Explained: ಈ 3 Appಗಳನ್ನೇ ಗೂಗಲ್ ಬ್ಯಾನ್ ಮಾಡಿದ್ದೇಕೆ? ಇವುಗಳಿಂದ ಏನು ಅಪಾಯ?

Uninstall these Apps Immediately: ಈ ಆ್ಯಪ್​​ಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಲಾಗಿನ್‌ಗಳ ಮೂಲಕ ಕದಿಯುತ್ತಿತ್ತಂತೆ. ಅಷ್ಟೇ ಅಲ್ಲದೇ ಬಳಕೆದಾರರ ಬ್ಯಾಂಕ್​​ ಖಾತೆಗಳನ್ನ ಗೌಪ್ಯವಾಗಿ ಸಂಗ್ರಹಿಸಿ ಅಕೌಂಟ್​ಗಳಿಂದ ಹಣ ಕದಿಯುತ್ತಿತ್ತಂತೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Beware of these Apps: ಈ ಡೇಂಜರ್​ ಆ್ಯಪ್(Danger App) ಗಳ ಕಾಟ ಒಂದೊಂದಲ್ಲ. ನಮಗೆ ತಿಳಿಯದ ಹಾಗೆ ನಮ್ಮ ಮಾಹಿತಿಯನ್ನ ಕದಿಯುತ್ತಿರುತ್ತೆ. ಇತ್ತೀಚೆಗೆ ಇದೇ ರೀತಿಯ ಅಪಾಯಕಾರಿ ಎಂದು ಹೇಳಲಾಗುತ್ತಿದ್ದ 150 ಆ್ಯಪ್​ಗಳನ್ನ ಗೂಗಲ್​(Google) ಬ್ಯಾನ್(Ban)​ ಮಾಡಿತ್ತು. ಇದೀಗ ಮತ್ತೆ ಮೂರು ಮಿಲಿಯನ್​ ಯೂಸರ್ಸ್(3 Million Users)​ ಇರುವ ಇನ್ನೂ ಮೂರು ಆ್ಯಪ್​ಗಳನ್ನ ಗೂಗಲ್​ ನಿಷೇಧಿಸಿದೆ. ಈ ಮೂರು ಆ್ಯಪ್​ಗಳು ಜನರಿಗೆ ತಿಳಿಯದಂತೆ ಅವರ ಡೇಟಾ(DATA)ಗಳನ್ನ ಸೇವ್​ ಮಾಡುವುದರ ಜೊತೆ ಇವರ ಪರ್ಸನಲ್​ಮಾಹಿತಿ(Personal Details)ಗಳನ್ನ ಕದಿಯುತ್ತಿತ್ತಂತೆ. ಯಾವುದು ಆ ಮೂರು ಆ್ಯಪ್​ಗಳು? ಅದು ಹೇಗೆ ನಮ್ಮ ಮಾಹಿತಿ ಕದಿಯುತ್ತಿತ್ತು? ಅಂತ ನಿಮಗೆ ಮೂಡುವ ಅನುಮಾನಗಳಿಗೆ ಇಲ್ಲಿದೆ ಉತ್ತರ. ಒಂದು ವೇಳೆ ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ಗಳು ಇದ್ದರೆ ಕೂಡಲೇ ಅನ್​ಇನ್​ಸ್ಟಾಲ್(Uninstall)​ ಮಾಡುವುದು ಬಹಳ ಉತ್ತಮ. ಈ ಆ್ಯಪ್​ಗಳನ್ನ ತಕ್ಷಣವೇ ಡಿಲೀಟ್(Delete) ಮಾಡಿ. ಇಲ್ಲವೇ ನೀವೂ ಕೂಡ ಮೋಸ ಹೋಗಬಹುದು.

    ಫೇಸ್​ಬುಕ್​ ಲಾಗಿನ್​ ಮೂಲಕ ದೋಖಾ

    ಗೂಗಲ್​ ಪ್ಲೇ ಸ್ಟೋರ್​(Google Play Store)ನಿಂದ ನಿಷೇಧಿಸಲ್ಪಟ್ಟ ಈ ಮೂರು ಆ್ಯಪ್​​ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯುತ್ತಿದ್ದವು. ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿ ಈ ಆ್ಯಪ್​ಗಳನ್ನುಗುರುತಿಸಿದೆ. ಈ ಆ್ಯಪ್​​ಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಲಾಗಿನ್‌ಗಳ ಮೂಲಕ ಕದಿಯುತ್ತಿತ್ತಂತೆ. ಅಷ್ಟೇ ಅಲ್ಲದೇ ಬಳಕೆದಾರರ ಬ್ಯಾಂಕ್​​ ಖಾತೆಗಳನ್ನ ಗೌಪ್ಯವಾಗಿ ಸಂಗ್ರಹಿಸಿ ಅಕೌಂಟ್​ಗಳಿಂದ ಹಣ ಕದಿಯುತ್ತಿತ್ತಂತೆ. ಅನೇಕ ವೆಬ್​​ ಸೇವೆಗಳು ಹಾಗೂ ಅಪ್ಲಿಕೇಶನ್‌ಗಳಲ್ಲಿನ 'ಲಾಗಿನ್ ವಿಥ್ ಫೇಸ್‌ಬುಕ್' (Login With Facebook) ಬಟನ್ ಅನ್ನು ಬಳಕೆದಾರರನ್ನು ತ್ವರಿತವಾಗಿ ದೃಢೀಕರಿಸಲು ಬಳಸಲಾಗುತ್ತದೆ.

    ಇದನ್ನೂ ಓದಿ: TikTok: ಬ್ಯಾನ್​ ಆಗಿದ್ದರೂ ಈ ವರ್ಷ ಅತಿ ಹೆಚ್ಚು​ ಡೌನ್​ಲೋಡ್​ ಕಂಡ ಆ್ಯಪ್​ ಟಿಕ್​ಟಾಕ್​! ಗಳಿಸಿದ ಆದಾಯವೆಷ್ಟು ಗೊತ್ತಾ?

    ಇದನ್ನೇ ಬಂಡವಾಳ ಮಾಡಿಕೊಂಡ ಆ್ಯಪ್​ ಮಾಲೀಕರ ಬಳಕೆದಾರರ ಜೇಬಿಗೆ ಕೈ ಹಾಕುತ್ತಿದ್ದಾರೆ. ಈ ರೀತಿ ಸ್ಟೋರ್​ ಆದ ಡೇಟಾಗಳನ್ನ ಸ್ಪಾಟಿಫೈ ಮತ್ತು ಟಿಂಡರ್​​ನಂತಹ ಜನಪ್ರಿಯ ವೇದಿಕೆಗಳ ಬಳಸುತ್ತವೆ. ಭದ್ರತಾ ಸಂಸ್ಥೆಯ ಪ್ರಕಾರ, ಈ ಅಪ್ಲಿಕೇಶನ್​ಗಳು ಲಾಗಿನ್​ ಡೇಟಾಗಳನ್ನ ಕದಿಯಲು ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನ ಸಂಗ್ರಹಿಸುವ ಕಾರ್ಯ ಮಾಡುತ್ತವಂತೆ. ಹಾಗೂ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಸೈನ್-ಇನ್ ಡೇಟಾವನ್ನು ಬಳಸುತ್ತಿವೆ.

    ಯಾವ ಮೂರು ಆ್ಯಪ್​ಗಳು ಬ್ಯಾನ್​?

    ಬಳಕೆದಾರರ ಮಾಹಿತಿಯನ್ನ ಕದ್ದು ಮೋಸ ಮಾಡುತ್ತಿದ್ದ ಮೂರು ಅಪ್ಲಿಕೇಶನ್​ಗಳನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ಬ್ಯಾನ್​ಗೊಳಿಸಲಾಗಿದೆ.

    1. ಮ್ಯಾಜಿಕ್​ ಫೋಟೋ ಲ್ಯಾಬ್​ (Magic Photo Lab) - ಫೋಟೋ ಎಡಿಟರ್​ ಆ್ಯಪ್​

    2. ಬ್ಲೆಂಡರ್​ ಫೋಟೋ ಎಡಿಟರ್​ ( Blender & photo Editor) - ಫೋಟೋ ಎಡಿಟರ್​ ಆ್ಯಪ್​

    3. ಪಿಕ್ಸ್ ಫೋಟೋ ಮೋಷನ್ ಎಡಿಟ್ 2021

    ಇದನ್ನೂ ಓದಿ: Dangerous apps: 136 ಅಪಾಯಕಾರಿ ಆ್ಯಪ್​ಗಳನ್ನ ಬ್ಯಾನ್ ಮಾಡಿದ ಗೂಗಲ್ ಪ್ಲೇ ಸ್ಟೋರ್.. ನಿಮ್ಮ ಫೋನ್​​ನಲ್ಲಿದೆಯಾ?

    ಬ್ಯಾನ್ ಆ್ಯಪ್​ಗಳಿಂದ ಸೇಫ್​ ಆಗೋದು ಹೇಗೆ?

    ಈ ಆ್ಯಪ್​ಗಳನ್ನ ಡೌನ್​ಲೋಡ್​ ಮಾಡಿರುವ ಬಳಕೆದಾರರು, ಈ ಕೂಡಲೇ ಅವುಗಳನ್ನ ಫೋನ್​ಗಳಿಂದ ತೆಗೆದುಹಾಕಬೇಕು. ಇಷ್ಟು ದಿನ ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​​ಗಳಿರುವುದರಿಂದ, ನಿಮ್ಮ ಫೇಸ್​ಬುಕ್​ ಲಾಗಿನ್​ ವಿವರ ಸೋರಿಕೆ ಆಗಿರುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಮೊದಲು ನಿಮ್ಮ ಫೇಸ್​​ಬುಕ್​ ಲಾಗಿನ್​ ವಿವರಗಳನ್ನ ಮೊದಲು ಬದಲಾಯಿಸಿ.

    (ವರದಿ- ವಾಸುದೇವ್​.ಎಂ)
    Published by:Soumya KN
    First published: