Explained: ಕೇರಳವನ್ನು ಗಾಬರಿ ಬೀಳಿಸಿರೋ ಮಾನ್ಸನ್ ಮಾವುಂಕಲ್ ಯಾರು? ಒಬ್ಬ ಸಣ್ಣ ವ್ಯಾಪಾರಿ ಇಷ್ಟೆಲ್ಲಾ ಜನರನ್ನು ಯಾಮಾರಿಸಿದ್ದು ಹೇಗೆ?

Kerala Man Cheating Case: ಮಾನ್ಸನ್ ಮ್ಯೂಸಿಯಂ ನಲ್ಲಿ ಲಿಯೊನಾರ್ಡೊ ಡಾ ವಿಂಚಿ, ರಾಜಾ ರವಿವರ್ಮ ರಚಿಸಿದ ವರ್ಣಚಿತ್ರಗಳು, ಛತ್ರಪತಿ ಶಿವಾಜಿಯ ಜೊತೆಗಿದ್ದ ಭಗವದ್ಗೀತೆಯ ಪ್ರತಿ, ಬೈಬಲ್‌ನ ಹಳೆಯ ಒಡಂಬಡಿಕೆ ಮೊದಲಾದ ಪುರಾತನ ಹಾಗೂ ಮೌಲ್ಯಯುತವಾದ ಸಂಗ್ರಹಗಳು ಕಂಡುಬಂದಿವೆ.

ಕರೀನಾ-ವಿವಾದಿತ ಕಾರ್- ಮನ್ಸನ್

ಕರೀನಾ-ವಿವಾದಿತ ಕಾರ್- ಮನ್ಸನ್

  • Share this:
Kareena Kapoor's car in Kerala: ಪ್ರಾಚ್ಯ ವಸ್ತುಗಳ ವ್ಯಾಪಾರಿ (Antique dealer) ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಪರಿಚಯ ತನಗಿದೆ ಎಂದು ತಿಳಿಸಿ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದ ಕೇರಳದ ನಕಲಿ ಪ್ರಾಚೀನ ವಸ್ತುಗಳ ವ್ಯಾಪಾರಿ ಮಾನ್ಸನ್ ಮಾವುಂಕಲ್‌ನನ್ನು ಸಪ್ಟೆಂಬರ್ 26 ರಂದು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಹಲವಾರು ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಪರಿಚಯವಿರುವ ಹಿನ್ನಲೆಯಲ್ಲಿ ಈತನಿಗೆ ಆರ್ಥಿಕ ಸಹಾಯ ಮಾಡಿದ್ದವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಪ್ರಾಚ್ಯ ವಸ್ತುಗಳ ವ್ಯಾಪಾರಿ ಮಾನ್ಸನ್ ಕುರಿತು ಇಂದಿನ ಲೇಖನದಲ್ಲಿ ಪ್ರಮುಖ ಸುದ್ದಿ ಬಹಿರಂಗಗೊಂಡಿರುವುದು ಈತನ ಬಂಧನದ ನಂತರ ಮಾನ್ಸನ್ ಯಾರು ಆತನನ್ನು ಏಕೆ ಬಂಧಿಸಲಾಗಿದೆ? ಇಷ್ಟೊಂದು ಐಷಾರಾಮಿ ಕಾರುಗಳು (Luxury Cars) ಆತನ ವಶದಲ್ಲಿದ್ದುದು ಹೇಗೆ? ಇದರಲ್ಲಿ ಕರೀನಾ ಪಾತ್ರವೇನು ಮೊದಲಾದ ವಿಷಯಗಳು ಜನರ ಮನಸ್ಸಿನಲ್ಲಿ ಹಲವಾರು ಗೊಂದಲಗಳನ್ನು ಎಬ್ಬಿಸುತ್ತಿವೆ. ಪ್ರಾಚ್ಯ ವಸ್ತುಗಳ ವ್ಯಾಪಾರಿ ಮಾತ್ರವಲ್ಲದೆ ಮಾನ್ಸನ್ ಒಬ್ಬ ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್ (Social Media Influencer) ಕೂಡ ಹೌದು. ಹಾಗಾದರೆ ಈತನ ಕುರಿತು ಇನ್ನೊಂದಿಷ್ಟು ಆಸಕ್ತಿಕರ ಅಂಶಗಳನ್ನು ಅರಿತುಕೊಳ್ಳೋಣ.

ಕೇರಳದ ಕ್ರೈಂ ಬ್ರ್ಯಾಂಚ್ ತಂಡವು ಮಾವಂಕಲ್‌ನನ್ನು ಸಪ್ಟೆಂಬರ್ 26 ರಂದು ಆತನ ಆಲಪ್ಪುಳ ನಿವಾಸದಿಂದ ಬಂಧಿಸಿದೆ. ಆತ ಹತ್ತು ಜನರಿಗೆ ಸುಮಾರು 10 ಕೋಟಿಯಷ್ಟು ಹಣವನ್ನು ಮೋಸಗೈದಿದ್ದಾನೆ ಎಂಬ ಆಪಾದನೆಯ ಮೇಲೆ ಈತನ ಬಂಧವಾಗಿದೆ.

ಮಾವಂಕಲ್ ಇತಿಹಾಸವೇನು?

ಆಲಪ್ಪುಳ ಚೆರ್ತಲದವನಾದ ಮಾನ್ಸನ್ ಕೊಚ್ಚಿಗೆ ತೆರಳಿ ಅಲ್ಲಿನ ತನ್ನ ದೊಡ್ಡ ಬಾಡಿಗೆಯ ಮನೆಯನ್ನು ಪ್ರಾಚ್ಯ ವಸ್ತುಗಳ ಮ್ಯೂಸಿಯಂನ್ನಾಗಿ ಮಾಡಿಕೊಂಡನು. ಈತ ತನ್ನ ಬಳಿ ಬಹು ಅಪರೂಪದ ಸಂಗ್ರಹಗಳನ್ನು ಹೊಂದಿದ್ದಾನೆ ಎಂದು ಹೇಳಿಕೊಂಡಿದ್ದು, ಜೀಸಸ್ ಧರಿಸಿದ ಉಡುಪು, ಪ್ರವಾದಿ ಮಹಮ್ಮದ್ ಬಳಸುತ್ತಿದ್ದ ಪಾನಪಾತ್ರೆ, ಟಿಪ್ಪು ಸುಲ್ತಾನನ ಸಿಂಹಾಸನ ಹೀಗೆ ಸಾಕಷ್ಟು ಪ್ರಾಚ್ಯ ವಸ್ತುಗಳು ತನ್ನ ಮ್ಯೂಸಿಯಂ ನಲ್ಲಿ ಇದೆ ಎಂದು ಹೇಳಿಕೊಂಡಿದ್ದನು. ಈ ಎಲ್ಲಾ ಪುರಾತನ ವಸ್ತುಗಳು ಆತನ ಮ್ಯೂಸಿಯಂ ನಲ್ಲಿ ಇರುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಆತನ ಮನೆಗೆ ನಿರಂತರವಾಗಿ ವಿಐಪಿಗಳ ದಂಡೇ ದೌಡಾಯಿಸುತ್ತಿತ್ತು ಎಂಬುದು ನಿಜ ಎಂದೇ ವರದಿಗಳು ಬಿತ್ತರಿಸುತ್ತಿವೆ.

ಇದನ್ನೂ ಓದಿ: Kareena Kapoor: ಕೇರಳದ ನಕಲಿ ವ್ಯಾಪಾರಿ ಹತ್ರ ಕರೀನಾ ಕಪೂರ್ ಕಾರ್! ಕಾರು ಅವನ ಬಳಿ ಬಂದಿದ್ದೇ ರೋಚಕ ಕತೆ!

ಮಾನ್ಸನ್ ಮ್ಯೂಸಿಯಂ ನಲ್ಲಿ ಗಮನ ಸೆಳೆಯುವ ಅಂಶವೆಂದರೆ ಆತ ಮಾಜಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹರಾ ಅವರೊಂದಿಗೆ ಪೋಸ್ ನೀಡಿದ ಚಿತ್ರವಾಗಿದೆ. ಒಂದು ಚಿತ್ರದಲ್ಲಿ, ಬೆಹೆರಾ ಸಿಂಹಾಸನದ ಮೇಲೆ ಕುಳಿತಿರುವುದನ್ನು ಸಹಾಯಕ ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅವರ ಪಕ್ಕದಲ್ಲಿ ಖಡ್ಗ ಹಿಡಿದು ನಿಂತಿರುವಂತೆ ಕಾಣಬಹುದು. ಆದರೆ ಬೆಹೆರಾ ಮಾತ್ರವಲ್ಲದೆ, ನಟ ಮೋಹನ್ ಲಾಲ್, ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್, ಹಾಲಿ ಸಚಿವರಾದ ರೋಶಿ ಅಗಸ್ಟಿನ್ ಮತ್ತು ಅಹಮ್ಮದ್ ದೇವರ್ಕೋವಿಲ್, ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಲಕ್ಷ್ಮಣ್ ಗುಗುಲ್ಲೋತ್ ಮತ್ತು ಮಾಜಿ ಉಪ ಪೊಲೀಸ್ ಇನ್ಸ್ ಪೆಕ್ಟರ್ ಎಸ್ ಸುರೇಂದ್ರನ್ ಅವರು ಮಾನ್ಸನ್ ಜೊತೆ ಪೋಸ್ ನೀಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಲಕಿ ಸ್ಕೀಮ್ ಹೆಸರಿನಲ್ಲಿ ಲಕ್ಷಾಂತರ ಪಂಗನಾಮ; ಹಣ ಕಳೆದುಕೊಂಡ ಜನರ ಪರದಾಟ

ತನ್ನ ವೆಬ್‌ಸೈಟ್‌ನಲ್ಲಿ ಮಾನ್ಸನ್ ತನ್ನನ್ನು ವಿಶ್ವಶಾಂತಿ ಪ್ರಚಾರಕ ಎಂದು ಕರೆದುಕೊಂಡಿದ್ದು, ತಾನೊಬ್ಬ ಲೋಕೋಪಕಾರಿ, ಶಿಕ್ಷಣತಜ್ಞ ಮತ್ತು ಪ್ರೇರಕ ಭಾಷಣಕಾರ ಎಂದು ಹೇಳಿಕೊಂಡಿದ್ದಾನೆ. ಪುರುಷರು, ಮಹಿಳೆಯರು ಮತ್ತು ನಾಯಿಗಳಿಂದ ಸುತ್ತುವರಿದಿರುವ ಒಬ್ಬ ಡಾನ್‌ನಂತೆ ಆತ ಪೋಸ್ ನೀಡುವ ಚಿತ್ರಗಳಿವೆ. ಕೆ ಸುಧಾಕರನ್ ಸೇರಿದಂತೆ ಅನೇಕ ವಿಐಪಿಗಳು ಮಾನ್ಸನ್ ಏಕೆ ಭೇಟಿಯಾಗಿದ್ದರು ಎಂಬುದನ್ನು ಹೇಳಿಕೊಂಡಿದ್ದು ಆತ ಎಂಟು ಪೋಸ್ಟ್ ಡಾಕ್ಟರಲ್ ಗೌರವಗಳನ್ನು ಹೊಂದಿರುವ ಕಾಸ್ಮೆಟಾಲಜಿಸ್ಟ್ ಎಂದೆನಿಸಿ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಕ್ರೈಂ ಬ್ರ್ಯಾಂಚ್ ಈತನನ್ನು ಏಕೆ ಬಂಧಿಸಿತು?

ರಾಜ್ಯದ ಗಣ್ಯರಿಂದ ಸುಮಾರು 26 ಕೋಟಿ ರೂಪಾಯಿಗಳ ವಂಚನೆಯ ಆರೋಪದ ಮೇಲೆ ಕೇರಳ ಕ್ರೈಂ ಬ್ರ್ಯಾಂಚ್ ಸಪ್ಟೆಂಬರ್ 26 ರಂದು ಮಾನ್ಸನ್‌ನನ್ನು ಬಂಧಿಸಿದ್ದಾರೆ. ದೂರುಗಳ ಪ್ರಕಾರ ಈತ ವಂಚನೆಗೊಳಗಾದವರಿಗೆ ತನ್ನನ್ನು ವಜ್ರದ ವ್ಯಾಪಾರಿ ಎಂದು ಪರಿಚಯಿಸಿಕೊಂಡಿದ್ದನು ಎಂದು ಆರು ಕೇರಳ ಮೂಲದ ವಂಚನೆಗೊಳಗಾದ ವ್ಯಕ್ತಿಗಳು ತಿಳಿಸಿದ್ದಾರೆ. ಈತ ದೂರುದಾರರಿಂದ ಕೋಟಿಗಟ್ಟಲೆ ಹಣವನ್ನು ಪಡೆದುಕೊಂಡಿದ್ದು, ವಿದೇಶದಲ್ಲಿರುವ ತನ್ನ ಬ್ಯುಸಿನೆಸ್ ಒಪ್ಪಂದಗಳಿಂದ ಬಂದ ಹಣವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ನಿರ್ವಹಿಸುವ ಕೇಂದ್ರ ಸರ್ಕಾರದ ಇಲಾಖೆಯಿಂದ ನಿರ್ಬಂಧಿಸಲಾಗಿದೆ.

ಮತ್ತು ಅದನ್ನು ಹಿಂಪಡೆಯಲು ಕಾನೂನು ಹೋರಾಟದಲ್ಲಿ ಭಾಗಿಯಾಗಿರುವೆ ಎಂದು ಹೇಳಿಕೊಂಡು ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದಾನೆ ಎಂದು ದೂರುದಾರರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸದ್ದಾರೆ. ಹಣ ನೀಡುವ ಸಲುವಾಗಿ, ದೂರುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಆತ HSBC ಬ್ಯಾಂಕಿನಲ್ಲಿ ಕಂಪನಿಯ ಪಾಲುದಾರರಾದ ವಿ ಜೆ ಪಟೇಲ್‌ರೊಂದಿಗೆ ಹಂಚಿಕೊಂಡಿರುವ ತನ್ನ ಬ್ಯಾಂಕ್ ವಿವರಗಳನ್ನು ತೋರಿಸಿದ್ದಾನೆ ಎಂದು ಹೇಳಿದ್ದಾರೆ.

ಅದಾಗ್ಯೂ ಮಾನ್ಸನ್ ಅವರ ಪ್ರವೃತ್ತಿಯ ಮೇಲೆ ಸಂದೇಹ ಹೊಂದಿದ್ದ ಕೆಲವರು ಎರ್ನಾಕುಲಂ ಜಿಲ್ಲೆಯ ಕಾಲೂರಿನಲ್ಲಿರುವ ಆತನ ಮನೆಗೆ ಭೇಟಿ ನೀಡಿದರು. ಮಾನ್ಸನ್‌ನ ಉನ್ನತ ಮಟ್ಟದ ಜೀವನ ಶೈಲಿ ಹಾಗೂ ಪುರಾತನ ಸಂಗ್ರಹವನ್ನು ನೋಡಿ ಖಾತ್ರಿಪಡಿಸಿಕೊಂಡ ನಂತರವೇ ದೂರುದಾರರು ಆತನಿಗೆ ಹಣ ನೀಡಲು ಒಪ್ಪಿಕೊಂಡರು ಎಂದು ತಿಳಿಸಿದ್ದಾರೆ. ಹೀಗೆ 2017 ಜೂನ್‌ನಿಂದ 2020 ರ ನವೆಂಬರ್ ಮಧ್ಯಭಾಗದಲ್ಲಿ ದೂರುದಾರರು ಒಟ್ಟು 10 ಕೋಟಿಗಳನ್ನು ವಿವಿಧ ಮೊತ್ತದ ರೂಪದಲ್ಲಿ ಮಾನ್ಸನ್‌ಗೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಮಾನ್ಸನ್ ಇದುವರೆಗೆ ಯಾವುದೇ ಮೊತ್ತವನ್ನು ಹಿಂತಿರುಗಿಸಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.

ನಕಲಿ ಪದವಿಗಳನ್ನು ಹೊಂದಿರುವ ಮಾನ್ಸನ್‌ನಂತಹ ವ್ಯಕ್ತಿಯು ಕೋಟಿಗಟ್ಟಲೆ ಹಣವನ್ನು ವಂಚಿಸಿದ್ದು ಹೇಗೆ ಈ ಕ್ರಿಯೆಯಲ್ಲಿ ಆತ ಹೇಗೆ ಯಶಸ್ವಿಯಾದನು ಎಂಬುದನ್ನು ವಿಶ್ಲೇಷಿಸಿದಾಗ ಆತನಿಗೆ ಹಲವಾರು ಗಣ್ಯ ವ್ಯಕ್ತಿಗಳ ಬೆಂಬಲ ಕೂಡ ದೊರೆಯುತ್ತಿತ್ತು ಎಂಬುದು ಇದೀಗ ಹೊರಬೀಳುತ್ತಿದೆ. ಆತನ ವಿರುದ್ಧ ದಾಖಲಾಗುತ್ತಿದ್ದ ದೂರುಗಳನ್ನು ಉನ್ನತ ಪೊಲೀಸ್ ಅಧಿಕಾರಿಗಳು ಆತನಿಗೆ ತಿಳಿಸುತ್ತಿದ್ದರು ಹಾಗೂ ಆ ದೂರುಗಳಿಂದ ಹೊರಬರಲು ಅವರು ಆತನಿಗೆ ಸಹಾಯ ಮಾಡುತ್ತಿದ್ದರು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ.

ಮಾನ್ಸನ್‌ನ ಪ್ರಾಚ್ಯ ವಸ್ತುಗಳ ಸಂಗ್ರಹಣೆ

ಮಾನ್ಸನ್‌ನ ಬಂಧನದ ನಂತರ ಕೊಚ್ಚಿಯಲ್ಲಿದ್ದ ಈತನ ಪ್ರಾಚ್ಯ ವಸ್ತುಗಳ ಮ್ಯೂಸಿಯಂ ಕುರಿತ ಸುದ್ದಿಗಳು ಇದೀಗ ವೈರಲ್ ಆಗಿವೆ. ಮಾನ್ಸನ್ ಮ್ಯೂಸಿಯಂ ನಲ್ಲಿ ಲಿಯೊನಾರ್ಡೊ ಡಾ ವಿಂಚಿ, ರಾಜಾ ರವಿವರ್ಮ ರಚಿಸಿದ ವರ್ಣಚಿತ್ರಗಳು, ಛತ್ರಪತಿ ಶಿವಾಜಿಯ ಜೊತೆಗಿದ್ದ ಭಗವದ್ಗೀತೆಯ ಪ್ರತಿ, ಬೈಬಲ್‌ನ ಹಳೆಯ ಒಡಂಬಡಿಕೆ ಮೊದಲಾದ ಪುರಾತನ ಹಾಗೂ ಮೌಲ್ಯಯುತವಾದ ಸಂಗ್ರಹಗಳು ಕಂಡುಬಂದಿವೆ. ಪೊಲೀಸರು ಈ ಸಂಗ್ರಹಗಳನ್ನು ಇದೀಗ ಪರಿಶೀಲಿಸುತ್ತಿದ್ದಾರೆ.

ರಾಜಕಾರಣಿಗಳು ಹಾಗೂ ಪೊಲೀಸರ ವಿರುದ್ಧ ಆರೋಪ

ಸ್ಪಷ್ಟವಾದ ಇನ್ನೊಂದು ಅಂಶವೆಂದರೆ, ಮಾನ್ಸನ್ ಸೆಲೆಬ್ರಿಟಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಹೊಂದಿದ್ದ ಸಾಮಾಜಿಕ ಸಂಪರ್ಕಗಳು ಆತನ ಮೇಲೆ ಹೂಡಿಕೆದಾರರು ವಿಶ್ವಾಸವಿರಿಸಲು ಕಾರಣವಾಗಿದೆ ಎನ್ನಲಾಗಿದೆ. ಮಾನ್ಸನ್ ತನ್ನ ಅರಮನೆಯ ನಿವಾಸಕ್ಕೆ ಹಲವಾರು ವಿಐಪಿಗಳನ್ನು ಕರೆತರುತ್ತಿದ್ದನು, ಅದರ ಒಂದು ಭಾಗವನ್ನು ತನ್ನ 'ಅಮೂಲ್ಯ' ಪುರಾತನ ವಸ್ತುಗಳನ್ನು ಸಂಗ್ರಹಿಸಲು ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು ಎಂಬುದೂ ತಿಳಿದುಬಂದಿದೆ.

ಇದನ್ನೂ ಓದಿ: Darshan-Umapathy: ಜೊತೆಗೆ ಕಾಣಿಸಿಕೊಂಡ ದರ್ಶನ್​-ಉಮಾಪತಿ: ವಂಚನೆ ಯತ್ನ ಪ್ರಕರಣಕ್ಕೆ ತೆರೆ..?

ದೂರುಗಳ ಅನ್ವಯ ಹಲವಾರು ರಾಜಕಾರಣಿಗಳೊಂದಿಗೆ ಆತ ತೆಗೆಸಿಕೊಂಡಿದ್ದ ಫೋಟೋಗಳನ್ನು ಮಾನ್ಸನ್ ತನಗೆ ಹಣ ನೀಡಿದ್ದವರಿಗೆ ಕಳುಹಿಸಿದ್ದನು ಎನ್ನಲಾಗಿದೆ. ಕೆಲವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ ಸುಧಾಕರನ್ ಸಮ್ಮುಖದಲ್ಲಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತನಗೆ ಮಾನ್ಸನ್ ಗೊತ್ತಿರುವುದಾಗಿ ಸುಧಾಕರನ್ ತಿಳಿಸಿದ್ದು, ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಈ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಅವರು ತಪ್ಪಿಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಂಪ್ಸನ್ ಅವರು, ಕೋವಿಡ್ -19 ಸಾಂಕ್ರಾಮಿಕದ ಮುಂಚೆಯೇ, ಅವರು ತಮ್ಮ ಪತ್ನಿ ಮತ್ತು ಇತರರೊಂದಿಗೆ, ಮಾನ್ಸನ್ ಅವರನ್ನು ಕೇರಳ ಪ್ರವಾಸಿ ಮಲಯಾಳಿ ಫೆಡರೇಶನ್‌ನ ಪೋಷಕರಾಗಿ ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.

ನಟಿ ಕರೀನಾ ಕಪೂರ್ ಹೆಸರು

ಕೇರಳದ ನಕಲಿ ಪ್ರಾಚೀನ ವಸ್ತುಗಳ ವ್ಯಾಪಾರಿ ಮಾನ್ಸನ್ ಮಾವುಂಕಲ್ ಬಾಲಿವುಡ್ ನಟಿ ಕರೀನಾ ಕಪೂರ್ ಹೆಸರಿನಲ್ಲಿ ನೋಂದಾಯಿಸಲಾದ ಕಾರನ್ನು ಹೊಂದಿದ್ದನು. 2007 ರ ಮಾಡೆಲ್‌ನ ಪೋರ್ಷೆ ಬಾಕ್ಸ್‌ಟರ್ ಕಾರನ್ನು ಒಂದು ವರ್ಷದ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಮುಖ ವ್ಯಾಪಾರ ತಂಡ ಶ್ರೀವಲ್ಸಂ ಗುಂಪು ಹಾಗೂ ಆತನ ನಡುವೆ ಕಾನೂನು ವಿವಾದಗಳು ಏರ್ಪಟ್ಟ ಹಿನ್ನಲೆಯಲ್ಲಿ ಮಾನ್ಸನ್ ವಶದಲ್ಲಿದ್ದ 20 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರೀನಾರ ತಂದೆಯ ಹೆಸರಿನಲ್ಲಿ ರಣಧೀರ್ ಕಪೂರ್ ಹಸರನ್ನು ವಶಪಡಿಸಿಕೊಳ್ಳಲಾದ ಕಾರಿನ ನೋಂದಾವಣೆಯ ಡಾಕ್ಯುಮೆಂಟ್‌ಗಳು ಹೊಂದಿದ್ದು ನ್ಯೂಸ್ 18 ಗೆ ಈ ಕುರಿತು ಮಾಹಿತಿ ದೊರಕಿದೆ. ಇತರ ವಿವರಗಳೊಂದಿಗೆ ನಟಿಯ ಬಾಂದ್ರಾದ ಹಿಲ್ ರಸ್ತೆಯ ವಿವರಗಳನ್ನು ಡಾಕ್ಯುಮೆಂಟ್‌ಗಳಲ್ಲಿ ಒದಗಿಸಲಾಗಿದೆ. ನೋಂದಣಿ ಬದಲಾಯಿಸದೆಯೇ ವಾಹನದ ಉಸ್ತುವಾರಿಯನ್ನು ಮಾನ್ಸನ್ ಹೇಗೆ ವಹಿಸಿಕೊಂಡಿದ್ದನು ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ.

ಕಳೆದ ತಿಂಗಳು, ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ರೋಲ್ಸ್ ರಾಯ್ಸ್, ಫೆರಾರಿ ಮತ್ತು ಪೋರ್ಷೆಯಂತಹ 10 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಆಘಾತಕಾರಿ ಸಂಗತಿಯೆಂದರೆ, ಅವುಗಳಲ್ಲಿ ಒಂದನ್ನು ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆಮದು ಮಾಡಿಕೊಂಡ ಬಹಳಷ್ಟು ಕಾರುಗಳು ತೆರಿಗೆ ಪಾವತಿಸದೇ ರಸ್ತೆಯಲ್ಲಿ ಓಡಾಡಿಕೊಂಡಿರುವ ಹಿನ್ನಲೆಯಲ್ಲಿ, ಟ್ರಾಫಿಕ್ ಪೋಲಿಸ್ ಜೊತೆಗೆ ಸಾರಿಗೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ 10 ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ.
Published by:Soumya KN
First published: