ಫ್ಯಾಕ್ಟ್ ಚೆಕ್: ಮೆಕ್ಕಾದ ಅಬ್ರಾಜ್ ಕುದೈ ಹೋಟೆಲ್ ವಿಶ್ವದ ಅತಿ ಎತ್ತರದ ಹೋಟೆಲ್ ಅಲ್ಲ..!

ದಿ ಗಾರ್ಡಿಯನ್ ಪ್ರಕಟಿಸಿದ 2015 ರ ಲೇಖನವು ಅದೇ ಛಾಯಾಚಿತ್ರವನ್ನು ಹೊಂದಿದೆ. ಹೋಟೆಲ್ ತೆರೆದಾಗ ಅದು ವಿಶ್ವದ ಅತಿದೊಡ್ಡ ಹೋಟೆಲ್ ಆಗುತ್ತದೆ ಎಂದು ಲೇಖನ ಹೇಳುತ್ತದೆ.

ದಿ ಗಾರ್ಡಿಯನ್ ಪ್ರಕಟಿಸಿದ 2015 ರ ಲೇಖನವು ಅದೇ ಛಾಯಾಚಿತ್ರವನ್ನು ಹೊಂದಿದೆ. ಹೋಟೆಲ್ ತೆರೆದಾಗ ಅದು ವಿಶ್ವದ ಅತಿದೊಡ್ಡ ಹೋಟೆಲ್ ಆಗುತ್ತದೆ ಎಂದು ಲೇಖನ ಹೇಳುತ್ತದೆ.

ದಿ ಗಾರ್ಡಿಯನ್ ಪ್ರಕಟಿಸಿದ 2015 ರ ಲೇಖನವು ಅದೇ ಛಾಯಾಚಿತ್ರವನ್ನು ಹೊಂದಿದೆ. ಹೋಟೆಲ್ ತೆರೆದಾಗ ಅದು ವಿಶ್ವದ ಅತಿದೊಡ್ಡ ಹೋಟೆಲ್ ಆಗುತ್ತದೆ ಎಂದು ಲೇಖನ ಹೇಳುತ್ತದೆ.

 • Share this:

  ಕೊರೋನಾ ಎಂಬ ಮಹಾಮಾರಿಯಿಂದ ಎಲ್ಲ ರಾಜ್ಯಗಳು ಲಾಕ್ ಆದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದು ಪ್ರವಾಸೋದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದೆಲ್ಲದರ ಹೊರತಾಗಿಯೂ ಪ್ರವಾಸಿಗರನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಹೋಟೆಲಿಗರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಹಾಗೆಯೇ ಪ್ರಯಾಣಿಕರ ಐಷರಾಮಿ ಹೋಟೆಲ್‍ಗಳ ಬೇಡಿಕೆಯು ಸಹ ಹೆಚ್ಚಿದೆ.ಇದರ ಮಧ್ಯೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ 10,000 ಕೊಠಡಿಗಳು, 70 ರೆಸ್ಟೋರೆಂಟ್‍ಗಳು ಮತ್ತು ಮೇಲ್ಫಾವಣಿ ಹೆಲಿಪ್ಯಾಡ್ ಹೊಂದಿರುವ ಪ್ರಪಂಚದ ಅತಿ ಎತ್ತರದ ಹೋಟೆಲ್ ಅಬ್ರಾಜ್ ಕುದೈ ಎಂದು ಹೇಳಿಕೊಳ್ಲಲಾಗಿದೆ.


  ಮೊದಲನೆಯದಾಗಿ ಇದು ಇನ್ನೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಇದರ ಕುರಿತು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ವರದಿ ಮಾಡಿದ್ದು, ಆ ಸುದ್ದಿ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.


  ಎರಡನೆಯದಾಗಿ, ಈ ಹೋಟೆಲ್‍ನ ಎತ್ತರ ಮತ್ತು ಅದರ ಕೋಣೆಗಳ ಸಂಖ್ಯೆಯನ್ನು ಗಮನಿಸಿದರೆ, ಮೆಕ್ಕಾದಲ್ಲಿನ ಈ ಹೋಟೆಲ್ ತೆರೆದ ನಂತರ ವಿಶ್ವದ ಅತಿದೊಡ್ಡ ಹೋಟೆಲ್ ಆಗುತ್ತದೆ. ಆದರೆ ಎತ್ತರದ ಹೋಟೆಲ್ ಎಂಬ ದಾಖಲೆಯನ್ನು ಮುರಿಯುವುದಿಲ್ಲ.


  AFWA ತನಿಖೆ


  ಸೌದಿ ಅರೇಬಿಯಾದ ಮೆಕ್ಕಾದಲ್ಲಿನ ಅಬ್ರಾಜ್ ಕುದೈ ವಿಶ್ವದ ಅತಿದೊಡ್ಡ ಹೋಟೆಲ್ ಹೇಗೆ ಎಂಬ ಬಗ್ಗೆ AFWA ತನಿಖೆ ಆರಂಭಿಸಿತು. ಇದರ ಬಗ್ಗೆ ರಿವರ್ಸ್ ಇಮೇಜ್ ಹುಡುಕಾಟವನ್ನು ಪ್ರಾರಂಭಿಸಿತು ಮತ್ತು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ಫೋಟೋ ನಿಜಕ್ಕೂ ಅಬ್ರಾಜ್ ಕುದೈ ಹೋಟೆಲ್ ಫೋಟೋನಾ ಎಂಬ ಬಗ್ಗೆ ವಿಚಾರಿಸಲಾಯಿತು.


  ದಿ ಗಾರ್ಡಿಯನ್ ಪ್ರಕಟಿಸಿದ 2015 ರ ಲೇಖನವು ಅದೇ ಛಾಯಾಚಿತ್ರವನ್ನು ಹೊಂದಿದೆ. ಹೋಟೆಲ್ ತೆರೆದಾಗ ಅದು ವಿಶ್ವದ ಅತಿದೊಡ್ಡ ಹೋಟೆಲ್ ಆಗುತ್ತದೆ ಎಂದು ಲೇಖನ ಹೇಳುತ್ತದೆ.


  ಸಾಕಷ್ಟು ಮಾಧ್ಯಮಗಳು ಪ್ರಕಟಿಸಿದ ಲೇಖನಗಳು ಸಹ ಈ ಹೋಟೆಲ್ 10,000 ಕೊಠಡಿಗಳನ್ನು ಹೊಂದಿದೆ. ಇದು ತೆರೆದ ನಂತರ ಇದು ವಿಶ್ವದ ಅತಿ ಎತ್ತರದ ಹೋಟೆಲ್ ಎಂಬ ಖ್ಯಾತಿಗೆ ಒಳಗಾಗುತ್ತದೆ ಎಂದೇ ಹೇಳಿವೆ. ಆಗಸ್ಟ್ 2009 ರಲ್ಲಿ, ಫೋರ್ಬ್ಸ್‌, ಗಿನ್ನೆಸ್‍ನ ರೆಕಾರ್ಡ್ ಮ್ಯಾನೇಜ್‍ಮೆಂಟ್ ಮುಖ್ಯಸ್ಥ ಹನ್ನಾ ಒರ್ಟ್‍ಮನ್ ಅವರನ್ನು ಉಲ್ಲೇಖಿಸಿ ಲೇಖನವೊಂದು ಪ್ರಕಟವಾಗಿತ್ತು. ಹೋಟೆಲ್ ಅಬ್ರಾಜ್ ಕುಡೈ 2021 ರಲ್ಲಿ ತೆರೆದಾಗ ಅತಿದೊಡ್ಡ ಹೋಟೆಲ್ ಎಂಬ ವಿಶ್ವ ದಾಖಲೆಯನ್ನು ಮುರಿಯುತ್ತದೆ ಎಂದು ಹೇಳಿದ್ದರು. ಇದೆಲ್ಲವನ್ನು ಗಮನಿಸಿ ಕೆಲವು ಕೀ ವರ್ಡ್‍ಗಳನ್ನು ಹುಡುಕಿ ಪರಿಶೀಲನೆ ನಡೆಸಿದರು.


  ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಏನು ಹೇಳುತ್ತದೆ?


  ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಪ್ರಕಾರ, ಅದು ಮಲೇಶಿಯಾದಲ್ಲಿರುವ ಪಹಂಗ್ ದಾರುಲ್ ಮಕ್ಮೂರ್ ಪ್ರಪಂಚದ ಮೊದಲ ಅತಿದೊಡ್ಡ ಹೋಟೆಲ್. ಇದರಲ್ಲಿ 7,351 ಕೊಠಡಿಗಳನ್ನು ಹೊಂದಿದೆ ಎಂದು ಉಲ್ಲೇಖಿಸಿತ್ತು.


  ಇದನ್ನೂ ಓದಿ: ಇಸ್ರೇಲ್‌ನಲ್ಲಿ Pfizer ಲಸಿಕೆ ಪರಿಣಾಮ ಬೀರುತ್ತಿಲ್ಲವೇ? ಡೆಲ್ಟಾ ರೂಪಾಂತರದ ಕಪಿಮುಷ್ಟಿಯಲ್ಲಿ ಜನತೆ

  ಪುನಃ ಇತ್ತೀಚೆಗೆ ಯುಎಇನ ದುಬೈನಲ್ಲಿರುವ ಗೆವೊರಾ ಹೋಟೆಲ್ ವಿಶ್ವದ ಅತಿ ಉದ್ದದ ಹೋಟೆಲ್. ಇದು 356.33 ಮೀಟರ್ ಎತ್ತರವಿದೆ ಎಂದು ಹೇಳಿತ್ತು.


  ಇದಲ್ಲದೇ ಇತ್ತೀಚೆಗೆ ಸಿಎನ್‍ಎನ್ ಮತ್ತು ಇತರೆ ಮಾಧ್ಯಮಗಳು ಶಾಂಗೈ ಟವರ್‍ನಲ್ಲಿರುವ ಹೋಟೆಲ್ ವಿಶ್ವದ ಅತಿ ಎತ್ತರದ ಹೋಟೆಲ್ ಎಂಬ ಹೊಸ ದಾಖಲೆಗೆ ಒಳಗಾಗಿದೆ. ಇದು ಜೂನ್ 9 ರಂದು ತೆರೆಯಲಿದ್ದು, 600 ಮೀಟರ್ ಎತ್ತರವಿದೆ ಎಂದು ವರದಿ ಮಾಡಿದ್ದವು.


  ಇನ್ನು ಸ್ಕೈ ಸ್ಕ್ರಾಪರ್‍ಸೆಂಟರ್ ಡಾಟ್ ಕಾಂ ಮೆಕ್ಕಾದ ಅಬ್ರಾಜ್ ಕುದೈ ಹೋಟೆಲ್ 230 ಮೀಟರ್ ಎತ್ತರವಿದೆ ಎಂದು ಹೇಳಿತ್ತು.


  ಇದನ್ನೂ ಓದಿ: Siddaramaiah| ಮುಂದಿನ ಚುನಾವಣೆಯಲ್ಲಿ ನಾನು ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ; ಸಿದ್ದರಾಮಯ್ಯ ಘೋಷಣೆ!

  ಆದ್ದರಿಂದ, ಹೋಟೆಲ್ ಅಬ್ರಾಜ್ ಕುಡೈ ಅವರು ವಿಶ್ವದ ಅತಿದೊಡ್ಡ ಹೋಟೆಲ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ತೀರ್ಮಾನಿಸಬಹುದು. ಆದರೆ, ಅದರ ಪ್ರಸ್ತುತ ವಿನ್ಯಾಸ ಮತ್ತು ರಚನೆಯನ್ನು ಗಮನಿಸಿದರೆ, ಇದು ವಿಶ್ವದ ಅತಿ ಎತ್ತರದ ಹೋಟೆಲ್ ಆಗುವುದಿಲ್ಲ.
  ತೀರ್ಮಾನ:
  10,000 ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅಬ್ರಾಜ್ ಕುಡೈ ವಿಶ್ವದ ಅತಿದೊಡ್ಡ ಹೋಟೆಲ್ ಆಗುವ ಸಾಮರ್ಥ್ಯ ಹೊಂದಿರಬಹುದು. ಆದರೆ ಪ್ರಸ್ತುತ, ವಿಶ್ವದ ಅತಿದೊಡ್ಡ ಹೋಟೆಲ್ 7,351 ಕೊಠಡಿಗಳನ್ನು ಹೊಂದಿರುವ ಮಲೇಷ್ಯಾದ ಹೋಟೆಲ್ ವಿಶ್ವದ ಮೊದಲ ಹೋಟೆಲ್. ದುಬೈನ 356.33 ಮೀಟರ್ ಎತ್ತರದ ಗೆವೊರಾ ಹೋಟೆಲ್ ವಿಶ್ವದ ಅತಿ ಎತ್ತರದ ಹೋಟೆಲ್ ಆಗಿದೆ. ಅಬ್ರೂಜ್ ಕುಡೈ ಹೋಟೆಲ್‌ನ ಎತ್ತರವು ಕೇವಲ 230 ಮೀಟರ್.

  First published: