HOME » NEWS » Explained » FALLING SPERM COUNTS THREATEN HUMAN SURVIVAL EXPERT WARNS STG MAK

2045 ರ ಬಳಿಕ ನಾಶವಾಗಲಿದ್ಯಾ ಮಾನವ ಕುಲ: ಈ ತಜ್ಞೆಯ ಎಚ್ಚರಿಕೆಯ ಹಿಂದಿರುವ ಕಾರಣ ನೀವ್ ನೋಡ್ಲೇಬೇಕು..!

1973 ಮತ್ತು 2011 ರ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೀರ್ಯಾಣುಗಳ ಸಂಖ್ಯೆ 59% ರಷ್ಟು ಕುಸಿದಿದೆ ಮತ್ತು ಜಾಗತಿಕವಾಗಿ ಇದು ಗಮನ ಸೆಳೆಯುತ್ತಿದೆ ಎಂದು 2017 ರಲ್ಲಿ ಅಧ್ಯಯನವೊಂದರಲ್ಲಿ ಹೇಳಲಾಗಿತ್ತು.

news18-kannada
Updated:February 26, 2021, 6:25 PM IST
2045 ರ ಬಳಿಕ ನಾಶವಾಗಲಿದ್ಯಾ ಮಾನವ ಕುಲ: ಈ ತಜ್ಞೆಯ ಎಚ್ಚರಿಕೆಯ ಹಿಂದಿರುವ ಕಾರಣ ನೀವ್ ನೋಡ್ಲೇಬೇಕು..!
ಪ್ರಾತಿನಿಧಿಕ ಚಿತ್ರ.
  • Share this:
ಜಗತ್ತಿನಲ್ಲಿ ಸದ್ಯ ಜನಸಂಖ್ಯೆ ಅಂದಾಜು 780 ಕೋಟಿಗೂ ಅಧಿಕವಿದೆ. ಈಗಾಗಲೆ ಜನಸಂಖ್ಯಾ ಸ್ಫೋಟವಾಗುತ್ತಿದೆ. ಈ ಹಿನ್ನೆಲೆ ಜನಸಂಖ್ಯೆ ಕಡಿಮೆ ಮಾಡಲು ಹಲವು ಕ್ರಮ ಕೈಗೊಳ್ಳಬೇಕು ಎಂಬ ಬಲವಾದ ವಾದಗಳಿವೆ. ಈ ನಿಟ್ಟಿನಲ್ಲಿ ಒಂದು - ಮಗು ನೀತಿ ಜಾರಿಗೆ ತಂದಿದ್ದ ಚೀನಾದಲ್ಲಿ ಪುರುಷ - ಮಹಿಳೆಯರ ಲಿಂಗಾನುಪಾತದಲ್ಲಿ ಹೆಚ್ಚು ವ್ಯತ್ಯಾಸ ಹಾಗೂ ವಯಸ್ಸಾದವರ ಜನಸಂಖ್ಯೆ ಹೆಚ್ಚುತ್ತಿರುವ ವರದಿಗಳನ್ನು ಇತ್ತೀಚೆಗೆ ನೀವು ಓದಿರುತ್ತೀರಾ. ಆದರೆ, ಮಾನವ ಜನಾಂಗದ ಉಳಿವಿಗೆ ಅಪಾಯ ಎಂದು ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞರೊಬ್ಬರು ಎಚ್ಚರಿಸಿದ್ದಾರೆ. ಇದು ಹೇಗೆ ಅಂತ ನೀವೂ ಅಚ್ಚರಿಗೊಳಗಾದ್ರಾ..? ಈ ವರದಿ ಓದಿ.

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಲೈಂಗಿಕ ಬೆಳವಣಿಗೆಯ ಬದಲಾವಣೆಗಳಿಂದ “ಮಾನವನ ಉಳಿವಿಗೆ ಅಪಾಯವನ್ನುಂಟುಮಾಡುತ್ತವೆ” ಹಾಗೂ ಫಲವತ್ತತೆ ಬಿಕ್ಕಟ್ಟಿಗೆ ಕಾರಣವಾಗುತ್ತವೆ ಎಂದು ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆಯೊಬ್ಬರು ಎಚ್ಚರಿಸಿದ್ದಾರೆ.

ಹೊಸ ಪುಸ್ತಕವೊಂದರಲ್ಲಿಈ ಬಗ್ಗೆ ಬರೆದಿರುವ ಅಮೆರಿಕದ ನ್ಯೂಯಾರ್ಕ್ನ ಮೌಂಟ್ ಸಿನಾಯ್ನಲ್ಲಿರುವ ಐಕಾನ್ ಸ್ಕೂಲ್ ಆಫ್ ಮೆಡಿಸಿನ್ನ ಪರಿಸರ ಮತ್ತು ಸಂತಾನೋತ್ಪತ್ತಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಶನ್ನಾ ಸ್ವಾನ್ ಈ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ಫಲವತ್ತತೆ ಬಿಕ್ಕಟ್ಟು, ಹವಾಮಾನ ಬಿಕ್ಕಟ್ಟಿನೊಂದಿಗೆ ಹೋಲಿಸಬಹುದಾದ ಜಾಗತಿಕ ಬೆದರಿಕೆಯನ್ನು ಒಡ್ಡುತ್ತದೆ ಎಂದು ಆಕೆ ಎಚ್ಚರಿಸಿದ್ದಾರೆ.

"ಪ್ರಸ್ತುತ ಸಂತಾನೋತ್ಪತ್ತಿ ವ್ಯವಹಾರಗಳು ಮಾನವನ ಉಳಿವಿಗೆ ಬೆದರಿಕೆಯಿಲ್ಲದೆ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ" ಎಂದು ಆಕೆ ಕೌಂಟ್ ಡೌನ್ನಲ್ಲಿ ಬರೆಯುತ್ತಾರೆ.

1973 ಮತ್ತು 2011 ರ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೀರ್ಯಾಣುಗಳ ಸಂಖ್ಯೆ 59% ರಷ್ಟು ಕುಸಿದಿದೆ ಮತ್ತು ಜಾಗತಿಕವಾಗಿ ಇದು ಗಮನ ಸೆಳೆಯುತ್ತಿದೆ ಎಂದು 2017 ರಲ್ಲಿ ಅಧ್ಯಯನವೊಂದರಲ್ಲಿ ಹೇಳಲಾಗಿತ್ತು. ಅದರ ಸಹ - ಲೇಖಕಿಯಾಗಿದ್ದರು ಶನ್ನಾ ಸ್ವಾನ್. ಈಗ, ಸ್ವಾನ್ ಹೇಳುವಂತೆ, ಪ್ರಸ್ತುತ ಅಂದಾಜಿನ ಪ್ರಕಾರ ಸರಾಸರಿ ವೀರ್ಯಾಣುಗಳ ಸಂಖ್ಯೆ 2045 ರಲ್ಲಿ ಶೂನ್ಯವನ್ನು ತಲುಪಲಿದೆ. “ಅದು ಸ್ವಲ್ಪ ಮಟ್ಟಿಗಾದರೂ, ಕಳವಳಕಾರಿಯಾಗಿದೆ'' ಎಂದು ಸ್ವಾನ್ ಆ್ಯಕ್ಸಿಯೋಸ್ಗೆ ಹೇಳಿದಳು.

ಆಧುನಿಕ ಜೀವನವು ವೀರ್ಯದ ಸಂಖ್ಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ, ಆತಂಕಕಾರಿಯಾಗಿದೆ ಹಾಗೂ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಬೆಳವಣಿಗೆಯನ್ನು ಬದಲಾಯಿಸುತ್ತಿದೆ ಮತ್ತು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ ಎಂದು ಸ್ವಾನ್ ಹಾಗೂ ಮತ್ತೊಬ್ಬರು ಸಹ ಲೇಖಕಿ ಸ್ಟೇಸಿ ಕೊಲಿನೊ ಪುಸ್ತಕದಲ್ಲಿ ಅನ್ವೇಷಿಸಿದ್ದಾರೆ.

ಇದು ಮಾನವನ ಲೈಂಗಿಕ ಬೆಳವಣಿಗೆ ಹಾಗೂ ಫಲವತ್ತತೆಗೆ ಬದಲಾಗುತ್ತಿರುವ ಮತ್ತು ಬೆದರಿಕೆ ಹಾಕುತ್ತಿರುವ ಜೀವನಶೈಲಿ ಹಾಗೂ ರಾಸಾಯನಿಕ ಮಾನ್ಯತೆಗಳನ್ನು ಸೂಚಿಸುತ್ತದೆ. ಮಾನವರು ಅಳಿವಿನಂಚಿನಲ್ಲಿರುವ ಪ್ರಭೇದವಾಗಬಹುದು ಎಂದು ಪುಸ್ತಕದಲ್ಲಿ ಎಚ್ಚರಿಸಿದ್ದಾರೆ.“ಒಂದು ಪ್ರಭೇದ ಅಳಿವಿನಂಚಿನಲ್ಲಿದೆ ಎನ್ನಲು ಐದು ಸಂಭಾವ್ಯ ಮಾನದಂಡಗಳಲ್ಲಿ, ಒಂದನ್ನು ಮಾತ್ರ ಪೂರೈಸಬೇಕಾಗಿದೆ. ಆದರೆ, ಮಾನವ ಕುಲದ ಪ್ರಸ್ತುತ ಸ್ಥಿತಿಯು ಕನಿಷ್ಠ ಮೂರನ್ನು ಪೂರೈಸುತ್ತದೆ'' ಎಂದು ಸ್ವಾನ್ ಬರೆಯುತ್ತಾರೆ. ಹಾನಿಕಾರಕ ರಾಸಾಯನಿಕಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಸ್ವಾನ್ ಈ ಪುಸ್ತಕದಲ್ಲಿ ಸಲಹೆ ನೀಡಿದ್ದು, "ನಮ್ಮ ಫಲವತ್ತತೆ, ಮಾನವಕುಲದ ಭವಿಷ್ಯ ಮತ್ತು ಗ್ರಹ (ಭೂಮಿ) ಕಾಪಾಡಲು ನಾವು ಏನು ಮಾಡಬೇಕೆಂದು" ಜನರಿಗೆ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ದೇಶಿಯ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ; ಚೆಕ್-ಇನ್ ಬ್ಯಾಗೇಜ್ ಇಲ್ಲದವರಿಗೆ ಶುಲ್ಕ ರಿಯಾಯಿತಿ!

1964 ಮತ್ತು 2018 ರ ನಡುವೆ ಜಾಗತಿಕ ಫಲವತ್ತತೆ ದರವು ಪ್ರತಿ ಮಹಿಳೆಗೆ 5.06 ಜನನಗಳಿಂದ 2.4 ಕ್ಕೆ ಇಳಿದಿದೆ. ಈಗ ವಿಶ್ವದ ಅರ್ಧದಷ್ಟು ದೇಶಗಳು ಜನಸಂಖ್ಯೆ ಬದಲಿ ಮಟ್ಟವಾದ ಫಲವತ್ತತೆ ಪ್ರಮಾಣವನ್ನು 2.1 ಕ್ಕಿಂತ ಕಡಿಮೆ ಹೊಂದಿವೆ. ಗರ್ಭನಿರೋಧಕ, ಸಾಂಸ್ಕೃತಿಕ ಬದಲಾವಣೆಗಳು ಮತ್ತು ಮಕ್ಕಳನ್ನು ಹೊಂದುವ ವೆಚ್ಚವು ಕಾರಣವಾಗುವ ಸಾಧ್ಯತೆಗಳಿದ್ದರೂ, ಗರ್ಭಪಾತದ ಪ್ರಮಾಣ ಹೆಚ್ಚಾಗಿರುವುದು, ಹುಡುಗರಲ್ಲಿ ಹೆಚ್ಚು ಜನನಾಂಗದ ವೈಪರೀತ್ಯಗಳು ಮತ್ತು ಹುಡುಗಿಯರಿಗೆ ಚಿಕ್ಕ ವಯಸ್ಸಿಗೆ ಪ್ರೌಢಾವಸ್ಥೆ ಸೇರಿದಂತೆ ಜೈವಿಕ ಕಾರಣಗಳೂ ಇವೆ ಎಂಬ ಸೂಚಕಗಳ ಬಗ್ಗೆ ಸ್ವಾನ್ ಎಚ್ಚರಿಸಿದ್ದಾರೆ.
Youtube Video

ಪ್ಲಾಸ್ಟಿಕ್, ಸೌಂದರ್ಯವರ್ಧಕಗಳು ಮತ್ತು ಕೀಟನಾಶಕಗಳು ಸೇರಿ ಎಲ್ಲೆಂದರಲ್ಲಿ ಬರೀ ರಾಸಾಯನಿಕಗಳು ಕಂಡುಬರುತ್ತಿರುವುದನ್ನು ದೂಷಿಸಿದ ಸ್ವಾನ್, ಇದರಿಂದ ಎಂಡೋಕ್ರೈನ್ಗಳಾದ ಥಾಲೇಟ್ಗಳು ಮತ್ತು ಬಿಸ್ಫೆನಾಲ್-ಎ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. "ನಮ್ಮ ಪರಿಸರದಲ್ಲಿನ ರಾಸಾಯನಿಕಗಳು ಮತ್ತು ನಮ್ಮ ಆಧುನಿಕ ಜಗತ್ತಿನಲ್ಲಿ ಅನಾರೋಗ್ಯಕರ ಜೀವನಶೈಲಿ ಅಭ್ಯಾಸಗಳು ನಮ್ಮ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತಿದ್ದು, ವಿವಿಧ ಹಂತದಲ್ಲಿ ಸಂತಾನೋತ್ಪತ್ತಿಗೆ ಹಾನಿಯನ್ನುಂಟುಮಾಡುತ್ತವೆ" ಎಂದು ಅವರು ಬರೆಯುತ್ತಾರೆ. ಅಲ್ಲದೆ, ತಂಬಾಕು, ಧೂಮಪಾನ, ಗಾಂಜಾ ಮತ್ತು ಹೆಚ್ಚುತ್ತಿರುವ ಬೊಜ್ಜು ಮುಂತಾದ ಅಂಶಗಳು ಸಹ ವೀರ್ಯ ಪ್ರಮಾಣ ಕಡಿಮೆ ಮಾಡಲು ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
Published by: MAshok Kumar
First published: February 26, 2021, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories