳಕೆಗಾಗಿ ಮೀಸಲಾಗಿತ್ತು. ತದನಂತರ ರಾಜ್ಯಾಡಳಿತದ ಪ್ರಧಾನರ ಬಳಕೆಗಾಗಿ ಮೈಸೂರು ಸಿಲ್ಕ್ ಸೀರೆಗಳ ತಯಾರಿ ಅಧಿಕವಾಗಿ ತಯಾರಾಗಲು ಪ್ರಾರಂಭವಾಯಿತು.

  ಸ್ವಾತಂತ್ರ್ಯಾನಂತರ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ (ಓಖಐಇ) ಹೆಸರಿನಲ್ಲಿ 1980ರಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ, ವಿಶ್ವಬ್ಯಾಂಕ್‌ನ ಸಹಯೋಗಿತ್ವದೊಂದಿಗೆ ಬಹು ಜನಪ್ರಿಯವಾಯಿತು

  ಶುದ್ಧ ಚಿನ್ನದ ಜರಿ ಸೀರೆಗಳು

  ಕರ್ನಾಟಕವು ತನ್ನ ರಾಜಮನೆತನದ ಪರಂಪರೆ ಹಾಗೂ ವೈಭವದಿಂದ ಶ್ರೀಮಂತವಾಗಿದೆ. ಹಾಗಾಗಿ ಇಲ್ಲಿ ಉತ್ಪಾದಿಸಲಾಗುವ ರೇಷ್ಮೆ ತನ್ನ ಶ್ರೀಮಂತ ಹಾಗೂ ನಾಜೂಕಾದ ಜರಿತಾರೆಗಳ ಮೂಲಕ ಕರ್ನಾಟಕ ಪಾರಂಪರಿಕ ವೈಭವವನ್ನು ಪ್ರತಿಫಲಿಸುತ್ತದೆ.

  ಮೈಸೂರು ರೇಷ್ಮೆ ಎನ್ನುವ ಹೆಸರು ಮೈಸೂರಿನ ಪರಂಪರೆಗೆ ತಕ್ಕುದಾದ ಗೌರವ. ಈ ರಾಜ ಪರಂಪರೆಯನ್ನು ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಕಳೆದ ಒಂಬತ್ತು ದಶಕಗಳಿಂದ ಕಾಯ್ದುಕೊಳ್ಳುತ್ತಾ ಹೆಮ್ಮೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದೆ.

  ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯನ್ನು ಉತ್ಪಾದಿಸುತ್ತಾ ಬಂದಿರುವ ಕೆಎಸ್ಐಸಿ , ರೇಷ್ಮೆ ನೂಲು ತೆಗೆಯುವುದರಿಂದ ಮೊದಲ್ಗೊಂಡು ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಶುದ್ಧ ರೇಷ್ಮೆ ಬಟ್ಟೆಯನ್ನು ನೇಯುವಲ್ಲಿ ಕೆಎಸ್ಐಸಿ ದೇಶದಲ್ಲೇ ಏಕಮಾತ್ರ ಸಂಸ್ಥೆ.

  115 ಬಗೆಯ 300ಕ್ಕೂ ಸೀರೆಗಳ ಮಾದರಿ

  ಶತಮಾನ ಪೂರೈಸಿ ಮುನ್ನುಗ್ಗುತ್ತಿರುವ ರೇಷ್ಮೆ ಕಾರ್ಖಾನೆ ಈಗ ತಿಂಗಳಿಗೆ 32,000 ಮೀಟರ್ ರೇಷ್ಮೆಯನ್ನು ನೇಯ್ದು ಗುಣಮಟ್ಟದ ಸೀರೆಯನ್ನು ಉತ್ಪಾದಿಸುತ್ತಿದೆ. ಇನ್ನು ಮೈಸೂರು ಸಿಲ್ಕ್ ಸೀರೆಯು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ.

  ಈ ಸೀರೆಯ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುವುದು ವಿಶೇಷವಾಗಿದ್ದು, ಇಲ್ಲಿ ಕುಸುರಿ ವಿನ್ಯಾಸ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಇಲ್ಲಿ ತಯಾರಾಗುತ್ತಿರುವುದು ಪ್ರಮುಖವಾಗಿದೆ.

  ಮೈಸೂರು ಸಿಲ್ಕ್ ಸೀರೆ ಸ್ವಚ್ಛ ಮಾಡುವುದು ಹೇಗೆ..?

  ಸಾಂಪ್ರದಾಯಕ ಮೈಸೂರು ರೇಷ್ಮೆ ಸೀರೆಗಳನ್ನು ಕಾಪಾಟಿನಲ್ಲಿ ಇತರೆ ಬಟ್ಟೆಗಳೊಂದಿಗೆ ಇಡಬೇಡಿ. ಒಂದೊಂದು ರೇಷ್ಮೆ ಸೀರೆಯನ್ನು ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿ ಇಡಿ. ಉತ್ತರಿ ಬಿಸಿಲಿಗೆ ಸೀರೆಗಳನ್ನು ಒಣಗಿಸಿ. ಆಗಾಗ ಮಡಿಕೆಗಳನ್ನು ಬದಲಾಯಿಸೋದನ್ನ ಮರೆಯಬೇಡಿ.

  ಇಲ್ಲದಿದ್ದರೆ ಸೀರೆ ಇಟ್ಟಲ್ಲಿಯೇ ಕಟ್‌ ಆಗುವ ಅಥವಾ ಹರಿದುಹೋಗಬಹುದು. ರೇಷ್ಮೆ ಸೀರೆ ಇರುವ ಕಪಾಟಿನಲ್ಲಿ ಸಿಲಿಕಾ ಬ್ಯಾಗ್‌ಗಳನ್ನು ಇರಿಸಿ ಇದರಿಂದಾಗಿ ತೇವಾಂಶ ಆಗುವುದಿಲ್ಲ.

  ಇದನ್ನೂ ಓದಿ: ಕಿತ್ತಳೆ ಸಿಪ್ಪೆಯಿಂದ ರೆಡಿ ಆಯ್ತು ಹ್ಯಾಂಡ್ ಬ್ಯಾಗ್: ಫ್ಯಾಷನ್ ಪ್ರಿಯರು ಫಿದಾ!

  ನಾಲ್ಕೈದು ತಿಂಗಳಿಗೊಮ್ಮೆ ರೇಷ್ಮೆ ಮೈಸೂರು ಸಿಲ್ಕ್ ರೇಷ್ಮೆ ಸೀರೆಯನ್ನ ಬಿಸಿಲಿನಲ್ಲಿ ಒಣಗಿಸಿ ಮಡಚಿಡಬೇಕು.ತೇವಾಂಶ ಹೆಚ್ಚು ಇರುವಂತಹ ಪ್ರದೇಶದಲ್ಲಿ ಕನಿಷ್ಠ ಎರಡು-ಮೂರು ತಿಂಗಳಿಗೊಮ್ಮೆಯಾದರೂ ನೆರಳಿನಲ್ಲಿ ಒಣಗಿಸಬೇಕು. ಇನ್ನು ನೀರಿನಲ್ಲಿ ತೊಳೆದಾಗ ತಂತಿಗಳಿಗೆ ಇಳಿಬಿಡುವ ಬದಲು ನೆಲದ ಮೇಲೆಯೇ ಹಾಕಿ ಒಣಗಿಸಬೇಕು.
  Published by:ranjumbkgowda1 ranjumbkgowda1
  First published: