HOME » NEWS » Explained » EXPLAINED WHAT IS THE ELECTORAL BOND SCHEME AND WHY IS IT BEING OPPOSED BY TRANSPARENCY ACTIVISTS STG LG

Explained: ಚುನಾವಣಾ ಬಾಂಡ್ ಯೋಜನೆ ಅಂದ್ರೆ ಏನು..? ಇದಕ್ಕೆ ತೀವ್ರ ವಿರೋಧ ಏಕೆ ಗೊತ್ತಾ..?

ಆಡಳಿತಾರೂಢ ಬಿಜೆಪಿ ಈ ಯೋಜನೆಯ ದೊಡ್ಡ ಫಲಾನುಭವಿ. 2017-18 ಮತ್ತು 2018-19 ಆರ್ಥಿಕ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಒಟ್ಟು 2,760.20 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ 1,660.89 ಕೋಟಿ ರೂ. ಅಥವಾ ಶೇ. 60. 17 ರಷ್ಟು ದೇಣಿಗೆ ಬಿಜೆಪಿಗೆ ಬಂದಿದೆ.

news18-kannada
Updated:March 27, 2021, 10:19 AM IST
Explained: ಚುನಾವಣಾ ಬಾಂಡ್ ಯೋಜನೆ ಅಂದ್ರೆ ಏನು..? ಇದಕ್ಕೆ ತೀವ್ರ ವಿರೋಧ ಏಕೆ ಗೊತ್ತಾ..?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.27): ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಬಾಂಡ್‌ ಸ್ಕೀಂ ಮತ್ತೆ ಮುನ್ನೆಲೆಗೆ ಬರುತ್ತಿದೆ. ಈ ಯೋಜನೆಗೆ ಹಲವು ಚಳವಳಿಗಾರರು, ಹಲವು ಸಂಘಟನೆಗಳು ಹಾಗೂ ಹಲವರ ವಿರೋಧ ಕಳೆದ 4 ವರ್ಷಗಳಿಂದಲೂ ಇದೆ. ಸದ್ಯ, ಪ್ರಮುಖ ರಾಜ್ಯಗಳ ಚುನಾವಣೆಗೆ ಮುನ್ನ ಹೊಸ ಚುನಾವಣಾ ಬಾಂಡ್‌ಗಳ ಮಾರಾಟವನ್ನು ತಡೆಹಿಡಿಯಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಬುಧವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ. ಈ ಹಿನ್ನೆಲೆ ಈ ವಿವಾದಾತ್ಮಕ ಯೋಜನೆ ಮತ್ತೆ ಈಗ ಚರ್ಚೆಗೆ ಗ್ರಾಸವಾಗುತ್ತಿದೆ.

ಚುನಾವಣಾ ಬಾಂಡ್‌ಗಳು ಯಾವುವು?

2017 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣವನ್ನು ದೇಣಿಗೆ ನೀಡಲು ಬಳಸುವ ಬಡ್ಡಿರಹಿತ ಸಾಧನಗಳಾಗಿವೆ. ಇದರ ಮೂಲಕ ದೇಣಿಗೆ ನೀಡಿದರೆ ಖರೀದಿದಾರ ಅಥವಾ ಪಾವತಿಸುವವರ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರುವುದಿಲ್ಲ ಮತ್ತು ರಾಜಕೀಯ ಪಕ್ಷವನ್ನು ಇಲ್ಲಿ ಅದರ ಮಾಲೀಕರು ಎಂದು ಭಾವಿಸಲಾಗುತ್ತದೆ.

ಈ ಬಾಂಡ್‌ಗಳನ್ನು 1,000 ರೂ., 10,000 ರೂ, 1 ಲಕ್ಷ ರೂ. ಮತ್ತು 1 ಕೋಟಿ ರೂ.ಗಳ ಗುಣಾಕಾರಗಳಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆಗಿದೆ. ದೇಣಿಗೆ ನೀಡುವವರು ತಮ್ಮ ಆಯ್ಕೆಯ ಪಕ್ಷದ ಪರ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ನಂತರ ದಾನ ಮಾಡಬಹುದು. ಬಳಿಕ ಆ ರಾಜಕೀಯ ಪಕ್ಷವು ತನ್ನ ಪರಿಶೀಲಿಸಿದ ಖಾತೆಯ ಮೂಲಕ 15 ದಿನಗಳಲ್ಲಿ ಹಣವನ್ನು ಪಡೆಯಬಹುದು. ಒಬ್ಬ ವ್ಯಕ್ತಿ ಅಥವಾ ಕಂಪನಿಯು ಖರೀದಿಸಬಹುದಾದ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

Belagavi Lok Sabha Bypoll: ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ತಂತ್ರ-ಪ್ರತಿತಂತ್ರ...!

ಒಂದು ವೇಳೆ, ಆ ರಾಜಕೀಯ ಪಕ್ಷವು 15 ದಿನಗಳಲ್ಲಿ ಹಣ ಪಡೆದುಕೊಳ್ಳಲಿದ್ದರೆ, ಆ ಸಂಗ್ರಹಿಸದ ಬಾಂಡ್‌ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಎಸ್‌ಬಿಐ ಜಮಾ ಮಾಡುತ್ತದೆ. ಮಾರ್ಚ್ 2018 ರಿಂದ ಜನವರಿ 2021 ರವರೆಗೆ ಹದಿನೈದು ಹಂತಗಳಲ್ಲಿ 6534.78 ಕೋಟಿ ರೂ.ಗಳ ಒಟ್ಟು 12,924 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

ಚುನಾವಣಾ ಬಾಂಡ್‌ ಘೋಷಣೆಯ ಸಮಯದಲ್ಲಿ, ಚುನಾವಣಾ ಬಾಂಡ್‌ಗಳು ಕಂಪೆನಿಗಳಿಗೆ ಅನಾಮಧೇಯ ದೇಣಿಗೆ ನೀಡುವ ಮಾರ್ಗವೆಂದು ಹೇಳಲಾಗಿತ್ತು. ಆದರೆ, ಅಧಿಸೂಚನೆ ಬಂದ ಬಳಿಕ ವ್ಯಕ್ತಿಗಳು, ವ್ಯಕ್ತಿಗಳ ಗುಂಪುಗಳು, ಎನ್‌ಜಿಒಗಳು, ಧಾರ್ಮಿಕ ಮತ್ತು ಇತರ ಟ್ರಸ್ಟ್‌ಗಳು ಸಹ ತಮ್ಮ ವಿವರಗಳನ್ನು ಬಹಿರಂಗಪಡಿಸದೆ ಚುನಾವಣಾ ಬಾಂಡ್‌ಗಳ ಮೂಲಕ ದಾನ ಮಾಡಲು ಅನುಮತಿ ಇದೆ ಎಂದು ತಿಳಿದುಬಂದಿದೆ.ಚುನಾವಣಾ ಬಾಂಡ್‌ಗಳಿಗೆ ಪಾರದರ್ಶಕತೆ ಪರ ಸಂಘಟನೆಗಳು, ಜನರ ವಿರೋಧವೇಕೆ..?

ಚುನಾವಣಾ ಬಾಂಡ್‌ಗಳನ್ನು ದಾನ ಮಾಡುವವರಿಗೆ ಅನಾಮಧೇಯತೆಯು ಇಲ್ಲಿ ವಿವಾದದ ವಿಷಯವಾಗಿದೆ. ಹಣಕಾಸು ಕಾಯ್ದೆ 2017 ರ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಗಳನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಿತು. ಪ್ರತಿವರ್ಷ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸುವ ತಮ್ಮ ದೇಣಿಗೆ ವರದಿಗಳನ್ನು ನೀಡುವಾಗ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡುವವರ ವಿವರಗಳನ್ನು ಬಹಿರಂಗಪಡಿಸಬೇಕಾಗಿಲ್ಲ.

ಇದರರ್ಥ ಮತದಾರರು ಯಾವ ವ್ಯಕ್ತಿ, ಕಂಪನಿ, ಅಥವಾ ಸಂಸ್ಥೆ ಯಾವ ಪಕ್ಷಕ್ಕೆ ಧನಸಹಾಯ ನೀಡಿದೆ ಮತ್ತು ಎಷ್ಟು ಹಣ ನೀಡುತ್ತಿದೆ ಎಂಬುದು ತಿಳಿದಿರುವುದಿಲ್ಲ. ಚುನಾವಣಾ ಬಾಂಡ್‌ಗಳನ್ನು ಪರಿಚಯಿಸುವ ಮೊದಲು, ರಾಜಕೀಯ ಪಕ್ಷಗಳು 20,000 ರೂ. ಗೂ ಹೆಚ್ಚು ದೇಣಿಗೆ ನೀಡುವ ಎಲ್ಲ ದಾನಿಗಳ ವಿವರಗಳನ್ನು ಬಹಿರಂಗಪಡಿಸಬೇಕಾಗಿತ್ತು. ಈ ಬದಲಾವಣೆಯು ನಾಗರಿಕರ ‘ತಿಳಿಯುವ ಹಕ್ಕನ್ನು’ ಉಲ್ಲಂಘಿಸುತ್ತದೆ ಮತ್ತು ರಾಜಕೀಯ ಪಕ್ಷಗಳು ಮತ್ತಷ್ಟು ಲೆಕ್ಕವಿಲ್ಲದಷ್ಟು ಹಣ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಇದಕ್ಕೆ ಹಲವು ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

“ಇದಲ್ಲದೆ, ಚುನಾವಣಾ ಬಾಂಡ್‌ಗಳು ನಾಗರಿಕರಿಗೆ ಯಾವುದೇ ವಿವರಗಳನ್ನು ನೀಡುವುದಿಲ್ಲವಾದರೂ, ಸರ್ಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಡೇಟಾವನ್ನು ಬೇಡಿಕೆಯ ಮೂಲಕ ದಾನಿಗಳ ವಿವರಗಳನ್ನು ಪಡೆಯಬಹುದು. ಈ ಹಿನ್ನೆಲೆ ತೆರಿಗೆದಾರರನ್ನು ಮಾತ್ರ ಈ ದೇಣಿಗೆಗಳ ಮೂಲ ತಿಳಿದುಕೊಳ್ಳದಂತೆ ಮಾಡುತ್ತದೆ. ಆದರೆ, ತೆರಿಗೆದಾರರ ಹಣದಿಂದಲೇ ಬಾಂಡ್‌ಗಳ ಮಾರಾಟ, ಖರೀದಿಗೆ ಅನುಕೂಲವಾಗುವಂತೆ ಮುದ್ರಣಕ್ಕೆ ಕೇಂದ್ರ ಸರ್ಕಾರವು ನೀಡುತ್ತದೆ'' ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಚುನಾವಣಾ ಬಾಂಡ್‌ಗಳ ವಿರುದ್ಧ ನಾಯಾಲಯದಲ್ಲಿ ಹೇಳಿಕೆ ನೀಡಿತ್ತು.

ಚುನಾವಣಾ ಬಾಂಡ್‌ಗಳು ದೇಣಿಗೆಯ ಮಾರ್ಗವಾಗಿ ಎಷ್ಟು ಜನಪ್ರಿಯವಾಗಿವೆ?

ಈ ಬಾಂಡ್‌ ಸ್ಕೀಂ ಜಾರಿಗೆ ಬಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಅವರು ದಾನಿಗಳಿಗೆ ನೀಡುವ ಅನಾಮಧೇಯತೆಯಿಂದಾಗಿ, ಚುನಾವಣಾ ಬಾಂಡ್‌ಗಳು ದೇಣಿಗೆ ನೀಡುವ ಅತ್ಯಂತ ಜನಪ್ರಿಯ ಮಾರ್ಗವಾಗಿದೆ. 2018-19ರ ಆರ್ಥಿಕ ವರ್ಷದ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯಕ್ಕಿಂತ ಅರ್ಧಕ್ಕಿಂತ ಹೆಚ್ಚಿನವು ಚುನಾವಣಾ ಬಾಂಡ್‌ಗಳ ದೇಣಿಗೆಯಿಂದ ಬಂದಿವೆ ಎಂದು ಎಡಿಆರ್‌ ಅಂದಾಜಿಸಿದೆ.

ಆಡಳಿತಾರೂಢ ಬಿಜೆಪಿ ಈ ಯೋಜನೆಯ ದೊಡ್ಡ ಫಲಾನುಭವಿ. 2017-18 ಮತ್ತು 2018-19 ಆರ್ಥಿಕ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಒಟ್ಟು 2,760.20 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ 1,660.89 ಕೋಟಿ ರೂ. ಅಥವಾ ಶೇ. 60. 17 ರಷ್ಟು ದೇಣಿಗೆ ಬಿಜೆಪಿಗೆ ಬಂದಿದೆ.

ಚುನಾವಣಾ ಬಾಂಡ್‌ಗಳ ಬಗ್ಗೆ ಚುನಾವಣಾ ಆಯೋಗದ ನಿಲುವು ಏನು?

2017 ರಿಂದಲೇ ಈ ಯೋಜನೆಗೆ ಚುನಾವಣಾ ಆಯೋಗ ವಿರೋಧ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ವಿರುದ್ಧವಾದ ನಿಲುವುಗಳನ್ನು ತೆಗೆದುಕೊಂಡಿರುವುದರಿಂದ ಈ ವಿಚಾರವು ಮಹತ್ವದ್ದಾಗಿದೆ. ಕಾನೂನಿನಲ್ಲಿ ಮಾಡಿದ ಬದಲಾವಣೆಗಳು "ಗಂಭೀರ ಪರಿಣಾಮಗಳನ್ನು" ಉಂಟುಮಾಡುತ್ತದೆ ಎಂದು ಚುನಾವಣಾ ಆಯೋಗ ಹೇಳುತ್ತದೆ.

ಚುನಾವಣಾ ಬಾಂಡ್‌ಗಳು ಸರ್ಕಾರದ ಹಕ್ಕುಗಳಿಗೆ ವಿರುದ್ಧವಾಗಿ ರಾಜಕೀಯ ಧನ ಸಹಾಯದಲ್ಲಿ ಪಾರದರ್ಶಕತೆಯನ್ನು ಹಾಳುಮಾಡುತ್ತವೆ ಎಂದು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಚುನಾವಣಾ ಆಯೋಗ ತಿಳಿಸಿತ್ತು.

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳು ರಾಜಕೀಯ ಪಕ್ಷಗಳ ಧನಸಹಾಯದಲ್ಲಿ ಪಾರದರ್ಶಕತೆಯ ಮೇಲೆ ಹೇಗೆ “ಗಂಭೀರ ಪರಿಣಾಮ” ಉಂಟುಮಾಡುತ್ತವೆ ಎಂಬುದನ್ನು ವಿವರಿಸುವುದರ ಜೊತೆಗೆ, 2016 ಮತ್ತು 2017 ರ ಸತತ ಎರಡು ಹಣಕಾಸು ಕಾಯಿದೆಗಳ ಮೂಲಕ ವಿವಿಧ ಪ್ರಮುಖ ಕಾನೂನುಗಳಿಗೆ ಮಾಡಿದ ತಿದ್ದುಪಡಿಗಳನ್ನು ತಂದಿದ್ದಕ್ಕೆ ಕಾನೂನು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ, ಈ
ತಿದ್ದುಪಡಿಯನ್ನು "ಮರುಪರಿಶೀಲಿಸಲು" ಮತ್ತು "ಮಾರ್ಪಡಿಸಲು" ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.
Published by: Latha CG
First published: March 27, 2021, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories