Explained: 30 ವರ್ಷಗಳ ನಂತರ ನಮಗೆ ಅನ್ನ ಸಿಗುತ್ತದಾ? ಹವಾಮಾನ ವೈಪರೀತ್ಯದ ಎಚ್ಚರಿಕೆಯೇನು?

ವಿಶ್ವದಲ್ಲೇ ಅತೀ ಹೆಚ್ಚು ಅಕ್ಕಿ ಬೆಳೆಯುವ ದೇಶವಾಗಿರುವ ಭಾರತದಲ್ಲಿ ಇತ್ತೀಚಿಗೆ ಸಂಶೋಧಕರಿಗೆ ಬಹು ದೊಡ್ಡ ಪ್ರಶ್ನೆ ಕಾಡುತ್ತಿದೆ. ಮುಂದಿನ 30 ವರ್ಷಗಳಲ್ಲಿ ನಮಗೆ ಬೇಕಾದ ಅನ್ನವನ್ನು ತಿನ್ನಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಸಂಶೋಧಕರಿಗೆ ಕಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅನ್ನವಿಲ್ಲದೇ ಮಾನವ ಬದುಕಲಾರ. ಅನ್ನದ ಪ್ರತಿ ಅಗಳಿನಲ್ಲೂ ದೇಹಕ್ಕೆ ಶಕ್ತಿ ನೀಡುವ ಗುಣವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರೀಕರಣ ಮತ್ತು ಜನಸಂಖ್ಯಾ ಸ್ಪೋಟದಿಂದಾಗಿ ಅನ್ನದ ಅಭಾವ ಹೆಚ್ಚುತ್ತಿದೆ. ಇನ್ನೂ ಮುಂದಿನ 30 ವರ್ಷಗಳಲ್ಲಿ ನಮಗೆ ಬೇಕಾದ ಅನ್ನವನ್ನು ತಿನ್ನಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಸಂಶೋಧಕರಿಗೆ ಕಾಡುತ್ತಿದೆ.

  ವಿಶ್ವದಲ್ಲೇ ಅತೀ ಹೆಚ್ಚು ಅಕ್ಕಿ ಬೆಳೆಯುವ ದೇಶವಾಗಿರುವ ಭಾರತದಲ್ಲಿ ಇತ್ತೀಚಿಗೆ ಸಂಶೋಧಕರಿಗೆ ಬಹು ದೊಡ್ಡ ಪ್ರಶ್ನೆ ಕಾಡುತ್ತಿದೆ. ಭಾರತದಲ್ಲಿ ಕ್ಷೇತ್ರ ಅಧ್ಯಯನವನ್ನು ನಡೆಸಿದ ಇಲಿನಾಯ್ಸ್ ವಿಶ್ವವಿದ್ಯಾಲಯದ ಅಮೇರಿಕನ್ ಸಂಶೋಧಕರ ತಂಡವು ಮುಂದಿನ 30 ವರ್ಷಗಳಲ್ಲಿ ಭತ್ತದ ಕೊರತೆಯ ಅಪಾಯವನ್ನು ಕಡಿಮೆ ಮಾಡಲು ಮಣ್ಣಿನ ಸಂರಕ್ಷಣಾ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಅವಶ್ಯವಾಗಿದೆ ಎಂದು ಹೇಳಿದ್ದಾರೆ. ಮತ್ತು ಸುಗ್ಗಿಯ ಸಮಯದಲ್ಲಿ ತ್ಯಾಜ್ಯವನ್ನು ಸೀಮಿತಗೊಳಿಸುವುದು ಮುಖ್ಯ ಮಾರ್ಗವಾಗಿದೆ ಎಂದು ಅವರು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.

  ಬಿಹಾರದ ಬೋರ್ಲಾಗ್ ಇನ್ಸ್ಟಿಟ್ಯೂಟ್ ಫಾರ್ ಸೌತ್ ಏಷ್ಯಾದ ಹೊಲವೊಂದರಲ್ಲಿ ಸಂಶೋಧನೆ ನಡೆಸಲಾಗಿದ್ದು, ಭತ್ತ ಬೆಳೆಯುವ ತೋಟಗಳ ಕುರುತು ಸಂಶೋಧನೆಯನ್ನು ಕೇಂದ್ರಿಕರಿಸಲಾಗಿದೆ. 2050ರ ವೇಳೆಗೆ ಭತ್ತದ ಇಳುವರಿ ಮತ್ತು ನೀರಿನ ಬೇಡಿಕೆಯನ್ನು ಅಂದಾಜು ಮಾಡುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಭತ್ತದ ರೈತರು ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ನಿರ್ಣಯಿಸುವುದು ಈ ಸಂಶೋಧನೆಯ ಉದ್ದೇಶವಾಗಿತ್ತು.

  ಸಂಶೋಧಕರ ತಂಡದ ಪ್ರಮುಖರೊಬ್ಬರು ಹೇಳಿರುವಂತೆ “ಹವಾಮಾನ ಬದಲಾದಂತೆ ತಾಪಮಾನ, ಮಳೆ ಮತ್ತು ಇಂಗಾಲದ ಡೈಆಕ್ಸೈಡ್ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಬೆಳೆಯ ಬೆಳವಣಿಗೆಗೆ, ವಿಶೇಷವಾಗಿ ಭತ್ತಕ್ಕೆ ಇವು ಅತ್ಯಗತ್ಯ ಪದಾರ್ಥಗಳಾಗಿವೆ ”ಎಂದು ಇಲಿನಾಯ್ಸ್ ವಿಶ್ವವಿದ್ಯಾಲಯದ ಕೃಷಿ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಮತ್ತು ಅಧ್ಯಯನದ ಪ್ರಮುಖರಾದ ಪ್ರಸಂತ ಕಲಿತಾ ರವರು ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: Coronavirus: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ಆತಂಕ; ಸರ್ಕಾರ ಎಡವಿದ್ದೆಲ್ಲಿ?

  "ಒಟ್ಟಾರೆಯಾಗಿ, ಪ್ರತಿ ಕೆಜಿ ಅಕ್ಕಿಗೆ ಸುಮಾರು 4,000 ಲೀಟರ್ ನೀರು ಉತ್ಪಾದನೆ ಮತ್ತು ಸಂಸ್ಕರಣೆಗೆ ವ್ಯಯವಾಗುತ್ತದೆ" ಎಂದು ಅವರು ಹೇಳುತ್ತಾರೆ. ಕಲಿತಾ ರವರ ನೇತೃತ್ವದ ಸಂಶೋಧಕರ ತಂಡವು ಅಕ್ಕಿಯ ಇಳುವರಿ, ದರಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಬೆಳೆಯಲು ಬೇಕಾದ ನೀರಿನ ಪ್ರಮಾಣವನ್ನು ನಿರ್ಣಯಿಸಿದೆ. ಅಕ್ಕಿ ಉತ್ಪಾದನೆಯನ್ನು ಕಾಪಾಡಿಕೊಳ್ಳಲು ಈಗ ಕಾರ್ಯಗತಗೊಳಿಸಬಹುದಾದ ತಂತ್ರಗಳನ್ನು ಗುರುತಿಸಲು ಸಂಶೋಧಕರು ಕಂಪ್ಯೂಟರ್ ಸಿಮ್ಯುಲೇಶನ್ ಮಾದರಿಗಳನ್ನು ನಡೆಸಿದರು.

  ಭತ್ತ ಬೆಳೆಯುವ ರೈತರು ತಮ್ಮ ಈ ಹಳೆಯ ಪದ್ಧತಿಗಳನ್ನು ಮುಂದುವರಿಸಿದರೆ, ಭತ್ತದ ಇಳುವರಿಯು 2050 ರ ವೇಳೆಗೆ ಗಮನಾರ್ಹವಾಗಿ ಕುಸಿಯಬಹುದು ಎಂದು ಸಂಶೋಧಕರ ತಂಡವು ಅಂದಾಜಿಸಿದೆ. "ನಮ್ಮ ಮಾಡೆಲಿಂಗ್ ಫಲಿತಾಂಶಗಳು ಬೆಳೆ ಬೆಳವಣಿಗೆಯ ಹಂತವು ಕುಗ್ಗುತ್ತಿದೆ ಎಂದು ತೋರಿಸುತ್ತದೆ. ನೀವು ನೆಟ್ಟ ದಿನದಿಂದ ನೀವು ಕೊಯ್ಲು ಮಾಡಿದ ದಿನದವರೆಗೆ ಒಟ್ಟು ಪಕ್ವತೆಯ ಸಮಯ ಕಡಿಮೆಯಾಗುತ್ತಿದೆ. ಬೆಳೆಗಳು ವೇಗವಾಗಿ ಪಕ್ವವಾಗುತ್ತಿವೆ, ಮತ್ತು ಇದರ ಪರಿಣಾಮವಾಗಿ, ಇಳುವರಿಯ ಸಂಪೂರ್ಣ ಸಾಮರ್ಥ್ಯವನ್ನು ನೀವು ಪಡೆಯುವುದಿಲ್ಲ ”ಎಂದು ಪ್ರೊಫೆಸರ್ ಕಲಿತಾ ವಿವರಿಸಿದ್ದಾರೆ.

  ಭತ್ತದ ನಾಟಿ ಮಾಡುವದರ ಬದಲು ಭತ್ತದ ಬೀಜಗಳಿಂದ ಬೆಳೆದರೆ ಗಮರ್ನಾಹವಾದ ಫಲಿತಾಂಶ ಕಂದುಕೊಳ್ಳಾಬಹುಅದಾಗಿದೆ ಎಂದು ಸಂಶೋಧಕರು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಈ ವಿಧಾನದಿಂದ ಪರಿಸರಕ್ಕೆ ಅನುಕೂಲವಾಗಲಿದ್ದು, ಭತ್ತವನ್ನು ಕಡಿಮೆ ನೀರಿನಿಂದ ಮತ್ತು ಅದೇ ರೀತಿಯ ಇಳುವರಿಯೊಂದಿಗೆ ಬೆಳೆಯಲು ಸಹಾಯವಾಗಲಿದೆ. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಸುಮಾರು 30% ಬೆಳೆಗಳನ್ನು ಹೊಂದಿರುತ್ತದೆ. ಈ ನಷ್ಟಗಳನ್ನು ಕಡಿಮೆ ಮಾಡುವ ಪ್ರಯತ್ನಗಳು ಬೆಳೆ ಲಭ್ಯತೆ ಮತ್ತು ಆಹಾರ ಸುರಕ್ಷತೆಯನ್ನು ಹೆಚ್ಚಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

  ಅವರ ಸಂಶೋಧನೆಗಳ ಪ್ರಕಾರ, ಭತ್ತದ ಉತ್ಪಾದನೆಯಲ್ಲಿ 60% ಹೆಚ್ಚಳವನ್ನು ಸಾಧಿಸುವ ಅತ್ಯುತ್ತಮ ತಂತ್ರವನ್ನು ಕಂಡುಕೊಂಡಿದ್ದು, ಭತ್ತಕ್ಕೆ ಬಳಸಲಾಗುವ ನೀರಿನ ಪ್ರಮಾಣವನ್ನು ತಗ್ಗಿಸುವ ತಂತ್ರಗಳನ್ನು ಈ ಅಧ್ಯಯನದಿಂದ ತಿಳಿದುಬಂದಿದೆ.
  Published by:Sushma Chakre
  First published: