HOME » NEWS » Explained » EXPLAINED WHY THE JIOPHONE NEXT COULD BE SIGNIFICANT FOR INDIA STG HG

Explainer: ಭಾರತಕ್ಕೆ ಏಕೆ ಮಹತ್ವದ್ದಾಗಿರಲಿದೆ Jiophone Next..? ಇಲ್ಲಿದೆ ವಿವರ

JioPhone Next: ಜಿಯೋ ಮತ್ತು ಗೂಗಲ್ ಎರಡೂ ಒಟ್ಟಿಗೆ ಅಭಿವೃದ್ಧಿ ಪಡಿಸಿರುವ ಆ್ಯಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯ ಕೈಗೆಟುಕುವ 4ಜಿ ಸಾಮರ್ಥ್ಯದ ‘ಸಂಪೂರ್ಣ ವೈಶಿಷ್ಟ್ಯಪೂರ್ಣ’ ಸ್ಮಾರ್ಟ್‌ಫೋನ್‌ ಎನ್ನಲಾಗಿರುವ ಜಿಯೋಫೋನ್ ನೆಕ್ಸ್ಟ್ ಮೊದಲ ಬಾರಿಗೆ ಅಂತರ್ಜಾಲ ಬಳಕೆ ಮಾಡುವ ಜನರನ್ನು ಅಥವಾ ಬಳಕೆದಾರರ ಗುಂಪನ್ನು ಗುರಿಯಾಗಿಸುತ್ತಿದೆ. ಸೆಪ್ಟೆಂಬರ್ 10 ರಿಂದ ಈ ನೂತನ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಲಭ್ಯವಾಗಲಿದೆ.

news18-kannada
Updated:June 25, 2021, 10:57 AM IST
Explainer: ಭಾರತಕ್ಕೆ ಏಕೆ ಮಹತ್ವದ್ದಾಗಿರಲಿದೆ Jiophone Next..? ಇಲ್ಲಿದೆ ವಿವರ
Jionphone next​​​​
  • Share this:

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಿಯೋಫೋನ್‌ ನೆಕ್ಸ್ಟ್‌ ಎಂಬ ಸ್ಮಾರ್ಟ್‌ಫೋನ್‌ ಅನ್ನು ಘೋಷಣೆ ಮಾಡಿದೆ. ಸೆಪ್ಟೆಂಬರ್‌ 10 ರಿಂದ ಇದು ಮಾರಾಟಕ್ಕೆ ಲಭ್ಯವಿದೆ. ಆರ್‌ಐಎಲ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಗುರುವಾರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದರು. ಜಿಯೋಫೋನ್‌ ನೆಕ್ಸ್ಟ್‌ 4 ಜಿ ಬಜೆಟ್ ಬಜೆಟ್ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಜಾಗತಿಕ ಟೆಕ್‌ ದೈತ್ಯ ಕಂಪನಿ ಗೂಗಲ್‌ ಸಹಭಾಗಿತ್ವದೊಂದಿಗೆ ಈ ಫೋನ್‌ ಬಿಡುಗಡೆಯಾಗಲಿದೆ.


ಜಿಯೋಫೋನ್‌ ನೆಕ್ಸ್ಟ್‌ ಎಂದರೇನು..?



ಜಿಯೋ ಮತ್ತು ಗೂಗಲ್ ಎರಡೂ ಒಟ್ಟಿಗೆ ಅಭಿವೃದ್ಧಿ ಪಡಿಸಿರುವ ಆ್ಯಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯ ಕೈಗೆಟುಕುವ 4ಜಿ ಸಾಮರ್ಥ್ಯದ ‘ಸಂಪೂರ್ಣ ವೈಶಿಷ್ಟ್ಯಪೂರ್ಣ’ ಸ್ಮಾರ್ಟ್‌ಫೋನ್‌ ಎನ್ನಲಾಗಿರುವ ಜಿಯೋಫೋನ್ ನೆಕ್ಸ್ಟ್ ಮೊದಲ ಬಾರಿಗೆ ಅಂತರ್ಜಾಲ ಬಳಕೆ ಮಾಡುವ ಜನರನ್ನು ಅಥವಾ ಬಳಕೆದಾರರ ಗುಂಪನ್ನು ಗುರಿಯಾಗಿಸುತ್ತಿದೆ. ಸೆಪ್ಟೆಂಬರ್ 10 ರಿಂದ ಈ ನೂತನ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಲಭ್ಯವಾಗಲಿದೆ.


ಈ ಹಿಂದಿನ ಜಿಯೋ 4ಜಿ ಸ್ಮಾರ್ಟ್‌ಫೋನ್‌ KaiOS ವರ್ಷನ್‌ ಅನ್ನು ಹೊಂದಿತ್ತು. ಆದರೆ, ಇದಕ್ಕಿಂತ ಭಿನ್ನವಾಗಿ ಜಿಯೋಫೋನ್‌ ನೆಕ್ಸ್ಟ್‌ ಎಲ್ಲಾ ಆ್ಯಂಡ್ರಾಯ್ಡ್‌ ವೈಶಿಷ್ಟ್ಯಗಳು, ಗೂಗಲ್ ಪ್ಲೇ ಸ್ಟೋರ್‌ಗೆ ಪ್ರವೇಶ, ಉತ್ತಮ ಕಾರ್ಯಕ್ಷಮತೆಯುಳ್ಳ ಕ್ಯಾಮೆರಾ, ಗೂಗಲ್ ಅಸಿಸ್ಟೆಂಟ್ ಮತ್ತು ಸ್ಕ್ರೀನ್‌ ಮೇಲೆ ಎಲ್ಲಾ ಪಠ್ಯವನ್ನು ಭಾಷಾಂತರಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.

ಜಿಯೋಫೋನ್ ನೆಕ್ಸ್ಟ್‌ನ ಬೆಲೆ ಎಷ್ಟಾಗಲಿದೆ..?

ಜಿಯೋ ತನ್ನ ಜಿಯೋ ಫೋನ್‌ ನೆಕ್ಸ್ಟ್‌ನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಲಾಂಛ್‌ ಮಾಡುವ ಕೆಲ ದಿನಗಳ ಮುನ್ನ ಬಹಿರಂಗಪಡಿಸಲಿದೆ ಎನ್ನಲಾಗುತ್ತಿದೆ. ಇನ್ನು, ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಮತ್ತು ಕೈಗೆಟುಕುವ 4ಜಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ಇದರಿಂದ ಜಿಯೋಫೋನ್ ನೆಕ್ಸ್ಟ್‌ನ ಬೆಲೆ ಎಷ್ಟಿರಲಿದೆ ಎಂಬುದನ್ನು ನೋಡಬೇಕಾಗಿದೆ. ಇದು ಸ್ಪರ್ಧೆಯಿಂದ ಎದ್ದು ಕಾಣುವಂತೆ ಮಾಡಲು ಜಿಯೋದಿಂದ ಕೆಲವು ವಿಶೇಷ ಡೇಟಾ ಯೋಜನೆಗಳೊಂದಿಗೆ ಬರಲಿದೆ.

ಜಿಯೋಫೋನ್ ನೆಕ್ಸ್ಟ್‌ನ ಸಾಫ್ಟ್‌ವೇರ್ ವೈಶಿಷ್ಟ್ಯಗಳು ಯಾವುವು..?ಬಟನ್‌ ಟ್ಯಾಪ್ ಮೂಲಕ ಫೋನ್‌ ಕಂಟೆಂಟ್‌ನ ಭಾಷೆಯನ್ನು ಬದಲಾಯಿಸುವ ಆಯ್ಕೆಯನ್ನು ಬಳಕೆದಾರರು ಪಡೆಯುತ್ತಾರೆ. ಗಟ್ಟಿಯಾಗಿ ಓದುವ (ರೀಡ್‌ ಅಲೌಡ್‌) ಮತ್ತು ಅನುವಾದಿಸುವ ವೈಶಿಷ್ಟ್ಯವು ಫೋನ್‌ನ ಓಎಸ್‌ನ ಭಾಗವಾಗಲಿದೆ. ವಿವಿಧ ರೀತಿಯ ಭಾಷೆಯ ಅಡೆತಡೆಗಳಿಂದಾಗಿ ಸ್ಮಾರ್ಟ್‌ಫೋನ್ ಬಳಸಲು ಕಷ್ಟಪಡುವವರಿಗೆ ಅಥವಾ ಕಂಫರ್ಟಬಲ್‌ ಆಗಿಲ್ಲದವರನ್ನು ಈ ಸ್ಮಾರ್ಟ್‌ಫೋನ್‌ ಗುರಿಯಾಗಿರಿಸಿದೆ.

ವೆಬ್ ಪೇಜ್‌ಗಳು, ಅಪ್ಲಿಕೇಶನ್‌ಗಳು, ಸಂದೇಶಗಳು ಮತ್ತು ಫೋಟೋಗಳನ್ನು ಒಳಗೊಂಡಂತೆ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಡಿ ಯಲ್ಲಿನ ಯಾವುದೇ ಪಠ್ಯದೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್‌ ಮಾಹಿತಿ ನೀಡಿದೆ. ಫೋನ್‌ನ ಟೆಕ್ಸ್ಟ್‌ ಅಥವಾ ಪಠ್ಯ ಬಳಕೆದಾರರ ಸ್ಥಳೀಯ ಭಾಷೆಯಲ್ಲಿ ಅನುವಾದಿಸಲಾಗುತ್ತದೆ ಮತ್ತು ಅವರಿಗೆ ಜೋರಾಗಿ ಹೇಳಲಾಗುತ್ತದೆ. ಆದರೆ, ಈ ಸ್ಮಾರ್ಟ್‌ಫೋನ್‌ ಬೆಂಬಲಿತ ಭಾಷೆಗಳು ಯಾವುದು ಎನ್ನುವುದನ್ನು ಮಾತ್ರ ಇನ್ನೂ ಘೋಷಿಸಲಾಗಿಲ್ಲ.

ಮತ್ತೊಂದು ಸಾಫ್ಟ್‌ವೇರ್ ವೈಶಿಷ್ಟ್ಯವೆಂದರೆ ಅಪ್ಲಿಕೇಶನ್ ಕ್ರಿಯೆಗಳು, ಅಲ್ಲಿ ಗೂಗಲ್ ಅಸಿಸ್ಟೆಂಟ್ ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಬಳಕೆದಾರರು ಸ್ಕೋರ್ ಹೇಳಲು ಅಥವಾ ಜಿಯೋ ಸಾವನ್‌ನಲ್ಲಿ ಸಂಗೀತ ಕೇಳಲು ಅಥವಾ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಖಾತೆ ಬಾಕಿ ಪರಿಶೀಲಿಸಲು ಗೂಗಲ್‌ ಅಸಿಸ್ಟೆಂಟ್‌ ಅನ್ನು ಕೇಳಲು ಸಾಧ್ಯವಾಗುತ್ತದೆ.

ಫೋನ್ ಕಸ್ಟಮ್ ಕ್ಯಾಮೆರಾ ಸಾಫ್ಟ್‌ವೇರ್ ಅನ್ನು ಸಹ ಹೊಂದಿರುತ್ತದೆ. ಜಿಯೋಫೋನ್ ನೆಕ್ಸ್ಟ್‌ ಬಜೆಟ್‌ ಸ್ಮಾರ್ಟ್‌ಫೋನ್‌ ಆಗಿರಲಿದೆ ಎನ್ನಲಾಗಿದ್ದು, ಆದರೂ ಗೂಗಲ್ ವೇಗದ ಮತ್ತು ಉತ್ತಮ-ಗುಣಮಟ್ಟದ ಕ್ಯಾಮೆರಾ ಅನುಭವವನ್ನು ಸಹ ಭರವಸೆ ನೀಡುತ್ತಿದೆ. ಕ್ಯಾಮೆರಾವನ್ನು ಕಡಿಮೆ ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ಸಹ ಸ್ಪಷ್ಟ ಫೋಟೋಗಳನ್ನು ಖಚಿತಪಡಿಸಿಕೊಳ್ಳಲು ಫೋನ್‌ನ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಹೊಂದುವಂತೆ ಮಾಡಲಾಗಿದೆ ಮತ್ತು ಪರೀಕ್ಷಿಸಲಾಗಿದೆ ಎಂದು ಗೂಗಲ್‌ ಹೇಳಿದೆ. ಸಾಮಾನ್ಯವಾಗಿ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್‌ ಕಷ್ಟಸಾಧ್ಯ.


ಜಿಯೋಫೋನ್‌ ನೆಕ್ಸ್ಟ್‌ನ ಕ್ಯಾಮೆರಾ ಎಚ್‌ಡಿಆರ್ ಮೋಡ್‌ನೊಂದಿಗೆ ಬರುತ್ತದೆ, ಇದು ಸಹ ಬಜೆಟ್ ಫೋನ್‌ಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಭಾರತೀಯ ನಿರ್ದಿಷ್ಟ ಸ್ನ್ಯಾಪ್‌ಚಾಟ್ ಲೆನ್ಸಸ್‌ ನೇರವಾಗಿ ಜಿಯೋಫೋನ್‌ ನೆಕ್ಸ್ಟ್‌ನ ಕ್ಯಾಮೆರಾ ಅಪ್ಲಿಕೇಶನ್‌ಗೆ ಸಂಯೋಜಿಸಲು ಗೂಗಲ್ ಸ್ನ್ಯಾಪ್‌ಚಾಟ್‌ನ ಮೂಲ ಕಂಪನಿಯಾದ ಸ್ನ್ಯಾಪ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.


ಜಿಯೋಫೋನ್ ನೆಕ್ಟ್‌ಗಾಗಿ ಇತ್ತೀಚಿನ ಆ್ಯಂಡ್ರಾಯ್ಡ್ ರಿಲೀಸಸ್‌ ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಗೂಗಲ್ ಭರವಸೆ ನೀಡುತ್ತಿದೆ. ಆದರೆ, ಈ ಸಾಧನವು ಯಾವ ಆ್ಯಂಡ್ರಾಯ್ಡ್ ಆವೃತ್ತಿಯೊಂದಿಗೆ ಲಾಂಚ್‌ ಆಗಲಿದೆ ಎಂಬುದು ಸ್ಪಷ್ಟವಾಗಿಲ್ಲ.


ಜಿಯೋಫೋನ್ ನೆಕ್ಟ್‌ ಏಕೆ ಮಹತ್ವದ್ದಾಗಿದೆ..?


ಜಿಯೋದ ಎಲ್ಲಾ ಲಾಂಛ್‌ಗಳು ಬೆಲೆಯ ವಿಚಾರದಲ್ಲಿ ಭಾರತೀಯ ಗ್ರಾಹಕರನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡಿದೆ. ಆದ್ದರಿಂದ ಜಿಯೋಫೋನ್ ನೆಕ್ಸ್ಟ್ ಕೂಡ ಎಂಟ್ರಿ ಲೆವೆಲ್ 4 ಜಿ ಸ್ಮಾರ್ಟ್‌ಫೋನ್‌ಗೆ ಬಂದಾಗ ಎಲ್ಲಾ ಸ್ಪರ್ಧೆಗಳಿಗೆ ಕಡಿವಾಣ ಹಾಕುತ್ತದೆ. 4ಜಿ ಬಜೆಟ್‌ ಸ್ಮಾರ್ಟ್‌ಫೋನ್‌ಗಳು ಸದ್ಯ 5,000 ರೂ.ಗಿಂತಲೂ ಹೆಚ್ಚಿದೆ.


ಅಲ್ಲದೆ, ಫೋನ್‌ನೊಂದಿಗೆ ನೀವು ನಿರೀಕ್ಷಿಸಬಹುದಾದ ಡೇಟಾ ಪ್ಯಾಕೇಜ್‌ಗಳ ಜೊತೆಗೆ ಈಗಾಗಲೇ ಘೋಷಿಸಿರುವ ಸಾಫ್ಟ್‌ವೇರ್ ಆಪ್ಟಿಮೈಸೇಷನ್‌ಗಳು ಖಂಡಿತವಾಗಿಯೂ ಭಾರತದ ಕಡಿಮೆ ದರದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಲ ನೀಡುತ್ತದೆ. ಅಲ್ಲದೆ, ಫೀಚರ್ ಫೋನ್‌ಗಳಿಂದ ಚುರುಕಾದ ಸಾಧನಗಳಿಗೆ ಲಕ್ಷಾಂತರ ಬಳಕೆದಾರರ ಪರಿವರ್ತನೆಯನ್ನು ವೇಗಗೊಳಿಸಲು ಇದು ಸಹಾಯ ಮಾಡುತ್ತದೆ.
First published: June 25, 2021, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories