Explained: ಒಲಿಂಪಿಕ್ಸ್‌​ ಕ್ರೀಡಾ ಜ್ಯೋತಿ ಕೋವಿಡ್ ಸಂದರ್ಭದಲ್ಲಿ ಜಗತ್ತಿಗೆ ಉತ್ಸಾಹವನ್ನು ಹಂಚುವ ಸಂಜೀವಿನಿ...!

10 ವರ್ಷದ ಹಿಂದೆ ಭೂಕಂಪದಿಂದ ಹಾಳಾಗಿದ್ದ ಫುಕುಶಿಮಾ ಪ್ರಾಂತ್ಯದಿಂದ ರಿಲೇ ಆರಂಭವಾಗಲಿದೆ. ಸುನಾಮಿ ಮತ್ತು ಮೂರು ನ್ಯೂಕ್ತಿಯರ್​ ದುರಂತಗಳ ತಾಣವಾಗಿದ್ದು. ಇಲ್ಲಿ 2011, ಮಾರ್ಚ್​ 11 ರಂದು 18,000 ಜನರು ಸಾವನ್ನಪ್ಪಿದ್ದರು.

ಒಲಿಂಪಿಕ್ ಕ್ರೀಡಾ ಜ್ಯೋತಿ

ಒಲಿಂಪಿಕ್ ಕ್ರೀಡಾ ಜ್ಯೋತಿ

  • Share this:
ಜಪಾನ್‌ನ ಈಶಾನ್ಯ ಪ್ರಾಂತ್ಯದ ಫುಕುಶಿಮಾದಲ್ಲಿ ಗುರುವಾರ ನಡೆದ ಒಲಿಂಪಿಕ್ಸ್‌ ಟಾರ್ಚ್ ರಿಲೇಗೆ 23 ಜುಲೈ 2021 ರಂದು ಚಾಲನೆ ಸಿಗಲಿದ್ದು, ಟೋಕಿಯೋ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದತ್ತ ನಾಲ್ಕು ತಿಂಗಳ ಪ್ರಯಾಣವನ್ನು ಆರಂಭಿಸಿದೆ. ವಿಶ್ವದ ಚಿತ್ತವನ್ನೇ ತನ್ನತ್ತ ಸೆಳೆದಿರುವ ಒಲಪಿಂಕ್ಸ್ ಜುಲೈ 23 ರಂದು ಆರಂಭವಾಗಲಿದ್ದು ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ.

ಕೊರೋನಾ ಸಾಂಕ್ರಾಮಿಕ​ ಕಾಲಘಟ್ಟದಲ್ಲಿ ಒಲಂಪಿಕ್ಸ್​​ ನಡೆಯುವ ಬಗ್ಗೆಯೇ ಸಾಕಷ್ಟು ಚರ್ಚೆಗಳು ಎದ್ದಿದೆ. ಸಾಕಷ್ಟು ಅನುಮಾನಗಳ ನಡುವೆಯೇ ಸಕಾರಾತ್ಮಕ ನಡೆಯನ್ನು ಟೋಕಿಯೋ ತೋರಿಸಿದೆ. ಒಲಂಪಿಕ್ ಕ್ರೀಡಾ ಜ್ಯೋತಿ ಕೇವಲ ಕ್ರೀಡೆಯ ಜ್ಯೋತಿಯಾಗಿರದೇ ಅದು ಈ ಕೋವಿಡ್​ 19 ಸಮಯದಲ್ಲಿ ಇಡೀ ಜಗತ್ತಿಗೆ ಹೊಸ ಬೆಳಗಾಗಲಿದೆ ಎನ್ನುವ ಆಶಯ ಮನೆಮಾಡಿದೆ.

ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿ ಸ್ಲೈಡ್​ ಶೋ ಉತ್ತರ ಜಪಾನ್​ನಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯಿತು. ಜುಲೈ 23 ರಂದು ಆರಂಭವಾಗುವ ಟೋಕಿಯೋ ಒಲಂಪಿಕ್ಸ್​ ಪ್ರಾರಂಭಕ್ಕೆ 119 ದಿನಗಳು ಬಾಕಿ ಉಳಿದಿವೆ. ಇನ್ನೂ ಟೋಕಿಯೋ ಒಲಂಪಿಕ್ಸ್​ನ ಉದ್ಘಾಟನಾ ಸಮಾರಂಭಕ್ಕೆ 10,000 ಓಟಗಾರರು , ಜಪಾನ್​ನ 47 ಪ್ರಾಂತ್ಯಗಳನ್ನು ಕ್ರಿಸ್​ಕ್ರಾಸ್​ ಮಾಡುವ ನಿರೀಕ್ಷೆಯಿದೆ.

ಸಾಂಕ್ರಾಮಿಕದ ನಡುವೆಯೂ ಈ ಕ್ರೀಡಾ ಜ್ಯೋತಿಯನ್ನು ಇನ್ನು 4 ತಿಂಗಳಲ್ಲಿ ಹಿಡಿಯುವ ನಿರೀಕ್ಷೆ ಇದೆ. ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್​ ಬಳಕೆಯಂತಹ ಮುಂಜಾಗ್ರತ ಕ್ರಮಗಳಿಂದ ಈ ದೊಡ್ಡ ಈವೆಂಟ್​​ ಅನ್ನು ಜಾಗೃತವಾಗಿ ಮುನ್ನಡೆಸಬೇಕಾಗಿದೆ. ಫುಕುಶಿಮಾ ಪ್ರಾಂತ್ಯದಿಂದ ರಿಲೇ ಆರಂಭವಾಗಲಿದ್ದು, ಈ ಹಿಂದಿನಂತೆ ಹೆಚ್ಚು ಜನರನ್ನು ಒಳಗೊಂಡಿರದೆ ಕಡಿಮೆ ವೀಕ್ಷಕರನ್ನು ಒಳಗೊಂಡಿರುತ್ತದೆ. ಅಲ್ಲದೇ ಕ್ರೀಡಾ ಪ್ರೋತ್ಸಾಹದ ಕೂಗಾಟಕ್ಕೆ ನಿಷೇಧವಿವೆ.

Explained: ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಲಸಿಕೆ: ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ!

ಒಂದು ವೇಳೆ ರಿಲೇಯಲ್ಲಿ ಸಮಸ್ಯೆಯಾದರೆ, ನಿಧಾನವಾದರೆ, ಕೋವಿಡ್​ 19 ಕೇಸ್​ಗಳು ಹೆಚ್ಚಾದರೆ, ಒಲಿಂಪಿಕ್ಸ್​ ನಡೆಸುವ ಸಾಧ್ಯತೆಯ ಬಗ್ಗೆ ಕೆಂಪು ಧ್ವಜವನ್ನು ಕಳುಹಿಸುವ ನಿರೀಕ್ಷೆಯೂ ಇದೆ. ಈ ವಿಷಯವನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಇನ್ನು ಸಂಘಟನಾ ಸಮಿತಿಯ ಸಿಇಓ ಮತ್ತು ಜಪಾನ್​ನ ಬ್ಯಾಂಕ್​ನ ಮಾಜಿ ಉಪ ಗವರ್ನರ್ ತೋಶಿರೋ ಮುಟ್ಟೋ ಅವರು ರಿಲೇಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

​ಕಳೆದ ವರ್ಷ ಸಾಂಕ್ರಾಮಿಕದ​ ಕಾರಣದಿಂದ ಒಲಂಪಿಕ್ಸ್ ಅನ್ನು ಮುಂದೂಡಲಾಗಿತ್ತು. 1896 ರಿಂದ ಮಾಡರ್ನ್ ಒಲಂಪಿಕ್ ಆರಂಭವಾದ ದಿನದಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ ಅನ್ನು ಮುಂದೂಡಲಾಗಿತ್ತು.

ಭರವಸೆ ನಮ್ಮ ಹಾದಿಯನ್ನು ಬೆಳಗುತ್ತದೆ

ಜಪಾನ್​ನಲ್ಲಿ ಸಾರ್ವಜನಿಕರ ಅಭಿಪ್ರಾಯವು ಒಲಿಂಪಿಕ್ಸ್‌​ ಪರವಾಗಿರುತ್ತದೆ ಎನ್ನುವುದು ಈ ಈವೆಂಟ್​​ನ ಸಂಘಟಕರು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಕಮಿಟಿಯವರ ಆಶಯವಾಗಿದೆ. 'ಭರವಸೆ ನಮ್ಮ ಹಾದಿಯನ್ನು ಬೆಳಗುತ್ತದೆ' ಎನ್ನುವುದು ರಿಲೇಯ ಸ್ಲೋಗನ್ ಆಗಿದೆ. ಒಲಂಪಿಕ್​ನ ಈ ಕ್ರೀಡಾ ಜ್ಯೋತಿಯೂ ಜಪಾನ್​ ಅನ್ನು ಮೇಲೆತ್ತುವುದಲ್ಲದೇ ಸುರಂಗದ ಕೊನೆಯಲ್ಲಿ ಹೊಳೆಯುವ ಜ್ಯೋತಿಯೂ ಎಲ್ಲರ ಜೀವನವನ್ನು ಸಹಜ ಸ್ಥಿತಿಗೆ ತರುವ ಭರವಸೆಯನ್ನು ಒಳಗೊಂಡಿದೆ.

ಈ ಹಿನ್ನೆಲೆಯಲ್ಲಿ ಜಪಾನ್​ನಲ್ಲಿ ನಡೆದ ಒಂದು ಪೋಲ್​ ನಲ್ಲಿ ಜಪಾನಿಗರು ಹೆಚ್ಚು ನೆಗೆಟೀವ್​ ಆಗಿಯೇ ಪ್ರತಿಕ್ರಿಯಿಸಿದ್ದು, ಸುಮಾರು 80 ರಷ್ಟು ಜನರು ಒಲಿಂಪಿಕ್ಸ್ ಮುಂದೂಡಬಹುದು ಇಲ್ಲ ಕ್ಯಾನ್ಸಲ್​ ಆಗಬಹುದು ಎಂದಿದೆ. 'ಟೋಕಿಯೋ ಒಲಂಪಿಕ್ಸ್​ ಗೇಮ್ಸ್​​ನ ಬಗ್ಗೆ ಅಲ್ಲಿನ ಜನರು ಇನ್ನೂ ಕೂಡ ಆತಂಕದಲ್ಲಿದ್ದಾರೆ ಎನ್ನುವುದು ನಮಗೆ ಚೆನ್ನಾಗಿ ತಿಳಿದಿದೆ' ಎಂದು ಮ್ಯೂಟೋ ಬುಧವಾರ ತಿಳಿಸಿದ್ದಾರೆ. 'ಅಲ್ಲದೆ ಜಪಾನ್​ನಲ್ಲಿ ಅನೇಕ ಕ್ರೀಡೆಗಳು ನಡೆಯುವುದರಿಂದ ಜನರು ಪ್ರೋತ್ಸಾಹಿಸಬೇಕು' ಎಂದು ಅವರು ಹೇಳಿದರು.

ರಿಲೇ ಮತ್ತು ಒಲಿಂಪಿಕ್ಸ್ ಎರಡರಿಂದಲೂ ವೈರಸ್ ಹರಡಬಹುದು ಎನ್ನುವ ಭಯವಿದೆ. ಅಲ್ಲದೇ ಒಲಿಂಪಿಕ್ಸ್​ ನಡೆಸಲು ಅಗತ್ಯವಾದ ವೆಚ್ಚದ ಬಗ್ಗೆಯೂ ಅನೇಕ ವಿರೋಧಗಳು ವ್ಯಕ್ತವಾಗಿವೆ. ಅಧಿಕೃತವಾಗಿ 15.4 ಬಿಲಿಯನ್​​ ಡಾಲರ್ ಹಣವನ್ನು ಮೀಸಲಿರಿಸಲಾಗಿದೆ. ಈಗಾಗಲೇ ಬಹುತೇಕ ಲೆಕ್ಕ ಪರಿಶೋಧನೆಗಳ ಪ್ರಕಾರ ಈ ಹಣವೂ ಬಹಳ ದುಪ್ಪಟ್ಟು ಎಂದು ತಿಳಿಸಿದ್ದು, ಆಕ್ಸ್​ಫರ್ಡ್​ ವಿಶ್ವ ವಿದ್ಯಾಲಯದ ಅಧ್ಯಯನವು ಇದು ಅತ್ಯಂತ ದುಬಾರಿ ಒಲಿಂಪಿಕ್ಸ್ ಎಂದು ಹೇಳಿದೆ.

ಫುಕುಶೋಮಾ ಮರುನಿರ್ಮಾಣ

10 ವರ್ಷದ ಹಿಂದೆ ಭೂಕಂಪದಿಂದ ಹಾಳಾಗಿದ್ದ ಫುಕುಶಿಮಾ ಪ್ರಾಂತ್ಯದಿಂದ ರಿಲೇ ಆರಂಭವಾಗಲಿದೆ. ಸುನಾಮಿ ಮತ್ತು ಮೂರು ನ್ಯೂಕ್ತಿಯರ್​ ದುರಂತಗಳ ತಾಣವಾಗಿದ್ದು. ಇಲ್ಲಿ 2011, ಮಾರ್ಚ್​ 11 ರಂದು 18,000 ಜನರು ಸಾವನ್ನಪ್ಪಿದ್ದರು. ಒಂದು ವರ್ಷಗಳ ಕಾಲ ಒಲಿಂಪಿಕ್ಸ್‌ ವಿಳಂಬವಾಗಿದ್ದ ಕಾರಣ, ಉತ್ತರ ಈಶಾನ್ಯದ ಪ್ರದೇಶಗಳ ಮರುನಿರ್ಮಾಣದ ಕಡೆ ಗಮನ ನೀಡಲಾಗಿತ್ತು. ಸಾಂಕ್ರಾಮಿಕ ಸುಧಾರಣೆಯ ಕಡೆಗೆ ಗಮನವಹಿಸಿದ್ದರಿಂದ ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿವೆ.

ಸಂಘಟಕರು ಪುನಃ ಈ ಪ್ರದೇಶವನ್ನು ಮರುನಿರ್ಮಾಣ ಮಾಡಲು ಪ್ರಯತ್ನ ನಡೆಸಿದ್ದಾರೆ. ಒಲಿಂಪಿಕ್ಸ್‌​ ಈ ಸಂಪನ್ಮೂಲವನ್ನು ಬದಲಿಸಿದೆ ಎನ್ನುವುದು ನಿವಾಸಿಗಳ ಅನಿಸಿಕೆ. ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಸೀಕೋ ಹಶಿಮೋಟೊ ಅವರು ಬುಧವಾರ ಈ ರಿಲೇ ಯೂ ಸಹಜ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿರುವವರಿಗೆ ಸ್ಫೂರ್ತಿಯನ್ನು ತುಂಬುತ್ತದೆ ಎಂದಿದ್ದಾರೆ.

ಕಟ್ಟುನಿಟ್ಟಿನ ಕ್ರಮಗಳು

ಗುರುವಾರ ಆರಂಭವಾಗುವ ಈ ದೊಡ್ಡ ಈವೆಂಟ್​ನಲ್ಲಿ ಜನಸಾಮಾನ್ಯರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಅಲ್ಲದೇ ಟೋಕಿಯೋದಿಂದ ಬರುವ ಸಿಬ್ಬಂದಿಯನ್ನು ಸಹ ಸೀಮಿತಗೊಳಿಸಲಾಗಿದ್ದು ಅಲ್ಲಿಯೂ ಸಹ ಹೆಚ್ಚು ಮುನ್ನಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಈ ಮೊದಲು ರಿಲೇಯನ್ನು ಕ್ಯಾನ್ಸಲ್ ಮಾಡಲು ಮಾತುಕತೆ ನಡೆಸಲಾಗುತ್ತು. ಆದರೆ ಟೊಯೋಟಾಮತ್ತು ಕೋಕಾಕೋಲಾ ಅತಿ ಹೆಚ್ಚು ಪ್ರಾಯೋಜಕತ್ವವಾದ ಕಾರಣ ಆ ಸಾಧ್ಯತೆಗಳನ್ನು ಕೈಬಿಡಲಾಯಿತು. 1936 ರ ಬರ್ಲಿನ್​ ಒಲಂಪಿಕ್ಸ್​ನಲ್ಲಿ ಮೊದಲ ರಿಲೇಯನ್ನು ಆರಂಭಿಸಲಾಗಿತ್ತು ಎನ್ನುವುದು ಇಲ್ಲಿ ನೆನೆಯಬೇಕಾದ ಸಂಗತಿ. ರಸ್ತೆಬದಿಯ ಹಾದಿಯಲ್ಲಿ ಹೆಚ್ಚು ದಟ್ಟಣೆಯನ್ನು ನಿಯಂತ್ರಿಸಲು ಮುನಿಸಿಪಾಲಿಟಿಯ ಜೊತೆಗೆ ಸಹಯೋಗ ಮಾಡಿಕೊಂಡಿದ್ದು, ಸುರಕ್ಷಿತ ಕಾರ್ಯಾಚರಣೆಗೆ ಸ್ಥಳವನ್ನು ಗುರುತಿಸಲಾಗಿದೆ ಎಂದು ಹಶಿಮೋಟೋ ಹೇಳಿದರು.

ಮೊದಲ ರನ್ನರ್

2011 ರ ಮೊದಲ ವಿಶ್ವ ಮಹಿಳಾ ಕಪ್ ಗೆ ಜಪಾನ್​ ತಂಡವನ್ನು ತರಬೇತುಗೊಳಿಸಿದ ನೋರಿಯೋ ಸಾಸಕಿ ಮೊದಲ ಓಟಗಾರರಾಗಿದ್ದಾರೆ. ಅಲ್ಲದೇ ಟೀಂನ 15 ಸದಸ್ಯರು ಮೊದಲ ದಿನ ಓಡಲಿದ್ದಾರೆ. 2011ರ ವಿಜೇತ ತಂಡದ ನಾಯಕರಾದ ಹೋಮಾರೆ ಸಾವಾ ಅನಾರೋಗ್ಯದ ಕಾರಣದಿಂದ ಹಿಂದೆ ಸರಿದಿದ್ದಾರೆ.

ರಿಲೇಯು ಫುಕುಶಿಮಾದಲ್ಲಿರುವ ರಾಷ್ಟ್ರೀಯ ಸಾಕರ್ ತರಬೇತಿ ಕೇಂದ್ರದ ಜೆ - ಹಳ್ಳಿಯಿಂದ ಆರಂಭವಾಗಲಿದೆ. ಈ ಸ್ಥಳವನ್ನು ದುರಂತದ ನಂತರದ ರಿಲೀಫ್ ವರ್ಕ್​ ಕೇಂದ್ರವಾಗಿ ಬಳಸಲಾಗಿತ್ತು. 'ಕ್ರೀಡಾ ಶಕ್ತಿಯೂ ಕೇವಲ ಜಪಾನ್​ಗೆ ಮಾತ್ರವಲ್ಲ ಜಗತ್ತಿಗೆ ಹಂಚಿಕೆಯಾಗುತ್ತದೆ' ಎಂದು ಸಾಸಕಿ ಹೇಳಿದ್ದಾರೆ. 'ಅದು ನಮ್ಮ ಜವಾಬ್ದಾರಿ ಮತ್ತು ಮಿಷನ್ ಆಗಿದೆ, ಈ ಉತ್ಸಾಹದೊಂದಿಗೆ ನಾನು ಟಾರ್ಚ್​ ರಿಲೇಗಾಗಿ ಓಡುವೆ' ಎಂದಿದ್ದಾರೆ.
Published by:Latha CG
First published: