Chocolate: ಕಹಿಯಾಗಿದ್ದ ಚಾಕೋಲೇಟ್ ಸಿಹಿಯಾಗಿದ್ದು ಹೇಗೆ? ನಿಮ್ಮ ನೆಚ್ಚಿನ ತಿನಿಸಿನ ಬಗ್ಗೆ ನೀವೂ ತಿಳಿದುಕೊಳ್ಳಿ

ನಮ್ಮೆಲ್ಲರ ಮೆಚ್ಚಿನ ಚಾಕೋಲೇಟ್‍ನ ಇತಿಹಾಸ ಇಂದು ನಿನ್ನೆಯದಲ್ಲ, 4000 ವರ್ಷ ಹಿಂದಿನದ್ದು ಮತ್ತು ಪುರಾತನ ಮೆಸೋ ಅಅಂದರೆ ಇಂದಿನ ಮೆಕ್ಸಿಕೋಗೆ ಸೇರಿದ್ದು. ಏನಿದು ಚಾಕೋಲೇಟಿನ ಕಥೆ? ಬನ್ನಿ ತಿಳಿಯೋಣ..

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಚಿಣ್ಣರ ಹೃದಯ ಗೆದ್ದಿರುವ ಚಾಕೋಲೇಟ್ (Chocolate), ದೊಡ್ಡವರ ನಾಲಗೆಗೂ ಹಿತ. ಚಾಕೋಲೇಟ್, ಎಲ್ಲಾ ವಯೋಮಾನದವರೂ ನಾಲಗೆ ಚಪ್ಪರಿಸಿ ತಿನ್ನುವ ಸಿಹಿ ತಿನಿಸು. ಚಾಕಲೇಟನ್ನು ಇಷ್ಟಪಡದವರು ಬಹುಷಃ ಬಹಳ ವಿರಳ. ಕೇಕ್‍ಗಳಿಂದ (Cake) ಹಿಡಿದು ನಾನಾ ಪ್ರಕಾರದ ಸಿಹಿ ತಿನಿಸುಗಳಲ್ಲಿ ಬಳಸಲ್ಪಡುವ ಚಾಕೋಲೆಟ್ ಈ ದಿನಗಳಲ್ಲಿ ನಮ್ಮೆಲ್ಲಾ ಸಂಭ್ರಮಾಚರಣೆಗಳ ಅವಿಭಾಜ್ಯ ಅಂಗವಾಗಿದೆ. ಆದರೆ ನಮ್ಮೆಲ್ಲರ ಮೆಚ್ಚಿನ ಚಾಕೋಲೇಟ್‍ನ ಇತಿಹಾಸ ಇಂದು ನಿನ್ನೆಯದಲ್ಲ, 4000 ವರ್ಷ ಹಿಂದಿನದ್ದು ಮತ್ತು ಪುರಾತನ ಮೆಸೋ ಅಮೇರಿಕಾ (America) ಅಂದರೆ ಇಂದಿನ ಮೆಕ್ಸಿಕೋಗೆ ಸೇರಿದ್ದು. ಏನಿದು ಚಾಕೋಲೇಟಿನ ಕಥೆ ? ಬನ್ನಿ ತಿಳಿಯೋಣ

ಲ್ಯಾಟಿನ್ ಅಮೇರಿಕನ್ ನಾಗರೀಕತೆಯಲ್ಲಿ ಕೋಕೋ ಸಸ್ಯಗಳು 
ಪ್ರಪ್ರಥಮವಾಗಿ ಕೋಕೋ ಸಸ್ಯಗಳು ಆರಂಭಿಕ ಲ್ಯಾಟಿನ್ ಅಮೇರಿಕನ್ ನಾಗರೀಕತೆಯಲ್ಲಿ ಕಂಡು ಬಂದಿವೆ. ಈ ಕೋಕೋ ಸಸ್ಯಗಳನ್ನು ಚಾಕೋಲೇಟ್ ಆಗಿ ಪರಿವರ್ತಿಸಿದವರು ಓಲ್ಮೆಕ್ಸ್. ಆಗ ಕೋಕೋ ಸಸ್ಯಗಳಿಂದ ಚಾಕೋಲೇಟ್ ತಯಾರಿಸಿ ಅದನ್ನು ಔಷಧ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ಸೇವನೆ ಮಾಡುತ್ತಿದ್ದರು.

ಇದನ್ನೂ ಓದಿ:  Explained: ಜೇನುತುಪ್ಪದಲ್ಲೂ ಇದೆ ಅಪಾಯಕಾರಿ ಅಂಶಗಳು! ಏನೆಲ್ಲಾ ಡೇಂಜರ್ ಇದೆ ತಿಳಿಯಿರಿ

ಚಾಕೋಲೇಟನ್ನು ಕಂಡು ಹಿಡಿದ ಶತಮಾನಗಳ ಬಳಿಕ ಮಯನ್ನರು, ಹುರಿದ ಮತ್ತು ಪುಡಿ ಮಾಡಿದ ಕೋಕೋ ಬೀಜಗಳನ್ನು ಸಿಲ್ಲಿಸ್, ನೀರು ಮತ್ತು ಜೋಳದ ಹಿಟ್ಟಿನ ಜೊತೆ ಬೆರೆಸಿ ಕುಡಿಯುತ್ತಿದ್ದರು. ಅದನ್ನು ಅವರು ದೇವರ ಪಾನೀಯ ಎಂದು ಕರೆಯುತ್ತಿದ್ದರು.

ಕರೆನ್ಸಿಯಾಗಿ ಬಳಸುತ್ತಿದ್ದ  ಕೋಕೋ ಬೀಜಗಳು
ಚಾಕೋಲೇಟ್ ಬಗ್ಗೆ ಇನ್ನೊಂದು ವಿಚಿತ್ರ ಸಂಗತಿಯೊಂದಿದೆ, ಅದೇನೆಂದರೆ, ಕೋಕೋ ಬೀಜಗಳನ್ನು ಕರೆನ್ಸಿಯಾಗಿ ಬಳಸುತ್ತಿದ್ದರು. ಕೆಲವು ಶತಮಾನಗಳ ವರೆಗೆ ಕೇವಲ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಲು ಬಳಕೆಯಲ್ಲಿದ್ದ ಚಾಕೋಲೇಟ್ 15 ನೇ ಶತಮಾನದ ವೇಳೆಗೆ ಕರೆನ್ಸಿಯಾಗಿ ಕೂಡ ಬಳಕೆಗೆ ಬಂತು.

ಹೌದು, ಆಜ್‍ಟೆಕ್ಸ್ ಜನರು ಕೋಕೋ ಬೀಜಗಳನ್ನು ಕರೆನ್ಸಿಯಾಗಿಯೂ ಬಳಸಿದರು. ಅವರು ಚಾಕೋಲೇಟನ್ನು ತಮ್ಮ ದೇವರ ಕೊಡುಗೆ ಎಂದು ಭಾವಿಸಿದ್ದರು. ಅಷ್ಟೇ ಅಲ್ಲ, ಚಾಕೋಲೇಟ್ ಉಲ್ಲಾಸ ನೀಡುವ ಮತ್ತು ಕಾಮೋತ್ತೇಜಕವಾಗಿ ಪಾನೀಯವಾಗಿ ಪರಿಗಣಿಸಲ್ಪಟ್ಟಿತ್ತು. ಯುದ್ಧದ ತಯಾರಿಯ ಸಂದರ್ಭದಲ್ಲೂ ಅದನ್ನು ಕುಡಿಯುತ್ತಿದ್ದರು. 1528 ರಲ್ಲಿ ಆಜ್‍ಟೆಕ್ ಚಕ್ರವರ್ತಿಯು, ಚಿನ್ನವನ್ನು ಹುಡುಕುತ್ತಿದ್ದ ಸಂಶೋಧಕ ಹೆರ್ನಾನ್ ಕೊರ್ಟೆಸ್‍ಗೆ, ಚಿನ್ನದ ಬದಲಿಗೆ ಒಂದು ಕಪ್ ಕೋಕೋವನ್ನು ಕೊಟ್ಟಿದ್ದ ಎಂದು ಅಲ್ಲಿನ ದಂತ ಕಥೆಗಳು ತಿಳಿಸುತ್ತವೆ.

ಚಾಕಲೇಟ್ ಸಿಹಿಯಾಗಿದ್ದು ಹೇಗೆ?
ಹೆರ್ನಾನ್ ಕೊರ್ಟೆಸ್ ಮೂಲಕ ಚಾಕೋಲೇಟ್ ಸ್ಪೇನ್ ಅನ್ನು ತಲುಪಿತು. ನಿಮಗೆ ಗೊತ್ತೆ ಅಲ್ಲಿಯ ವರೆಗೆ ಚಾಕೋಲೇಟ್ ಒಂದು ಕಹಿ ಪಾನೀಯವಾಗಿತ್ತು. ಆದರೆ ಅಲ್ಲಿ ಅದಕ್ಕೆ ಜೇನು ತುಪ್ಪ ಮತ್ತು ಸಕ್ಕರೆಯನ್ನು ಬೆರಸಲಾಯಿತು. ಸಿಹಿ ರುಚಿಯನ್ನು ಪಡೆದುಕೊಂಡ ಚಾಕೋಲೇಟ್ ಶ್ರೀಮಂತರ ಪಾನೀಯವಾಗಿ ಬದಲಾಯಿತು. ಅಲ್ಲಿ ಕಾಥೋಲಿಕ್ ಸನ್ಯಾಸಿಗಳು ಕೂಡ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಇದನ್ನು ಕುಡಿಯುತ್ತಿದ್ದರು. ಆದರೆ, ಸ್ಪೇನ್ ಸಿಹಿ ಚಾಕೋಲಿಟಿನ ರಹಸ್ಯವನ್ನು ಇಡೀ ಪ್ರಪಂಚದಿಂದ ರಹಸ್ಯವಾಗಿ ಇಟ್ಟಿತ್ತು.

ಆರೋಗ್ಯದ ಪ್ರಯೋಜನಗಳಿಗಾಗಿ ಚಾಕಲೇಟ್ ಸೇವನೆ
1615 ರಲ್ಲಿ ಫ್ರೆಂಚ್ ದೊರೆ ಲೂಯಿಸ್ 13, ಸ್ಪ್ಯಾನಿಶ್ ದೊರೆ ಮೂರನೇ ಫಿಲಿಪ್‍ನ ಮಗಳು ಆಸ್ಟ್ರೀಯಾದ ಆ್ಯನ್‍ನನ್ನು ಮದುವೆಯಾದಾಗ, ಈ ರಹಸ್ಯ ಬೆಳಕಿಗೆ ಬಂತು. ರಾಣಿ, ಫ್ರಾನ್ಸಿನ ರಾಯಲ್ ಕೋರ್ಟ್‍ಗೆ ಚಾಕೋಲೇಟ್‍ಗಳನ್ನು ಪರಿಚಯಿಸಿದಳು. ಆ ನಂತರ, ಚಾಕೋಲೇಟಿನ ರುಚಿ ಕಂಡ ಮಂದಿ, ಯುರೋಪಿನ ಉದ್ದಕ್ಕೂ ಸ್ವಂತ ಕೋಕೋ ತೋಟಗಳನ್ನು ಬೆಳೆಸಲು ಆರಂಭಿಸಿದರು. ಯುರೋಪಿನ ರಾಜಮನೆತನದವರು ಆರೋಗ್ಯದ ಪ್ರಯೋಜನಗಳಿಗಾಗಿ ಚಾಕೋಲೇಟನ್ನು ಸೇವಿಸಲು ಆರಂಭಿಸಿದರು.

ಇದನ್ನೂ ಓದಿ:  Vitamin B 12: ದೇಹಕ್ಕೆ ಪ್ರತಿದಿನ ಬೇಕು ವಿಟಮಿನ್ ಬಿ 12; ಯಾವ ಪದಾರ್ಥಗಳು ಈ ಕೊರತೆ ಪೂರೈಸುತ್ತದೆ?

ಪಾನೀಯವಾಗಿ ಬಳಕೆಯಲ್ಲಿದ್ದ ಚಾಕಲೇಟ್ ಬಾರ್ ರೂಪದಲ್ಲಿ ಬಳಕೆಗೆ ಬಂದಿದ್ದು 1828 ರಲ್ಲಿ. ಕೈಗಾರಿಕಾ ಕ್ರಾಂತಿಯ ಕಾರಣದಿಂದ ನವನವೀನ ಸಾಧನಗಳನ್ನು ಕಂಡು ಹಿಡಿಯಲಾಯಿತು. ಅವುಗಳನ್ನು ಬಳಸಿ, ಚಾಕೋಲೇಟ್‍ಗೆ ಬಾರ್ ರೂಪ ನೀಡಲಾಯಿತು.

ಪ್ರಥಮ ಆಧುನಿಕ ಚಾಕೋಲೇಟನ್ನು ತಯಾರಿ
ಈಗಿನ ಆಧುನಿಕ ಚಾಕೋಲೇಟ್ ಸೃಷ್ಟಿಯಾಗಿದ್ದು, 1847 ರಲ್ಲಿ. ಜೋಸೆಫ್ ಫ್ರೈ ಎಂಬವರು ಪ್ರಥಮ ಆಧುನಿಕ ಚಾಕೋಲೇಟನ್ನು ತಯಾರಿಸಿದರು. 1868 ರ ಸಮಯಕ್ಕೆ ಕ್ಯಾಡ್ಬರಿ ಎಂಬ ಚಿಕ್ಕ ಕಂಪೆನಿಯೊಂದು ಇಂಗ್ಲೇಂಡ್‍ನಲ್ಲಿ ಚಾಕೋಲೇಟ್ ಮಿಠಾಯಿಗಳ ಬಾಕ್ಸನ್ನು ಮಾರಾಟ ಮಾಡುತ್ತಿತ್ತು. ಅದಾದ ಕೆಲವು ವರ್ಷಗಳ ಬಳಿಕ ನೆಸ್ಲೆ ಕಂಪೆನಿ ಮಿಲ್ಕ್ ಚಾಕೋಲೇಟನ್ನು ಮಾರುಕಟ್ಟೆಗೆ ಪರಿಚಯಿಸಿತು.
Published by:Ashwini Prabhu
First published: