• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ತಾಲಿಬಾನ್ ಶಕ್ತಿಶಾಲಿ ಮಿಲಿಟರಿ ಪಡೆಯಾಗಿದ್ದು ಹೇಗೆ..? ಅಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಗೊತ್ತಾ..?

Explainer: ತಾಲಿಬಾನ್ ಶಕ್ತಿಶಾಲಿ ಮಿಲಿಟರಿ ಪಡೆಯಾಗಿದ್ದು ಹೇಗೆ..? ಅಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಗೊತ್ತಾ..?

ತಾಲಿಬಾನ್ ಉಗ್ರರು

ತಾಲಿಬಾನ್ ಉಗ್ರರು

ಮಾರ್ಚ್ 2020ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಉಗ್ರಗಾಮಿ ಚಳುವಳಿ ದಿಗ್ಭ್ರಮೆಗೊಳಿಸುವ 1.6 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಹಣ ಗಳಿಸಿತ್ತು ಎಂದೂ ಅಂದಾಜಿಸಲಾಗಿದೆ. ಇದರಲ್ಲಿ 416 ಮಿಲಿಯನ್ ಡಾಲರ್ ಡ್ರಗ್ಸ್ ವ್ಯಾಪಾರದಿಂದ ಬಂದಿದ್ದರೆ, ಕಬ್ಬಿಣದ ಅದಿರು, ಅಮೃತಶಿಲೆ, ತಾಮ್ರ, ಚಿನ್ನ, ಝಿಂಕ್ ಮತ್ತು ಅಪರೂಪದ ಭೂಮಿಯ ಲೋಹಗಳ ಅಕ್ರಮ ಗಣಿಗಾರಿಕೆಯಿಂದ 450 ಮಿಲಿಯನ್‌ ಡಾಲರ್‌ಗೂ ಹೆಚ್ಚು ಹಣ ಗಳಿಸಿದೆ.

ಮುಂದೆ ಓದಿ ...
  • Share this:

    ತಾಲಿಬಾನ್‌ ಕಳೆದ ಭಾನುವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ಅನ್ನು 20 ವರ್ಷಗಳ ಬಳಿಕ ವಶಪಡಿಸಿಕೊಂಡಿದ್ದು, ಅಫ್ಘಾನಿಸ್ತಾನದ ಸರ್ಕಾರದ ವಿರುದ್ಧ ಮಿಂಚಿನ ಮಿಲಿಟರಿ ದಾಳಿಯ ಮೂಲಕ ದಾಳಿ ನಡೆಸಲು ಯಶಸ್ವಿಯಾಯಿತು. ಜೊತೆಗೆ 20 ವರ್ಷಗಳ ಕಾಲ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಯ ದಾಳಿಯನ್ನು ಎದುರಿಸಿ ತಮ್ಮ ಇರುವಿಕೆಯನ್ನು ಅದರಲ್ಲೂ ಗಮನಾರ್ಹವಾಗಿ ನಾವಿನ್ನು ಶಕ್ತಿಶಾಲಿಯಾಗಿದ್ದೇವೆ ಎಂಬುದನ್ನು ಪ್ರದರ್ಶಿಸಿತು.


    ನವೆಂಬರ್ 2001ರಲ್ಲಿ ಕಾಬೂಲ್‌ನಿಂದ ತಾಲಿಬಾನ್​ಅನ್ನು ಹೊರಹಾಕುವ ಮುನ್ನ, ತಾಲಿಬಾನಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದರು ಮತ್ತು ಕೇವಲ 7 ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನವನ್ನು ತನ್ನ ಸುದೀರ್ಘ ಯುದ್ಧದಲ್ಲಿ ಮೀರಿಸಿದ ಹೋರಾಟದ ಶಕ್ತಿಯನ್ನಾಗಿ ಮತ್ತು ಅಮೆರಿಕನ್ನರಿಂದ 80 ಬಿಲಿಯನ್ ಡಾಲರ್ ಮೌಲ್ಯದ ಸಲಕರಣೆ ಹಾಗೂ ತರಬೇತಿ ಪಡೆದ ಅಫ್ಘಾನಿಸ್ತಾನ ಸೇನೆಯನ್ನು ಸೋಲಿಸಿದರ ಹಿಂದಿನ ಪ್ರಮುಖ ಶಕ್ತಿ ಏನು..? ತಾಲಿಬಾನಿಗಳು 2 ದಶಕಗಳ ಯುದ್ಧದಲ್ಲಿ ತಮ್ಮನ್ನು ಉಳಿಸಿಕೊಳ್ಳಲು ನಿಧಿಯನ್ನು ಎಲ್ಲಿ ಕಂಡುಕೊಂಡರು..? ಈ ರೀತಿಯ ಪ್ರಶ್ನೆಗಳೂ ನಮ್ಮನ್ನು ಕಾಡುತ್ತವೆ. ಇದಕ್ಕೆ ಉತ್ತರ ಇಲ್ಲಿದೆ.


    ಬೆಳೆಯುತ್ತಿರುವ ಮಾದಕವಸ್ತು ವ್ಯಾಪಾರ..!
    ಮೇ 2020 ರ ವರದಿಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು "ಒಟ್ಟಾರೆ ತಾಲಿಬಾನ್ ವಾರ್ಷಿಕ ಸಂಯೋಜಿತ ಆದಾಯವು 300 ದಶಲಕ್ಷ ಡಾಲರ್‌ನಿಂದ ವರ್ಷಕ್ಕೆ 1.5 ಬಿಲಿಯನ್ ಡಾಲರ್‌ವರೆಗೆ ಇದೆ" ಎಂದು ಅಂದಾಜಿಸಿದೆ. 2019ರ ಅಂಕಿಅಂಶಗಳು ಸ್ವಲ್ಪ ಕಡಿಮೆ ಇದ್ದರೂ, "ತಾಲಿಬಾನ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದು ಮತ್ತು ನಗದು ಬಿಕ್ಕಟ್ಟನ್ನು ಅನುಭವಿಸುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ" ಎಂದೂ ಅಧಿಕಾರಿಗಳು ಹೇಳಿದ್ದಾರೆ.


    ತಾಲಿಬಾನ್ ನಿಧಿಯ ಪ್ರಾಥಮಿಕ ಮೂಲವೆಂದರೆ ಮಾದಕವಸ್ತು ವ್ಯಾಪಾರ ಎಂದು 2 ದಶಕಗಳಿಂದ ಹಲವು ವರದಿಗಳು ತೋರಿಸಿವೆ. ಇನ್ನೊಂದೆಡೆ, ಇತ್ತೀಚಿನ ವರ್ಷಗಳಲ್ಲಿ ಅವರ ಆದಾಯವು ಕಡಿಮೆಯಾಗಿದ್ದು, ಇದಕ್ಕೆ ಕಾರಣ ಪಾಪ್ಪಿ (ಅಫೀಮು ನೀಡುವ ಒಂದು ಸಸ್ಯ) ಸಸ್ಯ ಬೆಳೆಯುವಿಕೆ ಕಡಿಮೆಯಾಗಿರುವುದು ಹಾಗೂ ಆದಾಯ ಕಡಿಮೆಯಾಗಿರುವುದು ಮತ್ತು ಅಭಿವೃದ್ಧಿ ಯೋಜನೆಗಳಿಂದ ಕಡಿಮೆ ತೆರಿಗೆಯ ಆದಾಯ ಹಾಗೂ ಆಡಳಿತ ಯೋಜನೆಗಳ ಮೇಲಿನ ಖರ್ಚಿನಿಂದಾಗಿ ಬಳಲುತ್ತಿದೆ ಎಂದು UNSC ವರದಿ ಹೇಳಿತ್ತು.


    ಆದರೂ, "ಹೆರಾಯಿನ್ ಕೃಷಿ ಮತ್ತು ಉತ್ಪಾದನೆಯು ಹಲವು ವರ್ಷಗಳಿಂದ ತಾಲಿಬಾನ್ ಆದಾಯದ ಬಹುಭಾಗವನ್ನು ಪೂರೈಸಿದೆ, ಅಫ್ಘಾನಿಸ್ತಾನದಲ್ಲಿ ಮೆಥಾಂಫೆಟಮೈನ್ ಹೊರಹೊಮ್ಮುವಿಕೆಯು ಗಮನಾರ್ಹ ಲಾಭಾಂಶ ಇಟ್ಟುಕೊಂಡು ಪ್ರಮುಖ ಹೊಸ ಡ್ರಗ್ಸ್‌ ಉದ್ಯಮಕ್ಕೆ ಉತ್ತೇಜನ ನೀಡುತ್ತಿದೆ" ಎಂದು ವರದಿಯು ತಿಳಿಸಿತ್ತು.

    2014ರಲ್ಲಿ ಮೊದಲ ಬಾರಿಗೆ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (UNODC) ಮೆಥಾಂಫೆಟಮೈನ್‌ನ ನಿಷೇಧ ಮಾಡಲಾಗಿತ್ತು. ಆ ವರ್ಷದಲ್ಲಿ 9 ಕೆಜಿ ಸೀಜ್‌ ಮಾಡಲಾಗಿತ್ತು. ಆದರೆ, 2019 ರ ಮೊದಲಾರ್ಧದಲ್ಲಿ 650 ಕೆಜಿಯಷ್ಟನ್ನು ವಶಪಡಿಸಿಕೊಳ್ಳಲಾಗಿತ್ತು. ಮೆಥಾಂಫೆಟಮೈನ್, ಹೆರಾಯಿನ್‌ಗಿಂತ ಹೆಚ್ಚು ಲಾಭದಾಯಕ ಎಂದು ಹೇಳಲಾಗಿದೆ. ಏಕೆಂದರೆ ಅದರ ಪದಾರ್ಥಗಳು ಕಡಿಮೆ ವೆಚ್ಚದಲ್ಲಿರುತ್ತವೆ ಮತ್ತು ಇದಕ್ಕೆ ದೊಡ್ಡ ಪ್ರಯೋಗಾಲಯಗಳು ಅಗತ್ಯವಿಲ್ಲ ಎಂದೂ ತಿಳಿದುಬಂದಿದೆ.


    ಪ್ರಮುಖ ಉತ್ಪಾದನಾ ಪ್ರಾಂತ್ಯಗಳಾದ ಫರಾಹ್ ಮತ್ತು ನಿಮ್ರುಜ್‌ನಲ್ಲಿನ ಶೇಕಡಾ 60ರಷ್ಟು ಮೆಥಾಂಫೆಟಮೈನ್ ಪ್ರಯೋಗಾಲಯಗಳು ತಾಲಿಬಾನಿಗಳ ನಿಯಂತ್ರಣದಲ್ಲಿದೆ ಎಂದು ವರದಿಯಾಗಿರುವ ಬಗ್ಗೆ UNSC ವರದಿ ಹೇಳಿತ್ತು. ತಾಲಿಬಾನ್ ಸಂಘಟಿಸಿದ ಹೆರಾಯಿನ್ ಕಳ್ಳಸಾಗಣೆ ಮತ್ತು ತೆರಿಗೆಯ ವ್ಯವಸ್ಥೆ.. ಪಾಕಿಸ್ತಾನದ ಗಡಿಯಲ್ಲಿರುವ ಹಿಸಾರಕ್‌ನಿಂದ ದುರ್ ಬಾಬಾವರೆಗೆ ನಂಗರ್‌ಹಾರ್‌ನ ದಕ್ಷಿಣದ ಎಂಟು ಜಿಲ್ಲೆಗಳಲ್ಲಿ ವ್ಯಾಪಿಸಿದೆ" ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.


    ಪ್ರತಿ ಜಿಲ್ಲೆಯಲ್ಲಿ, ತಾಲಿಬಾನ್‌ನ 200 ಕಮಾಂಡರ್‌ಗಳಿಗೆ ಕಳ್ಳಸಾಗಾಣಿಕೆದಾರರು ಒಂದು ಕೆಜಿ ಹೆರಾಯಿನ್‌ಗೆ 200 ಪಾಕಿಸ್ತಾನ ರೂಪಾಯಿ (ಅಂದಾಜು 1.30 ಡಾಲರ್) ಅಥವಾ ಅಫ್ಘಾನಿಸ್ತಾನದಲ್ಲಿ ಅದಕ್ಕೆ ಸಮನಾದ ಬೆಲೆಯನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಾರೆ. ಕಳ್ಳಸಾಗಣೆದಾರರು ಮುಂದಿನ ಜಿಲ್ಲೆಗೆ ತೆರಳುವ ಮೊದಲು ಮತ್ತು ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸುವ ಮೊದಲು ತೆರಿಗೆ ಪಾವತಿಯನ್ನು ದೃಢೀಕರಿಸುವ ದಾಖಲೆಗಳನ್ನು ಜಿಲ್ಲಾ ತಾಲಿಬಾನ್‌ ಕಮಾಂಡರ್‌ಗಳಿಂದ ಪಡೆದುಕೊಳ್ಳುತ್ತಾರೆ. ಕಳ್ಳಸಾಗಣೆ ಮಾರ್ಗಗಳು ಪ್ರತಿ ಜಿಲ್ಲೆಯ ತಾಲಿಬಾನ್ ಕಮಾಂಡರ್‌ಗೆ ಆರ್ಥಿಕವಾಗಿ ಸಬಲವಾಗಲು ಸಹಾಯ ಮಾಡಿದೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.


    UNODC ಕಳೆದ ವರ್ಷ ಪ್ರಕಟಿಸಿದ ವರದಿಯಲ್ಲಿ, ''ಅಫ್ಘಾನಿಸ್ತಾನ, ಹೆಚ್ಚು ಅಫೀಮನ್ನು ಉತ್ಪಾದಿಸುವ ದೇಶವಾಗಿದೆ, ಇದು ಕಳೆದ ಐದು ವರ್ಷಗಳಲ್ಲಿ ಜಾಗತಿಕ ಅಫೀಮು ಉತ್ಪಾದನೆಯಲ್ಲಿ ಸರಿಸುಮಾರು ಶೇ 84 ರಷ್ಟು ತನ್ನ ಭಾಗವನ್ನು ಹೊಂದಿದೆ.


    ನೆರೆಯ ರಾಷ್ಟ್ರಗಳು, ಯೂರೋಪ್‌, ಮಧ್ಯ ಪ್ರಾಚ್ಯ ರಾಷ್ಟ್ರಗಳು, ಪೂರ್ವ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಮಾರುಕಟ್ಟೆಗೆ ಹೆಚ್ಚು ಪೂರೈಕೆಯಾಗುತ್ತದೆ. ಸ್ವಲ್ಪ ಮಟ್ಟಿಗೆ ಉತ್ತರ ಅಮೆರಿಕ (ವಿಶೇಷವಾಗಿ ಕೆನಡಾ) ಮತ್ತು ಓಷಿಯಾನಿಯಾಗೂ ಸರಬರಾಜಾಗುತ್ತದೆ ಎಂದು ತಿಳಿದುಬಂದಿದೆ.

    ಗಣಿಗಾರಿಕೆ, ತೆರಿಗೆಗಳು, ದೇಣಿಗೆಗಳು
    ಸೆಪ್ಟೆಂಬರ್ 2020 ರಲ್ಲಿ, ರೇಡಿಯೋ ಫ್ರೀ ಯುರೋಪ್ ನ್ಯಾಟೋ ಮಾಡಿದ್ದ ಗೌಪ್ಯ ವರದಿಯನ್ನು ಬಯಲುಗೊಳಿಸಿತ್ತು. ಈ ವೇಳೆ ತಾಲಿಬಾನ್‌ ಆರ್ಥಿಕ ಮತ್ತು ಮಿಲಿಟರಿ ಸ್ವಾತಂತ್ರ್ಯವನ್ನು ಸಾಧಿಸಿದೆ, ಅಥವಾ ಸಾಧಿಸಲು ಹತ್ತಿರದಲ್ಲಿದೆ" ಎಂದು ಹೇಳಿತ್ತು. ಅಲ್ಲದೆ, ಸರ್ಕಾರಗಳು ಅಥವಾ ಇತರ ದೇಶಗಳ ನಾಗರಿಕರ ಬೆಂಬಲದ ಅವಶ್ಯಕತೆ ಇಲ್ಲದೆ, ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗಿಸುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.


    ಇನ್ನು, ಕಾನೂನುಬಾಹಿರ ಮಾದಕವಸ್ತು ವ್ಯಾಪಾರದ ಹೊರತಾಗಿ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಮುಹಮ್ಮದ್ ಒಮರ್ ಪುತ್ರ ಮುಲ್ಲಾ ಮುಹಮ್ಮದ್ ಯಾಕೂಬ್ ಮೇಲ್ವಿಚಾರಣೆಯಲ್ಲಿ, ತಾಲಿಬಾನ್ ಅಕ್ರಮ ಗಣಿಗಾರಿಕೆ ಮತ್ತು ರಫ್ತುಗಳಿಂದ ಲಾಭ ಪಡೆದುಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ತನ್ನ ಹಣಕಾಸಿನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ವರದಿ ಹೇಳುತ್ತದೆ. ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ಮುಲ್ಲಾ ಮುಹಮ್ಮದ್ ಯಾಕೂಬ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.


    ಮಾರ್ಚ್ 2020ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಉಗ್ರಗಾಮಿ ಚಳುವಳಿ ದಿಗ್ಭ್ರಮೆಗೊಳಿಸುವ 1.6 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಹಣ ಗಳಿಸಿತ್ತು ಎಂದೂ ಅಂದಾಜಿಸಲಾಗಿದೆ. ಇದರಲ್ಲಿ 416 ಮಿಲಿಯನ್ ಡಾಲರ್ ಡ್ರಗ್ಸ್ ವ್ಯಾಪಾರದಿಂದ ಬಂದಿದ್ದರೆ, ಕಬ್ಬಿಣದ ಅದಿರು, ಅಮೃತಶಿಲೆ, ತಾಮ್ರ, ಚಿನ್ನ, ಝಿಂಕ್ ಮತ್ತು ಅಪರೂಪದ ಭೂಮಿಯ ಲೋಹಗಳ ಅಕ್ರಮ ಗಣಿಗಾರಿಕೆಯಿಂದ 450 ಮಿಲಿಯನ್‌ ಡಾಲರ್‌ಗೂ ಹೆಚ್ಚು ಹಣ ಗಳಿಸಿದೆ. ಮತ್ತು ತನ್ನ ನಿಯಂತ್ರಣದಲ್ಲಿದ್ದ ಪ್ರದೇಶಗಳು ಹಾಗೂ ಹೆದ್ದಾರಿಗಳಲ್ಲಿ ಸುಲಿಗೆ ಮತ್ತು ತೆರಿಗೆಗಳಿಂದ 160 ಮಿಲಿಯನ್ ಡಾಲರ್ ಗಳಿಸಿದೆ. ಜತೆಗೆ, ಪ್ರಮುಖವಾಗಿ ಪರ್ಷಿಯಲ್‌ ಗಲ್ಫ್‌ ರಾಷ್ಟ್ರಗಳಿಂದ 240 ಮಿಲಿಯನ್ ಡಾಲರ್‌ ದೇಣಿಗೆಯನ್ನೂ ಪಡೆದುಕೊಂಡಿದೆ.


    ಇನ್ನು, ತಾನು ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು, 240 ಮಿಲಿಯನ್ ಡಾಲರ್ ಮೌಲ್ಯದ ಗ್ರಾಹಕ ವಸ್ತುಗಳನ್ನು ಆಮದು ಹಾಗೂ ರಫ್ತು ಮಾಡಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತಾಲಿಬಾನ್ 80 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಹೊಂದಿದೆ ಎಂದೂ ವರದಿ ಹೇಳಿದೆ.


    ಪಾಕ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ಲೂಟಿ
    ಅಫ್ಘಾನ್ ಮತ್ತು ಯುಎಸ್ ಪಡೆಗಳ ವಿರುದ್ಧ ಹೋರಾಡಲು ತಾಲಿಬಾನ್ ಯಾವುದೇ ಶಸ್ತ್ರಾಸ್ತ್ರಗಳ ಕೊರತೆಯನ್ನು ಹೊಂದಿಲ್ಲ. ತಾಲಿಬಾನ್ ಯಾವುದೇ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಒಂದೇ ಮೂಲದ ಮೇಲೆ ಅವಲಂಬಿತವಾಗಿಲ್ಲವಾದರೂ ಪಾಕಿಸ್ತಾನದ ಬೆಂಬಲವು ಇಲ್ಲಿ ಮುಖ್ಯವಾಗಿದೆ.

    ತಾಲಿಬಾನ್‌ಗೆ ISI ಮತ್ತು ಪಾಕಿಸ್ತಾನ ಸೇನೆಯ ಬೆಂಬಲವನ್ನು ಪತ್ರಕರ್ತರಾದ ಗ್ರೆಚೆನ್ ಪೀಟರ್ಸ್, ಸ್ಟೀವ್ ಕಾಲ್ ಮತ್ತು ಇತರರು ಪದೇ ಪದೇ ಹೇಳುತ್ತಿದ್ದರು. ಪಾಕ್‌ನಿಂದ ಹಾಗೂ ಐಎಸ್‌ಐನಿಂದ ತಾಲಿಬಾನ್‌ಗೆ ನೇರವಾಗಿ ಹಾಗೂ ಹಕ್ಕಾನಿ ನೆಟ್‌ವರ್ಕ್ ಮೂಲಕ, ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳು ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ವಿಸ್ತಾರವಾದ ಇಸ್ಲಾಮಿಸ್ಟ್ ಮಾಫಿಯಾ, ಉಗ್ರ ಧಾರ್ಮಿಕ ಶಾಲೆಗಳು, ಮತ್ತು ಗಲ್ಫ್ ಹಾಗೂ ಪಾಕಿಸ್ತಾನದಲ್ಲಿ ಅರಬ್ ದೇಶಗಳೊಂದಿಗೆ ಪ್ರಬಲ ಸಂಪರ್ಕ ಹೊಂದಿರುವ ಕಳ್ಳ ವ್ಯವಹಾರಗಳ ಮೂಲಕ ಬೆಂಬಲ ನೀಡಲಾಗುತ್ತದೆ. ಮೂಲಭೂತವಾದಿ ಚಳುವಳಿಯ ವಿರುದ್ಧ ಹೋರಾಡಲು ಪಾಕಿಸ್ತಾನ ಪಡೆದ ನಿಧಿಯನ್ನು ತಾಲಿಬಾನ್‌ಗೆ ವರ್ಗಾಯಿಸುತ್ತಿದೆ ಎಂದು ಅಮೆರಿಕದ ನಾಯಕರು ಮತ್ತು ಜನರಲ್‌ಗಳು ಬಹಿರಂಗವಾಗಿ ಆರೋಪಿಸಿದ್ದಾರೆ.


    ಸೆಪ್ಟೆಂಬರ್ 2017 ರಲ್ಲಿ, ಅಂದಿನ ಅಫ್ಘಾನ್ ಸೇನಾ ಮುಖ್ಯಸ್ಥ ಜನರಲ್ ಶರೀಫ್ ಯಫ್ತಾಲಿ, ಪಶ್ಚಿಮ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆ ಶಸ್ತ್ರಾಸ್ತ್ರಗಳು ಮತ್ತು ಸೇನಾ ಉಪಕರಣಗಳನ್ನು ಇರಾನ್ ಪೂರೈಸುತ್ತಿದೆ ಎಂದು ಸಾಬೀತುಪಡಿಸಲು ತನ್ನ ಬಳಿ ದಾಖಲೆಗಳಿವೆ ಎಂದು ಬಿಬಿಸಿಗೆ ಹೇಳಿದ್ದರು.

    ಯುಎಸ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯ ನವೆಂಬರ್ 2019 ರ ವರದಿಯು "ಕನಿಷ್ಠ 2007ರಿಂದ, ಇರಾನ್ ಶಸ್ತ್ರಾಸ್ತ್ರಗಳು, ತರಬೇತಿ ಮತ್ತು ಧನಸಹಾಯ ಸೇರಿದಂತೆ ಇತರೆ ಬೆಂಬಲವನ್ನು ಒದಗಿಸಿದೆ. ಅಫ್ಘಾನಿಸ್ತಾನದಲ್ಲಿ ಯುಎಸ್ ಮತ್ತು ಪಾಶ್ಚಿಮಾತ್ಯ ಪ್ರಭಾವವನ್ನು ಎದುರಿಸಲು, ಐಸಿಸ್-ಖೋರಾಸನ್ ವಿರುದ್ಧ ಮತ್ತು ಯಾವುದೇ ರಾಜಿ ನಂತರದ ಸರ್ಕಾರದಲ್ಲಿ ಟೆಹ್ರಾನ್‌ನ ಪ್ರಭಾವವನ್ನು ಹೆಚ್ಚಿಸಲು ಈ ರೀತಿ ಮಾಡುತ್ತಿದೆ'' ಎಂದೂ ಹೇಳುತ್ತದೆ.


    ರಷ್ಯಾ ಕೂಡ ತಾಲಿಬಾನ್‌ ಅನ್ನು ಬೆಂಬಲಿಸುತ್ತಿದೆ ಎಂದು ಅಮೆರಿಕ ಆರೋಪಿಸಿದ್ದರೂ, ಅದಕ್ಕೆ ಪುರಾವೆಗಳಿಲ್ಲ.


    ಈ ಬಾಹ್ಯ ಮಾರ್ಗಗಳನ್ನು ಮೀರಿ, ತಾಲಿಬಾನ್ ಅಫ್ಘಾನ್ ಪಡೆಗಳಿಗೆ ಯುಎಸ್ ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡು ಈ ಗೆಲುವು ಸಾಧಿಸಲು ಸಾಧ್ಯವಾಗಿದೆ.


    ಯುಎಸ್ ಮಿಲಿಟರಿ ಸ್ವತ್ತುಗಳು ತಾಲಿಬಾನ್‌ ವಶದಲ್ಲಿ
    ಯಾವ ರೀತಿಯ ಅಮೆರಿಕದ ಮಿಲಿಟರಿ ಸ್ವತ್ತುಗಳು ಮತ್ತು ಎಷ್ಟು ಸಂಖ್ಯೆಯಲ್ಲಿ ತಾಲಿಬಾನ್ ಕೈಗೆ ಸಿಕ್ಕಿಬಿದ್ದಿವೆ ಎಂಬುದಕ್ಕೆ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ. ಆದರೆ, 2003ರಿಂದ 2016 ರ ನಡುವೆ ಯುಎಸ್‌ನ 75,898 ವಾಹನಗಳು, 5,99,690 ಶಸ್ತ್ರಾಸ್ತ್ರಗಳು, 208 ವಿಮಾನಗಳು ಮತ್ತು 16,191 ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಸಾಧನಗಳಿಗೆ ಅಫ್ಘಾನ್ ಪಡೆಗಳಿಗೆ ಧನಸಹಾಯ ನೀಡಿದೆ ಎಂದು ಯುಎಸ್ ಸರ್ಕಾರಿ ಹೊಣೆಗಾರಿಕೆ ಕಚೇರಿ 2017 ರಲ್ಲಿ ಒಂದು ವರದಿಯಲ್ಲಿ ಹೇಳಿದೆ. ಕಳೆದ ಕೆಲವು ವರ್ಷಗಳಲ್ಲಿ, 7,000 ಮೆಷಿನ್ ಗನ್‌ಗಳು, 4,700 ಹಮ್ವೀಗಳು ಮತ್ತು 20,000 ಗ್ರೆನೇಡ್‌ಗಳನ್ನು ಅಫ್ಘಾನ್ ಪಡೆಗಳಿಗೆ ನೀಡಲಾಗಿದೆ ಎಂದು SIGAR ಡೇಟಾ ತೋರಿಸುತ್ತದೆ.

    ಆದರೆ, ಆಗಸ್ಟ್ 17 ರಂದು, ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ಎರಡು ದಿನಗಳ ನಂತರ, ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ “ನಮ್ಮ ಬಳಿ ಸಂಪೂರ್ಣ ಚಿತ್ರಣವಿಲ್ಲ, ನಿಸ್ಸಂಶಯವಾಗಿ, ರಕ್ಷಣಾ ಸಾಮಗ್ರಿಗಳ ಪ್ರತಿಯೊಂದು ವಸ್ತುಗಳು ಎಲ್ಲಿಗೆ ಹೋಗಿದೆ ಎಂಬುದು ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ತಾಲಿಬಾನ್ ಕೈಗೆ ಸಿಕ್ಕಿವೆ'' ಎಂದು ಹೇಳಿದರು.


    ತಾಲಿಬಾನ್‌ಗಳು ಈಗ ಅಫ್ಘಾನ್ ಪಡೆಗಳ ಬಳಿ ಇದ್ದ ಎರಡು ವಾರ್‌ಜೆಟ್‌ಗಳು, 24 ಹೆಲಿಕಾಪ್ಟರ್‌ಗಳು ಮತ್ತು ಏಳು ಬೋಯಿಂಗ್‌ ಇನ್‌ಸಿಟು ಸ್ಕ್ಯಾನ್‌ಈಗಲ್‌ ಮಾನವರಹಿತ ವಾಹನಗಳನ್ನು ಹೊಂದಿವೆ. ಜೂನ್ ಮತ್ತು ಆಗಸ್ಟ್ 14 ರ ನಡುವೆ, ತಾಲಿಬಾನಿಗಳು 12 ಟ್ಯಾಂಕ್‌ಗಳು, 51 ಶಸ್ತ್ರಸಜ್ಜಿತ ಹೋರಾಟದ ವಾಹನಗಳು, 61 ಫಿರಂಗಿ ಮತ್ತು ಮೋರ್ಟಾರ್, ಎಂಟು ವಿಮಾನ ವಿರೋಧಿ ಬಂದೂಕುಗಳು ಮತ್ತು 1,980 ಟ್ರಕ್‌ಗಳು, ಜೀಪ್‌ಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡವು ಎಂದೂ ಯುದ್ದ ವಿಶ್ಲೇಷಕರಾದ ಸ್ಟೇನ್ ಮಿಟ್ಜರ್ ಮತ್ತು ಜೂಸ್ಟ್ ಒಲಿಮಾನ್ಸ್ ಹೇಳಿದ್ದಾರೆ.


    ಇದೆಲ್ಲದರ ಜೊತೆಗೆ ಹಿಂದಿನ ಅಫ್ಘಾನ್ ಸರ್ಕಾರದ ಪಡೆಗಳು ದೇಶದ ಎಲ್ಲೆಡೆ ತಾಲಿಬಾನಿಗಳಿಗೆ ಶರಣಾಗಿವೆ. ಇದು ತಾಲಿಬಾನ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿಸುತ್ತದೆ. ಇದು ಈಗ "ಹೆಚ್ಚು ಮಿಲಿಟರಿ ಶಕ್ತಿಯುತವಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಯ ವಿಶ್ಲೇಷಕ ಜೊನಾಥನ್ ಶ್ರೋಡೆನ್ ಹೇಳಿದ್ದಾರೆ. "ಇದು ಅವರನ್ನು ಲಘುವಾಗಿ ಶಸ್ತ್ರಸಜ್ಜಿತ ಗೆರಿಲ್ಲಾ ಚಳುವಳಿಯಿಂದ ಸಾಂಪ್ರದಾಯಿಕ ಸೈನ್ಯಕ್ಕೆ ಪರಿಣಾಮಕಾರಿಯಾಗಿ ಪರಿವರ್ತಿಸುತ್ತದೆ."


    ಇದನ್ನೂ ಓದಿ: ಪಂಜಾಬ್​ನಲ್ಲಿ ಶುರುವಾಯಿತು ಮತ್ತೊಂದು ರೈತ ಹೋರಾಟ: 50 ರೈಲುಗಳ ಸಂಚಾರ ಬಂದ್​

    ತಾಲಿಬಾನ್ ಈಗ ಹೊಂದಿರುವ ಮಿಲಿಟರಿ ಉಪಕರಣಗಳಲ್ಲಿ, ಡಿ -30 ಹೊವಿಟ್ಜರ್‌ಗಳು ಬಹುಶಃ ಅತ್ಯಂತ ಮಾರಕವಾಗಿವೆ ಎಂದೂ ಡಾ. ಶ್ರೋಡೆನ್‌ ಹೇಳುತ್ತಾರೆ. ಇದು ಯುಎಸ್ ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದು ಮತ್ತು ತಾಲಿಬಾನ್‌ನೊಂದಿಗೆ ನಂಟು ಹೊಂದಿರುವ ಅಸಂಖ್ಯಾತ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರಗಳ ಸಂಭಾವ್ಯ ಮೂಲವಾಗಿದೆ ಎಮದೂ ಅವರು ಹೇಳಿದರು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು