Explained: ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆ ಬೇಡಿಕೆಯ ಅನುಷ್ಠಾನ ಹಾಗೂ ರೈತರೊಂದಿಗಿನ ಒಪ್ಪಂದವನ್ನು ಹೇಗೆ ಮಾಡಬಹುದು?

Explained Minimum Support Price for Farmers: ಎಲ್ಲಾ ಬೆಳೆಗಳಿಗೆ MSP ಯ ಕಾನೂನು ಭರವಸೆಯ ಪ್ರಶ್ನೆಯು ವಿವಾದದ ಕೇಂದ್ರ ಬಿಂದುವಾಗಿದ್ದು, ಇದನ್ನು ಕುರಿತಂತೆ ನೇರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ನಿಲುವಿನಿಂದ ಸರಕಾರ ಜಾರಿಕೊಳ್ಳುತ್ತಿದೆ. ಹಾಗೂ ಈ ಕುರಿತು ಭರವಸೆ ದೊರೆಯುವವರೆಗೆ ಪ್ರತಿಭಟನಾ ಸ್ಥಳಗಳಿಂದ ರೈತರು ಹಿಂದಡಿ ಇಡಲು ಸಿದ್ಧರಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಳೆದ ಹತ್ತು ತಿಂಗಳಿನಿಂದ ಸ್ಪಷ್ಟವಾದ ಬೇಡಿಕೆಗಳಿಗೆ ಹೋರಾಟ ನಡೆಯುತ್ತಿದೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (Minimum Support Price) ಕುರಿತು ಕಾನೂನು ಭರವಸೆ, ಗೋಧಿ ಹಾಗೂ ಭತ್ತಕ್ಕಾಗಿ MSP ಯೋಜನೆಯ ಮುಂದುವರಿಕೆ. ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಅಥವಾ ರದ್ದುಗೊಳಿಸುವತ್ತ ಒಲವು ತೋರುತ್ತಿದೆ ಎಂದು ಪಂಜಾಬ್ ರೈತ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಕೃಷಿ ಕೆಲಸಗಾರರ ಆಯೋಗದ ಇತ್ತೀಚಿನ ಟ್ವೀಟ್ ಹೇಳಿದೆ ಎಂದು ತಜ್ಞರು ಹೇಳಿದ್ದಾರೆ. ಅದಾಗ್ಯೂ ಎಲ್ಲಾ ಬೆಳೆಗಳಿಗೆ MSP ಯ ಕಾನೂನು ಭರವಸೆಯ ಪ್ರಶ್ನೆಯು ವಿವಾದದ ಕೇಂದ್ರ ಬಿಂದುವಾಗಿದ್ದು, ಇದನ್ನು ಕುರಿತಂತೆ ನೇರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ನಿಲುವಿನಿಂದ ಸರಕಾರ ಜಾರಿಕೊಳ್ಳುತ್ತಿದೆ. ಹಾಗೂ ಈ ಕುರಿತು ಭರವಸೆ ದೊರೆಯುವವರೆಗೆ ಪ್ರತಿಭಟನಾ ಸ್ಥಳಗಳಿಂದ ರೈತರು ಹಿಂದಡಿ ಇಡಲು ಸಿದ್ಧರಿಲ್ಲ. 

  ಹಾಗಾದರೆ ಈ ಸಂಕಷ್ಟಕ್ಕೆ ದೊರಕಿಸಿಕೊಡಬಹುದಾದ ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

  ಮುಂದಿನ ದಿನಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಧ್ಯತೆ ಇದೆಯೇ?:

  ಪಂಜಾಬ್ ರೈತರ ಆಯೋಗ ಮತ್ತು ಕೃಷಿ ಕೆಲಸಗಾರರ ಆಯೋಗದ ಮಾಜಿ ಅಧ್ಯಕ್ಷ ಅಜಯ್ ವಿರ್ ಜಖರ್, ಇತ್ತೀಚೆಗೆ ಟ್ವೀಟ್ ಮಾಡಿರುವ ಅಂಶಗಳಲ್ಲಿ ಬಹಿರಂಗವಾಗಿರುವುದೇನೆಂದರೆ, ನನ್ನ ತೀರ್ಮಾನದಂತೆ ಸರಕಾರವು ಕೃಷಿ ಕಾನೂನುಗಳು ಕೃಷಿ ಒಕ್ಕೂಟಗಳ ತೃಪ್ತಿಗಾಗಿ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧರಿಸಿದೆ. ಆದರೆ ಕಾನೂನು MSP ಸಮಸ್ಯೆ ಹಾಗೆಯೇ ಉಳಿದಿದೆ. ತುಂಬಾ ಸಂಕಷ್ಟ ಮತ್ತು ನಂಬಿಕೆಯ ನಷ್ಟದ ನಂತರ ಎರಡೂ ಬದಿಗಳಲ್ಲಿ ಉತ್ತಮ ತಿಳುವಳಿಕೆಯು ವಿಜಯ ಸಾಧಿಸುತ್ತದೆ.

  ಕಳೆದ ಎಂಟು ತಿಂಗಳಿಂದ ಕೃಷಿ ಸಂಘಗಳು ಮತ್ತು ಸರ್ಕಾರದ ನಡುವೆ ಯಾವುದೇ ಔಪಚಾರಿಕ ಮಾತುಕತೆಗಳು ನಡೆದಿಲ್ಲವಾದರೂ, ಸರ್ಕಾರದ ಮೂಲಗಳು ಅನೌಪಚಾರಿಕವಾಗಿ, ಅವರು ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲು ಮತ್ತು ಒಮ್ಮತವನ್ನು ಸಾಧಿಸಲು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ನಡೆಯಲಿರುವ ಕಾರಣ ಸರಕಾರ ಹಾಗೂ ರೈತ ಸಂಘಟನೆಗಳು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಶ್ರೀಘ್ರದಲ್ಲೇ ಪರಿಸ್ಪರ ಅಂಗೀಕರಿಸುವ ಪರಿಹಾರದ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಪ್ರಾಥಮಿಕವಾಗಿ ಕೃಷಿ ರಾಜ್ಯವಾಗಿರುವ ಪಂಜಾಬ್ ರೈತರ ಆಂದೋಲನದ ದಿಕ್ಕನ್ನು ವ್ಯಾಖ್ಯಾನಿಸಿದೆ ಇಲ್ಲಿ ಮುಂಚೂಣಿಯಲ್ಲಿರುವವರೇ ರೈತರಾಗಿದ್ದಾರೆ. ಮುಂದಿನ ವರ್ಷ ಚುನಾವಣೆ ನಿರೀಕ್ಷಿಸಲಾಗಿರುವ ರಾಜ್ಯವೆಂದರೆ ಉತ್ತರ ಪ್ರದೇಶ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಮತ್ತು ಗರಿಷ್ಠ ಸಂಖ್ಯೆಯ ಸಂಸದರನ್ನು ಸಂಸತ್ತಿಗೆ ಕಳುಹಿಸಿದ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಸ್ಪಷ್ಟವಾದ ಕಾರಣಗಳಿಗಾಗಿ ಎರಡೂ ರಾಜ್ಯಗಳು ಬಿಜೆಪಿಗೆ ನಿರ್ಣಾಯಕವಾಗಿದ್ದವು ಎಂಬುದು ಇಲ್ಲಿ ಗಮನಾರ್ಹವಾದುದು.

  ಎಲ್ಲಾ ಬೆಳೆಗಳಿಗೆ MSP ಯ ಕಾನೂನು ಭರವಸೆಗಾಗಿ ರೈತರ ಇತರ ಪ್ರಮುಖ ಬೇಡಿಕೆ ಏನು?:

  ರೈತ ಮುಖಂಡರು ಹಾಗೂ ಸರಕಾರದ ರಾಯಭಾರಿಗಳ ನಡುವೆ ಪ್ರಮುಖ ವಿವಾದವೆಂದರೆ ಎಲ್ಲಾ 23 ಬೆಳೆಗಳಿಗೆ MSP ಖಾತ್ರಿಯ ಕುರಿತ ಆಶ್ವಾಸನೆಯ ವಿಷಯವಾಗಿದೆ. ಈ 23 ಬೆಳೆಗಳಲ್ಲಿ ಅಂದರೆ ಏಳು ಬಗೆಯ ಧಾನ್ಯಗಳು, ಏಳು ಎಣ್ಣೆಕಾಳುಗಳು, ಐದು ದ್ವಿದಳ ಧಾನ್ಯಗಳು ಮತ್ತು ನಾಲ್ಕು ಇತರ ವಾಣಿಜ್ಯ ಬೆಳೆಗಳು ಒಳಗೊಂಡಿವೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗವು (CACP) ಪ್ರತಿ ವರ್ಷ ಎಲ್ಲ ಖಾರಿಫ್ ಮತ್ತು ರಾಬಿ ಬೆಳೆಗಳಿಗೆ MSP ಬಿಡುಗಡೆ ಮಾಡುತ್ತದೆ ಎಂದು ರೈತರು ಸರ್ಕಾರಕ್ಕೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಈ ನಿಟ್ಟಿನಲ್ಲಿ ಸರಕಾರವು ಕಾನೂನಾತ್ಮಕವಾಗಿ ಪ್ರಾಯೋಗಿಕ ರೂಪದಲ್ಲೂ ಅನುಷ್ಠಾನಕ್ಕೆ ಭರವಸೆ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ. ಈ 23 ಬೆಳೆಗಳಲ್ಲಿ ಹೆಚ್ಚಿನವನ್ನು ಖಾಸಗಿ ಸ್ಪರ್ಧಿಗಳು ಖರೀದಿಸುತ್ತಾರೆ ಹಾಗಾಗಿ ಬೆಲೆಗಳಲ್ಲಿ ಹೆಚ್ಚುವರಿ ಏರಿಳಿತಗಳು ಉಂಟಾಗುತ್ತವೆ. ಕೆಲವೊಮ್ಮೆ ಈ ಬೆಳೆಗಳು MSP ಯ ಕೆಳಮಟ್ಟದ ದರಗಳಲ್ಲಿ ಮಾರಾಟವಾದರೆ ಕೆಲವೊಮ್ಮೆ MSP ಗಿಂತ ಸ್ವಲ್ಪ ಉತ್ತಮ ದರವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ರೈತರು MSP ಯಲ್ಲಿ ಮಾತ್ರವೇ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಗಳನ್ನು ಮಾರಾಟ ಮಾಡಬಹುದೆಂಬ ಕಾನೂನು ಭರವಸೆಯನ್ನು ಬಯಸುತ್ತಿದ್ದಾರೆ.

  ಆದರೆ ಪಂಜಾಬ್, ಹರಿಯಾಣ, ಎಂಪಿ ಮತ್ತು ಯುಪಿ ಭಾಗಗಳಲ್ಲಿ ಹೆಚ್ಚಾಗಿ ಗೋಧಿ ಮತ್ತು ಭತ್ತದ ಬೆಳೆ ಪ್ರಮುಖವಾಗಿರುವುದರಿಂದ ಪ್ರಸ್ತುತ MSP ವ್ಯವಸ್ಥೆಯನ್ನೇ ಮುಂದುವರಿಸುವುದಾಗಿ ಪುನರುಚ್ಛಿಸಿದ್ದು, ಈ ಕ್ಷಣದಲ್ಲಿ ಕಾನೂನು ಭರವಸೆಗಳನ್ನು ನೀಡಲು ಸರಕಾರ ಸಿದ್ಧವಾಗಿಲ್ಲ. ರೈರು ಕೂಡ ಸರಕಾರಕ್ಕೆ ಮಣಿಯಲು ನಿರಾಕರಿಸಿದ್ದಾರೆ. ಇದರ ಮಧ್ಯೆ, ಕೆಲವು ರಾಜ್ಯಗಳು ಈಗಾಗಲೇ ಮಧ್ಯಪ್ರವೇಶ ಮಾಡಿದ್ದು ತಮ್ಮ ರಾಜ್ಯ ಮಟ್ಟದ ನೀತಿಗಳ ಅಡಿಯಲ್ಲಿ MSP ದರಕ್ಕಿಂತ ಕಡಿಮೆ ಮಾರಾಟ ಮಾಡುವ ಬೆಳೆಗಳಿಗೆ ರೈತರಿಗೆ ಪರಿಹಾರವನ್ನು ನೀಡಲು ಪ್ರಾರಂಭಿಸಿವೆ.

  ರೈತರು ತಮ್ಮ ಬೆಳೆಗಳಿಗೆ MSP (ಕನಿಷ್ಠ ಬೆಂಬಲ ಬೆಲೆ) ಪಡೆಯುತ್ತಾರೆ ಎಂದು ರಾಜ್ಯ ಮಟ್ಟದ ನೀತಿಗಳು ಭರವಸೆ ನೀಡಬಹುದೇ?:

  ಕಳೆದ ಕೆಲವು ವರ್ಷಗಳಲ್ಲಿ ಮಧ್ಯ ಪ್ರದೇಶ, ಹರ್ಯಾಣ, ಕೇರಳದಂತಹ ರಾಜ್ಯಗಳು ಭವಂತಾರ್ ಭುಗತನ್ ಯೋಜನ್( ಬೆಲೆ ವ್ಯತ್ಯಯ ಪಾವತಿ ಯೋಜನೆ), ಕನಿಷ್ಠ ಬೆಲೆಗಳು, ಮತ್ತು ಭವಂತರ್ ಭರ್ಪಾಯಿ ಯೋಜನೆಗಳಂತಹ ಯೋಜನೆಗಳನ್ನು ಪ್ರಾರಂಭಿಸಿವೆ ಈ ಯೋಜನೆಗಳ ಅಡಿಯಲ್ಲಿ ರೈತರು ತಮ್ಮ ಬೆಳೆಯನ್ನು MSP ಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದರೆ ರಾಜ್ಯ ಸರಕಾರಗಳು ವ್ಯತ್ಯಾಸವಾದ ಪಾವತಿಗಳನ್ನು ನೀಡುತ್ತವೆ. ಮಧ್ಯಪ್ರದೇಶ ಸರಕಾರವು ತನ್ನ ಯೋಜನೆಯಡಿಯಲ್ಲಿ ಕೆಲವು ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜ ಮತ್ತು ತೋಟಗಾರಿಕೆ ಬೆಳೆಗಳನ್ನು ಒಳಗೊಂಡಿದ್ದರೆ, ಹರಿಯಾಣ ಮತ್ತು ಕೇರಳವು ತೋಟಗಾರಿಕೆ ಬೆಳೆಗಳನ್ನು ಮಾತ್ರ ಒಳಗೊಂಡಿದೆ. ಹರಿಯಾಣ ಇತ್ತೀಚೆಗೆ ತನ್ನ ಯೋಜನೆಗೆ ರಾಗಿ ಸೇರಿಸಿದೆ.

  ಈ ಯೋಜನೆಗಳಿಗೆ ಒಳಪಟ್ಟಂತೆ ರಾಜ್ಯ ಬೆಲೆ ಅಥವಾ ಕನಿಷ್ಠ ಬೆಲೆಯನ್ನು ರಾಜ್ಯ ಸರಕಾರಗಳು ನಿಗದಿಪಡಿಸುತ್ತವೆ ಹಾಗೂ ಯೋಜನೆಗೆ ಒಳಪಟ್ಟಿರುವ ಬೆಳೆಗಳನ್ನು ಆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾದಲ್ಲಿ ನೋಂದಾಯಿತ ರೈತರ ಸಂಬಂಧಿತ ಪೋರ್ಟಲ್‌ಗಳಲ್ಲಿ ರಾಜ್ಯ ಸರಕಾರವು ವ್ಯತ್ಯಾಸಗೊಂಡ ಪಾವತಿಯನ್ನು ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ರಾಜ್ಯ ಸರಕಾರಗಳು ಈ ಯೋಜನೆಯನ್ನು ದೀರ್ಘ ಸಮಯದವರೆಗೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದಾಗಿದೆ ಹಾಗೂ ಎಲ್ಲಾ ಬೆಳೆಗಳನ್ನು ಸರಕಾರಗಳಿಗೆ ಭರಿಸಲು ಸಾಧ್ಯವಿಲ್ಲ ಎಂದಾಗಿದೆ. ಮಧ್ಯಪ್ರದೇಶ, ಹರ್ಯಾಣ ಹಾಗೂ ಕೇರಳ ಈ ಯೋಜನೆಗಳಡಿಯಲ್ಲಿ ಹೆಚ್ಚಿನ ಕೃಷಿ ಬೆಳೆಗಳನ್ನು ಭರಿಸಲು ಸಾಧ್ಯವಿಲ್ಲ ಎಂದಾಗಿದೆ. ಎಲ್ಲೆಡೆ ಈ ಯೋಜನೆಗಳಿಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ ಎಂದು ತಜ್ಞರು ತಿಳಿಸಿದ್ದಾರೆ.

  ಈ ಯೋಜನೆಗಳು ಉತ್ತಮವಾಗಿವೆ ಆದರೆ ಈ ನೀತಿಗಳನ್ನು ಉಳಿಸಿಕೊಳ್ಳಲು ಹಾಗೂ ಎಲ್ಲಾ ಬೆಳೆಗಳನ್ನು ಈ ಯೋಜನೆಗಳ ವ್ಯಾಪ್ತಿಯಲ್ಲಿ ಬರುವಂತೆ ಮಾಡುವ ಸಂಪನ್ಮೂಲಗಳನ್ನು ರಾಜ್ಯ ಸರಕಾರಗಳು ಹೊಂದಿಲ್ಲ. ಮಧ್ಯಪ್ರದೇಶ, ಹರ್ಯಾಣ ಹಾಗೂ ಕೇರಳ ರಾಜ್ಯಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲವೆಂದು ಭಾರತಿ ಕಿಸಾನ್ ಒಕ್ಕೂಟದ (ದಾಕೌಂಡ) ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ತಿಳಿಸುತ್ತಾರೆ. ಹೆಚ್ಚಿನ ಪ್ರಮಾಣದ ಸಿರಿಧಾನ್ಯಗಳನ್ನು ರೈತರು ಮಾರಾಟ ಮಾಡುವಲ್ಲಿ ಅಂತಹ ರಾಜ್ಯ ಮಟ್ಟದ ನೀತಿಗಳು (ಯೋಜನೆಗಳು) ಕಾರ್ಯನಿರ್ವಹಿಸುವುದಿಲ್ಲವೆಂದು ಅವರು ಹೇಳಿದರು.

  ಏನಾದರೂ ಪರಿಹಾರವಿದೆಯೇ?:

  ತಜ್ಞರು ಕೆಲವೊಂದು ಪರಿಹಾರಗಳನ್ನು ನೀಡಿದ್ದಾರೆ: ಪ್ರಸ್ತುತ MSP ವ್ಯವಸ್ಥೆಯಂತೆಯೇ ಕಾಟನ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ನಂತಹ ಕಾರ್ಪೊರೇಶನ್‌ಗಳನ್ನು ಅಂದರೆ ಕೇಂದ್ರದ ಪ್ರಸ್ತುತ MSP ವ್ಯವಸ್ಥೆಯೊಳಗೆ ಬಾರದಿರುವ ಸಿರಿಧಾನ್ಯಗಳಿಗೆ ಕೇಂದ್ರ ಸರಕಾರವು ರಚಿಸಬೇಕು ಎಂದು ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ (PAU) ಪರಿಣಿತರು ತಿಳಿಸಿದ್ದಾರೆ.

  ಇದನ್ನೂ ಓದಿ: Explained: ಮನೆ ಖರೀದಿಸುವ ಪ್ಲಾನ್ ಇದ್ದರೆ ಇದೇ ಸರಿಯಾದ ಸಮಯ..! ಯಾಕೆ ಗೊತ್ತಾ? ಇಲ್ಲಿದೆ ಡೀಟೇಲ್ಸ್​..

  CACP ನಿಗದಿಪಡಿಸಿದ MSP ಗಿಂತ 'ಕಪಾಸ್' (ಅಂಟಿಸದ ಹಸಿ ಹತ್ತಿ) ಬೆಲೆ ಕಡಿಮೆಯಾದಾಗ CCI ಮಾರುಕಟ್ಟೆಗೆ ಮಧ್ಯಪ್ರವೇಶಿಸುತ್ತದೆ. CCI ನಂತರ ಕಪಾಸ್ ಅನ್ನು ಎಂಎಸ್‌ಪಿಯಲ್ಲಿ ಖರೀದಿಸುತ್ತದೆ. ಇದು CCI ಮಾರುಕಟ್ಟೆಯಿಂದ ಎಲ್ಲಾ ಹತ್ತಿಯನ್ನು ಖರೀದಿಸುವುದನ್ನು ತಡೆಯಲು, ಖಾಸಗಿ ಸಂಸ್ಥೆ ಸ್ಪರ್ಧಿಗಳು ಕೂಡ ಎಮ್‌ಎಸ್‌ಪಿಗೆ ಸರಿಸಮಾನವಾಗಿ ಅಥವಾ ಕನಿಷ್ಠ ಬೆಂಬಲ ಬೆಲೆಗಿಂತ ಸ್ವಲ್ಪ ಹೆಚ್ಚು ಬೆಲೆಗಳನ್ನು ನೀಡಲು ಒತ್ತಾಯಿಸುತ್ತದೆ.

  ಇದನ್ನೂ ಓದಿ: Climate Change: ಹವಾಮಾನ ಬದಲಾವಣೆಯು ತಿನ್ನುವ ಅನ್ನಕ್ಕೆ ಸಂಚಕಾರ ತರಲಿದೆ; ಅಧ್ಯಯನಗಳು

  ಇಂತಹ ಕಾರ್ಪೋರೇಶನ್‌ಗಳು (ಸಂಸ್ಥೆಗಳು) ಎಲ್ಲಾ ಬೆಳೆಗಳಿಗೆ ಮಾನ್ಯತೆ ನೀಡಿದಾಗ, ಖಾಸಗಿ ಸ್ಪರ್ಧಿಗಳು (ವ್ಯಾಪಾರಿಗಳು) ರೈತರನ್ನು ಶೋಷಿಸಲಾಗುವುದಿಲ್ಲ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆರ್‌ಬಿಐ ನಿಂದ ನಗದು ಕ್ರೆಡಿಟ್ ಮಿತಿ (CCL ) ತೆಗೆದುಕೊಳ್ಳುವ ಮೂಲಕ ಸರಕಾರ ಭಾರತದ ಆಹಾರ ಸಂಸ್ಥೆಯ ಮೂಲಕ (FCI) ಗೋಧಿ ಹಾಗೂ ಭತ್ತ MSP ಯನ್ನು ಖರೀದಿಸಿದಂತೆಯೇ, ಇಂತಹ ಸಂಸ್ಥೆಗಳು ಇದೇ ನೀತಿಯನ್ನು ಅನುಸರಿಸಬಹುದು ಏಕೆಂದರೆ ನಮ್ಮ ದೇಶದಲ್ಲಿ ಎಣ್ಣೆಬೀಜಗಳು ಹಾಗೂ ದ್ವಿದಳ ಧಾನ್ಯಗಳಿಗೆ ದೊಡ್ಡ ಮಾರುಕಟ್ಟೆಯೇ ಇದೆ ಹಾಗೂ ಸರಕಾರ ಮತ್ತು ರೈತರು ಇಬ್ಬರೂ ನಷ್ಟದಲ್ಲಿರುವುದಿಲ್ಲವೆಂದು ತಜ್ಞರು ತಿಳಿಸುತ್ತಾರೆ. ಈ ನೀತಿಯು ಪಂಜಾಬ್‌ನಂತಹ ರಾಜ್ಯಗಳಲ್ಲೂ ಬೆಳೆಗಳ ವೈವಿಧ್ಯತೆಯನ್ನು ಆಯ್ಕೆ ಮಾಡಲು ರೈತರಿಗೆ ಸಹಕಾರಿಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

  ಇದನ್ನೂ ಓದಿ: Explained: ಮಳೆಯ ಪ್ರಮಾಣ ಕಡಿಮೆಯಾಗಲು ಕಾರಣಗಳೇನು? ಅಧ್ಯಯನದಲ್ಲಿ ಬಯಲಾದ ಅಂಶಗಳೇನು?

  ಕೆಲವು ರೈತ ಮುಖಂಡರು ರೈತರ ಬೆಳೆ ಬೆಲೆ ನಿಗದಿತ ದರಕ್ಕಿಂತ ಕಡಿಮೆಯಾದರೆ ರಾಜ್ಯ-ಕೇಂದ್ರ ಸರಕಾರ ಜಂಟಿಯಾಗಿ "ಭವಂತರ್ ಯೋಜನೆ" ಯನ್ನು ಆರಂಭಿಸಬಹುದು ಅಥವಾ ಸರ್ಕಾರವು ರೈತರ ಲೂಟಿಯನ್ನು ನಿಲ್ಲಿಸಲು ಖಾಸಗಿ ವ್ಯಾಪಾರಿಗಳ ಮೂಲಕ ಖರೀದಿಯನ್ನು ನಿಯಂತ್ರಿಸಲು ಕೆಲವು ನಿಯಮಗಳನ್ನು ಅನುಷ್ಠಾನಕ್ಕೆ ತರಬಹುದು ಎಂದು ಸಲಹೆ ನೀಡಿದ್ದಾರೆ.
  Published by:Sharath Sharma Kalagaru
  First published: