• Home
 • »
 • News
 • »
 • explained
 • »
 • Explainer: ಈ ವಿಷಯದಲ್ಲಿ ಭಾರತ ಚೀನಾದಿಂದ ಈ 5 ಪಾಠಗಳನ್ನು ಕಲಿಯಲೇಬೇಕು!

Explainer: ಈ ವಿಷಯದಲ್ಲಿ ಭಾರತ ಚೀನಾದಿಂದ ಈ 5 ಪಾಠಗಳನ್ನು ಕಲಿಯಲೇಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ಚೀನಾದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳನ್ನು ಅವಲೋಕಿಸಿದರೆ ಇದರಿಂದ ಭಾರತ ಹಾಗೂ ಜಗತ್ತು ಕಲಿಯಬೇಕಾದ ಪಾಠವಿದೆ ಎಂದರೆ ತಪ್ಪಾಗಲಾರದು.

 • Share this:

  ಈಗಾಗಲೇ ಕಳೆದ ಎರಡು ವರ್ಷಗಳನ್ನು ಈ ಕೋವಿಡ್(COVID) ಮಹಾಮಾರಿಯು ಜಗತ್ತು ಹಣ್ಣುಗಾಯಿ ನೀರುಗಾಯಿಯಾಗುವಂತೆ ಮಾಡಿದೆ ಎಂಬುದು ಗೊತ್ತಿರುವ ವಿಷಯವೇ ಆಗಿದೆ. ಸದ್ಯ ಈಗ ಎಲ್ಲೆಡೆ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, ಲಸಿಕೆಗಳೂ(Vaccine) ಸಹ ಒಂದು ಪ್ರತಿರೋಧದ ಹಾಗೆ ರಕ್ಷಿಸುತ್ತಿರುವುದರಿಂದ ಸಹಜ ವಾತಾವರಣ ನಿರ್ಮಾಣವಾಗುತ್ತಿದೆ ಎನ್ನಬಹುದು. ಆದಾಗ್ಯೂ, ಚೀನಾ(China) ದೇಶದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಮತ್ತೆ ಉಲ್ಬಣಗೊಳ್ಳುತ್ತಿದ್ದು ಅಲ್ಲಿನ ಜನಜೀವನ ಅಕ್ಷರಶಃ ಪರದಾಡುವಂತೆ ಆಗಿದೆ.


  ಈಗ ವರದಿಯಾಗಿರುವಂತೆ ಚೀನಾದಲ್ಲಿ ಕೋವಿಡ್ ಸಂಕ್ರಮಣದ ವೈವಿಧ್ಯಮಯ ಪ್ರಕರಣಗಳು ನಿತ್ಯವೂ ಬರುತ್ತಿದ್ದು, ಇದು ಎಲ್ಲಾ ಸಮಯದ ಅತಿ ಗರಿಷ್ಠ ಪ್ರಕರಣಗಳಾಗಿ ಹೊರಹೊಮ್ಮುತ್ತಿದೆ ಎನ್ನಲಾಗಿದೆ. ಇದನ್ನು ಕೇವಲ ವರದಿಯಾಗಿರುವ ಸಂಖ್ಯೆಗಳ ಮೇಲೆ ಅಂದಾಜಿಸಲಾದರೆ, ಇನ್ನೂ ವರದಿಯಾಗದ ಅದೆಷ್ಟೋ ಪ್ರಕರಣಗಳು ದೇಶದಲ್ಲಿ ಇರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ 90 ಪ್ರತಿಶತದಷ್ಟು ಪ್ರಕರಣಗಳಲ್ಲಿ ಸೋಂಕಿತರು ಯಾವುದೇ ಲಕ್ಷಣ ಹೊಂದಿಲ್ಲದೆ ಇರುವುದು.


  ಭಾರತಕ್ಕೆ ಹಾಗೂ ಜಗತ್ತಿಗೆ ಪಾಠ


  ಸದ್ಯ ಚೀನಾದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳನ್ನು ಅವಲೋಕಿಸಿದರೆ ಇದರಿಂದ ಭಾರತ ಹಾಗೂ ಜಗತ್ತು ಕಲಿಯಬೇಕಾದ ಪಾಠವಿದೆ ಎಂದರೆ ತಪ್ಪಾಗಲಾರದು. ಈ ಸಂಕ್ರಮಣವು ಕಡಿಮೆಯಾಗಿದೆಯೇ ಹೊರತು ನಿರ್ನಾಮವಾಗಿಲ್ಲ ಹಾಗೂ ಇದು ಪ್ರತ್ಯೇಕವಾಗಿ ವಿವಿಧ ರೂಪಾಂತರಗಳಲ್ಲಿ ಮತ್ತೆ ಹರಡುವ ಎಲ್ಲ ಸಾಧ್ಯತೆಗಳನ್ನೂ ಹೊಂದಿದೆ. ಇನ್ನು, ಈ ಬಗ್ಗೆ ತಿಳಿದುಕೊಳ್ಳಬೇಕಾದ ನೀತಿಗಳು ಈ ಕೆಳಗಿನಂತಿವೆ.


  ಇದನ್ನೂ ಓದಿ: Explained: ಕೆಲವೊಬ್ಬರು ಕೋವಿಡ್​ನಿಂದ ಗುಣಮುಖರಾಗಲು ಕಾರಣಗಳೇನು? ತಜ್ಞರು ತಿಳಿಸಿರುವ ಅಂಶಗಳು ಹೀಗೆವೆ ನೋಡಿ


  1. ಇತ್ತೀಚಿನ ರೂಪಾಂತರಗಳ ಬಗ್ಗೆ ಎಚ್ಚರವಿರಲಿ


  ಈಗ ಚೀನಾದಲ್ಲಿ ಮತ್ತೆ ಹೊಚ್ಚ ಹೊಸ ಕೋವಿಡ್ ರೂಪಾಂತರ ಕಂಡುಬಂದಿದ್ದು ಅದರ ಮೂಲಕ ಗುರುವಾರದವರೆಗೆ 31000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಹಾಗಾಗಿಯೇ ಇಂದು ಚೈನಾದಲ್ಲಿ ಕಠಿಣ ಸ್ಥಳೀಯ ಲಾಕ್ ಡೌನ್​​ಗಳು ಈಗಲೂ ಇರುತ್ತಿರುವುದನ್ನು ನೋಡಬಹುದಾಗಿದೆ. ಚೀನಾದ ಕೋವಿಡ್ ವಿರುದ್ಧದ ಜೀರೊ ರೆಸಿಸ್ಟನ್ಸ್ ಪಾಲಿಸಿಯು ದಿನೇ ದಿನೇ ಕಠಿಣವಾಗುತ್ತಲೇ ಇದೆ. ವಿಶೇಷವಾಗಿ ಈ ಹೊಸ ಓಮಿಕ್ರಾನ್ ರೂಪಾಂತರವು ಸಾಕಷ್ಟು ಪ್ರಖರವಾದ ಹರಡುವಿಕೆಯ ವೇಗ ಹೊಂದಿದ್ದು ಸೋಂಕಿತ ಜನರು ಅಸಿಂಪ್ಟಾಮ್ಯಾಟಿಕ್ ಆಗಿರುವುದು ಅಲ್ಲಿನ ಸ್ಥಳೀಯ ಆಡಳಿತಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಈಗಾಗಲೇ ಒಂದು ವರದಿಯ ಪ್ರಕಾರ, ಗುರುವಾರದವರೆಗೆ 27,500 ಪ್ರಕರಣಗಳು ಚೈನಾದಲ್ಲಿ ವರದಿಯಾಗಿದೆ. ಆದರೆ, ತಜ್ಞರ ಪ್ರಕಾರ, ಈ ಅಂಕಿಗಿಂತಲೂ ಪ್ರಕರಣಗಳು ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ಏಕೆಂದರೆ ಚೀನಾ ತಾನು ನೀಡುವ ಅಂಕಿ-ಅಂಶಗಳು ಸಮರ್ಪಕವಾಗಿರುವುದಿಲ್ಲವೆಂದು ಹಲವರ ಬಲವಾದ ಅಭಿಪ್ರಾಯವಾಗಿದೆ.


  2. ಲಸಿಕಾಕರಣ, ಬೂಸ್ಟರ್ ಡೋಸ್ ಹೆಚ್ಚಿಸಿ


  ಇನ್ನು, ಈ ವಿಷಯದಲ್ಲಿ ಕಲಿಯಬೇಕಾದ ಇನ್ನೊಂದು ಪಾಠವೆಂದರೆ ಲಸಿಕೆ ನೀಡುವುದು ಹಾಗೂ ಬೂಸ್ಟರ್ ಡೋಸ್ ನೀಡುವಿಕೆಯ ವೇಗವನ್ನು ಇನ್ನಷ್ಟು ಹಾಗೂ ತ್ವರಿತವಾಗಿ ಹೆಚ್ಚಿಸಬೇಕಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು, ಈಗ ಹೊರಹೊಮ್ಮಿರುವ ಹೊಸ ಓಮಿಕ್ರಾನ್ ವೈರಾಣು ಹರಡದಂತೆ ತಡೆ ಹಿಡಿಯುವುದನ್ನು "ಅತ್ಯಂತ ಕಠಿಣ" ಎಂದು ಹೇಳಿಕೆ ನೀಡಿದೆ. ಅಲ್ಲದೆ ಈ ವೈರಾಣೂ ಸಹ ವಿಕಸನ ಹೊಂದುತ್ತಲೇ ಇದ್ದು ಮತ್ತಷ್ಟು ಕಠಿಣವಾಗುತ್ತಲೇ ಸಾಗಿದೆ ಎಂಬುದು ಇಲ್ಲಿ ಗಮನಿಸಬೇಕಾಗಿದೆ. ಹಾಗಾಗಿ ಚೀನಾ ತನ್ನಲ್ಲಿರುವ 60-69 ವಯಸ್ಸಿನವರಲ್ಲಿ ಲಸಿಕೆ ನೀಡುವಿಕೆಯನ್ನು ಚುರುಕುಗೊಳಿಸಬೇಕಾಗಿದೆ. ಚೀನಾದ ಕೆಲವು ಸಂಶೋಧನೆಗಳು ಹೇಳಿರುವ ಪ್ರಕಾರ, ಬೂಸ್ಟರ್ ಡೋಸ್ ಈ ಕೋವಿಡ್ ಗತಿಯನ್ನು ನಿಸ್ತೇಜಿತಗೊಳಿಸಲಿದೆ ಎನ್ನಲಾಗಿದೆ. ಭಾರತವೂ ಸೇರಿದಂತೆ ಇತರೆ ಕೆಲವು ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಪ್ರಮಾಣವು ಕಡುಮೆಯಿದ್ದು ಇದನ್ನು ವೇಗಗೊಳಿಸಬೇಕಾದ ಅವಶ್ಯಕತೆಯಿದೆ ಎಂದಾಗಿದೆ.


  3. ಕೋವಿಡ್ ಜೊತೆ ಹೊಂದಾಣಿಕೆ


  ಈಗಾಗಲೇ ಜಗತ್ತಿನ ಬಹುತೇಕ ದಿಗ್ಗಜ ರಾಷ್ಟ್ರಗಳ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದು ಚೀನಾದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಆದರೆ, ಇಂತಹ ದುಸ್ತರ ಪರಿಸ್ಥಿತಿಯಲ್ಲೇ ಈ ಹೊಸ ವೈರಾಣು ರೂಪಾಂತರವು ಬಂದೊದಗಿದ್ದು ದೇಶಕ್ಕೆ ದೊಡ್ಡ ಸವಾಲಾಗಿದೆ. ಅಲ್ಲದೆ, ಸ್ಥಳೀಯ ಲಾಕ್ ಡೌನುಗಳು ದೇಶದ ಆರ್ಥಿಕತೆಗೆ ಬಲವಾದ ಪೆಟ್ಟು ನೀಡುತ್ತಿವೆ. ಈ ಹಿಂದೆ ಚೀನಾ ತಾನು ತನ್ನಲ್ಲಿರುವ ಹೆಚ್ಚುವರಿ ಬಡತನವನ್ನು ನಿರ್ಮೂಲನೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ, ಪುನರಾವರ್ತಿತವಾಗುತ್ತಿರುವ ನಿರ್ಬಂಧಗಳು ದೇಶದ ಸಣ್ಣ ಸಣ್ಣ ಉದ್ಯಮಗಳಿಗೆ ಆಘಾತ ನೀಡಿದ್ದು ಮುಂದೆ ಪರಿಸ್ಥಿತಿ ಏನಾಗಬಹುದೆಂದು ಕಾದು ನೋಡಬೇಕಾಗಿದೆಯಷ್ಟೆ.


  ಚೀನಾದ ಚಾಂಗ್ ಕಿಂಗ್ ಹಾಗೂ ಹೆನನ್ ಪ್ರದೇಶಗಳು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಪ್ರಮುಖ ಪ್ರದೇಶಗಳಾಗಿದ್ದು ಸದ್ಯ ಈಗ ಔಟ್ ಬ್ರೆಕ್ ಆಗಿರುವ ಹೊಸ ವೈರಾಣುವಿನ ಎಪಿಸೆಂಟರ್ ಸಹ ಈ ಪ್ರದೇಶಗಳೇ ಆಗಿವೆ. ಹಾಗಾಗಿ ಲಾಕ್ಡೌನುಗಳು ಮುಂದುವರೆದರೆ ಅದು ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಯಾವ ರೀತಿಯ ಅಡ್ಡ ಪರಿಣಾಮಗಳನ್ನುಂಟು ಮಾಡಲಿದೆ ಎಂಬುದು ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ, ಕೆಲವು ಆಯ್ದ ವಿಧಾನಗಳ ಮೂಲಕ ಹರಡುವಿಕೆಯನ್ನು ನಿಯಂತ್ರಣದಲ್ಲಿರಿಸಿಕೊಂಡು ಮುಂದೆ ಸಾಗ ಬೇಕಾದ ಪರಿಸ್ಥಿತಿ ಸದ್ಯ ಕಂಡುಬರುತ್ತಿದೆ.


  4. ಎಚ್ಚರಿಕೆಯಿಂದಿರಿ


  ಈಗ ಒಂದೆಡೆ ಜಗತ್ತೆಲ್ಲ ಕೋವಿಡ್ ಸಂಕಷ್ಟದಿಂದ ಬಳಲಿ ಬೆಂಡಾಗಿ ಈಗಷ್ಟೆ ಮತ್ತೆ ಸುಧಾರಣೆಯ ಮಾರ್ಗದಲ್ಲಿ ಚಲಿಸುತ್ತಿರುವಾಗ ಮತ್ತೊಂದೆಡೆ ಚೈನಾದಲ್ಲಿ ಉದ್ಭವಗೊಂಡಿರುವ ಹೊಸ ರೂಪಾಂತರವು ಕೋವಿಡ್ ಅಂತ್ಯವಾಗಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ ಹಾಗೂ ಈ ದಿಸೆಯಲ್ಲಿ ಮಿಕ್ಕ ರಾಷ್ಟ್ರಗಳೂ ಸಹ ಬಲು ಎಚ್ಚರಿಕೆಯಿಂದ ಇರಬೇಕಾಗಿದೆ ಎಂಬುದರ ಬಗ್ಗೆಯೂ ಸಂಕೇತ ನೀಡುತ್ತಿದೆ ಎನ್ನಬಹುದು. ಈಗ ರೂಪಗೊಂಡಿರುವ ಹೊಸ ತಳಿ ವೈರಾಣುಗಳು ಲಸಿಕೆಗಳಿಗೆ ಹೆಚ್ಚಿನ ಪ್ರತಿರೋಧಕತೆಯನ್ನು ಹೊಂದಿರಬಹುದು. ಸೋಂಕಿನ ಗಂಭೀರತೆಯನ್ನು ಕಡಿಮೆಗೊಳಿಸುವ ಲಸಿಕೆಗಳಿಗಿಂತಲೂ ಸೋಂಕನ್ನು ತಡೆಯುವಂತಹ ಲಸಿಕೆಗಳ ಅಭಿವೃದ್ಧಿಗೆ ಈಗ ಹೆಚ್ಚಿನ ಗಮನ ಹರಿಸಬೇಕಾಗಿದೆ.


  ಈ ಸಂದರ್ಭದಲ್ಲಿ ಬಹು ಜನಸಂಖ್ಯೆಯುಳ್ಳ ಚೀನಾ ಹಾಗೂ ಭಾರತದಂತಹ ದೇಶಗಳಲ್ಲಿ ಬೂಸ್ಟರ್ ಡೋಸ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಾದ ಅಗತ್ಯ ಅನಿವಾರ್ಯವಿದೆ. ಏಕೆಂದರೆ ಈ ಮೂಲಕ ಭವಿಷಯದಲ್ಲಿ ಸಂಭಾವ್ಯ ಸೋಂಕಿನ ಸಂಕ್ರಮಣದ ಸ್ಫೋಟವನ್ನು ತಡೆಗಟ್ಟಬಹುದು. ಈ ಮಧ್ಯೆ ಕೋವಿಡ್ ಹಾಟ್ ಸ್ಪಾಟ್ ಗಳಿಂದ ಹೊರ ಹೋಗುವವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅವಶ್ಯಕತೆಯಿದೆ. ಏಕೆಂದರೆ ಚೀನಾ ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಪ್ರಯಾಣಗಳಿಗಿದ್ದ ನಿರ್ಬಂಧಗಳನ್ನು ತೆಗೆದು ಹಾಕುತ್ತಿದೆ.


  ಇದನ್ನೂ ಓದಿ: Coronavirus Symptoms: ಲಸಿಕೆ ಹಾಕಿಸಿಕೊಂಡವರನ್ನೂ ಬಿಡಲ್ಲ ಕೊರೋನಾ, ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ


  5. ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪ್ರಭಾವದ ಬಗ್ಗೆ ಇರಲಿ ಎಚ್ಚರ


  ಚೀನಾದ ಪರಿಣಿತರು ಈ ಸಂದರ್ಭದಲ್ಲಿ ಭಾರತದಲ್ಲಿ ಮೂರನೇ ಡೋಸ್ ತೆಗೆದುಕೊಳ್ಳಬೇಕಾಗಿರುವ ಅವ

  Published by:Latha CG
  First published: