HOME » NEWS » Explained » EXPLAINED WHY ARE AUSTRALIANS CANCELLING APPOINTMENTS TO GET THEIR SECOND DOSE OF ASTRAZENECA SHOT STG MAK

Explainer: ವ್ಯಾಕ್ಸಿನ್‌ನ ಎರಡನೆಯ ಡೋಸ್‌ಗೆ ನೋ ಎಂದ ಆಸ್ಟ್ರೇಲಿಯನ್ನರು: ಕಾರಣವೇನು?

ಆಸ್ಟ್ರೇಲಿಯದಲ್ಲಿ ಲಸಿಕಾ ಕಾರ್ಯಕ್ರಮವು ಫೆಬ್ರವರಿಯಲ್ಲಿ ಆರಂಭವಾದರೂ 40 ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಇದು ಲಭ್ಯವಿದೆ. ಇಲ್ಲಿಯವರೆಗೆ 3 ಶೇಕಡದಷ್ಟು ವಯಸ್ಕರಿಗೆ ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗಿದೆ.

news18-kannada
Updated:June 25, 2021, 3:47 PM IST
Explainer: ವ್ಯಾಕ್ಸಿನ್‌ನ ಎರಡನೆಯ ಡೋಸ್‌ಗೆ ನೋ ಎಂದ ಆಸ್ಟ್ರೇಲಿಯನ್ನರು: ಕಾರಣವೇನು?
ಸಾಂದರ್ಭಿಕ ಚಿತ್ರ
  • Share this:
ಲಸಿಕೆ ಸ್ವೀಕರಿಸುವ ಆರೋಗ್ಯ ಮಾರ್ಗಸೂಚಿಗಳನ್ನು ನವೀಕರಿಸಿದ ಕಾರಣ ಆಸ್ಟ್ರೇಲಿಯದ ನಾಗರಿಕರು ತಮ್ಮ ಚುಚ್ಚುಮದ್ದಿನ ಎರಡನೇ ಡೋಸ್‌ನ ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸುತ್ತಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯ ಸರಕಾರವು ಆಸ್ಟ್ರಾಜೆನಿಕಾ ಲಸಿಕೆ ಸ್ವೀಕರಿಸುವ ವಯಸ್ಸನ್ನು 60 ಕ್ಕೆ ಏರಿಸಿರುವು ದಾಗಿದೆ. ಇದರಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ವ್ಯಾಕ್ಸಿನೇಶನ್ ಪ್ರಕ್ರಿಯೆ ಇನ್ನಷ್ಟು ಮಂದವಾಗುವುದು ಖಚಿತವಾಗಿದೆ. 60 ವಯಸ್ಸಿನ ಒಳಗಿನವರು ಕೇವಲ ಅನುಮೋದಿಸಲಾದ ಪರ್ಯಾಯ ಲಸಿಕೆಯನ್ನು ಚುಚ್ಚಿಸಿಕೊಳ್ಳಲು ಒಪ್ಪಿಗೆ ನೀಡಿದ್ದು ಲಸಿಕೆಯ ಹೆಸರು  ಫೈಜರ್ ಎಂದಾಗಿದ್ದು ಇದರ ಪ್ರಮಾಣ ಕಡಿಮೆ ಇದೆ.

ಇತ್ತೀಚಿನ ತಿಂಗಳುಗಳಲ್ಲಿ ಆಸ್ಟ್ರಾಜೆನಿಕಾ ಚುಚ್ಚುಮದ್ದು ಸಾಕಷ್ಟು ಕೆಟ್ಟ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದರೂ ಆಸ್ಟ್ರೇಲಿಯದ ಆರೋಗ್ಯ ಅಧಿಕಾರಿಗಳು ಚುಚ್ಚುಮದ್ದಿನ ಎರಡೂ ಡೋಸ್ ಅನ್ನು ಸ್ವೀಕರಿಸಲು ಪ್ರಜೆಗಳಲ್ಲಿ ವಿನಂತಿಸಿಕೊಳ್ಳು ತ್ತಿದ್ದಾರೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಯಾರು ತಮ್ಮ ಮೊದಲ ಡೋಸ್ ಅನ್ನು ಪೂರ್ಣಗೊಳಿಸಿದ್ದಾರೋ ಅಂತಹವರು ಎರಡನೇ ಡೋಸ್ ಅನ್ನು ತೆಗೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆಸ್ಟ್ರೇಲಿಯ ಸರಕಾರ ತನ್ನ ಲಸಿಕೆಯಲ್ಲಿ ಮಾರ್ಪಾಡು ಮಾಡಲು ಕಾರಣಗಳೇನು?
ಈ ವಾರದ ಆರಂಭದಲ್ಲಿಯೇ ಆಸ್ಟ್ರೇಲಿಯ ಸರಕಾರವು ತನ್ನ ಆಸ್ಟ್ರಾಜೆನಿಕಾ ಲಸಿಕೆಗೆ ಶಿಫಾರಸು ಮಾಡಿದ ವಯಸ್ಸನ್ನು 60 ಹಾಗೂ ಮೇಲ್ಮಟ್ಟವರಿಗೆ ಏರಿಸಿದೆ. ಇದಕ್ಕೆ ಕಾರಣ ರಕ್ತಹೆಪ್ಪುಗಟ್ಟುವಿಕೆ ಲಕ್ಷಣಕ್ಕೆ ತುತ್ತಾಗುತ್ತಿರುವುದಾಗಿದೆ. ಅಲ್ಲಿನ ಆರೋಗ್ಯ ಸಚಿವರಾದ ಗ್ರೇಗ್ ಹಂಟ್ 60 ಕ್ಕಿಂತ ಕಡಿಮೆ ವಯಸ್ಸಿನವರು ಫೈಜರ್ ಲಸಿಕೆ ಆರಿಸಿಕೊಳ್ಳಬೇಕಾಗಿದ್ದು 40-59 ವಯಸ್ಸಿನವರಿಗೆ ಲಸಿಕೆ ನೀಡಲು ಶೀಘ್ರದಲ್ಲೇ ಮುಂದಾಗಲಿದೆ ಎಂದು ಘೋಷಿಸಿರುವುದಾಗಿದೆ.

ಪ್ರತಿರಕ್ಷಣೆಯ ಕುರಿತು ಆಸ್ಟ್ರೇಲಿಯಾದ ತಾಂತ್ರಿಕ ಸಲಹಾ ಗುಂಪಿನ ಪ್ರಕಾರ ಆಸ್ಟ್ರಾಜೆನಿಕಾ ವ್ಯಾಕ್ಸಿನ್ ತೆಗೆದುಕೊಂಡ ಯುವಜನರು ರಕ್ತಹೆಪ್ಪುಗಟ್ಟುವಿಕೆಯ ಕಾಯಿಲೆಯಾದ ಥ್ರಂಬೋಸಿಸ್ ಮತ್ತು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ಗೆ ಒಳಗಾಗಿದ್ದಾರೆ. ಆದರೆ ಅಲ್ಲಿನ ಆರೋಗ್ಯ ಇಲಾಖೆಯು ಲಸಿಕೆಯ ಎರಡನೇ ಡೋಸ್ ಅನ್ನು ಪಡೆದುಕೊಳ್ಳುವಂತೆ ಆಸ್ಟ್ರೇಲಿಯಾದ ಪ್ರಜೆಗಳನ್ನು ಒತ್ತಾಯಿಸುತ್ತಿದ್ದಾರೆ. ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆ ಕಂಡುಬಂದಿರುವುದು ಮೊದಲ ಡೋಸ್‌ನ ನಂತರವಾಗಿದೆ. ಹಾಗಾಗಿ ಎರಡನೇ ಡೋಸ್ ಪಡೆಯುವುದರಿಂದ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು ಎಂಬುದು ಆರೋಗ್ಯ ಇಲಾಖೆಯ ಯೋಚನೆಯಾಗಿದೆ.

ಆರೋಗ್ಯ ಇಲಾಖೆಯು ಮತ್ತೆ ಮತ್ತೆ ಭರವಸೆಯನ್ನು ನೀಡುತ್ತಿದ್ದರೂ 50 ಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಆಸ್ಪತ್ರೆಗಳಿಗೆ ಕರೆಮಾಡಿ ತಮ್ಮ ವ್ಯಾಕ್ಸಿನ್ ನೇಮಕಾತಿಗಳನ್ನು ರದ್ದುಗೊಳಿಸಲು ವಿನಂತಿಸುತ್ತಿದ್ದಾರೆ. ಇದು ನಿಜಕ್ಕೂ ಸರಕಾರಕ್ಕೆ ತಲೆನೋವನ್ನುಂಟು ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇದನ್ನೂ ಓದಿ: ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ್ ವಿರುದ್ಧದ ದೇಶದ್ರೋಹ ಪ್ರಕರಣ; ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್ಅಸ್ಟ್ರಾಜೆನಿಕಾ ಲಸಿಕೆಯಿಂದ ಉಂಟಾಗುವ ಅಪಾಯವೇನು?

ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆಯ ಕಾರಣ ಹೆಚ್ಚಿನ ರಾಷ್ಟ್ರಗಳು ಈ ಲಸಿಕೆಯನ್ನು ನಿರ್ಬಂಧಿಸಿವೆ. ಕೆಲವು ದೇಶಗಳು ಆಸ್ಟ್ರೇಲಿಯದ ಹಾದಿಯನ್ನೇ ಹಿಡಿದವು. ಅಂದರೆ ವಯಸ್ಸು ಅಥವಾ ಲಿಂಗವನ್ನು ಆಧರಿಸಿ ಲಸಿಕೆ ನೀಡುವ ವಿಧಾನವನ್ನು ಬದಲಾಯಿಸಿದವು. ಆಸ್ಟ್ರೇಲಿಯ ಸರಕಾರಕ್ಕೆ ಈ ಲಸಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಕೋವಿಡ್ -19 ನಿಂದ ಉಂಟಾದ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವಿಕೆಯನ್ನು ತಡೆಗಟ್ಟುವುದರ ವಿರುದ್ಧ ಇದು ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ ಎಂಬುದು ತಿಳಿದು ಬಂದಿದೆ.

ಕೊರೋನಾ ವೈರಸ್‌ನ ಹೊಸ ಅಲೆಗಳನ್ನು ತಡೆಯಲು ಚುಚ್ಚುಮದ್ದು ಅತ್ಯುತ್ತಮ ವಿಧಾನವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಲಸಿಕೆಯಿಂದ ಮರಣವನ್ನಪ್ಪುವ ಪ್ರಮಾಣ ತುಂಬಾ ಕಡಿಮೆ ಅಂದರೆ 2 ಮಿಲಿಯನ್ ಜನರಲ್ಲಿ ಒಬ್ಬರು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Emergency Black Day| ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್​ ದೇಶದ ಜನರ ಕ್ಷಮೆ ಕೇಳಬೇಕು; ಬಿ.ಎಸ್. ಯಡಿಯೂರಪ್ಪ

ಆಸ್ಟ್ರೇಲಿಯ ಲಸಿಕಾ ನಿರ್ವಹಣೆಯ ಸ್ಥಿತಿ ಏನು?

ಆಸ್ಟ್ರೇಲಿಯದಲ್ಲಿ ಲಸಿಕಾ ಕಾರ್ಯಕ್ರಮವು ಫೆಬ್ರವರಿಯಲ್ಲಿ ಆರಂಭವಾದರೂ 40 ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಇದು ಲಭ್ಯವಿದೆ. ಇಲ್ಲಿಯವರೆಗೆ 3 ಶೇಕಡದಷ್ಟು ವಯಸ್ಕರಿಗೆ ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗಿದೆ. ಅಂದರೆ 25 ಶೇಕಡದಷ್ಟು ಜನರು ವ್ಯಾಕ್ಸಿನ್‌ನ ಒಂದನೇ ಡೋಸ್ ಅನ್ನು ಪಡೆದುಕೊಂಡಿದ್ದಾರೆ.
Youtube Video

ಆಸ್ಟ್ರಾಜೆನಿಕಾ ಲಸಿಕೆಯನ್ನು ತೆಗೆದುಕೊಂಡವರಲ್ಲಿ ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆ ತಲೆದೋರಿದ್ದು ಅಲ್ಲಿನವರು ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಅದರಲ್ಲೂ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ನೇಮಕಾತಿಗಳನ್ನು ರದ್ದುಗೊಳಿಸುತ್ತಿದ್ದಾರೆ.
Published by: MAshok Kumar
First published: June 25, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories