Explained: ಕಂಟೇನರ್ ಕೊರತೆ ಉಂಟಾಗಿರುವುದಕ್ಕೆ ಪ್ರಮುಖ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ...

ಪ್ರಸ್ತುತ ಸರಕಾರವು ರಫ್ತುದಾರರೊಂದಿಗೆ ಮಾತುಕತೆ ನಡೆಸುತ್ತಿದ್ದು ಅಂತರಾಷ್ಟ್ರೀಯ ಕಂಟೇನರ್ ಕೊರತೆ ನಿಭಾಯಿಸುವಿಕೆಗೆ ಸಹಕಾರ ನೀಡಿದೆ. ಕಳೆದ ವರ್ಷದಲ್ಲಿ ಪ್ರಮುಖ ಹಡಗು ಮಾರ್ಗಗಳಿಗಾಗಿ ಸರಕು ಸಾಗಣೆ ದರಗಳು ಶೇಕಡ 300 ಕ್ಕಿಂತ ಹೆಚ್ಚಾಗಿದೆ.

ಕಂಟೈನರ್.

ಕಂಟೈನರ್.

  • Share this:
    ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಹಡಗುಗಳ ಸಂಖ್ಯೆಯಲ್ಲಿ ಕಡಿತ ಉಂಟಾಗಿದ್ದು ಖಾಲಿ ಕಂಟೇನರ್‌ಗಳನ್ನು ಪಿಕ್ ಮಾಡಲಾಗಿದ್ದು ಹೆಚ್ಚಿನ ಕಂಟೇನರ್‌ಗಳನ್ನು ಡಿಪೋಗಳಲ್ಲಿಯೇ ಕೈಬಿಡಲಾಗಿದ್ದು ಇನ್ನು ಕೆಲವು ದೀರ್ಘ ಸಮಯದಿಂದ ಪೋರ್ಟ್‌ಗಳಲ್ಲಿಯೇ ಇದೆ. ಕಳೆದ ವರ್ಷದ ಆರಂಭದಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗವು ಹರಡಲು ಪ್ರಾರಂಭಿಸಿದಾಗ, ಅನೇಕ ದೇಶಗಳು ರಾಷ್ಟ್ರೀಯ ಲಾಕ್‌ಡೌನ್‌ಗಳನ್ನು ಜಾರಿಗೆ ತರಲು ಪ್ರಾರಂಭಿಸಿದವು ಮತ್ತು ಸರಕುಗಳ ಉತ್ಪಾದನೆಯನ್ನು ನಿಲ್ಲಿಸಿದವು, ಇದು ಅಂತಿಮವಾಗಿ ಆರ್ಥಿಕ ಬೆಳವಣಿಗೆಯನ್ನು ನಿಲ್ಲಿಸಿತು.

    ಹಡಗು ಕಂಪನಿಗಳು ಕಳುಹಿಸಿದ ಸರಕು ಹಡಗುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದವು. ಇದು ಆಮದು ಮಾಡಿದ ಮತ್ತು ರಫ್ತು ಮಾಡಿದ ಸರಕುಗಳ ಸಾಮಾನ್ಯ ಹರಿವನ್ನು ಸ್ಥಗಿತಗೊಳಿಸಿದ್ದಲ್ಲದೆ, ಖಾಲಿ ಕಂಟೇನರ್‌ಗಳ ಸಂಗ್ರಹಕ್ಕೂ ಕಡಿವಾಣ ಹಾಕಿತು.

    ಪ್ರಸ್ತುತ ಸರಕಾರವು ರಫ್ತುದಾರರೊಂದಿಗೆ ಮಾತುಕತೆ ನಡೆಸುತ್ತಿದ್ದು ಅಂತರಾಷ್ಟ್ರೀಯ ಕಂಟೇನರ್ ಕೊರತೆ ನಿಭಾಯಿಸುವಿಕೆಗೆ ಸಹಕಾರ ನೀಡಿದೆ. ಕಳೆದ ವರ್ಷದಲ್ಲಿ ಪ್ರಮುಖ ಹಡಗು ಮಾರ್ಗಗಳಿಗಾಗಿ ಸರಕು ಸಾಗಣೆ ದರಗಳು ಶೇಕಡ 300 ಕ್ಕಿಂತ ಹೆಚ್ಚಾಗಿದೆ. ಕಂಟೇನರ್‌ ಕೊರತೆ ಉಂಟಾಗಲು ಕಾರಣವೇನು ಹಾಗೂ ಈ ಸಮಸ್ಯೆ ನಿವಾರಣೆಗೆ ಸರಕಾರ ಯಾವ ಕ್ರಮ ಕೈಗೊಳ್ಳಬಹುದು ಎಂಬ ಅಂಶಗಳತ್ತ ಈ ಲೇಖನ ದೃಷ್ಟಿ ಚೆಲ್ಲಿದೆ.

    ಅಂತಾರಾಷ್ಟ್ರೀಯ ಕಂಟೇನರ್ ಕೊರತೆಗೆ ಕಾರಣವೇನು?

    ಮುಖ್ಯ ಕಾರಣ ಕೋವಿಡ್-19 ಎಂಬುದಾಗಿ ತಜ್ಞರು ಗಮನಿಸಿದ್ದು ಹಡಗುಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಿದ್ದು ಇದರಿಂದಾಗಿ ಕಂಟೇನರ್ ಪ್ರಮಾಣದಲ್ಲೂ ಇಳಿಕೆಯಾಗಿದೆ ಎಂಬುದು ತಿಳಿದುಬಂದಿದೆ. ದೀರ್ಘ ಸಮಯದಿಂದ ಪೋರ್ಟ್‌ಗಳಲ್ಲಿ ಕಂಟೇನರ್‌ಗಳು ಹಾಗೆಯೇ ಇದ್ದು ಇನ್ನು ಕೆಲವಷ್ಟನ್ನು ಒಳಬಂದರುಗಳಲ್ಲಿ ಇರಿಸಲಾಗಿದೆ. ಯುಎಸ್‌ನಂತಹ ಪ್ರಮುಖ ಬಂದರುಗಳಲ್ಲಿ ದಟ್ಟಣೆಯಿಂದಾಗಿ ಕೂಡ ಕಂಟೇನರ್‌ಗಳು ಬಹಳಷ್ಟು ಸಮಯ ಕೂಡ ಕಂಟೇನರ್‌ಗಳು ಹೆಚ್ಚು ಕಾಲ ಇರುವುದಕ್ಕೆ ಕಾರಣವಾಗಿದೆ.

    ನಿರಂತರವಾದ ಜಾಗತಿಕ ಆರ್ಥಿಕ ಚೇತರಿಕೆ ವ್ಯಾಪಾರಕ್ಕೆ ಪ್ರಚೋದನೆಯನ್ನು ನೀಡಿದೆ ಇನ್ನೊಂದೆಡೆ ಕಂಟೇನರ್‌ಗಳ ಲಭ್ಯತೆಯ ಕೊರತೆ ಹಾಗೂ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ನಿರೀಕ್ಷೆಗಿಂತ ವೇಗವಾದ ಚೇತರಿಕೆ ಕಳೆದ ವರ್ಷದ ಸಪ್ಟೆಂಬರ್‌ಗೆ ಹೋಲಿಸಿದಾಗ 500% ಹೆಚ್ಚಳವನ್ನು ಕಂಡಿದೆ.

    ಕಂಟೇನರ್ ಕೊರತೆಯು ಭಾರತೀಯ ರಫ್ತುದಾರರ ಮೇಲೆ ಹೇಗೆ ಪರಿಣಾಮ ಬೀರಿದೆ?

    ಭಾರತೀಯ ರಫ್ತುದಾರರಿಗೆ ಸಾಗಣೆಯಲ್ಲಿ ವಿಳಂಬ ಉಂಟಾಗುತ್ತಿದ್ದು ರಫ್ತು ಆದ ಸರಕುಗಳಿಗೆ ಪಾವತಿ ಪಡೆಯುವುದಕ್ಕೆ ದೀರ್ಘ ಸಮಯ ಹಿಡಿಯುತ್ತಿದೆ. 45 ದಿನಗಳನ್ನು ತೆಗೆದುಕೊಳ್ಳುತ್ತಿದ್ದ ಶಿಪ್‌ಮೆಂಟ್‌ಗಳು ಇದೀಗ 75-90 ದಿನಗಳನ್ನು ತೆಗೆದುಕೊಳ್ಳುತ್ತಿದ್ದು ಇದರಿಂದ 2-3 ತಿಂಗಳ ವಿಳಂಬ ಉಂಟಾಗುತ್ತಿದೆ ಹಾಗಾಗಿ ಸಣ್ಣ ರಫ್ತುದಾರರು ಲಿಕ್ವಿಡಿಟಿ (ದ್ರವ್ಯತೆ) ಕುಸಿತವನ್ನು ಕಂಡುಕೊಳ್ಳುತ್ತಿದ್ದಾರೆ. ಹೆಚ್ಚುವರಿಯಾಗಿ ಭಾರತದಲ್ಲಿ ಹಡುಗುಗಳನ್ನು ಮರಳಿ ಕಳುಹಿಸುವುದಕ್ಕೆ ಹೆಚ್ಚಿನ ಸಮಯ ತಗುಲುತ್ತಿದ್ದು ಇದರಿಂದ ಕೂಡ ಕಂಟೇನರ್ ಕೊರತೆಯ ಸಮಸ್ಯೆ ಉಂಟಾಗಿದೆ. ಪ್ರಸ್ತುತ ರಫ್ತುದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಇದಾಗಿದೆ.

    ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಹೇಗೆ ಸಹಕಾರ ನೀಡಬಹುದು?

    ಖಾಲಿ ಕಂಟೇನರ್‌ಗಳ ರಫ್ತಿನ ಮೇಲೆ ನಿಯಂತ್ರಣ ಹೇರುವಂತೆ ರಫ್ತುದಾರರು ಸರಕಾರಕ್ಕೆ ತಿಳಿಸುತ್ತಿದ್ದಾರೆ. ಕೆಲವು ದೇಶಗಳು ಖಾಲಿ ಕಂಟೇನರ್‌ಗಳಿಗೆ ಪ್ರೀಮಿಯಂ ಪಾವತಿಸಲು ಸಿದ್ಧವಾಗಿರುವುದೂ ಕೂಡ ಕಂಟೇರ್ ಕೊರತೆಗೆ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೋಲ್ಕತ್ತಾ ಬಂದರಿನ ನಿಯಮಕ್ಕೆ ಅನುಗುಣವಾಗಿ ಮೂರು ತಿಂಗಳ ಅವಧಿಗೆ ಪ್ರತಿ ಹಡಗಿಗೆ 100 ಕ್ಕೆ ರಫ್ತು ಮಾಡಲು ಅನುಮತಿಸಿರುವ ಖಾಲಿ ಕಂಟೇನರ್‌ಗಳ ಅನುಮತಿಗೆ ನಿರ್ಬಂಧ ಹೇರಬೇಕೆಂದು ತಿಳಿಸಿದ್ದು ಇದರಿಂದ ಎಲ್ಲಾ ಭಾರತೀಯ ಬಂದರುಗಳಲ್ಲಿ ಖಾಲಿ ಕಂಟೇನರ್‌ಗಳ ರಫ್ತಿನ ಮೇಲೆ ನಿಯಂತ್ರಣ ಹೇರಬಹುದೆಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.

    ಕೈಬಿಟ್ಟಿರುವ ಅಥವಾ ಸರ್ಕಾರಿ ಏಜೆನ್ಸಿಗಳ ವಶದಲ್ಲಿರುವ ಸುಮಾರು 20,000 ಕಂಟೇನರ್‌ಗಳನ್ನು ಬಿಡುಗಡೆ ಮಾಡುವಂತೆ ಸರಕಾರವನ್ನು ವಿನಂತಿಸಿದ್ದಾರೆ. ಇದರೊಂದಿಗೆ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟವು ಸರಕು ಸಾಗಣೆ ದರಗಳನ್ನು ಸಾಮಾನ್ಯಗೊಳ್ಳುವವರೆಗೆ ಎಲ್ಲಾ ರಫ್ತುಗಳಿಗೆ ಸರಕು ಬೆಂಬಲ ಯೋಜನೆಯನ್ನು ಸೂಚಿಸುವಂತೆ ಸರಕಾರಕ್ಕೆ ತಿಳಿಸಿದೆ.

    ಹೆಚ್ಚಿನ ದರಗಳಲ್ಲಿ ಆದ್ಯತೆಯ ಬುಕ್ಕಿಂಗ್‌ಗಳನ್ನು ನಡೆಸುವ ಕ್ರಮಕ್ಕೆ ಸರಕಾರ ಮಾನ್ಯತೆ ನೀಡದೇ ಮೊದಲು ಬಂದ ಹಡಗಿಗೆ ಮೊದಲ ಆದ್ಯತೆ ಎಂಬ ಈ ಹಿಂದಿನ ನಿಯಮವನ್ನು ಅಳವಡಿಸಬೇಕೆಂದು ರಫ್ತುದಾರರು ಕೋರಿಕೊಂಡಿದ್ದಾರೆ. ಏಷ್ಯಾ ನಿಧಾನವಾಗಿ ಚೇತರಿಕೆಯನ್ನು ಕಂಡುಕೊಂಡಿದ್ದರೂ ಇತರ ದೇಶಗಳಲ್ಲಿ ಇನ್ನೂ ಲಾಕ್‌ಡೌನ್ ನಿರ್ಬಂಧಗಳಿರುವುದರಿಂದ ಏಷ್ಯಾಗೆ ಕಂಟೇನರ್‌ಗಳನ್ನು ಹಿಂತಿರುಗಿಸಲಾಗಲಿಲ್ಲ. ಸಿಬ್ಬಂದಿ ಕೊರತೆ ಹಾಗೂ ಲಾಕ್‌ಡೌನ್‌ನಿಂದಾಗಿ ಕಂಟೇನರ್‌ಗಳ ಕೊರತೆಯುಂಟಾಗಿದೆ.

    ಕೋವಿಡ್ -19 ಸಾಂಕ್ರಾಮಿಕ ರೋಗವು ರಾಷ್ಟ್ರೀಯ ಲಾಕ್‌ಡೌನ್‌ಗಳಿಂದ ವಿಧಿಸಲಾಗಿರುವ ನಿರ್ಬಂಧಗಳಿಂದಾಗಿ ಗ್ರಾಹಕರು ಸೇವೆಯಿಂದ ಸರಕುಗಳಿಗೆ ಖರ್ಚು ಮಾಡುವ ವೆಚ್ಚವನ್ನು ಬದಲಿಸಿದೆ. ಇದು ಕಂಟೇನರ್ ಕೊರತೆಯ ಸಮಸ್ಯೆಯು ಇನ್ನಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

    ಜಾಗತಿಕ ಉದ್ಯಮದಲ್ಲಿ ಸಮತೋಲನ ಕಳೆದುಕೊಂಡ ಉದ್ಯಮಿಗಳು

    ಮೇರ್ಸ್ಕ್ ಮತ್ತು ಹಪಾಗ್-ಲಾಯ್ಡ್ ನಂತಹ ಅನೇಕ ಉದ್ಯಮ ಸಾಗಾಣಿಕೆ ಸಂಸ್ಥೆಗಳು ಕಂಟೇನರ್ ಕೊರತೆಯಿಂದ ತೀವ್ರ ವ್ಯಾಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಡಗು ಸಮಸ್ಯೆಯಲ್ಲೂ ಹಿನ್ನಡೆ ಅನುಭವಿಸಿದ್ದಾರೆ ಇದರಿಂದಾಗಿ ವ್ಯಾಪಾರ ಪ್ರಗತಿ ಕೂಡ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ. Hapag-Lloyd ಕಂಟೇನರ್ ರೀಫಿಲ್ಲಿಂಗ್ ಮತ್ತು ಖಾಲಿ ಮಾಡುವ ಸಮಯವನ್ನು ಸಾಮಾನ್ಯಕ್ಕಿಂತ 25% ವೇಗಕ್ಕೆ ಹೆಚ್ಚಿಸಿದೆ. ಸಂಸ್ಥೆಯು ತನ್ನದೇ ಕಂಟೇನರ್‌ಗಳ ಬಳಕೆಯನ್ನು ಪರ್ಯಾಯವಾಗಿ ಬಳಸಿಕೊಳ್ಳುವ ಯೋಚನೆಯನ್ನು ಮಾಡಿದೆ ಎನ್ನಲಾಗಿದೆ.

    ಇಂಗ್ಲೆಂಡ್‌ನಲ್ಲಿ ಕಂಟೇನರ್ ಕೊರತೆಯ ಪರಿಣಾಮ

    ನಾವು ಸರಕುಗಳನ್ನು ಹೊಂದಿದ್ದು ಸರಿಯಾದ ಕಂಟೇನರ್‌ಗಳಿಲ್ಲದೆ ಶಿಪ್ ಮಾಡಲಾಗುತ್ತಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದು ನಾವು ಆರರಿಂದ ಎಂಟು ತಿಂಗಳ ವಿಳಂಬವನ್ನು ಎದುರಿಸುತ್ತಿದ್ದೇವೆ ಹೀಗಾಗಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ದೊರೆಯುವಲ್ಲೂ ಸಂಕಷ್ಟ ಎದುರಾಗಿದೆ ಎಂದಿದ್ದಾರೆ.

    ಭವಿಷ್ಯದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?

    ಜಾಗತಿಕವಾಗಿ ಕಂಪನಿಗಳಿಗೆ ಸಹಾಯ ಮಾಡಲು ಹೊಸ ಬುಕಿಂಗ್ ವ್ಯವಸ್ಥೆಯನ್ನು ರಚಿಸುವಂತಹ ವಿಧಾನಗಳನ್ನು ಜಾರಿಗೆ ತರಲಾಗಿದೆ. ಅಲಿಬಾಬಾ ಗ್ರೂಪ್‌ನ ಕೈನಿಯಾವೊ ತನ್ನದೇ ಆದ ಕಂಟೇನರ್ ಬುಕಿಂಗ್ ಸೇವೆಯನ್ನು ಆರಂಭಿಸಿದೆ, ಇದನ್ನು ಕಂಟೇನರ್‌ಗಳ ಜಾಗತಿಕ ಕೊರತೆಗೆ ಪ್ರತಿಕ್ರಿಯೆಯಾಗಿ ವಾಯು ಮತ್ತು ಸಮುದ್ರ ಸರಕು ಸಾಗಣೆಗೆ ಬಳಸಬಹುದು. ಈ ಸೇವೆಯು 50 ದೇಶಗಳಲ್ಲಿ 200 ಕ್ಕೂ ಹೆಚ್ಚು ಬಂದರುಗಳನ್ನು ವ್ಯಾಪಿಸಿದ್ದು ಮತ್ತು ಖಾಲಿ ಕಂಟೇನರ್‌ಗಳ ನಿರ್ಬಂಧವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

    ವಿಶ್ವದ ಅತಿದೊಡ್ಡ ಕಂಟೇನರ್ ಶಿಪ್ಪಿಂಗ್ ಲೈನ್ ಮತ್ತು ಹಡಗು ಆಪರೇಟರ್ ಆಗಿರುವ ಮೇರ್ಸ್ಕ್ ಕಂಟೇನರ್ ಕೊರತೆಯಿಂದ ಗಮನಾರ್ಹವಾಗಿ ಬಾಧಿತವಾಗಿದೆ ಆದರೆ ಪ್ರಸ್ತುತ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾರ್ಸ್ಕ್ ನಲ್ಲಿ ಪೂರ್ವ-ಪಶ್ಚಿಮದ ನೆಟ್ವರ್ಕ್ ಮತ್ತು ಮಾರುಕಟ್ಟೆಯ ಮುಖ್ಯಸ್ಥ ಲಾರ್ಸ್ ಮೈಕೆಲ್ ಜೆನ್ಸನ್ ಹೇಳುವಂತೆ, ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದ್ದು, ಅಡೆತಡೆಗಳು ನಿವಾರಣೆಯಾಗಲಿದೆ, ಜೊತೆಗೆ ಖರೀದಿ ಮಾದರಿಗಳು ಸಾಮಾನ್ಯವಾಗುವ ಸಾಧ್ಯತೆಯಿದ್ದು, ಜೊತೆಗೆ ಹೆಚ್ಚುವರಿ ಹಡಗುಗಳು ಮತ್ತು ಕಂಟೇನರ್‌ಗಳು 2021 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿವೆ. ಪ್ರಸ್ತುತ ಹಡಗು ಮತ್ತು ಕಂಟೇನರ್ ಕೊರತೆಯು ತಾತ್ಕಾಲಿಕ ಸ್ವರೂಪದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆರ್ಥಿಕ ವಲಯದಲ್ಲಿ ತೀವ್ರ ಸಂಚಲನ ಏರ್ಪಟ್ಟಿದ್ದು ಇದರಿಂದ ಉದ್ಯಮದಲ್ಲಿ ಅನಿಶ್ಚತತೆ ಉಂಟಾಗಿದೆ. ಇದರ ನಡುವೆ ಈ ಹಿಂದೆ ಇದ್ದಂತಹ ಕೆಲವೊಂದು ಸಮಸ್ಯೆಗಳು ಕಡಿಮೆಯಾಗಿದ್ದು ವರ್ಷ ಕಳೆದಂತೆ ಉದ್ಯಮ ರಂಗದಲ್ಲೂ ಪ್ರಗತಿ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    First published: