Explained: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಪುಲ್ಲೇಲ ಗೋಪಿಚಂದ್ ಬಿಟ್ಟು, ದಕ್ಷಿಣ ಕೊರಿಯಾದ ಕೋಚ್‌ ಬಳಿ ತರಬೇತಿ ಪಡೆಯುತ್ತಿರುವುದೇಕೆ..?

ಗೋಪಿಚಂದ್ ಅಥವಾ ಅವರ ಅಕಾಡೆಮಿಯಲ್ಲಿನ ಸೌಲಭ್ಯಗಳೊಂದಿಗೆ ತನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪಿ.ವಿ. ಸಿಂಧು ಸ್ವತಃ ಸ್ಪಷ್ಟೀಕರಣ ನೀಡಿದ್ದರು.

ಪಿ.ವಿ.ಸಿಂಧು- ಗೋಪಿಚಂದ್

ಪಿ.ವಿ.ಸಿಂಧು- ಗೋಪಿಚಂದ್

  • Share this:

ಪುಲ್ಲೇಲ ಗೋಪಿಚಂದ್ ಯಾರಿಗೆ ಗೊತ್ತಿಲ್ಲ ಹೇಳಿ. ಕಳೆದ ಹಲವು ವರ್ಷಗಳಿಂದ ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಮಾರ್ಗದರ್ಶಕರಾಗಿದ್ದಾರೆ ಮತ್ತು ಒಲಿಂಪಿಕ್ಸ್ ಸೇರಿದಂತೆ ಜಗತ್ತಿನಾದ್ಯಂತದ ಪ್ರಮುಖ ಪಂದ್ಯಾವಳಿಗಳಲ್ಲಿ ಶಟ್ಲರ್‌ಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗೋಪಿಚಂದ್ ದೇಶದ ಕೆಲವು ಅತ್ಯುತ್ತಮ ಶಟ್ಲರ್‌ಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 2012ರಲ್ಲಿ ಲಂಡನ್‌ನಲ್ಲಿ ತನ್ನ ಮೊದಲ ಒಲಿಂಪಿಕ್ಸ್ ಕಂಚು ಗೆದ್ದಾಗ ಸೈನಾ ನೆಹ್ವಾಲ್ ಮಾರ್ಗದರ್ಶಕರಾಗಿದ್ದರು ಮತ್ತು ನಂತರ ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲಲು ಸಹಾಯ ಮಾಡಿದ್ದರು. ಭಾರತೀಯ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು, ಗೋಪಿಚಂದ್ ನೇತೃತ್ವದಲ್ಲಿ ದೀರ್ಘಕಾಲ ತರಬೇತಿ ಪಡೆಯುತ್ತಿದ್ದರು ಮತ್ತು ಬ್ಯಾಡ್ಮಿಂಟನ್ ಪ್ರಮುಖ ಆಟಗಾರರಾಗಿದ್ದ ಗೋಪಿಚಂದ್‌ ಆಟಗಾರ್ತಿ ಸಿಂಧು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಉಜ್ವಲ ಪದಕ ಭರವಸೆಯ ಸಿಂಧು, ಗೋಪಿಚಂದ್‌ ಅಕಾಡೆಮಿಯನ್ನು ಬಿಡಲು ನಿರ್ಧರಿಸಿದಾಗ ಅನೇಕರಿಗೆ ಆಘಾತವಾಗಿದೆ. ಗೋಪಿಚಂದ್‌ ಅಕಾಡೆಮಿ ತೊರೆದ ಸಿಂಧು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಎಂಬುವರ ಬಳಿ ಕೋಚಿಂಗ್ ಪಡೆದಿದ್ದಾರೆ.


ಪುಲ್ಲೇಲ ಗೋಪಿಚಂದ್ ಅಕಾಡೆಮಿ ತೊರೆದಿದ್ದೇಕೆ..?
2019ರಲ್ಲಿ ಗೋಪಿಚಂದ್ ಹಲವಾರು ಅಗ್ರ ಆಟಗಾರರೊಂದಿಗೆ ತರಬೇತುದಾರನಾಗಿ ಕೆಲಸದ ಹೊರೆ ನಿರ್ವಹಿಸಬೇಕಾಗಿ ಬಂದಾಗ, ಸಿಂಧು ಮತ್ತು ಇತರ ಕೆಲವು ಮಹಿಳಾ ಶಟ್ಲರ್‌ಗಳಿಗೆ ಮಾರ್ಚ್ 2019ರಲ್ಲಿ ಭಾರತೀಯ ಬ್ಯಾಡ್ಮಿಂಟನ್ ಕೋಚಿಂಗ್ ತಂಡ ಸೇರಿಕೊಂಡಿದ್ದ ಕಿಮ್ ಜಿ ಹ್ಯೂನ್ ಬಳಿ ತರಬೇತಿ ಪಡೆಯಲು ಕೇಳಿಕೊಳ್ಳಲಾಯಿತು. ನಂತರ ಅವರ ಅಡಿಯಲ್ಲಿ ಮತ್ತು ಅದೇ ವರ್ಷದಲ್ಲಿ BWF ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಸಿಂಧು, ಈ ಸಾಧನೆಯನ್ನು ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.


ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿದ ವದಂತಿ..!
ಕಿಮ್ 2020ರಲ್ಲಿ ರಾಜೀನಾಮೆ ನೀಡಿದ ನಂತರ ಸಿಂಧುಗೆ ತರಬೇತಿ ನೀಡಲು ಪ್ರಸ್ತುತ ಕೋಚ್ ಸಾಂಗ್ ಅನ್ನು ನೇಮಿಸಲಾಯಿತು ಮತ್ತು ನಂತರ ಇಬ್ಬರೂ ಒಟ್ಟಿಗೆ ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ, ಸಿಂಧು ಗೋಪಿಚಂದ್ ಅಕಾಡೆಮಿಯಲ್ಲಿ ಇತರ ಉನ್ನತ ಶಟ್ಲರ್‌ಗಳೊಂದಿಗೆ ತರಬೇತಿ ಪಡೆಯುತ್ತಿದ್ದಂತೆ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ, ಪಿ.ವಿ. ಸಿಂಧು ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರರ ನಡುವೆ ವಿಭಜನೆಯ ವದಂತಿಗಳು ಹರಡಿತು. ಆಕೆ 2020ರಲ್ಲಿ ಲಂಡನ್‌ಗೆ ಮೂರು ತಿಂಗಳುಗಳ ಕಾಲ ಹೋಗಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು.


ಇದನ್ನೂ ಓದಿ:Instagram: 16 ವರ್ಷದೊಳಗಿನವರ ಇನ್​ಸ್ಟಾಗ್ರಾಮ್​​ ಖಾತೆ ಇನ್ಮೇಲೆ ಸಂಪೂರ್ಣ Private...!

ಅಲ್ಲದೆ, ಸಿಂಧು ಮತ್ತು ಗೋಪಿಚಂದ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ವರದಿಗಳು ಬಂದವು, ಮತ್ತು ತರಬೇತುದಾರನೊಡನೆ ಜಗಳವಾಡಿದ ಬಳಿಕ ಆಕೆ ಗೋಪಿಚಂದ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಶಿಬಿರ ತೊರೆದು ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದಾರೆ ಎಂಬ ಮಾತುಗಳು ಕೇಳಿಬಂತು.

ಸಿಂಧು ಸ್ಪಷ್ಟನೆ ನೀಡಿದ್ದೇನು..?
ಗೋಪಿಚಂದ್ ತನ್ನ ಮಗಳ ಮೇಲೆ ಮಾತ್ರ ಗಮನಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಲಂಡನ್‌ ಹೋಗಲು ನಿರ್ಧರಿಸಿದ್ದಾರೆ ಎಂದು ಸಿಂಧು ತಂದೆ ಪಿವಿ ರಮಣ ಅಸ್ಪಷ್ಟ ಹೇಳಿಕೆ ನೀಡಿದ್ದರು. ಇದು, ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ನಂತರ, ಈ ಬಗ್ಗೆ ಸಿಂಧು ಪ್ರತಿಕ್ರಿಯೆ ನೀಡಿ, ಗೋಪಿಚಂದ್ ಅಥವಾ ಅವರ ಅಕಾಡೆಮಿಯಲ್ಲಿನ ಸೌಲಭ್ಯಗಳೊಂದಿಗೆ ತನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ವತಃ ಸ್ಪಷ್ಟೀಕರಣ ನೀಡಿದ್ದರು.


ಅಲ್ಲದೆ, "ನಾನು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನನ್ನ ಕೊರಿಯನ್ ತರಬೇತುದಾರ ಪಾರ್ಕ್ ಟೇ ಸಾಂಗ್‌ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ವರೆಗೆ ಅಭ್ಯಾಸ ಮಾಡುತ್ತೇನೆ ಮತ್ತು ಗೋಪಿಚಂದ್ ಅಕಾಡೆಮಿಯಲ್ಲಿ ಅಲ್ಲ. ಒಳಾಂಗಣ ಬ್ಯಾಡ್ಮಿಂಟನ್ ಹಾಲ್‌ಗಳಲ್ಲಿ ತರಬೇತಿ ಪಡೆಯುವ ನನ್ನ ನಿರ್ಧಾರದ ನಡುವೆ ಹೆಚ್ಚು ಏನನ್ನೂ ಓದಬಾರದು. ಎರಡು ಸ್ಥಳಗಳಲ್ಲಿ ಲಭ್ಯವಿರುವ ಸೌಲಭ್ಯಗಳ ನಡುವೆ ಯಾವುದೇ ಹೋಲಿಕೆ ಇರಬಾರದು'' ಎನ್ನುವ ಮೂಲಕ ಗೋಪಿಚಂದ್ ಅವರೊಂದಿಗಿನ ಮನಸ್ತಾಪದ ಸುತ್ತಲಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. ಜೊತೆಗೆ, ಗಚಿಬೌಲಿ ಒಳಾಂಗಣ ಕ್ರೀಡಾಂಗಣಕ್ಕೆ ಹೋಗುವ ನಿರ್ಧಾರವನ್ನು ಸೌಲಭ್ಯಗಳ ಆಧಾರದ ಮೇಲೆ ವಿವರಿಸಿದರು.


ಇದನ್ನೂ ಓದಿ:Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?

''ಇಂಡೋರ್‌ ಸ್ಟೇಡಿಯಂ ಗಾತ್ರವು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ. ಇದು ಟೋಕಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಥಳ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ನಾವು ಸಾಮಾನ್ಯವಾಗಿ ಅನುಭವಿಸುವಂತೆಯೇ ಇರುತ್ತದೆ. ಸ್ಥಳದ ಪರಿಚಿತತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮನೆಯಲ್ಲಿ ಇಂತಹ ಪರಿಸ್ಥಿತಿಗಳನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಅಲ್ಲದೆ, ಎಸಿ ಬ್ಲೋವರ್‌ಗಳು ಆಟದ ಸ್ಥಳದ ಒಳಗೆ 'ಡ್ರಿಫ್ಟ್' ಗೆ ಪ್ರಮುಖ ಅಂಶವಾಗಿದೆ. "ಡ್ರಿಫ್ಟ್‌ಗೆ ಒಗ್ಗಿಕೊಳ್ಳುವುದು ಶಟಲ್ ಕಾಕ್ ಮೇಲೆ ಪರಿಣಾಮ ಬೀರುವುದರಿಂದ ಒಲಿಂಪಿಕ್ಸ್‌ನಲ್ಲಿ ನಮಗೆ ಸಹಾಯವಾಗುತ್ತದೆ. ಹೈದರಾಬಾದ್‌ನ ಹೆಚ್ಚಿನ ಅಕಾಡೆಮಿಗಳು ಬ್ಲೋವರ್‌ಗಳನ್ನು ಹೊಂದಿಲ್ಲ, ಆದ್ದರಿಂದ ನಾವು ಡ್ರಿಫ್ಟ್ ಅರ್ಥಮಾಡಿಕೊಳ್ಳುವುದಿಲ್ಲ. ಗಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ, ನೀವು ಡ್ರಿಫ್ಟ್ ಫ್ಯಾಕ್ಟರ್ ಅನ್ನು ಕರಗತ ಮಾಡಿಕೊಳ್ಳಬಹುದು'' ಎಂದು ಸಿಂಧು ವಿವರಿಸಿದ್ದರು.

ಈ ಮೂಲಕ ವಿಶ್ವ ಚಾಂಪಿಯನ್ ಗಚಿಬೌಲಿ ಸ್ಟೇಡಿಯಂನಲ್ಲಿರುವ ಸೌಲಭ್ಯಗಳನ್ನು ಆಧರಿಸಿ ಹೊರಬಂದ ನಿರ್ಧಾರವನ್ನು ಸ್ಪಷ್ಟಪಡಿಸಿದರು ಮತ್ತು ತರಬೇತುದಾರ ಗೋಪಿಚಂದ್ ಅವರೊಂದಿಗಿನ ಭಿನ್ನಾಭಿಪ್ರಾಯದ ವದಂತಿಗಳು ಆಧಾರರಹಿತವಾಗಿವೆ ಎಂದಿದ್ದರು. ಒಲಿಂಪಿಕ್ಸ್‌ಗೆ ಮುಂಚಿತವಾಗಿ ಶಟ್ಲರ್ ಮಾಡಿದ ಕಠಿಣ ಪರಿಶ್ರಮವು ಇಲ್ಲಿಯವರೆಗೆ ನಡೆಯುತ್ತಿರುವ ಟೋಕಿಯೊ ಕ್ರೀಡಾಕೂಟದಲ್ಲಿನ ಅವರ ಪ್ರದರ್ಶನಗಳಲ್ಲಿ ಪ್ರತಿಫಲಿಸುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈವರೆಗೆ ಒಲಿಂಪಿಕ್ಸ್‌ನ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ಶುಕ್ರವಾರ (ಜುಲೈ 30), ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿಯನ್ನು ಸೆಮಿಫೈನಲ್ಸ್‌ಗೆ ಲಗ್ಗೆ ಇಡುವ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಪದಕ ಗಳಿಸುವ ಭರವಸೆ ಮೂಡಿಸಿದ್ದಾರೆ.

Published by:Latha CG
First published: