• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಜಗತ್ತಿನ ಯಾವುದೇ ಮೂಲೆಗೂ ಅಪ್ಪಳಿಸಬಲ್ಲದು ರಷ್ಯಾದ ಹೊಸ ಪರಮಾಣು ಕ್ಷಿಪಣಿ ‘ಸರ್ಮತ್’!

Explained: ಜಗತ್ತಿನ ಯಾವುದೇ ಮೂಲೆಗೂ ಅಪ್ಪಳಿಸಬಲ್ಲದು ರಷ್ಯಾದ ಹೊಸ ಪರಮಾಣು ಕ್ಷಿಪಣಿ ‘ಸರ್ಮತ್’!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂದಿನ ದಕ್ಷಿಣ ರಷ್ಯಾ, ಉಕ್ರೇನ್ ಮತ್ತು ಕಝಾಕಿಸ್ತಾನ್‌ನ ಹುಲ್ಲುಗಾವಲುಗಳಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಸರ್ಮತ್ ಎಂದು ಕರೆಯಲಾಗುತ್ತಿತ್ತು. ಇದರಿಂದಾಗಿ  ಖಂಡಾಂತರ ಕ್ಷಿಪಣಿಗೆ ಸರ್ಮತ್ ಎಂದು ಹೆಸರಿಸಲಾಗಿದೆ.

  • Share this:

ಉಕ್ರೇನ್‌ ವಿರುದ್ಧ ಯುದ್ಧ ಮತ್ತು ಪಶ್ಚಿಮದಿಂದ ವಿಧಿಸಲಾದ ಕಠಿಣ ನಿರ್ಬಂಧಗಳ ನಡುವೆಯೇ ರಷ್ಯಾ (Russia) ತನ್ನ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ‘ಸರ್ಮತ್’ ಹೆಸರಿನ ಹೊಸ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಸರ್ಮತ್  (Nuclear Missile Sarmat) ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಉಕ್ರೇನ್‌ನೊಂದಿಗೆ ಯುದ್ಧದಲ್ಲಿ ನಿರತವಾಗಿರುವಾಗಲೇ ಈ ಪರೀಕ್ಷೆ ನಡೆದಿದ್ದು ಯುದ್ಧದಿಂದ ಕಂಗೆಟ್ಟ ಉಕ್ರೇನ್ (Ukraine) ದೇಶವನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಸರ್ಮತ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆಗೆ ಸಂತಸ ವ್ಯಕ್ತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಸರ್ಮತ್ ಕ್ಷಿಪಣಿ ರಷ್ಯಾ ದೇಶದ ಶತ್ರುಗಳನ್ನು "ಎರಡು ಬಾರಿ ಯೋಚಿಸುವಂತೆ" ಮಾಡುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡುವ ಅರ್ಥದಲ್ಲಿ ಹೇಳಿದರು.


“ಸರ್ಮತ್ ಅತ್ಯುನ್ನತ ಯುದ್ಧತಂತ್ರದ ಮತ್ತು ತಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕ್ಷಿಪಣಿ-ವಿರೋಧಿ ರಕ್ಷಣೆಯ ಎಲ್ಲಾ ಆಧುನಿಕ ವಿಧಾನಗಳನ್ನು ಜಯಿಸಲು ಸಮರ್ಥವಾಗಿದೆ. ಇದು ನಮ್ಮ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಬಲಪಡಿಸುತ್ತದೆ” ಎಂದು ಪುಟಿನ್ ಹೇಳಿದರು.


ಇದು ಹೊಸ ICBMನ ಮೊದಲ ಪರೀಕ್ಷೆಯೇ?
2021ರಲ್ಲಿ ವಿಳಂಬಗೊಂಡ ನಂತರ ಇದು ICMB ಸರ್ಮತ್‌ನ ಮೊದಲ ಪರೀಕ್ಷಾ ಉಡಾವಣೆಯಾಗಿದೆ. ಈ ಕ್ಷಿಪಣಿ ಬಗ್ಗೆ ಸಾರ್ವಜನಿಕರಿಗೆ ತಿಳಿದಿಲ್ಲದ ಕಾರಣದಿಂದಾಗಿ, ಪರೀಕ್ಷೆಯನ್ನು ಡಿಸೆಂಬರ್ 2021ಕ್ಕೆ ಮತ್ತು ನಂತರ ಏಪ್ರಿಲ್ 2022ಕ್ಕೆ ಮಂದೂಡಲಾಗಿತ್ತು. ಪ್ರಸ್ತುತ ಬುಧವಾರ ಉತ್ತರ ರಷ್ಯಾದ ಪ್ಲೆಸೆಟ್ಸ್ಕ್ ಕಾಸ್ಮೋಡ್ರೋಮ್‌ನಲ್ಲಿ ಸರ್ಮತ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಸರ್ಮತ್ ಕ್ಷಿಪಣಿಯು ಸುಮಾರು 6,000 ಕಿಮೀ ದೂರದಲ್ಲಿರುವ ಕಂಚಟ್ಕಾ ಪರ್ಯಾಯ ದ್ವೀಪದ ಕುರಾ ಪರೀಕ್ಷಾ ಶ್ರೇಣಿಗೆ ತರಬೇತಿ ಸಿಡಿತಲೆಗಳನ್ನು ತಲುಪಿಸುವ ಮೂಲಕ ಯಶಸ್ವಿಯಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.


ಐದು ಬಾರಿ ಉಡಾವಣಾ ಪರೀಕ್ಷೆಗಳನ್ನು ನಡೆಸಲಿದೆ
ಕ್ಷಿಪಣಿಯು ರಷ್ಯಾದ ಮಿಲಿಟರಿಗೆ ಸೇರ್ಪಡೆಗೊಳ್ಳುವ ಮೊದಲು 2022ರಲ್ಲಿ ಐದು ಬಾರಿ ಉಡಾವಣಾ ಪರೀಕ್ಷೆಗಳನ್ನು ನಡೆಸಲಿದೆಯಂತೆ. ಕಂಪ್ಯೂಟರ್ ಸಿಮ್ಯುಲೇಟೆಡ್ ಕ್ಷಿಪಣಿ ಉಡಾವಣೆಗಳನ್ನು ಸಹ ಅನೇಕ ಬಾರಿ ಮಾಡಲಾಗಿದ್ದು ಮತ್ತು ಅವುಗಳಲ್ಲಿ ಕೆಲವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದೆ.


ರಷ್ಯಾ ಸರ್ಮತ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ವಿಚಾರ ಮೊದಲು ಬಹಿರಂಗವಾಗಿತ್ತಾ?
ರಷ್ಯಾ ತನ್ನ ಹಳೆಯ SS-18 ಮತ್ತು SS-19 ಕ್ಷಿಪಣಿಗಳನ್ನು ಬದಲಿಸಲು ಹೊಸ ICBM ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಈ ಮೊದಲೇ ತಿಳಿದಿತ್ತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2018ರಲ್ಲಿ ಫೆಡರಲ್ ಅಸೆಂಬ್ಲಿಯಲ್ಲಿ ಸ್ಟೇಟ್ ಆಫ್ ನೇಷನ್ ಭಾಷಣ ಮಾಡುವಾಗ ಈ ಬಗ್ಗೆ ಪ್ರಕಟಣೆಯನ್ನು ಮಾಡಿದ್ದಾರೆ. ಅಲ್ಲಿ ಮಾತನಾಡಿದ ಪುಟಿನ್ “ಸರ್ಮತ್ ICBMನೊಂದಿಗೆ ಸಂಪೂರ್ಣ ಶಸ್ತ್ರಸಜ್ಜಿತವಾದ ಮೊದಲ ರೆಜಿಮೆಂಟ್ 2022ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ” ಎಂದು ಅವರು ಆ ಸಮಯದಲ್ಲಿ ಹೇಳಿಕೆ ನೀಡಿದ್ದರು.


‘ಸರ್ಮತ್’ ಅಭಿವೃದ್ಧಿಗೆ ಪ್ರಚೋದನೆ ಮೊದಲೇ ಇತ್ತು
ಪುಟಿನ್ ಅವರ ಘೋಷಣೆಗೆ ಮುಂಚೆಯೇ, ಮಾಸ್ಕೋ ಹೊಸ ICBM ಅನ್ನು ಅಭಿವೃದ್ಧಿಪಡಿಸುತ್ತಿದೆ.  ಕ್ಷಿಪಣಿಯ ಸಂಭವನೀಯ ವಿನ್ಯಾಸದ ಫೋಟೋಗಳ ಬಗ್ಗೆ 2016ರಲ್ಲಿ ವರದಿಗಳು ಬಂದಿದ್ದವು. ಕ್ಷಿಪಣಿಯ ನಿಜವಾದ ಅಭಿವೃದ್ಧಿ ವೇಳಾಪಟ್ಟಿಯು 2009 ರಿಂದ 2011 ರವರೆಗೆ ಹಿಂದೆ ಇತ್ತು. ಪ್ರಸ್ತುತ ರಷ್ಯಾ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ನಡುವಿನ ಹದಗೆಡುತ್ತಿರುವ ಸಂಬಂಧಗಳು ‘ಸರ್ಮತ್’ ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡಿವೆ ಎಂದು ಹೇಳಲಾಗುತ್ತಿದೆ.


ರಷ್ಯಾದ ಇತರ ICBM ಗಳಿಗಿಂತ ಇದು ಹೇಗೆ ಭಿನ್ನ?
RS-28 ಸರ್ಮತ್ (NATO Satan-II), 10 ಅಥವಾ ಅದಕ್ಕಿಂತ ಹೆಚ್ಚು ಸಿಡಿತಲೆಗಳು ಮತ್ತು ಡಿಕೋಯ್‌ಗಳನ್ನು ಸಾಗಿಸಲು ಸಮರ್ಥವಾಗಿದೆ ಮತ್ತು 11,000 ರಿಂದ 18,000 ಕಿ.ಮೀ. ವ್ಯಾಪ್ತಿಯೊಂದಿಗೆ ಭೂಮಿಯ ಯಾವುದೇ ಧ್ರುವಗಳ ಮೇಲೆ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ. ಇದು ಪಾಶ್ಚಿಮಾತ್ಯ ಇತರೆ ಶಕ್ತಿಗಳ, ವಿಶೇಷವಾಗಿ USAಯ ನೆಲ-ಮತ್ತು-ಉಪಗ್ರಹ-ಆಧಾರಿತ ರೇಡಾರ್ ಟ್ರ್ಯಾಕಿಂಗ್ ವ್ಯವಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಸವಾಲನ್ನು ಒಡ್ಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ರಷ್ಯಶದ ಮೊದಲ ಕ್ಷಿಪಣಿ!
ಸರ್ಮತ್ ಸಣ್ಣ ಹೈಪರ್ಸಾನಿಕ್ ಬೂಸ್ಟ್-ಗ್ಲೈಡ್ ವಾಹನಗಳನ್ನು ಸಾಗಿಸಬಲ್ಲ ಮೊದಲ ರಷ್ಯಾದ ಕ್ಷಿಪಣಿಯಾಗಿದೆ. ನವೀಕರಿಸಿದ ಎಲೆಕ್ಟ್ರಾನಿಕ್ ಕೌಂಟರ್ ಅಳತೆಗಳು, ಮಾರ್ಗದರ್ಶನ ವ್ಯವಸ್ಥೆಗಳು ಮತ್ತು ಪರ್ಯಾಯ ಸಿಡಿತಲೆ ಸಾಗಿಸುವ ಸಾಮರ್ಥ್ಯವು RS-28 ಸರ್ಮತ್ ICBM ಅನ್ನು ಪ್ರಸ್ತುತ ರಷ್ಯಾದಲ್ಲಿ ಸೇವೆಯಲ್ಲಿರುವ R-36M ವೊಯೆವೋಡಾ (Voyevoda) ICBMಗಿಂತ ಹೆಚ್ಚು ಮಾರಕವಾಗಿರುತ್ತದೆ ಎನ್ನಲಾಗಿದೆ.


ಪರಮಾಣು ಪಡೆಗಳ ಯುದ್ಧ ಶಕ್ತಿ ಹೆಚ್ಚಳ
ಕೆಲವು ವರದಿಗಳ ಪ್ರಕಾರ ಸರ್ಮತ್ ICBM ನ ಎತ್ತರ ಮತ್ತು ತೂಕವು ಹಳೆಯದರಲ್ಲಿ ಒಂದೇ ಆಗಿರುತ್ತದೆ. ಇದು ಹೆಚ್ಚು ವೇಗ ಮತ್ತು ಹೆಚ್ಚಿನ ತೂಕವನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.


ಇದನ್ನೂ ಓದಿ: Explained: ಎಲ್ರೂ RRR, KGF 2 ಗಳಂತಹ ಸಿನಿಮಾ ಮಾಡಿದ್ರೆ ಈ ಟಾಪ್ 10 ಸಿನಿಮಾಗಳು ಬರ್ತಾನೇ ಇರ್ಲಿಲ್ಲ!


ಯುಎಸ್‌ನ ICBMಗಳಿಗೆ ಹೋಲಿಸಿದರೆ ಸರ್ಮತ್ ಒಂದು ದ್ರವ ಇಂಧನ ಕ್ಷಿಪಣಿಯಾಗಿದ್ದು ಅದು ಘನ ಇಂಧನ ವ್ಯವಸ್ಥೆಗಳಿಗೆ ತೆರಳಲಿದೆ ಎಂದು ವರದಿಗಳು ಹೇಳಿವೆ. ಒಟ್ಟಾರೆ ಸರ್ಮತ್ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದ್ದು, ಇದು ನಮ್ಮ ದೇಶದ ಪರಮಾಣು ಪಡೆಗಳ ಯುದ್ಧ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ರಷ್ಯಾದ ಸಚಿವಾಲಯಗಳು ತಿಳಿಸಿವೆ.


ಕ್ಷಿಪಣಿಗೆ ಯಾರ ಹೆಸರಿಡಲಾಗಿದೆ..?
ಸುದ್ದಿ ಸಂಸ್ಥೆ TASSನ ವರದಿಯ ಪ್ರಕಾರ, ಮಧ್ಯಕಾಲೀನ ಅವಧಿಯ ಆರಂಭದಲ್ಲಿ ಇಂದಿನ ದಕ್ಷಿಣ ರಷ್ಯಾ, ಉಕ್ರೇನ್ ಮತ್ತು ಕಝಾಕಿಸ್ತಾನ್‌ನ ಹುಲ್ಲುಗಾವಲುಗಳಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಸರ್ಮತ್ ಎಂದು ಕರೆಯಲಾಗುತ್ತಿತ್ತು. ಇದರಿಂದಾಗಿ  ಖಂಡಾಂತರ ಕ್ಷಿಪಣಿಗೆ ಸರ್ಮತ್ ಎಂದು ಹೆಸರಿಸಲಾಗಿದೆ.


ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಏನನ್ನುತ್ತೆ?
ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ ಸರ್ಮಾಟಿಯನ್ನರು ಕುದುರೆ ಸವಾರಿ ಮತ್ತು ಯುದ್ಧದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ್ದರು." ಸರ್ಮಾಟಿಯನ್ನರ ಆಡಳಿತ ಸಾಮರ್ಥ್ಯಗಳು ಮತ್ತು ರಾಜಕೀಯ ಪರಿಣತಿಯು ಅವರ ವ್ಯಾಪಕ ಪ್ರಭಾವವನ್ನು ಗಳಿಸಲು ಕೊಡುಗೆ ನೀಡಿತ್ತು.  5 ನೇ ಶತಮಾನದ BCಯ ಹೊತ್ತಿಗೆ ಅವರು ಯುರಲ್ಸ್ ಮತ್ತು ಡಾನ್ ನದಿಯ ನಡುವಿನ ಭೂಮಿಯನ್ನು ನಿಯಂತ್ರಿಸಿದರು ಎಂದು ಹೇಳಿದೆ. 4 ನೇ ಶತಮಾನದಲ್ಲಿ ಸರ್ಮಾಟಿಯನ್ನರು ಡಾನ್ ನದಿಯನ್ನು ದಾಟಿ ಬಂದು ಸಿಥಿಯನ್ನರನ್ನು ವಶಪಡಿಸಿಕೊಂಡರು. ಹೀಗೆ ಈ ಎಲ್ಲಾ ಪುರಾವೆಗಳು ಸರ್ಮತ್ ಹೆಸರಿಗೆ ಕಾರಣವಾಗಿವೆ.


ಇದನ್ನೂ ಓದಿ: Explained: ಬಲವರ್ಧಿತ ಅಕ್ಕಿ ಎಂದರೇನು? ಅದನ್ನು ತಯಾರಿಸೋದು ಹೇಗೆ?


ಮಾಸ್ಕೋ ತನ್ನ ದಕ್ಷಿಣ ನೆರೆಹೊರೆಯ ಮಿಲಿಟರಿ ಸಾಮರ್ಥ್ಯಗಳನ್ನು ತಗ್ಗಿಸಲು ಮತ್ತು ಅಪಾಯಕಾರಿ ರಾಷ್ಟ್ರೀಯತಾವಾದಿಗಳೆಂದು ಕರೆಯುವ ಜನರ ವಿರುದ್ಧ ಕಾರ್ಯಾಚರಣೆಯಲ್ಲಿದೆ ಎಂದು ಹೇಳಲಾಗುತ್ತಿದೆ.

First published: