• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?

Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

2012-13 ರಲ್ಲಿ ಕಚ್ಚಾ ತೈಲ ಬೆಲೆ 125 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ಗೆ ಇದ್ದ ಬೆಲೆ 70 ರೂ. ಈಗ ಕಚ್ಚಾ ತೈಲದ ಬೆಲೆ ಕೇವಲ 70 ಡಾಲರ್ಗಳಿದೆ. ಆದರೆ ಪೆಟ್ರೋಲ್ ಬೆಲೆ ಸದ್ಯ 100ರೂ. ಆಗಿದೆ.

  • Share this:

    ಮೇ ತಿಂಗಳಿನ ಆರಂಭದಿಂದ ಈವರೆಗೆ ಪೆಟ್ರೋಲ್ ದರ 4.9 ರೂ. ಬೆಲೆ ಏರಿಕೆಯಾ ಗಿದ್ದು, ಇದರ ಪರಿಣಾಮವಾಗಿ ದೇಶದ ಆರು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿ ಮುನ್ನಡೆದಿದೆ. ಸದ್ಯಕ್ಕೆ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆ ಹೀಗಾಗುತ್ತಿದೆ ಅನ್ನುವುದು ಸದ್ಯ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಚಾರ. ಜೂನ್ 10 ರಂದು ಅಂದರೆ ನಿನ್ನೆ ತಾನೇ 0.3 ರೂ. ಬೆಲೆ ಏರಿಕೆಯಾಗಿದ್ದ ರಿಂದ, ಕರ್ನಾಟಕದಲ್ಲಿ ಇಂದಿನ ಬೆಲೆ, ಅದರಲ್ಲೂ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 98.75 ರೂ. ಆಗಿದ್ದು, ಡೀಸೆಲ್ ಬೆಲೆ 91.97 ರೂ.ಗಳಾಗಿದೆ. 2021 ನೇ ವರ್ಷದ ಜನವರಿ 1ಕ್ಕೆ ಹೋಲಿಸಿದರೆ, ಪೆಟ್ರೋಲ್ ಬೆಲೆ 12.28 ರೂ. ಹಾಗೂ ಡೀಸೆಲ್ ಬೆಲೆ 13.70 ರೂ. ಏರಿಕೆ ಕಂಡಿದೆ.


    ಸದ್ಯ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಇನ್ನೂ ಶತಕ ದಾಟಿಲ್ಲ. ಆದರೆ ದೇಶದ ಆರು ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿ ಆಗಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ ಶತಕ ಹೊಡೆದು ಮುನ್ನಡೆಯುತ್ತಿದೆ. ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 102.04 ರೂ ಆಗಿದ್ದು, ಡೀಸೆಲ್ ದರ 94.15 ರೂ.ಗಳಾಗಿವೆ. 2021 ನೇ ವರ್ಷದ ಜನವರಿ 1ಕ್ಕೆ ಹೋಲಿಸಿದರೆ, ಪೆಟ್ರೋಲ್ ಬೆಲೆ 11.74 ರೂ. ಹಾಗೂ ಡೀಸೆಲ್ ಬೆಲೆ 13.68 ರೂ. ಏರಿಕೆ ಕಂಡಿದೆ.


    ಕೇಂದ್ರ, ರಾಜ್ಯ ಸರಕಾರಗಳ ಕೆಸರೆರೆಚಾಟ:


    ಸಾಮಾನ್ಯವಾಗಿ ಇಂಧನ ದರ ಏರಿಕೆಯಾದಾಗಲೆಲ್ಲ ಕೇಂದ್ರ ಸರಕಾರವು ರಾಜ್ಯ ಸರಕಾರದ ಕಡೆ ಬೊಟ್ಟು ತೋರಿಸುತ್ತದೆ. ರಾಜ್ಯ ಸರಕಾರವು ಕೇಂದ್ರದ ಕಡೆ ಬೊಟ್ಟು ತೋರಿಸುತ್ತವೆ. ತೆರಿಗೆ, ಸೆಸ್ ಇತ್ಯಾದಿಗಳನ್ನು ಕೇಂದ್ರವೂ ರಾಜ್ಯವೂ ಪೆಟ್ರೋಲ್, ಡೀಸೆಲ್ ಮೇಲೆ ಹೇರುವುದರಿಂದ ಅವೆರಡೂ ಪರಸ್ಪರರ ಕಡೆ ಬೆರಳು ತೋರಿಸುವುದು ಸಾಮಾನ್ಯ.


    ಆದರೆ ಈ ಬಾರಿ ವಿಪಕ್ಷ ಕಾಂಗ್ರೆಸ್ ತಮ್ಮ ಆಡಳಿತದ ಕಾಲದ ದತ್ತಾಂಶದೊಂದಿಗೆ ದಾಳಿ ಮಾಡುತ್ತಿದೆ. ಕಾಂಗ್ರೆಸ್ ನ ಕೃಷ್ಣ ಭೈರೇಗೌಡ ಅವರು ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಡಿದ್ದ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. "ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ" ಎಂದು ಕೇಂದ್ರ ಸಚಿವ ವಿವರಣೆ ನೀಡಿದ್ದರು. ಮಾಜಿ ಸಚಿವ ಕೃಷ್ಣಭೈರೇಗೌಡ ಟ್ವಿಟ್ಟರ್ ಮೂಲಕ ಇದಕ್ಕೆ ತಿರುಗೇಟು ನೀಡಿದ್ದರು. ‘


    "2012-13 ರಲ್ಲಿ ಕಚ್ಚಾ ತೈಲ ಬೆಲೆ 125 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ಗೆ ಇದ್ದ ಬೆಲೆ 70 ರೂ. ಈಗ ಕಚ್ಚಾ ತೈಲದ ಬೆಲೆ ಕೇವಲ 70 ಡಾಲರ್ಗಳಿದೆ. ಆದರೆ ಪೆಟ್ರೋಲ್ ಬೆಲೆ ಸದ್ಯ 100 ರೂ. ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ ಎಂಬ ಕೇಂದ್ರ ಸರಕಾರ ಮಾತಲ್ಲಿ ಹುರುಳಿಲ್ಲ. ಕೇಂದ್ರ ಸರಕಾರದ ಕಠಿಣ ತೆರಿಗೆಗಳ ಕಾರಣದಿಂದ ಬೆಲೆ ಈ ಪರಿ ಏರಿದೆ" ಎಂದು ಟ್ವೀಟ್ ಮೂಲಕ ಕೇಂದ್ರ ಸರಕಾರದ ಕಾಲೆಳೆದಿದ್ದರು.


    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೇಗಿದೆ..?


    ಹಾಗಾದರೆ ದರ ಏರಿಕೆಗೆ ನಿಜವಾದ ಕಾರಣಗಳೇನು ನೋಡೋಣ. ಸದ್ಯ ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಅಬ್ಬರದಿಂದ ಏಟು ತಿಂದಿದ್ದ ವಿಶ್ವದ ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರಿಂದಾಗಿ ತೈಲಕ್ಕೂ ಜಾಗತಿಕ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ 2021ರಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ವರ್ಷದ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ಸುಮಾರು 37.1 ರಷ್ಟು ಏರಿಕೆ ಕಂಡಿದೆ. ಅಂದರೆ 51.8 ರಿಂದ ಸುಮಾರು 71 ಡಾಲರ್ಗೆ ಬೆಲೆ ಏರಿದೆ. ಪೆಟ್ರೋಲ್ ಮತ್ತು ಡೀಸೆಲ್‌ನ ದರವನ್ನು ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಾರಾಷ್ಟ್ರೀಯ ಬೆಲೆಗಳ 15 ದಿನಗಳ ರೋಲಿಂಗ್ ಸರಾಸರಿಗೆ ನಿಗದಿಪಡಿಸಲಾಗುತ್ತಿದೆ.


    ತೆರಿಗೆಗಳ ಕಾರಣದಿಂದ ದರದಲ್ಲಿ ಭಾರಿ ಏರಿಕೆ ಆಗಿದೆಯೇ..?


    ಹಾಗೆ ನೋಡಿದರೆ, ಬೆಲೆ ಏರಿಕೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಒಂದೇ ಸಮನೆ ತೆರಿಗೆ ಏರಿಸಿದ್ದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಈಗ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಪೆಟ್ರೋಲ್ ಪಂಪ್ನಲ್ಲಿ ನಿಗದಿಪಡಿಸಿರುವ ಬೆಲೆಯನ್ನು ಪರಿಗಣಿಸುವುದಾದರೆ ಪೆಟ್ರೋಲ್ ನಲ್ಲಿ 57 ಶೇಕಡಾ ಹಾಗೂ ಡೀಸೆಲ್ ನಲ್ಲಿ 51.74 ಶೇಕಡಾದಷ್ಟನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಆದಾಯವನ್ನು ಹೆಚ್ಚಿಸಲು ಸರಕಾರಗಳು ತೈಲ ದರವನ್ನು ನೆಚ್ಚಿಕೊಂಡಿವೆ.


    ಇದನ್ನೂ ಓದಿ: Nalin Kumar Katil| ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದೇ ರಾಜಕೀಯ; ನಳಿನ್ ಕುಮಾರ್ ಕಟೀಲ್ ತಿರುಗೇಟು

    ಅದೇ ಕಾರಣಕ್ಕೆ, 2020ರಲ್ಲಿ ಕೇಂದ್ರ ಸರಕಾರವು ಪ್ರತಿ ಲೀಟರ್ ಪೆಟ್ರೋಲ್ಗೆ 13 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್​ಗೆ 16 ರೂ. ಗಳಷ್ಟು ಅಬಕಾರಿ ತೆರಿಗೆಯಲ್ಲಿ ಏರಿಕೆಯನ್ನು ಮಾಡಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಮೇಘಾಲಯದಂಥ ಹಲವು ರಾಜ್ಯಗಳು ಸಾಂಕ್ರಾಮಿಕ ಪಿಡುಗಿನ ವೇಳೆ ಹೆಚ್ಚಿಸಿದ ಸುಂಕವನ್ನು ಹಿಂಪಡೆದರೂ, ಕೇಂದ್ರ ಸರಕಾರ ಹಣದುಬ್ಬರವನ್ನು ತಡೆಯುವ ಸಲುವಾಗಿ ವಾಹನ ಇಂಧನಗಳ ಮೇಲಿನ ತೆರಿಗೆಯಲ್ಲಿ ತನ್ನ ಪಾಲಿನ ತೆರಿಗೆಯನ್ನು ಕಡಿತಗೊಳಿಸಿಲ್ಲ. ಕಡಿತಗೊಳಿಸಿ ಎಂದು ಆರ್‌ಬಿಐ ಕರೆ ನೀಡಿದ್ದರೂ ಕೇಂದ್ರ ಸರಕಾರ ಮಾತ್ರ ತಾನು ವಿಧಿಸಿರುವ ತೆರಿಗೆಯಲ್ಲಿ ಒಂದು ರೂಪಾಯಿಯನ್ನೂ ಕಡಿತಗೊಳಿಸಿಲ್ಲ.


    ಇದನ್ನೂ ಓದಿ: Prashant Kishore| ಮಹಾರಾಷ್ಟ್ರ ಮಿಷನ್ 2024; ಕುತೂಹಲ ಮೂಡಿಸಿದ ಶರದ್ ಪವಾರ್-ಪ್ರಶಾಂತ್ ಕಿಶೋರ್ ಸಭೆ

    ಡೀಸೆಲ್ ಮೇಲಿನ ಒಟ್ಟು ತೆರಿಗೆಯಲ್ಲಿ ಕೇಂದ್ರವು ಶೇ 71.8 ಪಾಲನ್ನು ಹೊಂದಿದ್ದರೆ, ರಾಷ್ಟ್ರದ ರಾಜಧಾನಿಯಲ್ಲಿ ಡೀಸೆಲ್ ಮೇಲಿನ ಒಟ್ಟು ತೆರಿಗೆಯ ಶೇಕಡಾ 60.1 ರಷ್ಟು ಕೇಂದ್ರದ ಪಾಲಾಗಿರುತ್ತದೆ.




    ಆರೋಗ್ಯ ಕ್ಷೇತ್ರದ ಖರ್ಚು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರ ಸದ್ಯ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸುತ್ತಿಲ್ಲ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿರುವುದನ್ನು ನೋಡಿದರೆ, ಸದ್ಯ ಭಾರತದಲ್ಲಿ ತೈಲ ಬೆಲೆ ಇಳಿಯುವಂತೆ ಕಾಣುತ್ತಿಲ್ಲ.

    First published: