Explainer: ನೆಟ್​ಫ್ಲಿಕ್ಸ್​​ ಅಧಿಪತ್ಯಕ್ಕೆ ಪಾಸ್​ವರ್ಡ್​ ಶೇರಿಂಗ್​ ಸವಾಲು...!

ಪಾಸ್​ವರ್ಡ್​ ಹಂಚಿಕೆಯು ಅಧಿಕೃತ ಖಾತೆದಾರರಿಂದ ಬಳಕೆಯಾಗಿದೆಯೇ? ಎಂದು ತಿಳಿದುಕೊಳ್ಳಲು ಪಾಸ್​ವರ್ಡ್​ ಪ್ಲಗ್​ ಮಾಡುವಾಗ ಒಂದಷ್ಟು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳನ್ನು ಮಾಡುವುದು ಇನ್ನೂ ಸಹ ಟ್ರಯಲ್ ಹಂತದಲ್ಲಿದ್ದು, ಕಂಪನಿಯು ಇದರ ಬಗ್ಗೆ ಇನ್ನೂ ನಿರ್ಧಾರವನ್ನು ಮಾಡಿಲ್ಲವೆಂದು ತಿಳಿಸಿದ್ದಾರೆ.

ನೆಟ್​​ಫ್ಲಿಕ್ಸ್

ನೆಟ್​​ಫ್ಲಿಕ್ಸ್

 • Share this:
  2020 ರಲ್ಲಿ ವಿಶ್ವದ ಪ್ರಸಿದ್ಧ ವಿಡಿಯೋ ಸ್ಟ್ರೀಮಿಂಗ್ ನೆಟ್​ಫ್ಲಿಕ್ಸ್ 37 ಮಿಲಿಯನ್ ಹೊಸ ಚಂದದಾರರನ್ನು ಪಡೆದುಕೊಂಡಿತ್ತು. ಅತಿ ಹೆಚ್ಚು ಹೊಸ ಹೊಸ ಚಂದಾದಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡ ನೆಟ್​​ಫ್ಲಿಕ್ಸ್​​​​ಗೆ ಟೈಗರ್​ ಕಿಂಗ್ ಮತ್ತು ಮನಿ ಹೀಸ್ಟ್​ ಶೋಗಳ ಜನಪ್ರಿಯತೆ ಸಾಥ್ ಕೊಟ್ಟಿದ್ದವು. ಮುಖ್ಯವಾಗಿ ಕೊರೊನಾ ಸಾಂಕ್ರಾಮಿಕ, ಲಾಕ್​ಡೌನ್​ಗಳು ಜನರನ್ನು ನೆಟ್​ಫ್ಲಿಕ್ಸ್​ ಗೆ ಇನ್ನಷ್ಟು ಹತ್ತಿರವಾಗಿಸಿದವು. ಅಲ್ಲದೆ ನೆಟ್​ಫ್ಲಿಕ್ಸ್​ 25 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿ 2.8 ಬಿಲಿಯನ್‌ ಡಾಲರ್‌ನಷ್ಟು ಲಾಭವನ್ನು ಪಡೆದಿತ್ತು.

  ಈ ಯಶಸ್ಸಿನ ನಂತರವೂ ನೆಟ್​ಫ್ಲಿಕ್ಸ್​ ಒಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ಒಂದು ವೇಳೆ ನೆಟ್​ಫ್ಲಿಕ್ಸ್​ ನಿರ್ಲಕ್ಷಿಸಿದರೆ ನೆಟ್​ಫ್ಲಿಕ್ಸ್​ನ ಅಧಿಪತ್ಯಕ್ಕೆ ಹೊಡೆತ ಬೀಳುವ ಸಂಭವವಿದೆ. ನೆಟ್​​ಫ್ಲಿಕ್ಸ್​​ ಉಳಿದೆಲ್ಲಾ ಓಟಿಟಿ ವೇದಿಕೆಗಳಿಗಿಂತಲೂ ತನ್ನ ನಿಯಮ ಮತ್ತು ಸೇವೆಗಳಲ್ಲಿ ಕಠಿಣ ನಿಯಮಗಳನ್ನು ಪಾಲಿಸುತ್ತಿದೆ. ಆದರೂ ಸಹ ನೆಟ್​ಫ್ಲಿಕ್ಸ್​​ನ ಕಂಟೆಂಟ್ ಸೋರಿಕೆಯಾಗಿ​ ಇನ್ನಿತರ ವೇದಿಕೆಗಳಲ್ಲಿ ಸುಲಭವಾಗಿ ಸಿಗುತ್ತಿದೆ. ಈ ಕಾರಣದಿಂದಾಗಿ ದುಡ್ಡುಕೊಟ್ಟು ನೆಟ್​ಫ್ಲಿಕ್ಸ್​​ನಲ್ಲಿ ಮನರಂಜನೆಯನ್ನು ಪಡೆಯುವ ಪ್ರೇಕ್ಷಕನ ಜೊತೆಗೆ ನೆಟ್​ಫ್ಲಿಕ್ಸ್​ಗೂ ಭಾರೀ ಸಮಸ್ಯೆಯಾಗುತ್ತಿದೆ.

  ಕಂಟೆಂಟ್​ ಸೋರಿಕೆ, ಒಂದೇ ಪಾಸ್​ವರ್ಡ್​ ಬಳಸಿ ಹಲವಾರು ಜನರು ನೆಟ್​ಫ್ಲಿಕ್ಸ್ ವೀಕ್ಷಿಸುತ್ತಿರುವುದು​​ ಅದರ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೆಟ್​ಫ್ಲಿಕ್ಸ್ ತನ್ನ​ ಕಂಟೆಟ್​ ಸೋರಿಕೆಯನ್ನು ತಡೆಯುವುದಕ್ಕೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ.

  ಈ ತಿಂಗಳ ಆರಂಭದಲ್ಲಿ ಬಳಕೆದಾರರೊಬ್ಬರಿಗೆ ' ನೀವು ಈ ಖಾತೆಯಲ್ಲಿ ವೀಕ್ಷಣೆ ಮಾಡಬೇಕಿದ್ದರೆ, ನೀವು ಈ ಖಾತೆದಾರರ ಜೊತೆಗೆ ಈ ಮನೆಯಲ್ಲೇ ವಾಸಮಾಡಬೇಕು' ಎಂದು ಸಂದೇಶವೊಂದು ರವಾನೆಯಾಗಿದೆ. ಅಲ್ಲದೆ ಖಾತೆ ಹೊಂದಿರುವವರ ಮೊಬೈಲ್​ ಸಂಖ್ಯೆಗೆ ಕಳುಹಿಸಿರುವ ಕೋಡ್​ ಬಳಸಿ ಬಳಕೆದಾರರು 2 ಅಂಶಗಳ ಅಧಿಕೃತತೆಯನ್ನು ಪರಿಶೀಲಿಸುವ ಮಾಡಬೇಕಾದ ಅಗತ್ಯವಿದೆ.

  Karawar: ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ; ಪುಂಡರ ಹೆಡೆಮುರಿ ಕಟ್ಟಿದ ಖಾಕಿ ಪಡೆ

  ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, ಪಾಸ್​ವರ್ಡ್​ ಹಂಚಿಕೆಯು ಅಧಿಕೃತ ಖಾತೆದಾರರಿಂದ ಬಳಕೆಯಾಗಿದೆಯೇ? ಎಂದು ತಿಳಿದುಕೊಳ್ಳಲು ಪಾಸ್​ವರ್ಡ್​ ಪ್ಲಗ್​ ಮಾಡುವಾಗ ಒಂದಷ್ಟು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳನ್ನು ಮಾಡುವುದು ಇನ್ನೂ ಸಹ ಟ್ರಯಲ್ ಹಂತದಲ್ಲಿದ್ದು, ಕಂಪನಿಯು ಇದರ ಬಗ್ಗೆ ಇನ್ನೂ ನಿರ್ಧಾರವನ್ನು ಮಾಡಿಲ್ಲವೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ನೆಟ್​ಫ್ಲಿಕ್ಸ್​ ಪಾಸ್​ವರ್ಡ್​​ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಂತೂ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

  ನೆಟ್​​ಫ್ಲಿಕ್ಸ್ಸ್​ ಹೀಗೇಕೆ ಮಾಡುತ್ತಿದೆ?

  ನೆಟ್​ಫ್ಲಿಕ್ಸ್​ ನಿಯಮ ಮತ್ತು ಸೇವೆಗಳ ಪ್ರಕಾರ ಒಬ್ಬರ ಖಾತೆಯು ವೈಯಕ್ತಿಕ ಬಳಕೆಗಾಗಿ ಇದ್ದು, ಮನೆಮಂದಿಯಲ್ಲದವರೊಟ್ಟಿಗೆ ಪಾಸ್​ವರ್ಡ್​ ಹಂಚಿಕೊಳ್ಳುವಂತಿಲ್ಲ. ಆದರೂ ಸಹ ಈ ನಿಯಮ ಮೀರಿಯೂ ಪಾಸ್​ವರ್ಡ್ ಹಂಚಿಕೊಳ್ಳಲಾಗುತ್ತಿದೆ. ಎಷ್ಟು ಜನ ಈ ನಿಯಮಗಳನ್ನು ಮೀರಿ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.

  2019 ರಲ್ಲಿ ನೆಟ್​ಫ್ಲಿಕ್ಸ್​​ನ ಮುಖ್ಯಸ್ಥರಾದ ಜಾರ್ಜ್ ಪೀಟರ್ಸ್​ರವರು ಪಾಸ್​ವರ್ಡ್​ ಶೇರಿಂಗ್​ ಬಗ್ಗೆ ತಿಳಿಸಿದ್ದರು. ಬಹುತೇಕ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಟ್ಟಿಗೆ ಪಾಸ್​ವರ್ಡ್‌ಗಳನ್ನು ಹಂಚಿಕೊಂಡಿದ್ದನ್ನು ಗಮನಿಸಿದ್ದರು. ಹೊಸ ಡಿವೈಸ್ ದೃಢೀಕರಣದಿಂದಾಗಿ ಮತ್ತೆ ಪಾಸ್​ವರ್ಡ್​ಗಳನ್ನು ಹಂಚಿಕೊಳ್ಳುವುದನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಿತ್ತು. ಅಲ್ಲದೆ ಇದು ಮೂಲ ಗ್ರಾಹಕರ ಖಾಸಗಿತನ ಮತ್ತು ಡಿಜಿಟಲ್ ಸೆಕ್ಯೂರಿಟಿಗೂ ಸಮಸ್ಯೆಯಾಗುತ್ತಿತ್ತು.

  2 ಅಂಶಗಳ ದೃಢೀಕರಣವು ಬಳಕೆದಾರರಿಗೆ ಕೋಡ್​ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಇದರಿಂದ ಸ್ವಲ್ಪ ಅನಾನುಕೂಲತೆಗಳು ಸಹ ಉಂಟಾಗುವ ಸಾಧ್ಯತೆಗಳಿವೆ. ಇದು ಮುಖ್ಯ ಬಳಕೆದಾರರಿಗೆ ಅಧಿಕೃತಗೊಳಿಸಿದವರೇ ಬಳಸುತ್ತಿದ್ದಾರೆಂಬುದನ್ನು ಖಾತ್ರಿಯನ್ನು ನೀಡುತ್ತದೆ.

  ಆದರೆ ಈಗೇಕೆ ಈ ನಿಯಮ?

  ಪಾಸ್​ವರ್ಡ್ ಹಂಚಿಕೊಳ್ಳುವುದು ನೆಟ್​ಫ್ಲಿಕ್ಸ್​ಗೆ ಹೊಸದೇನಲ್ಲ. ಇನ್ನಿತರ ಚಂದಾದಾರಿಕೆಯನ್ನು ಒಳಗೊಂಡ ವೆಬ್​ಸೈಟ್​ಗೂ ಸಹ ಇದು ಹೊಸತಲ್ಲ. ಆದರೆ ನೆಟ್​ಫ್ಲಿಕ್ಸ್ ಈಗ ಏಕೆ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದರೆ ಸಾಂಕ್ರಾಮಿಕ ನಂತರದ ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ನೆಟ್​ಫ್ಲಿಕ್ಸ್​ ಹೊಸ ಪೇಯ್ಡ್​ ಚಂದದಾರರನ್ನು ಪಡೆಯಲು ಕಷ್ಟಪಡುತ್ತಿದೆ. ಅಷ್ಟೇ ಅಲ್ಲದೆ ಇನ್ನಿತರ ಸ್ಟ್ರೀಮಿಂಗ್ ಪ್ಲ್ಯಾಟ್​ಫಾರ್ಮ್​ಗಳಾದ ಡಿಸ್ನಿ ಪ್ಲಸ್ ಮತ್ತು ಅಮೆಜಾನ್ ಪ್ರೈಮ್ ಗಳಿಂದ ಸ್ಪರ್ಧೆಯನ್ನು ಸಹ ಎದುರಿಸುತ್ತಿರುವುದು ಇನ್ನೊಂದು ಕಾರಣವಾಗಿದೆ. ನೆಟ್​ಫ್ಲಿಕ್ಸ್​ನ ಒರಿಜಿನಲ್ ಸೀರಿಸ್​ಗಳು ಮಾರ್ಕೆಟ್​ನಲ್ಲಿ ಅದ್ಭುತವಾಗಿ ಮುನ್ನುಗುತ್ತಿವೆ. ಆದರೆ ಮಾರ್ವೆಲ್ ಮತ್ತು ಸ್ಟಾರ್​​ ಟ್ರೆಕ್​ ಫ್ರ್ಯಾಂಚೈಸಿಗಳ ಕಾರಣ ಈಗ ಹೊಡೆತ ಬಿದ್ದಿದೆ.

  ಇನ್ನು ಡಿಸ್ನಿ ಪ್ಲಸ್​ ನ ಪ್ರಸಿದ್ಧಿ ಮತ್ತು ಬೆಳವಣಿಗೆಯನ್ನು ಗಮನಿಸಿದರೆ 2025 ರಲ್ಲಿ ನೆಟ್​​ಫ್ಲಿಕ್ಸ್​​ ಸಮಾನವಾಗಿ ಬೆಳೆಯುವ ಸಾಧ್ಯತೆಗಳಿವೆ. ನೆಟ್​​ಫ್ಲಿಕ್ಸ್ ಗೆ ತನ್ನ ಮಾರ್ಕೆಟ್ ಡೊಮೈನ್ಸ್​ ಮೇಂಟೇನ್ ಮಾಡುವುದರಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರು ನೆಟ್​ಫ್ಲಿಕ್ಸ್​ ಬಳಸಿಕೊಂಡು ಮನರಂಜನೆಯನ್ನು ಪಡೆದುಕೊಂಡು ಅದಕ್ಕೆ ಸರಿಯಾದ ಹಣವನ್ನು ನೀಡದೇ ಇರುವುದು ಭವಿಷ್ಯದಲ್ಲಿ ನಾನಾ ಸಂಕಷ್ಟಗಳನ್ನು ತಂದೊಡ್ಡಬಹುದು. 2021 ರಲ್ಲಿ ಅನೇಕ ಚಂದದಾರರು ನೆಟ್​​​ಫ್ಲಿಕ್ಸ್​​ ಅನ್ನು ಕೈಬಿಡುತ್ತಿರುವುದು ಅಪಾಯಕಾರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

  ಸದ್ಯ ಪಾಸ್​ವರ್ಡ್​ ಬಗ್ಗೆ ತೆಗೆದುಕೊಂಡಿರುವ ನಿರ್ಣಯಗಳು , ಪರೀಕ್ಷೆಗಳು ಟ್ರಯಲ್ ಹಂತದಲ್ಲಿರಬಹುದು. ಆದರೆ ಇದರ ಯಶಸ್ಸನ್ನು ಈಗಲೇ ನಿರ್ಧರಿಸುವುದು ಬಹಳ ಕಷ್ಟವಾಗಿದೆ. ಒಟ್ಟಿನಲ್ಲಿ ನೆಟ್​​ಫ್ಲಿಕ್​ ಗ್ರಾಹಕರ ಪೈಕಿ ಎಷ್ಟು ಮಂದಿ ಹಣ ನೀಡುತ್ತಿದ್ದಾರೆಯೇ? ಇಲ್ಲವೇ ? ಎಂದು ತಿಳಿಯುವ ಈ ಪ್ರಯತ್ನ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ.
  Published by:Latha CG
  First published: