• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಸಿಂಧೂ ಜಲ ಒಪ್ಪಂದವನ್ನು ಮಾರ್ಪಡಿಸಲು ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸುತ್ತಿರುವುದೇಕೆ?

Explained: ಸಿಂಧೂ ಜಲ ಒಪ್ಪಂದವನ್ನು ಮಾರ್ಪಡಿಸಲು ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸುತ್ತಿರುವುದೇಕೆ?

ಸಿಂಧೂ ನದಿ (ಸಂಗ್ರಹ ಚಿತ್ರ)

ಸಿಂಧೂ ನದಿ (ಸಂಗ್ರಹ ಚಿತ್ರ)

ನದಿಗಳಿಗೆ ಸಂಬಂಧಿಸಿದ ವಿಷಯಗಳ ಒಪ್ಪಂದಕ್ಕೆ ಆರು ದಶಕಗಳ ಹಿಂದೆಯೇ ಸಹಿ ಹಾಕಲಾಗಿದೆ. ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್‌ ಯೋಜನೆಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ಸಲುವಾಗಿ, ಇದರ ಅನುಷ್ಠಾನದಲ್ಲಿ ಇಸ್ಲಾಮಾಬಾದ್‌ ಅನುಸರಿಸುತ್ತಿರುವ ಹಠಮಾರಿತನ ಗಮನಿಸಿ, ಕೆಲ ಮಾರ್ಪಾಡಿಗಾಗಿ ಒಪ್ಪಂದದ ವಿಧಿ XII (3)ರ ನಿಬಂಧನೆಗಳ ಪ್ರಕಾರ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ.

ಮುಂದೆ ಓದಿ ...
 • Trending Desk
 • 5-MIN READ
 • Last Updated :
 • New Delhi, India
 • Share this:

   1960ರ ಸಿಂಧೂ ಜಲ ಒಪ್ಪಂದಕ್ಕೆ (IWT) ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆ ಭಾರತವು ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ. ನೋಟಿಸ್ ಅಡಿಯಲ್ಲಿ, ಭಾರತವು ಪಾಕಿಸ್ತಾನಕ್ಕೆ 90 ದಿನಗಳಲ್ಲಿ ಅಂತರ್ ಸರ್ಕಾರಿ ಮಾತುಕತೆಗೆ ಕರೆ ನೀಡಿದೆ. ಒಪ್ಪಂದದಲ್ಲಿನ ಕೆಲವೊಂದು ನಿಯಮಗಳು ಭಾರತಕ್ಕೆ ಅನ್ಯಾಯವನ್ನುಂಟು ಮಾಡುತ್ತಿದೆ ಎಂಬುದು ದೇಶದ ವಾದವಾಗಿದ್ದು, ಪಾಕ್ ಕೂಡ ತನ್ನ ಪಟ್ಟು ಸಡಿಲಿಸದೆ ಭಾರತದೊಂದಿಗಿನ ತನ್ನ ಹಗೆತನವನ್ನು ಇನ್ನಷ್ಟು ಹೆಚ್ಚಿಸುವ ಹುನ್ನಾರದಲ್ಲಿದೆ. ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಮೂಲಕ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆ  ಮತ್ತು ಸಮಾಲೋಚನೆಗಳ ಮೂಲಕ ಪರಿಹರಿಸುವ ಅಗತ್ಯವಿದೆ ಎಂಬುದು ಭಾರತದ ನಿಲುವಾಗಿದೆ.


   ಇಸ್ಲಾಮಾಬಾದ್‌ಗೆ ನೋಟಿಸ್​


  ನದಿಗಳಿಗೆ ಸಂಬಂಧಿಸಿದ ವಿಷಯಗಳ ಒಪ್ಪಂದಕ್ಕೆ ಆರು ದಶಕಗಳ ಹಿಂದೆಯೇ ಸಹಿ ಹಾಕಲಾಗಿದೆ. ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್‌ ಯೋಜನೆಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ಸಲುವಾಗಿ, ಇದರ ಅನುಷ್ಠಾನದಲ್ಲಿ ಇಸ್ಲಾಮಾಬಾದ್‌ ಅನುಸರಿಸುತ್ತಿರುವ ಹಠಮಾರಿತನ  ಗಮನಿಸಿ, ಕೆಲ ಮಾರ್ಪಾಡಿಗಾಗಿ ಒಪ್ಪಂದದ ವಿಧಿ XII (3)ರ ನಿಬಂಧನೆಗಳ ಪ್ರಕಾರ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ.


  ಸಿಂಧು ಜಲ ನಿಬಂಧನೆಗಳು ಹಾಗೂ ಅವುಗಳ ಅನುಷ್ಟಾನದ ಮೇಲೆ ಪಾಕಿಸ್ತಾನದ ಕ್ರಮಗಳು ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಒಪ್ಪಂದವನ್ನು ಮಾರ್ಪಡಿಸುವಂತೆ ಭಾರತವು ಸೂಕ್ತ ಸೂಚನೆಯನ್ನು ನೀಡುವಂತೆ ಒತ್ತಾಯಪಡಿಸಿದೆ ಎಂದು ವರದಿಗಳು ತಿಳಿಸಿವೆ.


  ವಿಶ್ವಬ್ಯಾಂಕ್ ಮಧ್ಯಸ್ಥಿಕೆ


  ಭಾರತ ಮತ್ತು ಪಾಕಿಸ್ತಾನ 1960 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ರಾಷ್ಟ್ರಗಳು ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕರಿಸುವ ಕಾರ್ಯವಿಧಾನಕ್ಕೆ ವಿಶ್ವಬ್ಯಾಂಕ್‌ ಸಹಿ ಒಳಗೊಂಡ ಈ ಒಪ್ಪಂದಕ್ಕೆ ಒಂಬತ್ತು ವರ್ಷಗಳ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಹಲವಾರು ನದಿಗಳ ನೀರಿನ ಬಳಕೆಗೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಸೂಕ್ತ ಕಾರ್ಯವಿಧಾನಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.


  ಇದನ್ನೂ ಓದಿ: India China Border: ಬ್ರಹ್ಮಪುತ್ರ ನದಿಗೆ ಆಣೆಕಟ್ಟು ನಿರ್ಮಿಸ್ತಿದೆ ಚೀನಾ? ಇದು ಭಾರತಕ್ಕೆ ಎಚ್ಚರಿಕೆ ಘಂಟೆನಾ?

   ಸಿಂಧೂ ಜಲ ಒಪ್ಪಂದ ಎಂದರೇನು?


  ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ವಹಿಸಿದ್ದು, ಸಿಂಧೂ ನದಿ ವ್ಯವಸ್ಥೆಯ ಮೂಲಕ ಆರು ನದಿಗಳಾದ ಸಿಂಧೂ, ಜೀಲಂ, ಚೆನಾಬ್, ರವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಬಳಕೆಯನ್ನು ನಿಯೋಜಿಸುತ್ತದೆ. ಒಪ್ಪಂದದ ಅಡಿಯಲ್ಲಿ, ಭಾರತವು ಪೂರ್ವ ನದಿಗಳ ಮೇಲೆ (ರಾವಿ, ಬಿಯಾಸ್ ಮತ್ತು ಸಟ್ಲೆಜ್) ನಿಯಂತ್ರಣವನ್ನು ಹೊಂದಿದೆ. ಇನ್ನು ಪಾಕಿಸ್ತಾನವು ಪಶ್ಚಿಮ ನದಿಗಳ ಮೇಲೆ (ಸಿಂಧೂ, ಝೀಲಂ ಮತ್ತು ಚೆನಾಬ್) ನಿಯಂತ್ರಣವನ್ನು ಹೊಂದಿದೆ.


  ಎರಡೂ ಭಾಗಗಳ ನದಿಗಳಿಂದ ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೂ ಒಪ್ಪಂದ ಸಹಕಾರಿಯಾಗಿದೆ. ಆದರೆ ಈ ಸ್ಥಾವರ ನಿರ್ಮಾಣಕ್ಕಾಗಿ ಎರಡೂ ದೇಶಗಳ ನಡುವೆ ಕೆಲವೊಂದು ನಿರ್ಬಂಧಗಳಿವೆ.  ಪಾಕ್‌ಗೆ ಪೂರೈಕೆಯಾಗುವ ನದಿಗಳ ನೀರಿನಲ್ಲಿ ಕೊರತೆಯಾದಂತೆ ಕೆಲವೊಂದು ಉದ್ದೇಶಗಳಿಗಾಗಿ ಪೂರ್ವ ಭಾಗದ ನದಿಗಳನ್ನು ನಿಯಂತ್ರಿಸಲು ಭಾರತಕ್ಕೆ ಅನುಮತಿಸಲಾಗಿದೆ.


  ಇದಲ್ಲದೆ ಬರ ಹಾಗೂ ಪ್ರವಾಹ ಸಂದರ್ಭದಲ್ಲಿ ದೇಶಗಳು ನೀರಿನ ಹರಿವಿನ ಬಗ್ಗೆ ಅಂಕಿಅಂಶ ಹಂಚಿಕೊಳ್ಳಲು ಪರಸ್ಪರ ಸಮಾಲೋಚಿಸುವ ಅಗತ್ಯವನ್ನು ಒಪ್ಪಂದ ಉಲ್ಲೇಖಿಸಿದೆ.
   ನೋಟಿಸ್‌ನ ಮುಖ್ಯಾಂಶಗಳು


  ಭಾರತದ ಕಿಶನ್‌ಗಂಗಾ ಮತ್ತು ರಾಟ್ಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ಗಳಿಗೆ (HEPs) ತನ್ನ ತಾಂತ್ರಿಕ ಆಕ್ಷೇಪಣೆಗಳನ್ನು ಪರಿಶೀಲಿಸಲು ತಟಸ್ಥ ತಜ್ಞರನ್ನು ನೇಮಿಸುವಂತೆ ಪಾಕಿಸ್ತಾನ ವಿನಂತಿಸಿದೆ. ಈ ಕಾರಣದಿಂದ ಭಾರತ ನೋಟಿಸ್‌ನಲ್ಲಿ  ಜಾರಿಮಾಡಿದೆ. ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರವು ಝೀಲಂ ನದಿಯ ಉಪನದಿಯಾದ ನದಿಯ ಮೇಲೆ 330 ಮೆಗಾವ್ಯಾಟ್ ಉತ್ಪಾದಿಸುವ ರನ್-ಆಫ್-ದಿ-ರಿವರ್ ಜಲವಿದ್ಯುತ್ ಕೇಂದ್ರವಾಗಿದೆ. ರಾಟಲ್ ಜಲವಿದ್ಯುತ್ ಸ್ಥಾವರವು ಚೆನಾಬ್ ನದಿಯ ಮೇಲೆ 850 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯಾಗಿದೆ.


  ಪಾಕಿಸ್ತಾನದ ಪ್ರಕಾರ, ಈ ಯೋಜನೆಗಳ ನಿರ್ಮಾಣವು ನದಿಯ ಹರಿವನ್ನು ಬದಲಾಯಿಸುತ್ತದೆ ಮತ್ತು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪಶ್ಚಿಮ ನದಿಗಳ ಬಗ್ಗೆ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದಾಗಿದೆ. ಈ ಯೋಜನೆಗಳ ನಿರ್ಮಾಣವು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಕಡಿಮೆ ಮಾಡುತ್ತದೆ. ಅದರೆ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನ ವಾದಿಸುತ್ತಿದೆ.


  2016ರಲ್ಲಿ, ಪಾಕಿಸ್ತಾನವು ಈ ವಿನಂತಿಯನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತು ಮತ್ತು ದೇಶದ ಆಕ್ಷೇಪಣೆಗಳ ಮೇಲೆ ಮಧ್ಯಸ್ಥಿಕೆ ನ್ಯಾಯಾಲಯವು ತೀರ್ಪು ನೀಡುವಂತೆ ಪ್ರಸ್ತಾಪಿಸಿತು.


   ನೀರಿನ ಹರಿವು ಕಡಿಮೆಯಾಗಲ್ಲ


  ಆದಾಗ್ಯೂ, ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಕಿಶನ್‌ಗಂಗಾ ಮತ್ತು ರಾಟ್ಲ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳು ತನ್ನ ಹಕ್ಕುಗಳಲ್ಲಿವೆ ಎಂದು ಭಾರತ ವಾದಿಸಿದೆ. ಕೆಲವು ನಿರ್ಬಂಧಗಳೊಂದಿಗೆ ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಒಪ್ಪಂದ ಅನುಮತಿಸುತ್ತದೆ ಮತ್ತು ಯೋಜನೆಗಳು ಈ ನಿರ್ಬಂಧಗಳನ್ನು ಫಾಲೋ ಮಾಡಲಿದೆ ಎಂದು ಭಾರತ ತಿಳಿಸಿದೆ.


  ಈ ಯೋಜನೆಗಳು ನದಿಯ ಜಲವಿದ್ಯುತ್ ಕೇಂದ್ರಗಳಾಗಿವೆ, ಇದು ನೀರನ್ನು ಸಂಗ್ರಹಿಸುವುದಿಲ್ಲ ಮತ್ತು ಆದ್ದರಿಂದ ನದಿಗಳ ನೈಸರ್ಗಿಕ ಹರಿವನ್ನು ಬದಲಾಯಿಸುವುದಿಲ್ಲ ಎಂಬುದು ನವದೆಹಲಿಯಲ್ಲಿರುವ ಪರಿಣಿತರ ವಾದವಾಗಿದೆ. ಹೆಚ್ಚುವರಿಯಾಗಿ ಲಭ್ಯವಿರುವ ನೀರಿನ ಸ್ವಲ್ಪ ಭಾಗವನ್ನು ಮಾತ್ರವೇ ಬಳಸುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು ಪಾಕಿಸ್ತಾನದ ನೀರಿನ ಹರಿವಿನಲ್ಲಿ ಕಡಿಮೆಯಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.


  2013 ರಲ್ಲಿ ಭಾರತದ ಪರವಾಗಿ ತೀರ್ಪು


  ಈ ಹಿಂದೆ, ಸಿಂಧೂ ನದಿಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಅಥವಾ ಯೋಜಿಸಲಾಗುತ್ತಿರುವ ಭಾರತದ ಐದು ಜಲವಿದ್ಯುತ್ ಯೋಜನೆಗಳ ವಿನ್ಯಾಸಗಳ ಬಗ್ಗೆ ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ತನ್ನ ತಳಮಳವನ್ನು ಬಹಿರಂಗಪಡಿಸಿದ್ದು, ಇವು ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.


  2010 ರಲ್ಲಿ, ಪಾಕಿಸ್ತಾನವು ಹೇಗ್‌ನಲ್ಲಿರುವ ನ್ಯಾಯಾಲಯದ ಮಧ್ಯಸ್ಥಿಕೆಗೆ ಮೊರೆ ಹೋಗಿತ್ತು. ಅಲ್ಲಿ ಮೂರು ವರ್ಷಗಳ ಕಾಲ ಯೋಜನೆಯನ್ನು ತಡೆಹಿಡಿಯಲಾಯಿತು. ಆದರೆ ಇಸ್ಲಾಮಾಬಾದ್‌ನ ಅಸಮಾಧಾನಕ್ಕೆ ತಕ್ಕಂತೆ ನ್ಯಾಯಾಲಯವು 2013 ರಲ್ಲಿ ಭಾರತದ ಪರವಾಗಿ ತೀರ್ಪು ನೀಡಿತು.


  ಯೋಜನೆಯು ಸಿಂಧೂ ಜಲ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿದ್ದು, ಅದಕ್ಕೆ ಅನುಗುಣವಾಗಿ ಭಾರತವು ವಿದ್ಯುತ್ ಉತ್ಪಾದನೆಗಾಗಿ ಕಿಶನ್‌ಗಂಗಾ/ನೀಲಂ ನದಿಯಿಂದ ನೀರನ್ನು ತಿರುಗಿಸಬಹುದು ಎಂದು ತೀರ್ಪು ತಿಳಿಸಿದೆ.


  ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಸೂಚನೆ


  ಈ ವಿಷಯವನ್ನು ಮಧ್ಯಸ್ಥಿಗಾಗಿ ಅಂತಾರಾಷ್ಟ್ರೀಯ  ನ್ಯಾಯಾಲಯಕ್ಕೆ ಕೊಂಡೊಯ್ಯುವ ಪಾಕಿಸ್ತಾನದ ನಿರ್ಧಾರಕ್ಕೆ ಭಾರತ  ಆಕ್ಷೇಪ ವ್ಯಕ್ತಪಡಿಸಿದೆ., ಸಿಂಧೂ ಜಲ ಒಪ್ಪಂದವು ಉಭಯ ದೇಶಗಳ ನಡುವಿನ ವಿವಾದಗಳನ್ನು ಪರಿಹರಿಸುವ ಕಾರ್ಯವಿಧಾನವನ್ನು ಹೊಂದಿದೆ, ಅದು ಶಾಶ್ವತ ಸಿಂಧೂ ಆಯೋಗವಾಗಿದೆ ಎಂಬುದು ಭಾರತದ ವಾದ.


  ಭಾರತದ ಪ್ರಕಾರ, ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಮೂಲಕ ಬಗೆಹರಿಸುವುದಕ್ಕಿಂತ ಈ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆಗಳು ಮತ್ತು ಸಮಾಲೋಚನೆಗಳ ಮೂಲಕ ಒಪ್ಪಂದದಲ್ಲಿನ ಮಾರ್ಪಾಡುಗಳನ್ನು ಮಾಡುವುದು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ ಎಂದಾಗಿದೆ. ಅದರಂತೆ, ಈ ವಿಷಯವನ್ನು ತಟಸ್ಥ ತಜ್ಞರಿಗೆ ಉಲ್ಲೇಖಿಸಲು ಭಾರತವು ಪ್ರತ್ಯೇಕ ವಿನಂತಿಯನ್ನು ಮಾಡಿದೆ.


  ಎರಡೂ ದೇಶಗಳ ಏಕಕಾಲಿಕ ಪ್ರಕ್ರಿಯೆಗಳ ಪ್ರಾರಂಭ ಮತ್ತು ಅವುಗಳ ಅಸಮಂಜಸ ಅಥವಾ ವಿರೋಧಾತ್ಮಕ ಫಲಿತಾಂಶಗಳ ಸಂಭವನೀಯತೆಯು ಕಾನೂನುಬದ್ಧವಾಗಿ ಅಸಮರ್ಥನೀಯ ಪರಿಸ್ಥಿತಿಯನ್ನುಂಟು ಮಾಡುತ್ತದೆ ಹಾಗೂ ಇದು IWT ಗೆ ಅಪಾಯವನ್ನುಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


  Explained india notice to pakistan on the induswaters treaty
  ಸಿಂಧೂ ನದಿ (ಸಂಗ್ರಹ ಚಿತ್ರ)


  ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ವಿಶ್ವಬ್ಯಾಂಕ್ ಮನವಿ


  2016 ರಲ್ಲಿ ವಿಶ್ವಬ್ಯಾಂಕ್ ಎರಡೂ ದೇಶಗಳ ಭಿನ್ನಾಭಿಪ್ರಾಯವನ್ನು ಸೌಹಾರ್ದಯುತವಾಗಿ ಕೊನೆಗೊಳಿಸುವಂತೆ ಹಾಗೂ ಸ್ನೇಹಪರ ಬಾಂಧವ್ಯವನ್ನು ಮುಂದುವರೆಸುವಂತೆ ಎರಡೂ ದೇಶಗಳನ್ನು ವಿನಂತಿಸಿತ್ತು. ಇನ್ನು ಭಾರತ ಸಮಾಲೋಚನೆ ನಡೆಸಲು ಹಲವಾರು ಪ್ರಯತ್ನಗಳನ್ನು ನಡೆಸಿತು. ಆದರೆ 2017 ರಿಂದ 2022 ರವರೆಗೆ ಶಾಶ್ವತ ಸಿಂಧೂ ಆಯೋಗದ ಐದು ಸಭೆಗಳಲ್ಲಿ ಈ ವಿಷಯದ ಕುರಿತು ಚರ್ಚಿಸಲು ಪಾಕಿಸ್ತಾನ ನಿರಾಕರಿಸಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.


  ಪಾಕಿಸ್ತಾನದ ನಿರಂತರ ಒತ್ತಾಯದ ಮೇರೆಗೆ ವಿಶ್ವ ಬ್ಯಾಂಕ್ ಇತ್ತೀಚೆಗೆ ತಟಸ್ಥ ತಜ್ಞರು ಮತ್ತು ನ್ಯಾಯಾಲಯದ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಕೈಗೊಳ್ಳಲು ಮುಂದಾಗಿದೆ. IWT ನಿಬಂಧನೆಗಳ ಇಂತಹ ಉಲ್ಲಂಘನೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಭಾರತವು ಮಾರ್ಪಾಡುಗಳನ್ನು ನಡೆಸುವ ನೋಟೀಸ್ ಅನ್ನು ನೀಡಲು ಮುಂದಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.


  ಭಾರತವು ಒಪ್ಪಂದಕ್ಕೆ ತಿದ್ದುಪಡಿಯನ್ನು ಬಯಸುತ್ತದೆ


  ನೋಟಿಸ್ ಅಡಿಯಲ್ಲಿ, ಭಾರತವು ಪಾಕಿಸ್ತಾನಕ್ಕೆ 90 ದಿನಗಳೊಳಗೆ ಅಂತರ್ ಸರ್ಕಾರಿ ಮಾತುಕತೆಗಳನ್ನು ನಡೆಸಲು ಕರೆ ನೀಡಿದೆ ಎಂದು ಸರಕಾರಿ ಮೂಲಗಳು ವರದಿ ಮಾಡಿವೆ.


  ಕಳೆದ ಕೆಲವು ವರ್ಷಗಳಿಂದ ಒಪ್ಪಂದದಲ್ಲಿರುವ ವ್ಯವಸ್ಥೆಗೆ ಭಾರತ ತನ್ನ ಅತೃಪ್ತಿಯನ್ನು ಸೂಚಿಸಿದೆ. ಭಾರತವು ಇನ್ನು ಮುಂದೆ ತನ್ನ ಪಾಲಿನ ನೀರನ್ನು ಬಳಸಲು ಪಾಕ್‌ಗೆ ಅನುಮತಿ ನೀಡುವುದಿಲ್ಲ 2019 ರ ಕೊನೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು.


  ಆದರೆ ಜಮ್ಮು ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಸಿಂಧೂ ಜಲದ ಭಾರತೀಯ ಆಯುಕ್ತ ಪ್ರದೀಪ್ ಕುಮಾರ್ ಸಕ್ಸೇನಾ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ ಎಂಬ ಮಾತನ್ನು ನಿರಾಕರಿಸಿದ್ದಾರೆ. ಪಶ್ಚಿಮದ ನದಿಗಳ ಮೇಲಿರುವ ಹಕ್ಕನ್ನು ಭಾರತಕ್ಕೆ ಬಳಸಿಕೊಳ್ಳಲಾಗುವುದಿಲ್ಲ. ಹಾಗಾಗಿ ದೇಶಕ್ಕೆ ಅನುಮತಿಸಿರುವ ಎಲ್ಲಾ ಹಕ್ಕುಗಳನ್ನು ಬಳಸದ ಹೊರತು ಒಪ್ಪಂದದಿಂದ ಭಾರತ ಅನ್ಯಾಯಕ್ಕೊಳಗಾಗಿದೆ ಎಂಬುದು ತರ್ಕಬದ್ಧವಾದುದಲ್ಲ ಎಂದು ಪ್ರದೀಪ್ ಕುಮಾರ್ ತಿಳಿಸಿದ್ದಾರೆ.


  ಇದೀಗ ವಿವಾದದ ಪರಿಹಾರಕ್ಕಾಗಿ ದ್ವಿಪಕ್ಷೀಯ ಕಾರ್ಯವಿಧಾನಕ್ಕೆ ಪಾಕಿಸ್ತಾನವನ್ನು ಮರಳಿ ತರುವುದು ಮತ್ತು ಒಪ್ಪಂದವನ್ನು ಮಾರ್ಪಡಿಸಲು ಒತ್ತಡವನ್ನು ಹೆಚ್ಚಿಸುವುದು ಭಾರತದ ತಂತ್ರವಾಗಿದೆ ಎಂಬುದು ಕೆಲವು ಪರಿಣಿತರ ಅಭಿಪ್ರಾಯವಾಗಿದೆ.

  Published by:Rajesha B
  First published: