ಆ್ಯಸಿಡ್ ಅಟ್ಯಾಕ್ (Acid Attack).. ಈ ಶಬ್ದ (Word) ಕೇಳಿದ ತಕ್ಷಣವೇ ಹಾರ್ಟ್ (Heart) ಒಮ್ಮೆ ಜೋರಾಗಿ ಹೊಡೆದುಕೊಳ್ಳುತ್ತದೆ, ಕೈಕಾಲು ನಡುಗಲು ಪ್ರಾರಂಭವಾಗುತ್ತದೆ. ಯಾಕೆಂದ್ರೆ ಆ್ಯಸಿಡ್ ಅಟ್ಯಾಕ್ ಎಂದರೇನು? ಅದರ ಪರಿಣಾಮವೇನು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಆ್ಯಸಿಡ್ ದಾಳಿ ಎಂಬ ಶಬ್ದ ಕೇಳಿದರೇ ಇಲ್ಲೆಲ್ಲೋ ಇರುವ ನಮಗೆ ಭಯವಾಗುತ್ತದೆ. ಹೀಗಿದ್ದಾಗ ಆ್ಯಸಿಡ್ ದಾಳಿಗೆ ಒಳಗಾದವರ (victims) ಪರಿಸ್ಥಿತಿ ಹೇಗಿರಬೇಡ? ಆ್ಯಸಿಡ್ ದಾಳಿ ನಡೆಸುವವರು (accused) ಎಂತಹ ರಾಕ್ಷಸರಾಗಿರಬೇಡ? ಮೊನ್ನೆಯಷ್ಟೇ ಬೆಂಗಳೂರಿನಲ್ಲಿ (Bengaluru) ಇಂಥದ್ದೇ ರಾಕ್ಷಸೀಕೃತ್ಯ ನಡೆದು ಹೋಗಿದೆ. ಭಗ್ನ ಪ್ರೇಮಿಯೊಬ್ಬ (Lover) ಪ್ರೀತಿ (Love) ನಿರಾಕರಿಸಿದ ಯುವತಿ (Girl) ಮೇಲೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದಾನೆ. ಇದೀಗ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇದೀಗ ನಮ್ಮಲ್ಲಿ ಮೂಡುವ ಪ್ರಶ್ನೆ ಇದನ್ನು ತಡೆಯುವುದು ಹೇಗೆ? ಇದಕ್ಕೆ ಯಾವ ಶಿಕ್ಷೆ ಇದೆ ಅಂತ. ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ಆ್ಯಸಿಡ್ ದಾಳಿ ಎಂದರೇನು?
ಆ್ಯಸಿಡ್ ದಾಳಿ ಬಗ್ಗೆ ನಮಗೆ ಗೊತ್ತುಯ ಆದರೆ ಅದರ ಸರಿಯಾದ ವ್ಯಾಖ್ಯಾನ ಅಂದರೆ ಆಸಿಡ್ ಎಸೆಯುವಿಕೆ, ವಿಟ್ರಿಯಾಲ್ ದಾಳಿ, ಅಥವಾ ವಿಟ್ರಿಯೋಲೇಜ್ ಎಂದೂ ಕರೆಯುತ್ತಾರೆ. ಇದು ಹಿಂಸಾತ್ಮಕ ಆಕ್ರಮಣದ ಒಂದು ರೂಪವಾಗಿದೆ. ಇದು ಆ್ಯಸಿಡ್ ಅಥವಾ ಅದೇ ರೀತಿಯ ನಾಶಕಾರಿ ವಸ್ತುವನ್ನು ಇನ್ನೊಬ್ಬರ ದೇಹದ ಮೇಲೆ ಎಸೆಯುವ ಕ್ರಿಯೆಯನ್ನು ಒಳಗೊಂಡಿರುತ್ತದೆ.
ಆರೋಪಿಗಳು ಸಾಮಾನ್ಯವಾಗಿ ಯಾವ ಆ್ಯಸಿಡ್ ಬಳಸುತ್ತಾರೆ?
ಈ ದಾಳಿಗಳಲ್ಲಿ ಸಾಮಾನ್ಯವಾಗಿ ಬಳಸುವ ಆಮ್ಲಗಳೆಂದರೆ ಸಲ್ಫ್ಯೂರಿಕ್ ಮತ್ತು ನೈಟ್ರಿಕ್ ಆಮ್ಲ. ಹೈಡ್ರೋಕ್ಲೋರಿಕ್ ಆಮ್ಲವನ್ನು ಕೆಲವೊಮ್ಮೆ ಬಳಸಲಾಗುತ್ತದೆ ಆದರೆ ಕಡಿಮೆ ಹಾನಿಕಾರಕವಾಗಿದೆ. ಇನ್ನು ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ನಂತಹ ಬಲವಾದ ಕ್ಷಾರೀಯ ವಸ್ತುಗಳ ಜಲೀಯ ದ್ರಾವಣಗಳನ್ನು ಬಳಸಲಾಗುತ್ತದೆ
ಸಾಮಾನ್ಯವಾಗಿ ಈ ದಾಳಿಯ ಉದ್ದೇಶವೇನು?
ಇದರ ಹಿಂದೆ ಹಲವು ಉದ್ದೇಶಗಳು ಇರಬಹುದು. ಮತ್ತೊಬ್ಬರನ್ನು ವಿಕಾರಗೊಳಿಸುವ, ಅಂಗವಿಕಲಗೊಳಿಸುವ, ಚಿತ್ರಹಿಂಸೆ ನೀಡುವ ಅಥವಾ ಕೊಲ್ಲುವ ಉದ್ದೇಶದಿಂದ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಈ ದಾಳಿಯಲ್ಲಿ ಆರೋಪಿಗಳು ತಮ್ಮ ಎದುರಾಳಿಗಳ ಮೇಲೆ ನಾಶಕಾರಿ ದ್ರವಗಳನ್ನು ಎಸೆಯುತ್ತಾರೆ, ಸಾಮಾನ್ಯವಾಗಿ ಅವರ ಮುಖದ ಮೇಲೆ ಎರೆಚಿ, ಚರ್ಮದ ಅಂಗಾಂಶವನ್ನು ಹಾನಿಗೊಳಿಸುತ್ತಾರೆ.
ಇದನ್ನೂ ಓದಿ: Explained: ಭಾರತದಲ್ಲಿ ಬಿಸಿ ಅಲೆ ಉಂಟಾಗಲು ಕಾರಣವೇನು? ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?
ಆ್ಯಸಿಡ್ ದಾಳಿಯಿಂದ ಏನಾಗುತ್ತದೆ?
ಆ್ಯಸಿಡ್ ಬಿದ್ದ ಜಾಗದಲ್ಲಿ ಚರ್ಮ ಸಂಪೂರ್ಣ ಸುಟ್ಟುಹೋಗುತ್ತದೆ. ಕೆಲವೊಮ್ಮೆ ಮೂಳೆಗಳನ್ನೂ ಸಹ ಇವು ಕರಗಿಸುತ್ತವೆ. ಆ್ಯಸಿಡ್ ದಾಳಿಗಳು ಸಾಮಾನ್ಯವಾಗಿ ಶಾಶ್ವತ ಕುರುಡುತನ, ಇನ್ನಿತರ ರೀತಿಯ ಅಂಗವಿಕಲತೆಗೆ ಕಾರಣವಾಗುತ್ತದೆ.
ಆ್ಯಸಿಡ್ ದಾಳಿ ಪ್ರಕರಣಗಳು
ಇಂದು ಪ್ರಪಂಚದ ಅನೇಕ ಭಾಗಗಳಲ್ಲಿ ಆಸಿಡ್ ದಾಳಿಗಳು ವರದಿಯಾಗಿವೆ, ಆದರೂ ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ. 1999 ಮತ್ತು 2013ರ ನಡುವೆ, ಒಟ್ಟು 3,512 ಬಾಂಗ್ಲಾದೇಶದ ಜನರು ಆಸಿಡ್ ದಾಳಿಗೆ ಒಗಾಗಿದ್ದಾರೆ. ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕಾನೂನು ಮತ್ತು ನಿಯಂತ್ರಣದ ಆಧಾರದ ಮೇಲೆ 2002 ರಿಂದ ಪ್ರತಿ ವರ್ಷ ಪ್ರಕರಣಗಳ ದರವು 15%–20% ರಷ್ಟು ಕಡಿಮೆಯಾಗಿದೆ. ಪ್ರತಿ ವರ್ಷ 250-300 ಘಟನೆಗಳು ವರದಿಯಾಗುತ್ತವೆ, ಆದರೆ "ಆಸಿಡ್ ಸರ್ವೈವರ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಪ್ರಕಾರ, ನಿಜವಾದ ಸಂಖ್ಯೆ 1,000 ಮೀರಬಹುದು".
ಯಾರ್ಯಾರ ಮೇಲೆ ನಡೆಯುತ್ತವೆ ದಾಳಿ?
ಸಾಮಾನ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ಅಟ್ಯಾಕ್‌ಗಳು ನಡೆಯುತ್ತವೆ. ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಪುರುಷರ ಮೇಲೂ ಆ್ಯಸಿಡ್ ಅಟ್ಯಾಕ್ ನಡೆದ ಉದಾಹರಣೆಗಳಿವೆ. ಇನ್ನು ಪ್ರಾಣಿಗಳು, ಪಕ್ಷಿಗಳು, ಜೊತೆಗೆ ಗಿಡಗಳ ಮೇಲೂ ಆ್ಯಸಿಡ್ ಅಟ್ಯಾಕ್ ನಡೆದಿವೆ.
2016 ರಲ್ಲಿ, ASTI ಅಂಕಿಅಂಶಗಳ ಆಧಾರದ ಮೇಲೆ UK ನಲ್ಲಿ 601 ಕ್ಕೂ ಹೆಚ್ಚು ಆಸಿಡ್ ದಾಳಿಗಳು ನಡೆದಿವೆ ಮತ್ತು 67% ಬಲಿಪಶುಗಳು ಪುರುಷರಾಗಿದ್ದಾರೆ, ಆದರೆ ASTI ಯ ಅಂಕಿಅಂಶಗಳು ವಿಶ್ವಾದ್ಯಂತ ಬಲಿಪಶುಗಳಲ್ಲಿ 80% ಮಹಿಳೆಯರು ಎಂದು ಸೂಚಿಸುತ್ತವೆ. ಕಳೆದ ಐದು ವರ್ಷಗಳಲ್ಲಿ 1,200 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಆ್ಯಸಿಡ್ ದಾಳಿಯ ಕಾರಣಗಳು
ಪುರುಷ ಪ್ರಾಬಲ್ಯದ ಸಮಾಜ: ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾಗಿದ್ದು, ಇಲ್ಲಿ ಯಾವಾಗಲೂ ಪುರುಷರನ್ನು ಪ್ರಭುತ್ವ ಎಂದು ಹೇಳಲಾಗುತ್ತದೆ ಮತ್ತು ಮಹಿಳೆಯರನ್ನು ಅಧೀನಗೊಳಿಸಬೇಕೆಂದು ಹೇಳಲಾಗುತ್ತದೆ. ಮಹಿಳೆಯರನ್ನು ಯಾವಾಗಲೂ ವ್ಯಕ್ತಿತ್ವದಿಂದ ದೂರವಿಡಲಾಗಿದೆ ಎಂದು ಪರಿಗಣಿಸಲಾಗಿದೆ . ಇದು ವ್ಯತಿರಿಕ್ತವಾದಾಗ ಆ್ಯಸಿಡ್ ದಾಳಿ ನಡೆಯುವ ಸಂಭವ ಇರುತ್ತದೆ.
ಸುಲಭವಾಗಿ ಸಿಗುವ ಆ್ಯಸಿಡ್
ಮಾರುಕಟ್ಟೆಯಲ್ಲಿ ಆ್ಯಸಿಡ್‌ಗಳ ಸುಲಭ ಲಭ್ಯತೆ. ಜನರು ಔಷಧಾಲಯಗಳು, ಬಯಲು ಮಾರುಕಟ್ಟೆಗಳು, ಗೋಲ್ಡ್ ಸ್ಮಿತ್ ಅಂಗಡಿಗಳು, ಆಟೋಮೊಬೈಲ್ ರಿಪೇರಿ ಅಂಗಡಿಗಳು, ಇತ್ಯಾದಿಗಳಿಂದ ತಮ್ಮ ಕಡೆಯಿಂದ ಹೆಚ್ಚಿನ ಶ್ರಮವಿಲ್ಲದೆ ಅದನ್ನು ಸುಲಭವಾಗಿ ಸಂಗ್ರಹಿಸಬಹುದು. ಅನೇಕ ಜನರು ಇದನ್ನು ತಮ್ಮ ಮನೆಗಳಲ್ಲಿ ಸಾಮಾನ್ಯ ಶುಚಿಗೊಳಿಸುವ ಏಜೆಂಟ್ ಆಗಿ ಬಳಸುತ್ತಾರೆ.
ಕೌಟುಂಬಿಕ ಹಿಂಸೆ
ಮನೆಯೊಳಗಿನ ಹಿಂಸಾಚಾರವು ಆಸಿಡ್ ಎಸೆದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವರದಕ್ಷಿಣೆ ತರುವುದು, ಮಗುವನ್ನು ಹೆರಲು ಅಸಮರ್ಥತೆ, ಲೈಂಗಿಕತೆಯನ್ನು ನಿರಾಕರಿಸುವುದು, ಅನುಮಾನ, ಆಸ್ತಿ ವಿವಾದಗಳು, ಕೌಟುಂಬಿಕ ಭಿನ್ನಾಭಿಪ್ರಾಯಗಳು ಇತ್ಯಾದಿಗಳಿಗೆ ಬಂಧಿಸಿರಬಹುದು.
ಭಗ್ನ ಪ್ರೇಮಿಗಳಿಂದ ಅತೀ ಹೆಚ್ಚು ದಾಳಿ
ಆಸಿಡ್ ಎಸೆಯಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಅಥವಾ ಒಬ್ಬ ವ್ಯಕ್ತಿಯ ಪ್ರೀತಿಯನ್ನು ಮಹಿಳೆ ತಿರಸ್ಕರಿಸಿದಾಗ, ಅದನ್ನು ದ್ವೇಷದಿಂದ ತೆಗೆದುಕೊಳ್ಳಲಾಗುತ್ತದೆ ಮತ್ತು ಪ್ರತೀಕಾರದಿಂದ, ಮಹಿಳೆಗೆ ಪಾಠ ಕಲಿಸಲು ಆಸಿಡ್ ಅನ್ನು ಬಳಸಲಾಗುತ್ತದೆ.
ಕುಟುಂಬದ ಗೌರವವನ್ನು ಕಾಪಾಡುವುದು
ಕುಟುಂಬದ ಗೌರವವನ್ನು ಕಾಪಾಡುವ ಸಲುವಾಗಿ, ಜನರು ಇಂತಹ ಅನಾಗರಿಕ ಕೃತ್ಯಗಳನ್ನು ಆಶ್ರಯಿಸಿದ್ದಾರೆ ಮತ್ತು ಕುಟುಂಬದ ಸ್ವೀಕೃತವಾದ ರೂಢಿಗಳು ಮತ್ತು ಜನಾಂಗೀಯತೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಹಿಳೆಯರನ್ನು ನಿಷೇಧಿಸುವ ಸಾಧನವಾಗಿ ಆಸಿಡ್ ಅನ್ನು ಬಳಸುತ್ತಾರೆ.
ಆ್ಯಸಿಡ್ ಎರಚಿದವರಿಗೆ ಏನು ಶಿಕ್ಷೆ?
ಮಹಿಳೆಯರ ಮೇಲಿನ ಆ್ಯಸಿಡ್ ದಾಳಿಯನ್ನು ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾದ ಪ್ರತ್ಯೇಕ ಅಪರಾಧ ಎಂದು ಪರಿಗಣಿಸುವ ಕರಡು ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದೆ. ಇದುವರೆಗೆ ಆ್ಯಸಿಡ್ ದಾಳಿ ಅಪರಾಧದ ಬಹುತೇಕ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 326, 306ನೇ ಸೆಕ್ಷನ್‌ಗಳಡಿ ಎರಡು ಅಥವಾ ಮೂರು ವರ್ಷ ಸೆರೆವಾಸ ವಿಧಿಸಲಾಗುತ್ತಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆ್ಯಸಿಡ್ ದಾಳಿಯ ಅಪರಾಧಿಗೆ ಕನಿಷ್ಠ 10 ರ್ಷ ಜೈಲುಶಿಕ್ಷೆ ವಿಧಿಸಬಹುದು. ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದು.
ಭಾರೀ ಸುದ್ದಿ ಮಾಡಿದ್ದ ಲಕ್ಷ್ಮೀ ಅಗರ್ವಾಲ್ ಪ್ರಕರಣ
ಭಾರತದಲ್ಲಿ ಆ್ಯಸಿಡ್ ದಾಳಿಯಲ್ಲಿ ಹೆಚ್ಚು ಪ್ರಚಾರವಾಗಿದ್ದು ದೆಹಲಿಯ ಲಕ್ಷ್ಮಿಅಗರವಾಲ್ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣ. 2005ರಲ್ಲಿ ದೆಹಲಿಯ ತುಘಲಕ್ ರಸ್ತೆಯಲ್ಲಿ ಇಬ್ಬರು ಯುವಕರು 15 ವರ್ಷದ ಲಕ್ಷ್ಮೀ ಅಗರವಾಲ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದರು. ಯುವಕರಲ್ಲಿಒಬ್ಬ ಲಕ್ಷ್ಮಿ ಅಗರವಾಲ್ ರನ್ನು ಮದುವೆಯಾಗಲು ಬಯಸಿದ್ದ. ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಿದ್ದ.
ಲಕ್ಷ್ಮೀಅಗರವಾಲ್ ದೇಶದಲ್ಲಿ ಆ್ಯಸಿಡ್ ಮಾರಾಟವನ್ನು ನಿರ್ಬಂಧಿಸಬೇಕೆಂದು ಕೋರಿ 27 ಸಾವಿರ ಜನರ ಸಹಿ ಸಂಗ್ರಹಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು
ಆ್ಯಸಿಡ್ ಮಾರಾಟಕ್ಕೆ ಸುಪ್ರೀಂ ನಿರ್ಬಂಧ
ಲಕ್ಷ್ಮೀ ಅಗರವಾಲ್ ಅರ್ಜಿಯ ಕೇಸ್ ನಲ್ಲೇ ಸುಪ್ರೀಂ ಕೋರ್ಟ್ ದೇಶದಲ್ಲಿ ಆ್ಯಸಿಡ್ ಮಾರಾಟಕ್ಕೆ ಕೆಲ ಮಾರ್ಗಸೂಚಿ ನೀಡಿದೆ. ಮಾರಾಟಗಾರರು ಆ್ಯಸಿಡ್ ಖರೀದಿದಾರನ ವಿವರ ಸಂಗ್ರಹಿಸಿಟ್ಟುಕೊಳ್ಳಬೇಕು.18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆ್ಯಸಿಡ್ ಮಾರಾಟ ಮಾಡಬಾರದು. ಲೈಸೆನ್ಸ್ ಹೊಂದಿರುವವರು ಮಾತ್ರವೇ ಆ್ಯಸಿಡ್ ಮಾರಾಟ ಮಾಡಬೇಕು.
ಇದನ್ನೂ ಓದಿ: Explained: ‘ಬೆಳಕಿನಿಂದ ಕತ್ತಲೆಯೆಡೆಗೆ’ ಭಾರತ! ಕಲ್ಲಿದ್ದಲು ಕೊರತೆಗೆ ಕಾರಣ, ಅದರ ಪರಿಣಾಮವೇನು?
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಪರಿಹಾರ
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕೇಂದ್ರ, ರಾಜ್ಯ ಸರ್ಕಾರಗಳು 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಆ್ಯಸಿಡ್ ದಾಳಿ ನಡೆದ 15 ದಿನದೊಳಗೆ ಚಿಕಿತ್ಸೆಗಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಉಳಿದ 2 ಲಕ್ಷ ರೂಪಾಯಿಯನ್ನು 2 ತಿಂಗಳೊಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ