ಸಾಮಾನ್ಯವಾಗಿ ನಾವು ಬಸ್ಸು (Bus) ಇಲ್ಲವೆ ರೈಲುಗಳ (Rail) ಮೂಲಕ ಪ್ರಯಾಣಿಸುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ತಲುಪಬೇಕಾಗಿರುವ ಬಸ್ಸು ನಿಲ್ದಾಣ (Bus stand) ಅಥವಾ ರೈಲು ನಿಲ್ದಾಣಕ್ಕೆ (Railway Station) ಹೆಚ್ಚುಕಡಿಮೆ ಅರ್ಧ ಗಂಟೆ ಮುಂಚೆ ಇರುವಂತೆ ಪ್ರಯತ್ನಿಸುತ್ತೇವೆ. ಆದರೆ, ವಿಮಾನದಲ್ಲಿ (Airplane) ಪ್ರಯಾಣಿಸುವವರು ಮಾತ್ರ ವಿಮಾನ ನಿಲ್ದಾಣವನ್ನು ಫ್ಲೈಟ್ ಟೇಕ್ ಆಫ್ ಆಗುವ ಸುಮಾರು ಮೂರು ಗಂಟೆಗಳ ಮುಂಚೆಯೇ ಉಪಸ್ಥಿತರಿರಬೇಕೆಂದು ಸೂಚಿಸಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ (Situation) ಒಂದೊಮ್ಮೆ ಯೋಚಿಸಿ ನೋಡಿ ನೀವು ತಲುಪುವ ವಿಮಾನ ನಿಲ್ದಾಣ ಸದ್ಯ ನೀವಿರುವ ಸ್ಥಳದಿಂದ ಸುಮಾರು ಐದು ಗಂಟೆ ದೂರದಲ್ಲಿದೆ ಹಾಗೂ ನಿಮ್ಮ ಬಳಿ ಅಲ್ಲಿಗೆ ತಲುಪಲು ಕೇವಲ ರಸ್ತೆ ಮಾರ್ಗವೊಂದೇ ಆಯ್ಕೆಯಾಗಿದೆ.
ಆ ಸಂದರ್ಭದಲ್ಲಿ ನೀವು ಫ್ಲೈಟ್ ಹತ್ತುವುದು ಅತ್ಯಂತ ಕಠಿಣವಾಗಬಹುದು ಹಾಗೂ ಈ ಸ್ಥಿತಿ ನಿಮ್ಮಲ್ಲಿ ಸಾಕಷ್ಟು ಒತ್ತಡ ನಿರ್ಮಾಣ ಮಾಡಬಹುದು.
ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಿದ ಮೋದಿ
ಭಾರತದ ರಸ್ತೆ ಸಂಪರ್ಕ ಜಾಲವು ದಿನದಿಂದ ದಿನಕ್ಕೆ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು ಮುಂಬರುವ ದಿನಗಳಲ್ಲಿ ನಿಮಗೆ ಕಠಿಣ ಪರಿಸ್ಥಿತಿ ಉಂಟಾಗದು. ಏಕೆಂದರೆ, ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿಯ ಒಂದು ಭಾಗವನ್ನು ಉದ್ಘಾಟಿಸಿದ್ದಾರೆ.
ಈ ಅಷ್ಟಪಥದ ಹೆದ್ದರಿಯು ಪೂರ್ಣಗೊಂಡ ನಂತರ ಎರಡೂ ಮಹಾನಗರಗಳ ಮಧ್ಯದ ಅಂತರದ ಸಮಯವನ್ನು ಸಾಕಷ್ಟು ತಗ್ಗಿಸಲಿದೆ. ಅಷ್ಟೇ ಅಲ್ಲದೆ ದೆಹಲಿ-ಜೈಪುರ ಮಧ್ಯದ ಐದು ಗಂಟೆಗಳ ಅಂತರವನ್ನು ಇದು ಮೂರು ಗಂಟೆಗಳಿಗೆ ತಗ್ಗಿಸಲಿದೆ.
ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಈ ನಡುವೆ ಸಾಕಷ್ಟು ಸುದ್ದಿಯಲ್ಲಿದ್ದು ಅದಾಗಲೇ ಅವರು ದೆಹಲಿಯಿಂದ ಡೆಹ್ರಾಡೂನ್, ಜೈಪುರ, ಹರಿದ್ವಾರ ಮತ್ತು ಚಂಡೀಗಡ್ ಗಳ ಮಧ್ಯದ ಅಂತರ ಎರಡು ಗಂಟೆಗಳಷ್ಟು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದಿಷ್ಟಲ್ಲದೆ ಈಗ ದೆಹಲಿ ಮತ್ತು ಮೀರತ್ ನಡುವೆ ರಿಜನಲ್ ರ್‍ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ಸಹ ಅಭಿವೃದ್ಧಿಗೊಳ್ಳುತ್ತಿದೆ. ಮುಂದೆ ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯೂ ಸರ್ಕಾರಕ್ಕಿದೆ. ಅಷ್ಟಕ್ಕೂ ಅಹ್ಮದಾಬಾದ್-ಮುಂಬೈ ಬುಲೆಟ್ ರೈಲು ಸಹ ಈ ಪಟ್ಟಿಯಲ್ಲಿದೆ ಎಂಬುದನ್ನು ಗಮನಿಸಬಹುದು.
ರಸ್ತೆ ಜಾಲ ವಿಮಾನ ಸೇವೆಗಳ ಮೇಲೆ ಒತ್ತಡ ಉಂಟು ಮಾಡುತ್ತಿದೆಯೆ?
ಇದೀಗ ರಸ್ತೆ ಮತ್ತು ರೈಲು ಮೂಲಸೌಕರ್ಯ ನಿರ್ಮಾಣವು ದೇಶಾದ್ಯಂತ ವೇಗವನ್ನು ಪಡೆದುಕೊಳ್ಳುತ್ತಿದೆ ಹಾಗೂ ಇದರಿಂದಾಗಿ ಕಡಿಮೆ ಅಂತರ ಹಾರಾಟ ಮಾಡುವ ವಿಮಾನ ಸೇವೆಗಳು ಒತ್ತಡಕ್ಕೆ ಒಳಗಾಗಲಿವೆಯೇ? ಎಂಬ ಅನುಮಾನ ಕಾಡತೊಡಗಿದೆ.
ಈ ನಿಟ್ಟಿನಲ್ಲಿ OAG ಏವಿಯೇಷನ್ ಸಂಸ್ಥೆ, ಪ್ರತ್ಯೇಕವಾಗಿ ವೇಳಾಪಟ್ಟಿಯೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಉಲ್ಲೇಖಿಸಲಾಗಿರುವಂತೆ ದೇಶವು 180 ಕ್ಕೂ ಹೆಚ್ಚು ನಗರ ಜೋಡಿಗಳು 350 ಕಿಮೀಗಿಂತ ಕಡಿಮೆ ಅಂತರದ ವಿಮಾನ ಸೇವೆಗಳನ್ನು ಹೊಂದಿವೆ.
ಈ ಕಡಿಮೆ ಅಂತರದ ಮಾರ್ಗಗಳು ಹಲವು ಭಿನ್ನ ಭಿನ್ನ ನಗರಗಳ ಮಿಶ್ರಣವಾಗಿದ್ದು, ಮಾರ್ಗ ಪ್ರಸರಣ ಮಾರ್ಗಸೂಚಿಗಳಡಿಯಲ್ಲಿ ಹಾಗೂ ನಿಯಂತ್ರಕ ಅಗತ್ಯತೆಗಳ ಕಾರಣದಿಂದಾಗಿ ಕಾರ್ಯನಿರ್ವಹಿಸುವ ವಿಮಾನಗಳಾಗಿದ್ದು ಕಡಿಮೆ ದಟ್ಟಣೆಯೊಂದಿಗೆ ದೂರದ ಮತ್ತು ಕಡಿಮೆ ಅಂತರದಲ್ಲಿ ಪ್ರವೇಶಿಸಬಹುದಾದ ಪ್ರದೇಶಗಳಿಗೆ ಸೇವೆ ಒದಗಿಸುತ್ತವೆ ಎಂದಾಗಿದೆ.
ಈ ಒಟ್ಟು ವಿಮಾನ ಸೇವೆಗಳ ಪೈಕಿ ಸುಮಾರು ಅರ್ಧದಷ್ಟು ವಿಮಾನಗಳು, ಮಾರ್ಗ ಪ್ರಸರಣ ಮಾರ್ಗಸೂಚಿಗಳ ಅಡಿಯಲ್ಲಿ ವರ್ಗ II A ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಾಗಿವೆ. ಇವು ಶ್ರೀನಗರ ಮತ್ತು ಜಮ್ಮು ಹಾಗೂ ಈಶಾನ್ಯ ರಾಜ್ಯದೊಳಗಿನ ಹಲವು ಪ್ರದೇಶಗಳ ಮಧ್ಯೆ ಸೇವೆ ಒದಗಿಸುತ್ತವೆ.
ಜಮ್ಮು ಮತ್ತು ಶ್ರೀನಗರ ನಡುವಿನ ವಿಮಾನಗಳು ನಿಸರ್ಗದ ಅಡೆತಡೆಗಳನ್ನು ಅನುಭವಿಸುತ್ತವೆ.
ಅಷ್ಟಕ್ಕೂ ಈ ಪ್ರಯಾಣ ಸೇವೆಗಳಲ್ಲಿ ಕೆಲವು ಅಷ್ಟೊಂದು ಸಮಂಜಸವಾದ ಸೇವೆಗಳೆನ್ನಲಾಗುವುದಿಲ್ಲ, ಉದಾಹರಣೆಗೆ ಗುವಾಹಟಿ ಮತ್ತು ಅಗರ್ತಲಾ. ಈ ಎರಡೂ ನಗರಗಳ ಮಧ್ಯೆ ಅಂತರ 248 ಕಿಮೀ ಆದರೂ ರಸ್ತೆಯ ಮೂಲಕ ತಲುಪಲು 10 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದೇ ರೀತಿ ಜಮ್ಮು ಮತ್ತು ಶ್ರೀನಗರ ನಡುವಿನ ವಿಮಾನಗಳು ಆಗಾಗ ನಿಸರ್ಗದ ವ್ಯತಿರಿಕ್ತತೆಯಿಂದಾಗಿ ಅಡೆತಡೆಗಳನ್ನು ಅನುಭವಿಸುತ್ತವೆ.
ಇದೇ ರೀತಿ ಇನ್ನು ಹಲವೆಡೆ ವಿಪರೀತ ಪರಿಸ್ಥಿತಿಗಳನ್ನು ಕಾಣಬಹುದು. ಉದಾಹರಣೆಗೆ ಈಶಾನ್ಯದಲ್ಲಿ, ವೈಮಾನಿಕ ಅಂತರವು ರಸ್ತೆಯ ದೂರಕ್ಕಿಂತ ಕಡಿಮೆಯಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ರಸ್ತೆ ಆಯ್ಕೆಯು ಪ್ರಾಯೋಗಿಕವಾಗಿ ಅಸ್ತಿತ್ವದಲ್ಲಿಲ್ಲ, ಉದಾಹರಣೆಗೆ ಅಗರ್ತಲಾ - ಕೋಲ್ಕತ್ತಾ.
ಈ ಮೇಲಿನ ಎಲ್ಲ ಮಾರ್ಗಗಳನ್ನು ಅರ್ಥೈಸಿಕೊಳ್ಳಬಹುದಾಗಿದ್ದರೂ ನಿಜವಾದ ಸವಾಲು ಅಡಗಿರುವುದು ಪ್ರಮುಖ ನಗರಗಳ ಮಧ್ಯದಲ್ಲಿರುವ ರಸ್ತೆ ಸಾರಿಗೆ ವ್ಯವಸ್ಥೆಗಳೆನ್ನಬಹುದು. ಉದಾಹರಣೆಗೆ, ದೆಹಲಿ-ಜೈಪುರ, ದೆಹಲಿ-ಚಂಡೀಗಢ, ದೆಹಲಿ-ಡೆಹ್ರಾಡೂನ್, ಬೆಂಗಳೂರು-ಚೆನ್ನೈ ಮತ್ತು ಮುಂಬೈ-ಅಹಮದಾಬಾದ್ ಇತ್ಯಾದಿ.
ಮಲ್ಟಿಮೋಡಲ್ ಸಂಪರ್ಕ
ಸಾಂಪ್ರದಾಯಿಕವಾಗಿ, ರೈಲ್ವೇ ನಿಲ್ದಾಣಗಳು ಮತ್ತು ರಾಜ್ಯ ಸಾರಿಗೆ ಬಸ್ಸುಗಳು ಒಂದಕ್ಕೊಂದು ಕಾಂಪ್ಲಿಮೆಂಟ್ ಕೊಡೋ ರೀತಿಯಲ್ಲಿವೆ - ಪ್ರಯಾಣಿಕರು ರೈಲಿನಿಂದ ಇಳಿದ ನಂತರ ಬಸ್ ಅನ್ನು ಹತ್ತಿದರೆ ಕೆಲವರು ಬಸ್ಸಿಳಿದು ರೈಲನ್ನು ಹತ್ತುತ್ತಾರೆ. ಇದು ವಿಮಾನ ನಿಲ್ದಾಣಗಳಿಗೆ ಲಭ್ಯವಿರಲಿಲ್ಲ.
ಆದರೆ ಇತ್ತೀಚೆಗಷ್ಟೆ ನಾವು ದೆಹಲಿ ಮತ್ತು ಚೆನ್ನೈನಂತಹ ಕೆಲವು ನಗರಗಳಲ್ಲಿ ವಿಮಾನ ನಿಲ್ದಾಣಗಳಿಂದ ಮೆಟ್ರೋ ಸಂಪರ್ಕವನ್ನು ನೋಡುತ್ತಿದ್ದೇವೆ ಎನ್ನಬಹುದು. ಈ ನಿಟ್ಟಿನಲ್ಲಿ ಇತರೆ ಮಹಾನಗರಗಳಲ್ಲೂ ಈ ಟ್ರೆಂಡ್ ಈಗ ಅಭಿವೃದ್ಧಿಗೊಳ್ಳುತ್ತಿದೆ.
ಪ್ರಾಮುಖ್ಯತೆ ಏಕೆ?
ನೋಡಿ ದೆಹಲಿಯಿಂದ ಅಲ್ಪ ದೂರದ ಡೆಹ್ರಾಡೂನ್, ಜೈಪುರ್, ಚಂಡೀಗಢ್ ನಂತಹ ನಗರಗಳಿಗೆ ತೆರಳುವ ಎಲ್ಲ ಪ್ರಯಾಣಿಕರು ದೆಹಲಿ ಮೂಲದವರೇ ಆಗಿರುವುದಿಲ್ಲ. ಇವರಲ್ಲಿ ಬಹಳಷ್ಟು ಜನರು ನೇರವಾದ ಫ್ಲೈಟ್ ಲಭ್ಯವಿಲ್ಲದ ಕಾರಣ ದೆಹಲಿಗೆ ತೆರಳಿ ಅಲ್ಲಿಂದ ಈ ಸ್ಥಳಕ್ಕೆ ಪ್ರಯಾಣಿಸುವವರಾಗಿರುತ್ತಾರೆ.
ಇಂತಹ ಸಂದರ್ಭದಲ್ಲಿಯೇ ಮಲ್ಟಿಮೋಡಲ್ ಸಂಪರ್ಕ ಪ್ರಮುಖ ಪಾತ್ರವಹಿಸುತ್ತದೆ. ಉದಾಹರಣೆಗೆ ಯುರೋಪ್‌ನ ಕೆಲವು ಪ್ರದೇಶಗಳನ್ನು ತೆಗೆದುಕೊಂಡರೆ ಅದರಲ್ಲೂ ವಿಶೇಷವಾಗಿ ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ಗಳನ್ನು ನೋಡುವುದಾದರೆ ಇಲ್ಲಿನ ವಿಮಾನ ನಿಲ್ದಾಣಗಳು ರೈಲ್ವೇ ನೆಟ್‌ವರ್ಕ್‌ನೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿವೆ. ಹಾಗೂ ಅವು ಪ್ರಯಾಣಿಕರಿಗೆ ಸಂಯೋಜಿತವಾದ ಏರ್‌ಲೈನ್ಸ್ ಏರ್ + ರೈಲ್‌ನ ಸೇವೆಗಳನ್ನು ಒದಗಿಸುತ್ತವೆ.
ಇದನ್ನೂ ಓದಿ: Fight in Flight: ಸಣ್ಣ ಮ್ಯಾಟರ್ಗೇ ಹಾರುತ್ತಿರೋ ಫ್ಲೈಟ್ನಲ್ಲೇ ಡಿಶುಂ ಡಿಶುಂ, ಮುಖ ಮೂತಿ ನೋಡದೇ ಬಡಿದಾಡಿಕೊಂಡ ಯುವಕರು!
ಇಂತಹ ಸೌಲಭ್ಯ ಭಾರತದಲ್ಲಿ ಎಲ್ಲಿಯೂ ಕಾಣಲು ಸಿಗುವುದಿಲ್ಲ. ರೈಲುಮಾರ್ಗವನ್ನು ಬಿಟ್ಟುಬಿಡಿ, ಹೆಚ್ಚಿನ ಸಂದರ್ಭಗಳಲ್ಲಿ ಎಕ್ಸ್ ಪ್ರೆಸ್ ರಸ್ತೆ ಪ್ರವೇಶವು ನಮ್ಮಲ್ಲಿ ಒಂದು ದೊಡ್ಡ ಸವಾಲಾಗಿ ಬಿಡುತ್ತದೆ.
ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮುಂಬೈ ಹೆದ್ದಾರಿ
ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮುಂಬೈನಂತಹ ಹೊಸ ಹೆದ್ದಾರಿಗಳು ನಗರಗಳ ವ್ಯಾಪ್ತಿಯ ಹೊರಗೆ ಪ್ರಾರಂಭವಾಗುತ್ತವೆ ಮತ್ತು ಅಂತಹ ಹೆದ್ದಾರಿ ಪ್ರಾರಂಭವಾಗುವ ಹಂತವನ್ನು ತಲುಪುವುದೇ ಕಷ್ಟಕರವಾಗಿ ಬಿಡುತ್ತದೆ.
ನಾವು ಒಂದೆಡೆ ಎಕ್ಸ್ ಪ್ರೆಸ್ ವೇಗಳು ಹೆಚ್ಚಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆಗೊಳಿಸುತದೆ ಎಂದು ಮಾತನಾಡುತ್ತಿದ್ದರೂ ಅದಕ್ಕೆ ಅದರದ್ದೆ ಆದ ಮಿತಿ ಇದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಏಕೆಂದರೆ, ಮುಂಬೈ ಮತ್ತು ಪುಣೆ ನಡುವಿನ ಮೊದಲ ಎಕ್ಸ್‌ಪ್ರೆಸ್‌ವೇಗಳು ಪ್ರಾರಂಭವಾದಾಗ ಎಲ್ಲವೂ ಸರಿ ಹೋಯಿತು ಎನಿಸಿತ್ತಾದರೂ ಕ್ರಮೇಣ ಆ ಪಥವು ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿ, ಈಗ ಪ್ರಯಾಣಿಕರು ಎರಡು ನಗರಗಳ ನಡುವೆ ವಿಮಾನ ಸಂಪರ್ಕವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ