• Home
  • »
  • News
  • »
  • explained
  • »
  • Fake Employment Scam: ಕೆಲ್ಸ ಹುಡುಕಿ ವಿದೇಶಕ್ಕೆ ಹೋಗೋ ಮುನ್ನ ಹುಷಾರ್, ಮಯನ್ಮಾರ್‌ನಲ್ಲಿ ನರಕ ಅನುಭವಿಸಿ ಬಂದ ಭಾರತೀಯರು!

Fake Employment Scam: ಕೆಲ್ಸ ಹುಡುಕಿ ವಿದೇಶಕ್ಕೆ ಹೋಗೋ ಮುನ್ನ ಹುಷಾರ್, ಮಯನ್ಮಾರ್‌ನಲ್ಲಿ ನರಕ ಅನುಭವಿಸಿ ಬಂದ ಭಾರತೀಯರು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದೇಶದ ಉದ್ಯೋಗ ವ್ಯಾಮೋಹಕ್ಕೆ ಬಲಿಯಾಗಿ ಅದೆಷ್ಟೋ ಯುವ ಜನರು ನಕಲಿ ಉದ್ಯೋಗ ದಂಧೆಯ ಜಾಲದಲ್ಲಿ ಬಂಧಿಯಾಗಿದೆ. ಥಾಯ್ಲೆಂಡ್‌ನಲ್ಲಿ ಉದ್ಯೋಗ ನೀಡುವುದಾಗಿ ಅಂತಾರಾಷ್ಟ್ರೀಯ ಗ್ಯಾಂಗ್‌ಗಳು ಭಾರತೀಯ ಪ್ರಜೆಗಳನ್ನು ವಂಚಿಸಿ ನಂತರ ಮಯನ್ಮಾರ್‌ಗೆ ಅಕ್ರಮವಾಗಿ ಕರೆದೊಯ್ಯಲಾಗುತ್ತದೆ ಎಂಬುದು ಇದೀಗ ಬಯಲಾಗಿದೆ. ಈ ಜಾಲದಿಂದ ರಕ್ಷಿಸಲಾದ ತಮಿಳುನಾಡಿನ 13 ಜನರಲ್ಲಿ ಕೊಯಂಬತ್ತೂರಿನ ಟೆಕ್ಕಿ ಸ್ಟೀಫನ್ ವೆಸ್ಲಿ ಕಚೇರಿಗಳಲ್ಲಿ ನೀಡುತ್ತಿದ್ದ ಹಿಂಸೆಯನ್ನು ಯಥಾವತ್ತಾಗಿ ಹೇಳಿ ಕೊಂಡಿದ್ದಾರೆ!

ಮುಂದೆ ಓದಿ ...
  • Share this:

ಮಯನ್ಮಾರ್‌ನಲ್ಲಿ (Myanmar) ಒತ್ತೆಯಾಳಾಗಿ ಸಿಲುಕಿಕೊಂಡು ಇದೀಗ ಭಾರತಕ್ಕೆ (India) ಮರಳಿರುವ 800 ಕ್ಕೂ ಹೆಚ್ಚು ಉದ್ಯೋಗಿಗಳು ವಿದೇಶದಲ್ಲಿ ಉದ್ಯೋಗ ಅರಸುವ ಯುವಜನರಿಗೆ (Youths) ಮುನ್ನೆಚ್ಚರಿಕೆಯ ಸಂದೇಶವನ್ನು ಸಾರುತ್ತಿದ್ದಾರೆ. ವಿದೇಶದ ಉದ್ಯೋಗ ವ್ಯಾಮೋಹಕ್ಕೆ ಬಲಿಯಾಗಿ ಅದೆಷ್ಟೋ ಯುವ ಜನಾಂಗ ನಕಲಿ ಉದ್ಯೋಗ ದಂಧೆ ಎಂಬ ಜಾಲದಲ್ಲಿ ಬಂಧಿಯಾಗಿದೆ. ಥಾಯ್ಲೆಂಡ್‌ನಲ್ಲಿ (Thailand) ಉದ್ಯೋಗ ನೀಡುವುದಾಗಿ ಅಂತಾರಾಷ್ಟ್ರೀಯ ಗ್ಯಾಂಗ್‌ಗಳು ಭಾರತೀಯ ಪ್ರಜೆಗಳನ್ನು (Indian Citizen) ವಂಚಿಸಿ ನಂತರ ಮಯನ್ಮಾರ್‌ಗೆ ಅಕ್ರಮವಾಗಿ ಕರೆದೊಯ್ಯಲಾಗುತ್ತದೆ ಎಂಬುದು ಇದೀಗ ಬಯಲಾಗಿದೆ. ಈ ಜಾಲದಿಂದ ರಕ್ಷಿಸಲಾದ ತಮಿಳುನಾಡಿನ 13 ಜನರಲ್ಲಿ ಕೊಯಂಬತ್ತೂರಿನ ಟೆಕ್ಕಿ ಸ್ಟೀಫನ್ ವೆಸ್ಲಿ ಕಚೇರಿಗಳಲ್ಲಿ ನೀಡುತ್ತಿದ್ದ ಹಿಂಸೆಯನ್ನು ಯಥಾವತ್ತಾಗಿ ಬಣ್ಣಿಸಿದ್ದಾರೆ.


ಈಗಲೂ ಕೂಡ ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಳ್ಳುವ ಸ್ಟೀಫನ್ ಆಗಸ್ಟ್ 15 ರಂದೇ ನಿಜವಾದ ಸ್ವಾತಂತ್ರ್ಯ ನನಗೆ ದೊರಕಿತು ಎಂಬುದಾಗಿ ಹೇಳಿಕೊಂಡಿದ್ದಾರೆ.


ಒತ್ತೆಯಾಳಾಗಿ ಇರಿಸಿಕೊಂಡಿದ್ದ ಸಂಸ್ಥೆ
800 ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳನ್ನು ಕಳ್ಳಸಾಗಣೆಯ ಪ್ರಕರಣದಲ್ಲಿ ಒತ್ತೆಯಾಳುಗಳಾಗಿದ್ದ ಕಚೇರಿಗೆ ಮಯನ್ಮಾರ್ ಸೇನಾ ಸಿಬ್ಬಂದಿಗಳು ನುಗ್ಗಿದ ಕ್ಷಣವನ್ನು ಸ್ಟೀಫನ್ ಈಗಲೂ ಭಯದಿಂದಲೇ ನೆನಪಿಸಿಕೊಳ್ಳುತ್ತಾರೆ. ಸೈಬರ್ ಅಪರಾಧವನ್ನೆಸಗುವ ಕಂಪೆನಿಗಳಲ್ಲಿ ಈ ಉದ್ಯೋಗಿಗಳನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ನಿಯೋಜಿಸಲಾಗುತ್ತಿತ್ತು ಎಂಬುದು ಸ್ಟೀಫನ್ ಮಾತಾಗಿದೆ. ಅಲ್ಲಿ ಟಾರ್ಗೆಟ್‌ಗಳನ್ನು ನೀಡಲಾಗುತ್ತಿತ್ತು ಹಾಗೆಯೇ ಟಾರ್ಗೆಟ್‌ಗಳನ್ನು ಪೂರೈಸದೇ ಇದ್ದರೆ ಎಲೆಕ್ಟ್ರಿಕ್ ಶಾಕ್ ಅನ್ನು ನೀಡುವ ಕಠೋರ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಎಂಬುದು ಸ್ಟೀಫನ್ ಹೇಳಿಕೆಯಾಗಿದೆ


ನಕಲಿ ಉದ್ಯೋಗ ದಂಧೆ ಎಂಬುದು ಈಗ ನಿರ್ಭೀತಿಯಿಂದ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯವಾಗಿದ್ದು, ಯುವಕರನ್ನೇ ಇಲ್ಲಿ ಹೆಚ್ಚಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ವಿದೇಶಕ್ಕೆ ಉದ್ಯೋಗವನ್ನರಸಿಕೊಂಡು ಹೋಗಲಿಚ್ಛಿಸುವ ಯುವಜನಾಂಗವನ್ನೇ ಈ ಜಾಲ ಟಾರ್ಗೆಟ್ ಮಾಡುತ್ತಿದ್ದು ಕೈ ತುಂಬಾ ಸಂಬಳ ನೀಡುವ ಉದ್ಯೋಗ ನೀಡುವುದಾಗಿ ಭರವಸೆ ನೀಡುತ್ತದೆ. ನಂತರ ಅವರನ್ನು ಬೇರೆ ಬೇರೆ ಕಾನೂನು ಬಾಹಿರ ಕೃತ್ಯಗಳಿಗಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: IT vs Non-IT sector: ಐದು ವರ್ಷಗಳಲ್ಲಿ ಫ್ರೆಶರ್ ಉದ್ಯೋಗಿಗಳ ವೇತನಗಳಲ್ಲಿ ಹೇಗೆ ಸುಧಾರಣೆಗಳಾಗಿವೆ? ಇಲ್ಲಿದೆ ವಿವರ


ಉದ್ಯೋಗ ನೆಪವೊಡ್ಡಿ ಇತರ ದೇಶಗಳಿಂದ ಕರೆತಂದ ಯುವಜನರಿದ್ದ ಕಚೇರಿ ಮೇಲೆ ಮಯನ್ಮಾರ್ ಸೇನೆ ದಾಳಿ ನಡೆಸಿತು ಎಂಬುದನ್ನು ಸ್ಟೀಫನ್ ಹೇಳಿದ್ದಾರೆ. 800 ಕ್ಕೂ ಹೆಚ್ಚು ಭಾರತೀಯರನ್ನು ಹಿಂಸಾತ್ಮಕವಾಗಿ ಸೈಬರ್ ಅಪರಾಧವೆನ್ನಸಗುವ ಕಂಪೆನಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಸೇನೆಯು ಬಹಳಷ್ಟು ಪ್ರಶ್ನೆಗಳನ್ನು ಕೇಳಿರುವುದಾಗಿ ಹೇಳಿಕೊಂಡಿರುವ ಸ್ಟೀಫನ್ ನಂತರ ಕಚೇರಿಗೆ ನಮ್ಮನ್ನು ಕರೆತಂದಿತು ಮುಂದೇನಾಗುತ್ತದೋ ಎಂಬ ಭಯದಲ್ಲಿ ನಾವಿದ್ದೆವು ಎಂಬ ಸನ್ನಿವೇಶವನ್ನು ಹೇಳಿಕೊಂಡಿದ್ದಾರೆ.


ಕೊರೋನಾ ಸಮಯದಲ್ಲಿ ಕೈಕೊಟ್ಟ ಉದ್ಯೋಗ
ಸ್ಟೀಫನ್ ತಮಗಾದ ಕೆಟ್ಟ ಅನುಭವವನ್ನು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದು ಮೂರು ತಿಂಗಳ ಹಿಂದೆ ಜೀವಮಾನದಲ್ಲೇ ಅತ್ಯಂತ ಕೆಟ್ಟ ಅನುಭಕ್ಕೆ ನಾನು ಸಾಕ್ಷಿಯಾದೆ ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿಕೊಂಡಿದ್ದ ಸ್ಟೀಫನ್ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದರು. ಆಗ ಕೊಯಮತ್ತೂರಿಗೆ ಮರಳಿದ ಸ್ಟೀಫನ್ ಫ್ರೀಲ್ಯಾನ್ಸ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.


ಸ್ನೇಹಿತರೊಬ್ಬರ ನೆರವಿನಿಂದ ಏಜೆನ್ಸಿಯೊಂದಕ್ಕೆ ಉದ್ಯೋಗ ಅರ್ಜಿ ಸಲ್ಲಿಸಿದ್ದರು. ಥಾಯ್ಲೆಂಡ್‌ನಲ್ಲಿದ್ದು ಉದ್ಯೋಗಕ್ಕಾಗಿ ದುಬೈನಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿತ್ತು ಅಂತೆಯೇ ಸಂದರ್ಶನದಲ್ಲಿ ಸ್ಟೀಫನ್ ಪಾಲ್ಗೊಂಡಿದ್ದರು. ಸ್ಟೀಫನ್ ಹೇಳುವಂತೆ ಸಂದರ್ಶನಕ್ಕೆ ಒಬ್ಬರು ಮಹಿಳೆ ಸೇರಿದಂತೆ ಆರು ಜನರು ಬಂದಿದ್ದರು ಎಂದಾಗಿದೆ.


ಭಯಾನಕ ದಿನಗಳ ಆರಂಭ
ಥಾಯ್ಲೆಂಡ್‌ನ ಸಂಸ್ಥೆಗೆ ನೇಮಕಗೊಂಡಿರುವುದಾಗಿ ಸಂದರ್ಶನದಲ್ಲಿ ತಿಳಿಸಲಾಯಿತು ಅಂತೆಯೇ ದುಬೈನಲ್ಲಿ ಸ್ಟೀಫನ್ ಹಾಗೂ ಇತರರು ಕೆಲವು ದಿನ ತಂಗಬೇಕಾಯಿತು. ನಂತರ ದುಬೈನಿಂದ ಬ್ಯಾಂಕಾಕ್‌ಗೆ ಕರೆತರಲಾಯಿತು ಎಂಬುದಾಗಿ ಸ್ಟೀಫನ್ ಹೇಳಿದ್ದಾರೆ. ಈ ಸಮಯದಲ್ಲಿ ಉದ್ಯೋಗಿಗಳಿಗೆ ಕೆಲಸದ ವಿಸಾ ಬದಲು ವಿಸಿಟಿಂಗ್ ವೀಸಾಗಳನ್ನು ನೀಡಲಾಯಿತು ಹಾಗೂ ಇವರನ್ನು ಬ್ಯಾಂಕಾಕ್‌ ವಿಮಾನ ನಿಲ್ದಾಣದಿಂದ ಉದ್ಯೋಗ ಸ್ಥಳಕ್ಕೆ ಕರೆದೊಯ್ಯಲು ಸ್ಥಳೀಯ ಜನರು ಬಂದಿದ್ದರು ಎಂಬುದನ್ನು ಸ್ಟೀಫನ್ ನೆನಪಿಸಿಕೊಂಡಿದ್ದಾರೆ.


ಇದನ್ನೂ ಓದಿ:  Positive Thinking: ಫೈರ್ ಆದವನನ್ನು ಒಂದೇ ದಿನಕ್ಕೆ ವಾಪಸ್‌ ಕರೆಸಿಕೊಂಡ ಕಂಪನಿ! ಕಾರಣ ಇಷ್ಟೇ


ಬ್ಯಾಂಕಾಕ್‌ನಿಂದ 450 ಕಿ.ಮೀ ದೂರದಲ್ಲಿರುವ ಮೈಸೋಟ್‌ಗೆ ಕರೆತರಲಾಯಿತು ನಂತರ ಕಾಡಿನ ಬಳಿ ಇರುವ ನದಿಯ ಬಳಿ ಇವರನ್ನು ಬಿಡಲಾಯಿತು. ನಂತರ ಸೇನಾ ಸಮವಸ್ತ್ರದಲ್ಲಿದ್ದ ಬಂದೂಕುಧಾರಿಗಳಿಗೆ ನಮ್ಮನ್ನು ಒಪ್ಪಿಸಿದರು ಎಂಬುದಾಗಿ ಸ್ಟೀಫನ್ ಹೇಳಿದ್ದಾರೆ. ನಮ್ಮನ್ನು 15 ನಿಮಿಷಗಳ ಕಾಲ ಮೊಣಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು ನಂತರ ಪಾಸ್‌ಪೋರ್ಟ್‌ಗಳ ಚಿತ್ರಗಳನ್ನು ತೆಗೆದುಕೊಂಡರು. ತದನಂತರ ಇವರುಗಳನ್ನು ಇನ್ನೊಂದು ವಾಹನದಲ್ಲಿ ಕಚೇರಿಗೆ ಇಳಿಸಿದರು ಎಂಬುದು ಸ್ಟೀಫನ್ ಹೇಳಿಕೆಯಾಗಿದೆ


ಇಕ್ಕಟ್ಟಾದ ಕಚೇರಿ ಹಾಗೂ ಹಿಂಸಾತ್ಮಕ ನಡವಳಿಕೆ
ಒಂದು ವರ್ಷದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಹಾಕಿಸಿಕೊಂಡು ಕಚೇರಿ ಅಧಿಕಾರಿಗಳು ಇಕ್ಕಟ್ಟಾದ ಕಚೇರಿಯಲ್ಲಿ ಕುರಿಮಂದೆಗಳಂತೆ ನಮ್ಮನ್ನು ತುಂಬಿದರು. ಅಲ್ಲಿನ ಅಧಿಕಾರಿಗಳು ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡರು ಹಾಗೂ ಏನು ಉದ್ಯೋಗ ಮಾಡಬೇಕು ಎಂಬುದನ್ನು ವಿವರಿಸಿದರು. ಈ ಸಮಯದಲ್ಲೇ ನಿಜವಾದ ದುಃಸ್ವಪ್ನದ ಅನುಭವ ನಮಗಾಯಿತು ಎಂಬುದು ಸ್ಟೀಫನ್ ಮಾತಾಗಿದೆ.


ಕ್ರಿಪ್ಟೋಕರೆನ್ಸಿ ವಂಚನೆಯಲ್ಲಿ ಸ್ಟೀಫನ್ ಕೆಲಸ ಮಾಡುತ್ತಿದ್ದ ಸಂಸ್ಥೆ ತೊಡಗಿಕೊಂಡಿತ್ತು. ಮಾಡೆಲ್‌ಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಶ್ರೀಮಂತ ಉದ್ಯಮಿಗಳನ್ನು ಈ ಬಲೆಯಲ್ಲಿ ಬೀಳಿಸುವುದು ಕೆಲಸದ ವಿಧಾನವಾಗಿತ್ತು. ನಂತರ ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೇರೇಪಿಸುವುದು ಇತ್ಯಾದಿ ಕೆಲಸಗಳನ್ನು ಸ್ಟೀಫನ್ ಹಾಗೂ ಇತರರು ಮಾಡುತ್ತಿದ್ದರು.


ಸಂಸ್ಥೆಯು ಮಹಿಳೆಯರನ್ನು ನೇಮಿಸಿಕೊಂಡಿದ್ದು ಇವರು ಗ್ರಾಹಕರೊಂದಿಗೆ ಮಾತನಾಡುತ್ತಾರೆ ಹಾಗಾಗಿ ಅವರಿಗೆ ಅನುಮಾನ ಬರುವುದಿಲ್ಲ ಎಂದು ಸ್ಟೀಫನ್ ಹೇಳಿದ್ದಾರೆ. ಸಣ್ಣ ಮೊತ್ತವನ್ನು ಗ್ರಾಹಕರು ಹೂಡಿಕೆ ಮಾಡಿದಾಗ ಕಂಪೆನಿ ಆರಂಭದಲ್ಲಿ ಉತ್ತಮ ಆದಾಯ ನೀಡುತ್ತದೆ ಆದರೆ ಗ್ರಾಹಕರು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದಾಗ ಕಂಪೆನಿ ಆ ಹಣವನ್ನು ಮರಳಿ ನೀಡದೇ ನಿರ್ಬಂಧಿಸುತ್ತಿತ್ತು ಎಂಬುದಾಗಿ ತಿಳಿಸಿದ್ದಾರೆ. ಪ್ರತಿ ಉದ್ಯೋಗಿಗೆ ಟಾರ್ಗೆಟ್‌ಗಳನ್ನು ನೀಡುತ್ತಿದ್ದರು ದಿನಕ್ಕೆ ಕನಿಷ್ಟ 50 ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಬೇಕು. ಎಲ್ಲಿಯಾದರೂ ಉದ್ಯೋಗಿ ಗುರಿ ಸಾಧಿಸದೇ ಇದ್ದರೆ ವಿದ್ಯುತ್ ಶಾಕ್ ಹೊಂದಿದ್ದ ಲಾಠಿಗಳನ್ನು ಬಳಸಿ ಶಿಕ್ಷಿಸಲಾಗುತ್ತಿತ್ತು ಎಂದು ಸ್ಟೀಫನ್ ಭಯದಿಂದ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


ರಕ್ಷಿಸಲಾಯಿತು ಆದರೆ ನಂತರ ಜೈಲುಪಾಲಾಗಬೇಕಾಯಿತು
ಕಂಪೆನಿಯಿಂದ 16 ಜನರನ್ನು ಮಯನ್ಮಾರ್ ಸೇನೆಯು ರಕ್ಷಿಸಿದ ನಂತರ ಸೇನೆಯು ತನ್ನ ಪ್ರಧಾನ ಕಚೇರಿಯಲ್ಲಿ ಒಂದು ದಿನಗಳ ಕಾಲ ತಂಗಲು ಅವಕಾಶ ಮಾಡಿಕೊಟ್ಟಿತು. ಸೇನಾ ಸಿಬ್ಬಂದಿಗಳು ಸಂಸ್ಥೆಯಿಂದ ಪಾಸ್‌ಪೋರ್ಟ್ ಮರುಪಡೆಯುವವರೆಗೆ ಒಂದು ವಾರದ ಕಾಲ ಇವರನ್ನು ನಿರ್ಬಂಧಿಸಿತು. ಪಾಸ್‌ಪೋರ್ಟ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಮರಳಿ ಪಡೆದ ತಕ್ಷಣ, ಸೇನಾ ಸಿಬ್ಬಂದಿ ಅರಣ್ಯವನ್ನು ದಾಟಿ ನದಿಯನ್ನು ಹೇಗೆ ತಲುಪಬೇಕು ಎಂಬ ನಿರ್ದೇಶನಗಳನ್ನು ನೀಡಿದರು ಎಂಬುದಾಗಿ ಸ್ಟೀಫನ್ ಹೇಳಿದ್ದಾರೆ.


ಹಾಗೂ ಹೀಗೂ ಮೇ ಸೂಟ್‌ನ ಹತ್ತಿರವಿದ್ದ ಬಸ್ ನಿಲ್ದಾಣದ ಬಳಿ ಸ್ಟೀಫನ್ ಹಾಗೂ ಇತರರು ತಲುಪಿದ್ದಂತೆಯೇ ಥಾಯ್ ಪೊಲೀಸರು ಇವರನ್ನು ಸೆರೆಹಿಡಿದರು. ಪೊಲೀಸ್ ಅಧಿಕಾರಿಗಳು ಇವರ ಪಾಸ್‌ಪೋರ್ಟ್ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡರು ಅವರನ್ನು ತಕ್ ಪ್ರಾಂತ್ಯದ ವಲಸೆ ಕಚೇರಿಗೆ ಮತ್ತು ನಂತರ ಮೇ ಸೋಟ್ ಪೊಲೀಸ್ ಠಾಣೆಗೆ ಕರೆದೊಯ್ದರು ಎಂಬುದಾಗಿ ಸ್ಟೀಫನ್ ಹೇಳಿದ್ದಾರೆ. ಎರಡು ದಿನಗಳ ಕಾಲ ಆಹಾರ ನೀರು ನೀಡದೇ ಉಪವಾಸ ಕೆಡವಲಾಯಿತು ಎಂಬುದಾಗಿ ಹೇಳಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಲಯ ರೂ 9000 ದಂಡ ವಿಧಿಸಿತು ಎಂಬುದಾಗಿ ಸ್ಟೀಫನ್ ಹೇಳಿದ್ದಾರೆ. ಹಣವಿಲ್ಲವೆಂದು ಅರಿತೊಡನೆ ಪುನಃ ಅವರನ್ನು ಕಳ್ಳಸಾಗಣೆ ಸಂತ್ರಸ್ತ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಸ್ಟೀಫನ್ ತಿಳಿಸಿದರು.


ಉದ್ಯೋಗ ಜಾಲದಲ್ಲಿ ಸಿಕ್ಕಿಬಿದ್ದಿದ್ದ 10 ಮಂದಿ ವಿದೇಶಿಯರೊಂದಿಗೆ 16 ಭಾರತೀಯರನ್ನು ವಲಸೆ ಅಧಿಕಾರಿಗಳು ಎಂಟಕ್ಕಿಂತ ಹೆಚ್ಚು ಜನರಿಗೆ ಸ್ಥಳಾವಕಾಶವಿಲ್ಲದ ಸಣ್ಣ ವಾಹನದಲ್ಲಿ ಕರೆದೊಯ್ದರು ಎಂಬುದಾಗಿ ಸ್ಟೀಫನ್ ಹೇಳುತ್ತಾರೆ. ಸುಮಾರು ಒಂಬತ್ತು ಗಂಟೆಗಳ ಕಾಲ ಬ್ಯಾಂಕಾಕ್‌ಗೆ ಪ್ರಯಾಣಿಸಿದ ನಂತರ ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಯಿತು. ಅವರುಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಯಿತು ಎಂಬುದು ಸ್ಟೀಫನ್ ಹೇಳಿಕೆಯಾಗಿದೆ.


ಇದನ್ನೂ ಓದಿ:  5G Network: ನಿಮ್ಮ ಸ್ಮಾರ್ಟ್‌ಫೋನ್ 5ಜಿ ಸಪೋರ್ಟ್ ಮಾಡುತ್ತಾ ಇಲ್ವಾ ಅಂತ ಹೀಗ್​ ಚೆಕ್​ ಮಾಡಿ!


ಜೈಲಿನಲ್ಲಿ ಕೆಲವರು ಫೋನ್‌ಗಳನ್ನು ಕಸಿದುಕೊಂಡರು ಮತ್ತು ನಮ್ಮ ಮೊಬೈಲ್ ಫೋನ್‌ಗಳಿಂದ ಕರೆಗಳನ್ನು ಮಾಡಲು ನಾವು ಅವರಿಗೆ ಪಾವತಿಸಬೇಕಾಗಿತ್ತು. ಇದೆಲ್ಲವನ್ನೂ ನೋಡುವಾಗ ಭಾರತಕ್ಕೆ ಮರಳುತ್ತೇವೆ ಎಂಬ ಯಾವ ಭರವಸೆ ನಮಗಿರಲಿಲ್ಲ ಎಂದು ಸ್ಟೀಫನ್ ಕಣ್ಣೀರಾಗುತ್ತಾರೆ.

Published by:Ashwini Prabhu
First published: