Fact Check: ಕೋವಿಡ್-19 ಲಸಿಕೆಯಿಂದ ಎಚ್‌ಐವಿ ಬರುತ್ತದೆಯಾ: ತಜ್ಞರು ಹೇಳಿದ್ದೇನು..?

ಕೋವಿಡ್-19 ಲಸಿಕೆಗಳು ಎಚ್‌ಐವಿ ಪ್ರೊಟೀನ್‌ಗಳನ್ನು ಒಳಗೊಂಡಿದ್ದರೆ ಎಚ್‌ಐವಿ ಧನಾತ್ಮಕ ಪ್ರಕರಣಗಳಲ್ಲಿ ಏರಿಕೆ ಕಂಡುಬರಬೇಕಿತ್ತು. ಆದರೆ ಇಂತಹ ವರದಿ ಎಲ್ಲಿಯೂ ದಾಖಲಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೋವಿಡ್-19 ಸಾಂಕ್ರಾಮಿಕವು ಕಳೆದೆರಡು ವರ್ಷಗಳಿಂದ ವಿಶ್ವವ್ಯಾಪಿಯಾಗಿ ಹಬ್ಬಿ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ದೈನಂದಿನ ಜೀವನ ಅಸ್ತವ್ಯಸ್ತವಾಗಿ ಕಂಡುಕೇಳರಿಯದ ಈ ವ್ಯಾಧಿಗೆ ಪ್ರತಿಯೊಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಕೊರೋನಾ ವೈರಸ್ ಮಹಾಮಾರಿ ಉದ್ಯಮ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ವ್ಯಾಪಾರ ವಹಿವಾಟು, ಕೈಗಾರಿಕೆ, ತಾಂತ್ರಿಕ ಕ್ಷೇತ್ರ, ಹೀಗೆ ಜನರು ಹೆಚ್ಚು ಜೀವನಾಧಾರಕ್ಕೆ ಆಶ್ರಯಿಸಿಕೊಂಡಿದ್ದ ಕ್ಷೇತ್ರಗಳ ಮೇಲೆ ತೀವ್ರತರನಾದ ಪರಿಣಾಮವನ್ನುಂಟು ಮಾಡಿತ್ತು.

ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಲಸಿಕೆಯ ಕುರಿತು ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಕೊರೋನಾ ಲಸಿಕೆಯಿಂದ ಎಚ್‌ಐವಿ ಬರುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಲಸಿಕೆಗಳ ತಯಾರಿಯಲ್ಲಿ ವೈರಸ್‌ಗಳ ಭಾಗಗಳನ್ನು ಬಳಸಿರುವುದರಿಂದ ಇದು ಎಚ್‌ಐವಿಗೆ ಕಾರಣವಾಗಲಿದೆ ಎಂಬುದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ವಿಷಯವಾಗಿದೆ.

 Fact Check Corona Vaccine wont give you HIV stg ae
ಸಾಂದರ್ಭಿಕ ಚಿತ್ರ


ವಾಸ್ತವಾಂಶವೇನು?

ಈ ರೀತಿಯ ಸುದ್ದಿ ಹಬ್ಬುತ್ತಿರುವಂತೆಯೇ ಹಲವಾರು ಸತ್ಯಾನ್ವೇಷಣೆ (ಫ್ಯಾಕ್ಟ್​ ಚೆಕ್​) ಈ ಸುದ್ದಿ ಸುಳ್ಳು ಎಂಬುದನ್ನು ಬಿಂಬಿಸಲು ಹಲವಾರು ವೈಜ್ಞಾನಿಕ ಆಧಾರಗಳನ್ನು ಪತ್ತೆ ಮಾಡಿದರು. ತಜ್ಞರು ಹೇಳುವಂತೆ ಲಸಿಕೆ ತೆಗೆದುಕೊಂಡ ನಂತರ ಎಚ್‌ಐವಿ ಉಂಟಾಗುವುದಿಲ್ಲ. ಇದ್ದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದ್ದಾರೆ. SARS-CoV-2 ಕೊರೋನಾ ವೈರಸ್‌ನಲ್ಲಿರುವ ಪ್ರೊಟೀನ್ ಸಂಪೂರ್ಣವಾಗಿ ಎಚ್‌ಐವಿಯಲ್ಲಿರುವ ಗೈಲೋಪ್ರೋಟೀನ್‌ಗಿಂತ ವಿಭಿನ್ನವಾಗಿದೆ.

ಇದನ್ನೂ ಓದಿ: Raayan Raj Sarja: ಹಿಂದೂ-ಕ್ರೈಸ್ತ್ರ ಸಂಪ್ರದಾಯದಂತೆ ನಡೆಯಿತು ಚಿರು ಸರ್ಜಾ ಮಗನ ನಾಮಕರಣ: ಅರ್ಜುನ್ ಸರ್ಜಾ ಕುಟುಂಬ ಗೈರು

ಇನ್ನು, ವೈದ್ಯರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೋವಿಡ್-19 ಲಸಿಕೆಗಳು ಎಚ್‌ಐವಿ ಪ್ರೊಟೀನ್‌ಗಳನ್ನು ಒಳಗೊಂಡಿದ್ದರೆ ಎಚ್‌ಐವಿ ಧನಾತ್ಮಕ ಪ್ರಕರಣಗಳಲ್ಲಿ ಏರಿಕೆ ಕಂಡುಬರಬೇಕಿತ್ತು. ಆದರೆ ಇಂತಹ ವರದಿ ಎಲ್ಲಿಯೂ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮೌನಿ ರಾಯ್‌ ಬಳಿಕ ನಟಿ ಮಲ್ಲಿಕಾ ಶೆರಾವತ್ ವಿಡಿಯೋ ವೈರಲ್..!

ಇಷ್ಟೇ ಅಲ್ಲದೆ ಯಾವುದೇ ಲಸಿಕೆಗಳನ್ನು ಸುರಕ್ಷತಾ ಮಾರ್ಗಸೂಚಿಗಳ ಅನ್ವಯ ಸಮಗ್ರ ವಿಶ್ಲೇಷಣೆ ನಡೆಸಿ ಹಲವಾರು ಸಂಶೋಧನೆಗಳ ಮೂಲಕ ಖಾತ್ರಿಪಡಿಸಿ ನಂತರವಷ್ಟೇ ಜನರಿಗೆ ನೀಡಲಾಗುತ್ತದೆ. ಲಸಿಕೆಗಳು WHO ಹಾಗೂ ರಾಷ್ಟ್ರೀಯ ನಿಯಂತ್ರಕ ಏಜೆನ್ಸಿಗಳಿಂದ ದೃಢೀಕರಣ ಸ್ವೀಕರಿಸುವ ಮೊದಲು ಲಸಿಕೆಗಳನ್ನು ಕಟ್ಟುನಿಟ್ಟಿನ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗುತ್ತದೆ.

ಅದೇ ರೀತಿ ಎಲ್ಲ ಲಸಿಕೆಗಳ ಮೇಲ್ವಿಚಾರಣೆಯನ್ನು WHO ಹಾಗೂ ನಿಯಂತ್ರಕ ಅಧಿಕಾರಿಗಳು ಆಗಾಗ್ಗೆ ನಡೆಸುತ್ತಿರುತ್ತಾರೆ. ಲಸಿಕೆಗೆ ಸಂಬಂಧಿಸಿದ ಯಾವುದೇ ರೀತಿಯ ಅಪಾಯಗಳನ್ನು ಹಾಗೂ ತೊಂದರೆಗಳನ್ನು ಕಟ್ಟುನಿಟ್ಟಾಗಿ ಗಮನಿಸುತ್ತಿರುತ್ತಾರೆ.

ಇದನ್ನೂ ಓದಿ: Radhika Pandit: ಈ ದಿನಕ್ಕಾಗಿಯೇ ಕಾಯುತ್ತಿದ್ದರಂತೆ ನಟಿ ರಾಧಿಕಾ ಪಂಡಿತ್​

ಹಾಗಾಗಿ ತಜ್ಞರು ಲಸಿಕೆಯ ಕುರಿತು ಹಬ್ಬಿರುವ ಸುದ್ದಿಗಳನ್ನು ಜನರು ನಂಬಬಾರದು ಎಂದು ವಿನಂತಿಸಿಕೊಂಡಿದ್ದಾರೆ. ಲಸಿಕೆಯಿಂದ ಜನರಿಗೆ ಯಾವುದೇ ಪ್ರಾಣಾಪಾಯವಿರುವ ಕಾಯಿಲೆಗಳು ಉಂಟಾಗುವುದಿಲ್ಲ. ಈ ಕುರಿತು ಯಾವುದೇ ಘಟನೆಗಳು ಹಾಗೂ ಸುದ್ದಿಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಈ ಸುದ್ದಿ ಸುಳ್ಳಾಗಿದ್ದು ಇದಕ್ಕೆ ಯಾವುದೇ ಪುರಾವೆಗಳಲ್ಲಿ ಎಂಬುದನ್ನು ತಜ್ಞರು ಜನರ ಗಮನಕ್ಕೆ ತಂದಿದ್ದಾರೆ. ಲಸಿಕೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಅದನ್ನು ಜನರಿಗೆ ನೀಡಲಾಗುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: