ಸೋಮವಾರ ಜುಲೈ 26 ರಂದು ಲಂಡನ್ ಹೈಕೋರ್ಟ್‌ನ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯವು ಭಾರತದಿಂದ ಪಲಾಯನವಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಿದೆ. ಭಾರತದಿಂದ ಪಲಾಯನಗೊಂಡ ಒಂದು ವರ್ಷದ ನಂತರ, ಅಂದರೆ 2017 ರಿಂದ ಭಾರತಕ್ಕೆ ಹಸ್ತಾಂತರವಾಗುವ ಪ್ರಕರಣದಲ್ಲಿ ಹೋರಾಡುತ್ತಿರುವ ಮಲ್ಯಗೆ ಕೋರ್ಟ್ ಈ ದಿವಾಳಿತನದ ಆದೇಶ ನೀಡಿದೆ. ಈ ಹಿನ್ನೆಲೆ ಮೂಲಭೂತವಾಗಿ, ಮಲ್ಯ ಈಗ ತನ್ನ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಮತ್ತು ಅವರ ಉಳಿದ ಆಸ್ತಿಗಳನ್ನು ದಿವಾಳಿತನದ ಟ್ರಸ್ಟಿಗೆ ಹಸ್ತಾಂತರಿಸಬೇಕಾಗುತ್ತದೆ. ಈ ಟ್ರಸ್ಟಿಯು ಹೆಚ್ಚಿನ ತನಿಖೆ ನಡೆಸುತ್ತದೆ ಮತ್ತು ಅವರ ಆಸ್ತಿ ಮತ್ತು ಬಾಧ್ಯತೆಗಳನ್ನು ನಿರ್ಧರಿಸುತ್ತದೆ. ಈ ಮೌಲ್ಯಮಾಪನವನ್ನು ಭಾರತೀಯ ಬ್ಯಾಂಕುಗಳ ಒಕ್ಕೂಟವು ಮಾಡಿದ ವಸೂಲಿ ಮಾಡಲಾಗದ ಸಾಲ ಮರುಪಾವತಿಸಲು ಬಳಸಲಾಗುತ್ತದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ ವಿಫಲವಾದ ನಂತರ ಮಲ್ಯ ಮೇಲೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯ ಕಣ್ಣು ಬಿತ್ತು. 2013 ರ ಆಸುಪಾಸಿನಲ್ಲಿ ಒಂದು ಡಜನ್‌ಗೂ ಹೆಚ್ಚು ಭಾರತೀಯ ಬ್ಯಾಂಕುಗಳಿಂದ ವಿಜಯ್ ಮಲ್ಯ 10,000 ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದರು.
ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಷಿಯಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂ ಪ್ರೈವೇಟ್ ಲಿಮಿಟೆಡ್ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದರು.
ಮಲ್ಯ ಉದ್ಯಮಗಳು ಹಾಗೂ ಯುಕೆ ನ್ಯಾಯಾಲಯಗಳು ತೊಡಗಿಸಿಕೊಂಡ ಬಗ್ಗೆ ಟೈಮ್‌ಲೈನ್
65 ವರ್ಷದ ವಿಜಯ್ ಮಲ್ಯ ಬೆಂಗಳೂರು ಮೂಲದ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಹೆಚ್ಎಲ್) ನ ಅಧ್ಯಕ್ಷರಾಗಿದ್ದರು ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ಅನ್ನೂ ಹೊಂದಿದ್ದರು. 2003ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಯಾನ ಕಂಪನಿ ಪ್ರಾರಂಭವಾಗಿದ್ದು, 2005ರಲ್ಲಿ ಆರಂಭದಲ್ಲಿ ಏಕ-ವರ್ಗ (ಆರ್ಥಿಕ) ವಾಹಕವಾಗಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಬಳಿಕ, ಮಾರ್ಚ್ 2008ರಲ್ಲಿ, ಮಲ್ಯ ವಿಮಾನಯಾನವು ಮುಖ್ಯವಾಗಿ ತೈಲ ಬೆಲೆಗಳ ಏರಿಕೆಯ ಪರಿಣಾಮವಾಗಿ ನಷ್ಟವನ್ನು ದಾಖಲಿಸಲು ಪ್ರಾರಂಭಿಸಿತು. ಇದರಿಂದ ಕಂಪನಿಯ ಸಾಲ ಏರಿಕೆಯಾಗಲು ಪ್ರಾರಂಭಿಸಿದ್ದು,
ಮತ್ತು ಒಂದೆರಡು ವರ್ಷಗಳಲ್ಲಿ, ವಿಮಾನಯಾನವು ತನ್ನ ನಿವ್ವಳ ಮೌಲ್ಯದ ಶೇಕಡಾ 50ರಷ್ಟು ಸಾಲವನ್ನು ದಾಖಲಿಸಿತ್ತು. ಇನ್ನು, ಕೋಲ್ಕತ್ತಾದ ಗ್ಲೋಬ್ಸಿನ್ ಬ್ಯುಸಿನೆಸ್ ಸ್ಕೂಲ್‌ನ 2013ರ ಕೇಸ್ ಸ್ಟಡಿ ಪ್ರಕಾರ ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪನಿಯು ಪ್ರಾರಂಭದಿಂದಲೂ ಲಾಭವನ್ನು ವರದಿ ಮಾಡಿಲ್ಲ.
ಇದನ್ನೂ ಓದಿ:ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಬಿಎಸ್ವೈ, ಕಿಚ್ಚ ಸುದೀಪ್
ನಂತರ, ಮಾರ್ಚ್ 2016 ರಲ್ಲಿ, ಮಲ್ಯ ಭಾರತದಿಂದ ಯುಕೆಗೆ ಪಲಾಯನ ಮಾಡಿದರು ಮತ್ತು ಫೆಬ್ರವರಿ 2017 ರಲ್ಲಿ ಭಾರತವು ತನ್ನ ದೇಶಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವಂತೆ ಯುಕೆಗೆ ವಿನಂತಿ ಸಲ್ಲಿಸಿತು. ಅಂದಿನಿಂದ, ಜಾಮೀನಿನಲ್ಲಿರುವ ಮಲ್ಯ ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಹೋರಾಡುತ್ತಿದ್ದಾರೆ. ಹೀಗೆ, ಈ ವಿಷಯವು ಯುಕೆ ನ್ಯಾಯಾಲಯಗಳನ್ನು ತಲುಪಿದೆ.
2020ರ ಏಪ್ರಿಲ್‌ನಲ್ಲಿ ಯುಕೆ ಹೈಕೋರ್ಟ್ ಹಸ್ತಾಂತರದ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಿತು. ಆ ಸಮಯದಲ್ಲಿ, ನ್ಯಾಯಾಧೀಶರು ''ಎಸ್‌ಡಿಜೆ [ಹಿರಿಯ ಜಿಲ್ಲಾ ನ್ಯಾಯಾಧೀಶರು] ಕಂಡುಕೊಂಡ ಪ್ರೈಮಾ ಫೇಸಿ ಪ್ರಕರಣದ ವ್ಯಾಪ್ತಿಯು ಕೆಲವು ವಿಷಯಗಳಲ್ಲಿ ಭಾರತದಲ್ಲಿ ಪ್ರತಿವಾದಿ [ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ)] ಆರೋಪಿಸಿದ್ದಕ್ಕಿಂತ ವಿಸ್ತಾರವಾಗಿದೆ ಎಂದು ನಾವು ಪರಿಗಣಿಸುತ್ತೇವೆ. ಪ್ರೈಮಾ ಫೇಸಿ ಪ್ರಕರಣವಿದ್ದು, ಇದು ಏಳು ಪ್ರಮುಖ ವಿಷಯಗಳಲ್ಲಿ, ಭಾರತದಲ್ಲಿನ ಆರೋಪಗಳಿಗೆ ಹೊಂದಿಕೆಯಾಗುತ್ತದೆ'' ಎಂದು ಮಲ್ಯ ವಿರುದ್ಧದ ಆದೇಶದಲ್ಲಿ ಹೇಳಿದ್ದರು.
ಆದರೆ, ಯಾವುದೇ ತಪ್ಪನ್ನು ನಿರಾಕರಿಸಿರುವ ಮಲ್ಯ ಭಾರತದಲ್ಲಿ ಮೋಸ, ಕ್ರಿಮಿನಲ್ ಪಿತೂರಿ, ಅಕ್ರಮ ಹಣ ವರ್ಗಾವಣೆ ಮತ್ತು ಸಾಲದ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪ ಎದುರಿಸುತ್ತಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಸೇರಿದಂತೆ ಅವರ ಕೆಲವು ಕಂಪನಿಗಳು ಕಂಪೆನಿಗಳ ಕಾಯ್ದೆ, 2013 ಅನ್ನು ಉಲ್ಲಂಘಿಸಿದ ಆರೋಪಗಳನ್ನು ಮತ್ತು ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ವಿಧಿಸಿರುವ ಮಾನದಂಡಗಳನ್ನು ಎದುರಿಸುತ್ತಿವೆ.
2017ರಲ್ಲಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆಗಳು ಪ್ರಾರಂಭವಾದ ನಂತರ, ಸಾಲವನ್ನು ಮರುಪಾವತಿಸಲು ಸಿದ್ಧ ಎಂದು ಹೇಳಿದರು. ನಂತರ ಅವರ ವಿರುದ್ಧ ದಿವಾಳಿತನದ ಆದೇಶ ಬಂದ ನಂತರ, ಜುಲೈ 26 ರಂದು ಟ್ವೀಟ್ ಮಾಡಿದ ಮಲ್ಯ, “ಇಡಿ 6.2 ಸಾವಿರ ಕೋಟಿ ಸಾಲಕ್ಕೆ ವಿರುದ್ಧವಾಗಿ ಸರ್ಕಾರಿ ಬ್ಯಾಂಕುಗಳ ಆದೇಶದ ಮೇರೆಗೆ 14 ಸಾವಿರ ಕೋಟಿ ಮೌಲ್ಯದ ನನ್ನ ಆಸ್ತಿಯನ್ನು ಲಗತ್ತಿಸಿದೆ. ಅವರು 9 ಸಾವಿರ ಕೋಟಿ ಹಣವನ್ನು ಮರುಪಡೆಯುವ ಮತ್ತು 5 ಸಾವಿರ ಕೋಟಿಗಿಂತ ಹೆಚ್ಚಿನ ಭದ್ರತೆಯನ್ನು ಉಳಿಸಿಕೊಳ್ಳುವ ಬ್ಯಾಂಕುಗಳಿಗೆ ಸ್ವತ್ತುಗಳನ್ನು ಮರುಸ್ಥಾಪಿಸುತ್ತಾರೆ. ಬ್ಯಾಂಕುಗಳು ನನ್ನನ್ನು ದಿವಾಳಿಯಾಗುವಂತೆ ನ್ಯಾಯಾಲಯವನ್ನು ಕೇಳುತ್ತವೆ, ಏಕೆಂದರೆ ಅವರು ಹಣವನ್ನು ಇಡಿಗೆ ಹಿಂದಿರುಗಿಸಬೇಕಾಗಬಹುದು. ನಂಬಲಾಗದ್ದು'' ಎಂದು ಬರೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ