2019 ರಲ್ಲಿ ರೈಸಿಯನ್ನು ಇರಾನ್ನ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇರಾನ್-ಇರಾಕ್ ಯುದ್ಧದ ನಂತರ 1988 ರಲ್ಲಿ ಸಾವಿರಾರು ರಾಜಕೀಯ ಖೈದಿಗಳನ್ನು ಸಮೂಹ ಮರಣದಂಡನೆ ನಡೆಸಲಾಯಿತು. ಇದರಲ್ಲಿ ಇವರ ಕೈವಾಡವಿದೆ ಎಂಬುದು ಇರಾನ್ನ ನಾಗರೀಕರ ಆತಂಕಕ್ಕೆ ಕಾರಣವಾಗಿದೆ. ಶನಿವಾರದ ಅಧ್ಯಕ್ಷೀಯ ಚುನಾವಣೆಯ ನಂತರ ಭಾಗಶಃ ಮತಗಳನ್ನು ಎಣಿಸಿದ ಬಳಿಕ ಇಬ್ರಾಹಿಂ ರೈಸಿಯನ್ನು ಇರಾನ್ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಇರಾನ್ ಇತಿಹಾಸದಲ್ಲಿಯೇ ಇದು ಕನಿಷ್ಠ ಪ್ರಮಾಣದ ಮತದಾನದ ಎಣಿಕೆಯಾಗಿತ್ತು. ಮತಗಳನ್ನು ಎಣಿಸಿದ ಬಳಿಕ ಇಬ್ರಾಹಿಂ ಗೆಲುವು ಖಚಿತವಾಯಿತು.
ಇರಾನ್ನ ಆಡಳಿತವಲಯದಲ್ಲಿ ರೈಸಿ ಹಂತ ಹಂತವಾಗಿ ಮೇಲೇರಿದವರು. 1080 ರಲ್ಲಿ ತಮ್ಮ 20 ನೇ ವಯಸ್ಸಿನಲ್ಲಿ ರೈಸಿ ಇರಾನ್ನ ಕೈಗಾರಿಕ ಪಟ್ಟಣವಾದ ಕರಾಜ್ನ ಮುಖ್ಯ ವಿಚಾರಣಾಧಿಕಾರಿಯಾಗಿ ನೇಮಕಗೊಂಡಿದ್ದರು. ಇರಾನ್ನ ರಾಜಧಾನಿ ತೆಹರಾನ್ನಲ್ಲಿ 2004 ರಿಂದ 2014 ರವರೆಗೆ ನ್ಯಾಯಾಂಗ ವಿಭಾಗದ ಉಪಮುಖ್ಯಸ್ಥರಾಗಿದ್ದರು.
ರಾಜಕೀಯ ಒಳಸಂಚುಗಳು
ರಾಜಕೀಯ ಭಿನ್ನಮತೀಯರು ಒಮ್ಮೆಲೆ ಕಣ್ಮರೆಯಾಗಿದ್ದು ಮತ್ತು ಕಾನೂನು ಬಾಹಿರವಾಗಿ ನಡೆದಿದ್ದ ಹತ್ಯಾಕಾಂಡಗಳಲ್ಲಿ ರೈಸಿ ಕೈವಾಡವಿದೆ ಎಂಬುದಾಗಿ ಮಾನವಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಶನಲ್ ದೂರು ನೀಡಿದೆ. ಅರೆಸೈನಿಕ ಗುಂಪು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಯೊಂದಿಗೆ ರೈಸಿಗೆ ಸಂಬಂಧವಿದೆ. ಐಆರ್ಜಿಸಿಯ ಕುಡ್ಸ್ ಫೋರ್ಸ್ನ ಮಾಜಿ ಉಸ್ತುವಾರಿ, ಕಾಸ್ಸೆಮ್ ಸೊಲೈಮಾನಿ 2020 ರಲ್ಲಿ ಯುಎಸ್ನಿಂದ ಜವಾಬ್ದಾರಿಯನ್ನು ಹೊತ್ತುಕೊಂಡ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟರು.
ಕುಡ್ಸ್ ಫೋರ್ಸ್ ಅನ್ನು 2019 ರಲ್ಲಿ ಯುಎಸ್ ವಿದೇಶಿ ಭಯೋತ್ಪಾದಕ ಸಂಘಟನೆಯಾಗಿ ನೇಮಿಸಿತು. ಕಠಿಣ ಧರ್ಮಗುರು, ರೈಸಿ 2017 ರಲ್ಲಿ ಹಾಲಿ ಅಧ್ಯಕ್ಷ ಹಸನ್ ರುಹಾನಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದರು.
ದೇಶಗಳ ನಡುವಿನ ಸಂಬಂಧ ಹಳಸಿದೆ
ನಾಯಕ ಅಯತುಲ್ಲಾ ಖಾನ್ ಅಲ್ ಖಮೇನಿಗೆ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. 2015 ರಲ್ಲಿ, ಪಿ 5 (ಯುಕೆ, ಯುಎಸ್, ರಷ್ಯಾ, ಫ್ರಾನ್ಸ್ ಮತ್ತು ಚೀನಾವನ್ನು ಒಳಗೊಂಡಿರುವ ಯುಎನ್ ಸೆಕ್ಯುರಿಟಿ ಕೌನ್ಸಿಲ್ನ ಐದು ಖಾಯಂ ಸದಸ್ಯರು) ಮತ್ತು ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ ಜೊತೆ ಜೆಸಿಪಿಒಎ ಒಪ್ಪಂದಕ್ಕೆ ಬಂದದ್ದು ರೂಹಾನಿ ಅವರ ಸರ್ಕಾರವಾಗಿದೆ. ಟ್ರಂಪ್ ಆಡಳಿತದಲ್ಲಿ, ಯುಎಸ್ ಏಕಪಕ್ಷೀಯವಾಗಿ 2018 ರಲ್ಲಿ ಒಪ್ಪಂದವನ್ನು ತೊರೆದಿದೆ, ಅದರ ನಂತರ ದೇಶಗಳ ನಡುವಿನ ಸಂಬಂಧಗಳು ಹದಗೆಡುತ್ತಿವೆ.
ಇರಾನ್ನ ಅಧ್ಯಕ್ಷೀಯ ಚುನಾವಣೆಗಳು
ಇರಾನ್ನ 13 ನೇ ಅಧ್ಯಕ್ಷೀಯ ಚುನಾವಣೆಗಳು ಜೂನ್ 18 ರಂದು ನಡೆದವು. ಸಯೀದ್ ಜಲೀಲಿ, ಇಬ್ರಾಹಿಂ ರೈಸಿ, ಅಲಿರೆಜಾ ಜಕಾನಿ, ಸಯೀದ್ ಅಮೀರ್ ಹೊಸೆನ್ ಖಾಜಿ, ಮೊಹ್ಸೆನ್ ಮೆಹ್ರಾಲಿಜಾಡೆ, ಮೊಹ್ಸೆನ್ ರೆಜೈ, ಮತ್ತು ಅಬ್ದೋಲ್ನಸರ್ ಹೆಮ್ಮತಿ. ಮೆಹ್ರಾಲಿಜಾಡೆ, ಜಕಾನಿ ಮತ್ತು ಜಲೀಲಿ ಸೇರಿದಂತೆ ಈ ಮೂವರು ಅಭ್ಯರ್ಥಿಗಳು ಬುಧವಾರ ಸ್ಪರ್ಧೆಯಿಂದ ಹಿಂದೆ ಸರಿದರು.
ಇರಾನ್ ಇಂಟರ್ನ್ಯಾಷನಲ್ ಪ್ರಕಾರ, ಈ ಚುನಾವಣೆಗಳಲ್ಲಿ 1.39 ಮೊದಲ ಬಾರಿಗೆ ಮತದಾರರು ಸೇರಿದಂತೆ 59 ಮಿಲಿಯನ್ ಅರ್ಹ ಮತದಾರರು ಇದ್ದರು. ಇರಾನ್ ಒಟ್ಟು ಜನಸಂಖ್ಯೆಯನ್ನು 85.9 ಮಿಲಿಯನ್ ಹೊಂದಿದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಹೆಚ್ಚಿನವರು ಮತದಾನ ಮಾಡುವುದರಿಂದ ಹಿಂಜರಿದಿದ್ದಾರೆ. ಮತ ಚಲಾಯಿಸಿದರೆ ತಪ್ಪಾದ ವ್ಯವಸ್ಥೆಯನ್ನು ಅಂಗೀಕರಿಸಿದಂತೆ ಎಂಬುದು ಅಲ್ಲಿನ ಜನರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ