Explained: ಅಲ್ಲೂ ಇಲ್ಲ, ಇಲ್ಲೂ ಆಗುತ್ತೋ ಗೊತ್ತಿಲ್ಲ! ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು?

ಈಗ ಉಕ್ರೇನ್ ಯುದ್ಧ ಪೀಡಿತ ಸ್ಥಿತಿಯಲ್ಲಿ ಇರುವುದರಿಂದ, ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ನಮ್ಮ ದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಸುರಕ್ಷಿತವಾಗಿ ಉಕ್ರೇನ್‌ನಿಂದ ವಾಪಸ್ಸಾಗಿದ್ದಾರೆ. ಆದರೆ ಇದೀಗ ಅವರಿಗೆ ಓದು ಹಾಗೂ ಭವಿಷ್ಯದ ಚಿಂತೆ ಶುರುವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉಕ್ರೇನ್‌ನಲ್ಲಿ (Ukraine) ರಷ್ಯಾ (Russia) ನಡೆಸುತ್ತಿರುವ ಯುದ್ಧ (War) ಮುಂದುವರೆದಿದೆ, ಪ್ರತಿ ನಿತ್ಯ ನಾಗರಿಕರು (Citizen), ಸೈನಿಕರು (Soldiers) ಸೇರಿ ಅಸಂಖ್ಯಾತ ಜನ ಸಾಯುತ್ತಿದ್ದಾರೆ. ಹೀಗಾಗಿ ಉಕ್ರೇನ್ ಈಗ ಯುದ್ಧ ಪೀಡಿತ ರಾಷ್ಟ್ರ. ಆದರೆ, ಇದುವರೆಗೆ ಶಿಕ್ಷಣವನ್ನು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ (Medical) ಶಿಕ್ಷಣವನ್ನು ಪಡೆಯಲು ಜನಪ್ರಿಯ ಆಯ್ಕೆಯಾಗಿತ್ತು. ಈ ಕಾರಣದಿಂದಾಗಿ ಹಲವಾರು ಭಾರತೀಯ ವಿದ್ಯಾರ್ಥಿಗಳು (Indian Students) ಅಲ್ಲಿನ ವೈದ್ಯಕೀಯ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಈಗ ಉಕ್ರೇನ್ ಯುದ್ಧ ಪೀಡಿತ ಸ್ಥಿತಿಯಲ್ಲಿ ಇರುವುದರಿಂದ, ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ನಮ್ಮ ದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಸುರಕ್ಷಿತವಾಗಿ ಉಕ್ರೇನ್‌ನಿಂದ ವಾಪಸ್ಸಾಗಿದ್ದಾರೆ. ಆದರೆ ಇದೀಗ ಅವರಿಗೆ ಓದು ಹಾಗೂ ಭವಿಷ್ಯದ ಚಿಂತೆ ಶುರುವಾಗಿದೆ.

  10 ವರ್ಷಗಳವರೆಗೆ ವಿಸ್ತರಣೆಯಾಗುತ್ತಾ ಅವಧಿ?

  ವಿದೇಶಿ ವೈದ್ಯಕೀಯ ಪದವಿಧರರ ಪರವಾನಗಿಯು, ವೈದ್ಯಕೀಯ ಶಿಕ್ಷಣದ ಕೋರ್ಸ್ ಅನ್ನು ಪೂರ್ಣಗೊಳಿಸುವ ಅವಧಿಯನ್ನು 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದು ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ, ಉಕ್ರೇನ್‍ನಲ್ಲಿ ವೈದ್ಯಕೀಯ ಕೋರ್ಸ್ ಪಡೆದಿರುವ ಭಾರತೀಯರಿಗೆ, ವೈದ್ಯಕೀಯ ಮಂಡಳಿಗಳು ನಮ್ಮ ದೇಶದ ಆಸ್ಪತ್ರೆಗಳಲ್ಲಿ ಇಂಟರ್ನ್‍ಶಿಪ್ ಮಾಡುವ ವ್ಯವಸ್ಥೆ ಕಲ್ಪಿಸಿವೆ. ಆದರೆ ವೈದ್ಯಕೀಯ ಕೋರ್ಸ್‍ನ ಮಧ್ಯ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳು ಇಲ್ಲವಾದಂತಾಗಿದೆ.

  ಭಾರತದಲ್ಲಿ ಇವರ ಓದಿಗಿಲ್ವಾ ನಿರ್ಬಂಧ?

  ಪ್ರಸ್ತುತ, ವಿದೇಶಿ ಪದವಿಗಳನ್ನು ಹೊಂದಿರುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ಭಾರತೀಯ ಖಾಸಗಿ ಕಾಲೇಜಿಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಯಾವುದೇ ನಿಯಮಗಳು ಮತ್ತು ನಿಬಂಧನೆಗಳು ಇಲ್ಲ. ಪಾಶ್ಚಿಮಾತ್ಯ ದೇಶಗಳು, ಉಕ್ರೇನ್‍ಗೆ ಹೆಚ್ಚಿನ ಬೆಂಬಲ ನೀಡುತ್ತಿರುವುದರಿಂದ, ಸದ್ಯಕ್ಕೆ ನಡೆಯುತ್ತಿರುವ ಶಿಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಯೋಜನಗಳನ್ನು ಪಡೆಯುವ ಅದೃಷ್ಟ ಆ ದೇಶಗಳ ವಿದ್ಯಾರ್ಥಿಗಳಿಗೆ ದೊರಕಿದೆ.

  ಭಾರತೀಯ ವೈದ್ಯಕೀಯ ಶಿಕ್ಷಣದ ನಿಯಮಗಳು

  ಉಕೇನ್‍ನಲ್ಲಿ ಶಿಕ್ಷಣ ಪಡೆದ ಭಾರತೀಯ ವಿದ್ಯಾರ್ಥಿಗಳು ಮತ್ತು ತುಲನಾತ್ಮಕವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಪರಿಣಾಮಕಾರಿ ಚಿಂತನೆ ಮತ್ತು ವ್ಯವಸ್ಥೆಗಳನ್ನು ಮಾಡಬೇಕಿರುವ ಸಮಯವಿದು. ಏಕೆಂದರೆ ತಮ್ಮ ಶೈಕ್ಷಣಿಕ ವೃತ್ತಿಜೀವನಕ್ಕೆ ಅಡಚಣೆ ಉಂಟಾಗುವ ಅಪಾಯದಲ್ಲಿದ್ದಾರೆ ಅವರು.

  ಇದನ್ನೂ ಓದಿ: Explained: ಪೆಟ್ರೋಲ್ ಬೆಲೆ ಇಳಿಕೆಯಾಗ್ತಿರೋದು ಖುಷಿ ಪಡುವ ವಿಚಾರನಾ? ಭಾರತದ ಮೇಲೆ ಇದರ ಪರಿಣಾಮ ಏನು ಗೊತ್ತಾ?

  ಇಲ್ಲಿ ಮೊದಲಿನಿಂದ ಮತ್ತೆ ಓದಬೇಕಾ?

  ಪ್ರಸ್ತುತ ಇರುವ ನಿಯಮಗಳ ಅಡಿಯಲ್ಲಿ, ವಿದ್ಯಾರ್ಥಿಯು ಪದವಿಯನ್ನು ವಿದೇಶಿ ವಿಶ್ವವಿದ್ಯಾನಿಯದಿಂದ ಭಾರತಕ್ಕೆ ಬದಲಾಯಿಸಲು ಬಯಸಿದರೆ, ಆಕೆ / ಆತನಿಗೆ ಇರುವ ಏಕೈಕ ಆಯ್ಕೆ ಎಂದರೆ ಕೋರ್ಸ್ ಅನ್ನು ಮತ್ತೆ ಮೊದಲಿನಿಂದ ಆರಂಭಿಸುವುದು. ಆದರೆ, ತಮ್ಮ ಶೈಕ್ಷಣಿಕ ಪ್ರಗತಿಗೆ ಉಂಟಾಗಿರುವ ಅಡ್ಡಿಯಿಂದ ಹೊರಬರಲು ವಿದ್ಯಾರ್ಥಿಗಳಿಗೆ ಕೆಲವು ಆಯ್ಕೆಗಳಿವೆ.

  ಅವರು ಪರ್ಯಾವ ವೃತ್ತಿ ಆಯ್ಕೆಯ ಮೊರೆ ಹೋಗಬಹುದು ಅಥವಾ ತಮ್ಮ ದೇಶದಲ್ಲಿ ಮತ್ತೆ ಮೊದಲಿನಿಂದ ಕೋರ್ಸ್ ಪ್ರಾರಂಭಿಸಬಹುದು.
  ಇನ್ನೊಂದು ಆಯ್ಕೆ ಎಂದರೆ, ಅವರ ಮೂಲ ದೇಶದ ಸರಕಾರಗಳು, ಈ ಯುದ್ಧದ ಸಂದರ್ಭದಲ್ಲಿ, ಒಂದು ಸಮಿತಿಯನ್ನು ರಚಿಸುವುದು ಮತ್ತು ಶಿಕ್ಷಣದ ಗುಣಮಟ್ಟದ ಜೊತೆ ರಾಜಿ ಮಾಡಿಕೊಳ್ಳುವ ಸಾಧ್ಯತೆಯನ್ನು ತೊಡೆದು ಹಾಕಲು, ಅಧ್ಯಾಪಕರು ಮತ್ತು ಪಠ್ಯಕ್ರವನ್ನು ಜಾಗರೂಕತೆಯಿಂದ ಪರಿಶೀಲಿಸುವುದು.

  ವಿಶೇಷ ಸೌಲಭ್ಯ ಒದಗಿಸುತ್ತಾ ಭಾರತ ಸರ್ಕಾರ?

  ಈ ಹಂತದಲ್ಲಿ , ನಮ್ಮ ದೇಶದ ಸರಕಾರವು ಹಲವಾರು ಕಾನೂನು ನಿಬಂಧನೆಗಳನ್ನು ಜಾರಿಗೆ ತರಬೇಕಾಗುತ್ತದೆ. ಭಾರತದ ಪ್ರತೀ ರಾಜ್ಯಗಳು, ಪ್ರಸ್ತುತ ನಡೆಯುತ್ತಿರುವ ಶಿಕ್ಷಣದಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಸೂಚನೆಗೆ ತಕ್ಕಂತೆ ವಿಶೇಷ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು. ಭಾರತೀಯ ಸಂವಿಧಾನದ 21 ನೇ ವಿಧಿಯಲ್ಲಿ, ಸಮಾನತೆ ಮತ್ತು ವೈಯುಕ್ತಿಕ ಸ್ವಾತಂತ್ರ್ಯ ಹಾಗೂ ಶಿಕ್ಷಣದ ಹಕ್ಕಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ.

  ವಿಶೇಷ ನಿಬಂಧನೆಗಳ ಬಿಡುಗಡೆ ಆಗುತ್ತಾ?

  ಹಾಗಾಗಿ, ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸುವ ಹಕ್ಕನ್ನು ನೀಡಬೇಕು. ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು , ಶಿಕ್ಷಣ ಮಂತ್ರಿಗಳ ಜೊತೆ ಸೇರಿ, ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಅನುಗುಣವಾಗಿ, ನೊಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಆಗುವಂತ ವಿಶೇಷ ನಿಬಂಧನೆಗಳನ್ನು ಬಿಡುಗಡೆ ಮಾಡಬೇಕು.

  ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಾ?

  ಅಷ್ಟೇ ಅಲ್ಲದೇ , ವಿದ್ರ್ಯಾರ್ಥಿಗಳು ಒಗ್ಗಿಕೊಂಡಿರು ಪಠ್ಯಕ್ರಮ ಮತ್ತು ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು , ಸಂಸ್ಥೆಗಳನ್ನು ನಿರ್ಧರಿಸಲು ಪರೀಕ್ಷೆಗಳನ್ನು ನಡೆಸಬಹುದು ಮತ್ತು ಉಕ್ರೇನ್ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯಲ್ಲಿ ಸರಕಾರ ಸಡಿಲಿಕೆ ಮಾಡುವ ಬಗ್ಗೆ ಕೂಡ ಆಲೋಚಿಸಬಹುದು.

  ಭಾರತ ಸರಕಾರ ತೆಗೆದುಕೊಳ್ಳಬಹುದಾದ ಕ್ರಮಗಳು

  ದಾಖಲಾತಿ ಪ್ರಕ್ರಿಯೆ ಸುಗಮಗೊಳಿಸಲು, ವಿದ್ಯಾರ್ಥಿಗಳು ತಾವೇ ನೋಂದಾವಣಿ ಮಾಡಿಕೊಳ್ಳಲು ಅನುಕೂಲ ಆಗುವಂತ ಪೋರ್ಟಲ್ ಅನ್ನು ಸರಕಾರ ರಚಿಸಬೇಕು.ಪ್ರತೀ ವಿದ್ಯಾರ್ಥಿಗಳಿಗೆ ದಾಖಲಾತಿ ಸಿಗುವಂತೆ ನೋಡಿಕೊಳ್ಳ ಸಮಿತಿಯನ್ನು ರಚಿಸಬೇಕು.

  ಆಯ್ಕೆಗೆ ಹಕ್ಕು ವಿದ್ಯಾರ್ಥಿಗಳಿಗೆ ನೀಡುವುದು

  ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರೆಸಲು, ತಮ್ಮ ಇಷ್ಟದ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಬೇಕು.

  ಅಂತರಾಷ್ಟ್ರೀಯ ಮಟ್ಟದಲ್ಲಿ, ಈ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸಲು ವೀಸಾಗಳಿಗೆ ಅರ್ಜಿ ಸಲ್ಲಿಸಲು ಒಮ್ಮತವನ್ನು ನಿರ್ಮಿಸುವ ಪ್ರಯತ್ನಗಳು ಸರಕಾರದಿಂದ ನಡೆಯಬೇಕು.

  ದೆಹಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆ

  ತಮ್ಮ ಬೇಡಿಕೆಗಳನ್ನು ಕೇಂದ್ರ ಪ್ರಾಧಿಕಾರವು ಪೂರೈಸದಿದ್ದರೆ, ದೇಶದ ನಾಗರೀಕರಾಗಿ, ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶಿಕ್ಷಣವನ್ನು ರಕ್ಷಿಸಿಕೊಳ್ಳಲು ಭಾರತದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವ ಹಕ್ಕನ್ನು ಹೊಂದಿದ್ದಾರೆ.

  ಇತ್ತೀಚೆಗೆ ಪ್ರವಾಸಿ ಲೀಗಲ್ ಸೆಲ್ ಈ ರೀತಿಯ ಮನವಿಯನ್ನು ಹೈಕೋರ್ಟ್‍ನಲ್ಲಿ ಸಲ್ಲಿಸಿದೆ. ಭಾರತದಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿದೇಶಿ ವೈದ್ಯಕೀಯ ಪದವೀಧರರ ಪರವಾನಗಿ ನಿಯಮಗಳು, 2021 ರ ಅಡಿಯಲ್ಲಿ ಈ ರೀತಿ ವೈದ್ಯರ ಪದವಿ ಪಡೆಯಬಹುದು;

  • 54 ತಿಂಗಳ ವೈದ್ಯಕೀಯ ಪದವಿ ಆಗಿದ್ದಲ್ಲಿ.

  • ವಿದ್ಯಾರ್ಥಿಯು ಪದವಿ ಪಡೆಯುತ್ತಿರುವ ವಿಶ್ವವಿದ್ಯಾನಿಲಯದಲ್ಲಿ, ಕನಿಷ್ಟ 12 ತಿಂಗಳ ದೀರ್ಘ ಇಂಟರ್ನ್‍ಶಿಪ್ ಟ್ರ್ಯಾಕ್ ಇದ್ದಲ್ಲಿ.

  • ವಿಶ್ವ ಆರೋಗ್ಯ ಸಂಸ್ಥೆಯಿಂದ ವಿದೇಶಿ ವಿಶ್ವವಿದ್ಯಾನಿಲಯ ಅನುಮೋದನೆ ಪಡೆದಿದ್ದರೆ, ಕಲಿಕೆಯ ಮಾಧ್ಯಮ ಇಂಗ್ಲೀಷ್ ಆಗಿರುತ್ತದೆ.

  • ವಿದ್ಯಾರ್ಥಿಯು , ಭಾರತ ಸರಕಾರ/ಎನ್‍ಎಮ್‍ಸಿ/ ಎಮ್‍ಸಿಐ ಯಿಂದ ಅನುಮತಿ ಪಡೆದಿರಬೇಕು.

  • ಭಾರತದಿಂದ 12 ತಿಂಗಳ ಇಂಟರ್ನ್‍ಶಿಪ್ ರೆಕಾರ್ಡ್ ಇರಬೇಕು.

  • ಅಂತಿಮವಾಗಿ , ವಿದ್ಯಾರ್ಥಿ ಪರವಾನಗಿ ಪಡೆಯಲು ನ್ಯಾಶನಲ್ ಎಕ್ಸಿಟ್ ಪರೀಕ್ಷೆಯನ್ನು ಪಾಸು ಮಾಡಿರಬೇಕು. ಉಕ್ರೇನಿನ ಮರಳಿರುವ ವಿದ್ಯಾರ್ಥಿಗಳು, ಭಾರತದಲ್ಲಿ ಪದವಿ ಪೂರ್ಣಗೊಳಿಸಲು, ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯನ್ನು ಪಾಸು ಮಾಡಬೇಕು.


  ಅಂತರಾಷ್ಟ್ರೀಯ ಸಹಕಾರ

  ಮೇ 15 ರಂದು , ಯುದ್ಧದಿಂದ ಹಾನಿಗೊಳಗಾದ ಸನ್ನಿವೇಶಗಳಲ್ಲಿ ಶಿಕ್ಷಣವನ್ನು ರಕ್ಷಿಸುವ ರಾಜಕೀಯ ಪ್ರತಿಜ್ಞೆಯಾದ ಸುರಕ್ಷಿತ ಶಾಲಾ ಘೋಷಣೆಯನ್ನು ಅನುಮೋದಿಸಲಾಯಿತು. ಸುಮಾರು 111 ರಾಜ್ಯಗಳು, ಈ ಘೋಷಣೆಯ ಅನುಷ್ಟಾನವನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲು, ಅಗತ್ಯ ವಿನಿಮಯ, ಸಹಯೋಗ ಮತ್ತು ಅನುಮೋದನೆಗಾಗಿ ಈ ಘೋಷಣೆಯಲ್ಲಿ ವಾಗ್ದಾನ ಮಾಡಿವೆ.

  ಈ ಹಿಂದಿನ ಯುದ್ಧಗಳಲ್ಲಿ ಏನಾಗಿತ್ತು?

  ಈ ಹಿಂದೆ ಯುದ್ಧಗಳು ನಡೆದಾಗ, ಯುನೈಟೆಡ್ ನೇಶನ್ಸ್ ಚಿಲ್ಡ್ರನ್ ಫಂಡ್ , ವಿವಿಧ ಕಾರ್ಯಕ್ರಮಗಳ ಯೋಜನೆಗಳೊಂದಿಗೆ ಮುಂದೆ ಬಂದಿತ್ತು. ವಿಶೇಷವಾಗಿ, ಯುಎಸ್‍ಎಐಡಿ , ಎಜುಕೇಶನ್ ಇನ್ ಕ್ರೈಸಿಸ್ ಅಂಡ್ ಕಾನ್‍ಫ್ಲಿಕ್ಟ್ ನೆಟ್‍ವರ್ಕ್ ಇಂದು ಯುದ್ಧದಿಂದ ಹಾನಿಗೊಳಗಾದ ದೇಶಗಳಲ್ಲಿ ಶಿಕ್ಷಣವನ್ನು ಸುಧಾರಿಸಲು ಸಹಾಯ ಮಾಡಿದೆ.

  ಯುದ್ಧ ಪೀಡಿತ ದೇಶಗಳಿಂದ ಬಂದು, ಶಿಕ್ಷಣದಿಂದ ವಂಚಿತರಾಗುವ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಣವನ್ನು ಮುಂದುವರೆಸುವುದನ್ನು ಖಚಿತಪಡಿಸಿಕೊಳ್ಳಲು, ಏಜೆನ್ಸಿಗಳು ಈಗ ರೇಡಿಯೋ ಪ್ರೋಗ್ರಾಮಿಂಗ್ ಅಥವಾ ಇಂಟರ್‍ನೆಟ್ ರೂಪದಲ್ಲಿನ , ಹೊಂದಾಣಿಕೆಗೆ ಅನುಕೂಲ ಇರುವಂತಹ ಶಿಕ್ಷಣದ ವಿಧಾನಗಳನ್ನು ರಚಿಸಿದರೆ ಉತ್ತಮ.

  ಹಿಂದಿನ ಸಂಗತಿಗಳನ್ನು ಗಮನಿಸಿ ಹೇಳುವುದಾದರೆ, ಇಂತಹ ಯುದ್ಧ ಪೀಡಿತ ಸಂಕಷ್ಟಗಳ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು, ತಾತ್ಕಾಲಿಕವಾಗಿ ಮುಚ್ಚುತ್ತವೆ. ಆದರೆ ಅವುಗಳು ಮತ್ತೆ ಪ್ರಾರಂಭವಾದಾಗ ಹೊಸ ಉತ್ಸಾಹ ಮತ್ತು ನೂತನ ಸಂಶೋಧನಾ ಮಾರ್ಗಗಳನ್ನು ಪರಿಚಯಿಸುತ್ತವೆ.

  ಈ ರೀತಿಯ ಸಂದರ್ಭಗಳಲ್ಲಿ ಸ್ಥಳವನ್ನು ಬದಲಾಯಿಸುವವರ ಪ್ರಮುಖ ಆದ್ಯತೆಗಳು, ಸುರಕ್ಷಿತ ವಿಮೆ, ವಸತಿಗೆ ಜಾಗ ಹುಡುಕುವುದು, ತಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸುವುದು , ತಮ್ಮ ಶಿಕ್ಷಣವನ್ನು ಮುಂದುವರೆಸಲು ಮಾರ್ಗ ಹುಡುಕುವುದು ಮತ್ತು ಮಾನಸಿಕವಾಗಿ ಬೆಂಬಲವನ್ನು ಪಡೆಯಲು ಪ್ರಯತ್ನಸುವುದು.

  ಜಾಗತಿಕ ಶಿಕ್ಷಣ ವ್ಯವಸ್ಥೆಯ ರಚನೆ ಆಗಬೇಕು

  ಸದ್ಯದ ಪರಿಸ್ಥಿತಿಯಲ್ಲಿ , ಒಂದು ಕರ್ತವ್ಯ ಎನ್ನುವ ರೀತಿಯಲ್ಲಿ, ಯೂಎನ್ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು ಮತ್ತು ವಿಶ್ವ ವಿದ್ಯಾನಿಲಯಗಳನ್ನು ಒಳಗೊಂಡ , ಜಾಗತಿಕ ವ್ಯವಸ್ಥೆಯನ್ನು ರಚಿಸುವ ಮತ್ತು ವಿದ್ಯಾರ್ಥಿಗಳ ವಿನಿಮಯ ಮತ್ತು ವರ್ಗಾವಣೆಯ ಅಂತಾರಾಷ್ಟ್ರೀಯ ಒಪ್ಪಂದವನ್ನು ರೂಪಿಸಲು, ವಿಶ್ವದ ಇನ್ನಿತರ ದೇಶಗಳ ಶಿಕ್ಷಣ ಸಂಸ್ಥೆಗಳ ಜೊತೆ ಕೈಜೋಡಿಸುವ ಅಗತ್ಯ ಇದೆ.

  ಇದನ್ನೂ ಓದಿ: Explained: ಯುದ್ಧದಾಹಿ ರಷ್ಯಾಕ್ಕಿಲ್ಲ 'ನೆಚ್ಚಿನ ರಾಷ್ಟ್ರ'ದ ಸ್ಥಾನಮಾನ! ಇದರಿಂದ ಲಾಭವೋ? ನಷ್ಟವೋ?

  ಸದ್ಯ ಇರುವ ಸಂಕಷ್ಟಕರ ಸ್ಥಿತಿಯಲ್ಲಿ ಉಕ್ರೇನ್‍ನಿಂದ ಮರಳಿರುವ ವಿದ್ಯಾರ್ಥಿಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲು, ತುಲನಾತ್ಮಕವಾಗಿ ಹೆಚ್ಚು ಉತ್ತಮವಾದ ಸಂಸ್ಥೆಗಳಿಗೆ ಒಮ್ಮತ ಇರಬೇಕು.

  ಯೂಎನ್ ಮತ್ತು ಯುನೈಟೆಡ್ ನೇಶನ್ ಫಾರ್ ಯೂತ್, ಯುದ್ಧದ ಕಾರಣದಿಂದ ಶಿಕ್ಷಣ ಸ್ಥಗಿತಗೊಳಿಸಲ್ಪಟ್ಟ ವಿದ್ಯಾರ್ಥಿಗಳನ್ನು ಸ್ವೀಕರಿಸಲು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಗೆ ಧನ ಸಹಾಯ ಮಾಡಬೇಕು. ಇದರಿಂದ ಅವರ ವೃತ್ತಿಜೀವನಕ್ಕೆ ಅಮೂಲ್ಯವಾಗಿರುವ ವರ್ಷಗಳನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗುವುದಿಲ್ಲ.
  Published by:Annappa Achari
  First published: