• ಹೋಂ
  • »
  • ನ್ಯೂಸ್
  • »
  • Explained
  • »
  • Explained: ತೈಲ ಹಾಗೂ ಅನಿಲ ಕಂಪನಿಗಳು ನೈಸರ್ಗಿಕ ಶಕ್ತಿ ಮೂಲಗಳನ್ನು ಅನ್ವೇಷಿಸುತ್ತಿರುವುದಕ್ಕೆ ಕಾರಣವೇನು?

Explained: ತೈಲ ಹಾಗೂ ಅನಿಲ ಕಂಪನಿಗಳು ನೈಸರ್ಗಿಕ ಶಕ್ತಿ ಮೂಲಗಳನ್ನು ಅನ್ವೇಷಿಸುತ್ತಿರುವುದಕ್ಕೆ ಕಾರಣವೇನು?

ಓಎನ್​ಜಿಸಿ ತೈಲ ಸಂಸ್ಥೆ.

ಓಎನ್​ಜಿಸಿ ತೈಲ ಸಂಸ್ಥೆ.

ಸರಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಸ್ಥಂಸ್ಥೆಗಳು 2040 ರ ವೇಳೆಗೆ 10 GW ಯಷ್ಟು ಇನ್‌ಸ್ಟಾಲ್ ಮಾಡಿದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಯನ್ನು ತಲುಪಲು ಹೂಡಿಕೆ ಮಾಡಲು ಮುಂದಾಗಿದ್ದಾರೆ.

  • Share this:

ಹವಾಮಾನ ವೈಪರೀತ್ಯ ಇಂದಿನ ದಿನಗಳಲ್ಲಿ ಜಾಗತಿಕ ಸಮಸ್ಯೆಯನ್ನು ತಂದೊಡ್ಡುತ್ತಿವೆ. ಕೈಗಾರಿಕಾ ವಲಯಗಳು ಹೊರಬಿಡುವ ಇಂಗಾಲದ ವಿಸರ್ಜನೆ ಹಾಗೂ ಮಾನವ ಸಂಬಂಧಿ ಅನೇಕ ಚಟುವಟಿಕೆಗಳಿಂದ ಹವಾಮಾನದಲ್ಲಿ ವೈಪರೀತ್ಯಗಳು ತಲೆದೋರುತ್ತಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ವಿಷಯವಾಗಿದೆ. ಒಂದೆಡೆ ಕೊರೋನಾದಂತಹ ಸಾಂಕ್ರಾಮಿಕ (CoronaVirus) ರೋಗಗಳು ಇನ್ನೊಂದೆಡೆ ಹವಾಮಾನ ಬದಲಾವಣೆಗಳಿಂದ (climate change) ಮಾನವ ಮಾಡಿದ ತಪ್ಪುಗಳಿಗೆ ಪಾವತಿಸುತ್ತಿದ್ದಾನೆಯೇ ಎಂಬ ಅಂಶ ಕೂಡ ಇಲ್ಲಿ ಗಮನಾರ್ಹ ವಾದುದು. ಆಧುನೀಕತೆಯ ಹೆಸರಿನಲ್ಲಿ ಇಂದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ. ವಾಹನಗಳ ಹೊಗೆ, ಕಾರ್ಖಾನೆಗಳು ಹೊರಬಿಡುವ ವಿಷಪೂರಿತ ವಾಯು ಮೊದಲಾದ ಪರಿಸರ ಮಾಲಿನ್ಯಕಾರಕ ಅಂಶಗಳು ಇಂದು ಮಾನವನ ಜೀವನವನ್ನೇ ಅಲ್ಲಾಡಿಸುವಂತಿದೆ.


ತಾನು ಮಾಡಿದ ತಪ್ಪಿಗೆ ತಾನೇ ಬೆಲೆಕಟ್ಟುವಂತಹ ಪರಿಸ್ಥಿತಿ ಇಂದು ನಮ್ಮೆಲ್ಲರಿಗೂ ಒದಗಿ ಬಂದಿದೆ. ಇದೀಗ ಕೆಲವೊಂದು ಕೈಗಾರಿಕಾ ಸಂಸ್ಥೆಗಳು ತಮ್ಮಿಂದಾದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿಮೂಲದಲ್ಲಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿವೆ. ಇಂದಿನ ಲೇಖನದಲ್ಲಿ ಈ ಶಕ್ತಿಮೂಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.


ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರಲು ಇಂಗಾಲದ ವಿಸರ್ಜನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವೊಂದಿಷ್ಟು ಕೈಗಾರಿಕೆಗಳು ಅದರಲ್ಲೂ ಮುಖ್ಯವಾಗಿ ತೈಲ ಹಾಗೂ ಅನಿಲ ಕಂಪನಿಗಳು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡುವ ಮೂಲಕ ಪರ್ಯಾಯ ವಿಧಾನವನ್ನು ಅನ್ವೇಷಿಸುತ್ತಿವೆ. (oil & gas companies)


ಸರಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಸ್ಥಂಸ್ಥೆಗಳು 2040 ರ ವೇಳೆಗೆ 10 GW ಯಷ್ಟು ಇನ್‌ಸ್ಟಾಲ್ ಮಾಡಿದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಯನ್ನು ತಲುಪಲು ಹೂಡಿಕೆ ಮಾಡುತ್ತಿದ್ದರೆ, ಇನ್ನೊಂದಿಷ್ಟು ಕೈಗಾರಿಕೆಗಳು ಕೂಡ ನವೀಕರಿಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡಿ ಸರಕಾರದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತಿವೆ.


ಅನಿಲ ಹಾಗೂ ತೈಲ ಕಂಪನಿಗಳು ನೈಸರ್ಗಿಕ ಶಕ್ತಿ ಅಥವಾ ಸಂಪನ್ಮೂಲದ ಮೇಲೆ ಏಕೆ ಹೂಡಿಕೆ ಮಾಡುತ್ತಿವೆ?


ಹವಾಮಾನ ಪರಿಣಾಮಗಳನ್ನು ಕಡಿಮೆ ಮಾಡಲು ಈ ಕಂಪನಿಗಳಿಂದ ಹೊರಬರುತ್ತಿರುವ ಇಂಗಾಲದ ಪ್ರಭಾವವನ್ನು ತಗ್ಗಿಸಲು ಪ್ರಸ್ತುತ ಕಂಪನಿಗಳು ನೈಸರ್ಗಿಕ ಶಕ್ತಿಯ ಬಳಕೆಯನ್ನು ಮಾಡಲು ನಿರ್ಧರಿಸಿವೆ. ಸರಕಾರಿ ಸ್ವಾಮ್ಯದ ತೈಲ ಹಾಗೂ ಅನಿಲ ಕಂಪನಿಗಳು ಸರಕಾರದ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಗುರಿಗಳನ್ನು ಸಾಧಿಸುವಲ್ಲಿ ಭಾಗವಹಿಸುತ್ತಿವೆ.


ಪ್ರಸ್ತುತ 100 GW ನಿಂದ 2030 ರೊಳಗೆ 450 GW ಯಷ್ಟು ನೈಸರ್ಗಿಕ ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಮುಂದಿಟ್ಟುಕೊಂಡಿದೆ.


ಭಾರತೀಯ ಕಂಪನಿಗಳ ಕೆಲವು ನವೀಕರಿಸಬಹುದಾದ ಇಂಧನ ಹೂಡಿಕೆಗಳು ಯಾವುವು?


ಭಾರತದ ಅತಿದೊಡ್ಡ ಅಪ್‌ಸ್ಟ್ರೀಮ್ (ಪರಿಶೋಧನೆ ಹಾಗೂ ಉತ್ಪಾದನೆ) ತೈಲ ಹಾಗೂ ಅನಿಲ ಕಂಪನಿಗಳು 2040 ರ (Oil companies) ವೇಳೆಗೆ 10 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು ONGC ಅಧ್ಯಕ್ಷರಾದ ಸುಭಾಷ್ ಕುಮಾರ್ ತಮ್ಮ ಕಂಪನಿಯು ನವೀಕರಿಸಬಹುದಾದ ಇಂಧನಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಗುರಿಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.


ಭಾರತದ ಪ್ರಮುಖ ನೈಸರ್ಗಿಕ ಅನಿಲ ಕಂಪನಿ GAIL ತನ್ನ 130 MW ನವೀಕರಿಸಬಹುದಾದ ಇಂಧನ ಖಾತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ 3-4 ವರ್ಷಗಳಲ್ಲಿ 1 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಹೊಂದಿದೆ.


ಇದನ್ನೂ ಓದಿ: Disrespect to National Flag| ಕಲ್ಯಾಣ್ ಸಿಂಗ್ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಮೋದಿ ಎದುರೇ ಭಾರತ ಧ್ವಜವನ್ನು ಅವಮಾನಿಸಿತೇ ಬಿಜೆಪಿ?

ಡೌನ್‌ಸ್ಟ್ರೀಮ್ (ತೈಲ ಮತ್ತು ಅನಿಲವನ್ನು ಸಿದ್ಧಪಡಿಸಿದ ಉತ್ಪನ್ನವಾಗಿ ಪರಿವರ್ತಿಸುವ ಪ್ರಕ್ರಿಯೆಗಳು) ತೈಲ ಹಾಗೂ ಅನಿಲ ಸಂಸ್ಥೆಗಳು ನವೀಕರಿಸಬಹುದಾದ ಇಂಧನದ ಜೊತೆಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯದಲ್ಲಿ ಕೂಡ ಹೂಡಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದ ಅತಿದೊಡ್ಡ ಸಂಸ್ಕಾರಕ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ವಾರ್ಷಿಕ 21 ರೊಳಗೆ 233 MW ಸಾಮರ್ಥ್ಯವಿರುವ ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಿದೆ.


ಇದು 257 ಇಲೆಕ್ಟ್ರಿಕ್ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಕೂಡ ಸ್ಥಾಪಿಸಿದೆ. IOCL ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ದೊಡ್ಡ ಪ್ರಮಾಣದಲ್ಲಿ ಬ್ಯಾಟರಿ ವಿನಿಮಯ ನಡೆಸಲು ಸನ್ ಮೊಬಿಲಿಟಿಯೊಂದಿಗೆ ಸಂಭಾವ್ಯ ಜಂಟಿ ಉದ್ಯಮದಲ್ಲಿ ಪಾಲುದಾರಿಗೆ ನಡೆಸುವ ಯೋಜನೆಯನ್ನು ಹೊಂದಿದೆ ಎಂದು ತಿಳಿಸಿದೆ. ಸಂಸ್ಥೆಯು ಮಥುರಾದಲ್ಲಿ ಭಾರತದ ಮೊಲದ ಹಸಿರು ಹೈಡ್ರೋಜನ್ ಸ್ಥಾವರವನ್ನು ಸ್ಥಾಪಿಸುತ್ತಿದೆ.


ಇದನ್ನೂ ಓದಿ: Abhishek Bachchan| ಶೂಟಿಂಗ್ ವೇಳೆ ಕೈಗೆ ಗಾಯ; ಬಾಲಿವುಡ್​ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲು

ಅಲ್ಯೂಮಿನಿಯಂ ಏರ್ ತಂತ್ರಜ್ಞಾನ ಆಧಾರಿತ ಬ್ಯಾಟರಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಇಸ್ರೇಲ್ ಮೂಲದ ಬ್ಯಾಟರಿ ತಂತ್ರಜ್ಞಾನ ಸ್ಟಾರ್ಟಪ್ ಆದ ಫಿನರ್ಜಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.




ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಟಾಟಾ ಪವರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ದೇಶದ ವಿವಿಧ ರಿಟೇಲ್ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಥಾಪಿಸುವ ಯೋಜನೆಯನ್ನು ಒಪ್ಪಂದ ಒಳಗೊಂಡಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಆರ್ಥಿಕ ವರ್ಷ 20 ರ ಕೊನೆಯಲ್ಲಿ 43 MW ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಿದೆ.

top videos
    First published: