• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಷರಿಯಾ ಕಾನೂನು ಎಂದರೇನು? ಅಫ್ಘಾನಿಸ್ತಾನದ ಮಹಿಳೆಯರಿಗೆ ವಿಧಿಸಿರುವ ಹೊಸಾ ನಿಯಮಗಳೇನು?

Explained: ಷರಿಯಾ ಕಾನೂನು ಎಂದರೇನು? ಅಫ್ಘಾನಿಸ್ತಾನದ ಮಹಿಳೆಯರಿಗೆ ವಿಧಿಸಿರುವ ಹೊಸಾ ನಿಯಮಗಳೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ತಾಲಿಬಾನ್ ಗುಂಪು ಶರಿಯಾ ಕಾನೂನನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದು ಈ ನಿಯಮಗಳಿಗೆ ಅನ್ವಯವಾಗಿ ಪ್ರಜೆಗಳು ನಡೆದುಕೊಳ್ಳಬೇಕು ಎಂಬುದಾಗಿ ತಾಲಿಬಾನ್ ತಿಳಿಸಿದೆ. ಶರಿಯಾ ಕಾನೂನು ಎಂದರೇನು? ಶರಿಯಾ ಕಾನೂನಿನ ಅನ್ವಯ ಶಿಕ್ಷೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ? ಜನಸಾಮಾನ್ಯರ ಮೇಲೆ ಕಾನೂನಿನ ಪರಿಣಾಮವೇನು? ಫುಲ್ ಡೀಟೆಲ್ಸ್ ಇಲ್ಲಿದೆ

ಮುಂದೆ ಓದಿ ...
 • Share this:

Afghanistan Crisis: ತಾಲಿಬಾನಿಗಳ ಅಟ್ಟಹಾಸಕ್ಕೆ ಅಪ್ಘಾನಿಸ್ತಾನ ದೇಶ ಇಂದು ನಲುಗಿ ಹೋಗಿದೆ. ಮಾಧ್ಯಮಗಳು, ಸುದ್ದಿ ಪತ್ರಿಕೆಗಳು ಅಪ್ಘಾನಿಸ್ತಾನದ ಪ್ರಸ್ತುತ ಸ್ಥಿತಿಯನ್ನು ಇಂಚಿಂಚಾಗಿ ಬಣ್ಣಿಸುತ್ತಿದ್ದು ಅಲ್ಲಿನ ಪ್ರಜೆಗಳ ಪರಿಸ್ಥಿತಿ ಯಾತನಾಮಯವಾಗಿದೆ. ಪುರುಷರು, ಸ್ತ್ರೀಯರು, ಕಂದಮ್ಮಗಳು ಜೀವ ರಕ್ಷಿಸಿಕೊಳ್ಳಲು ಉದ್ಯಾನಗಳಲ್ಲಿ, ಕಟ್ಟಡಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚಿನವರು ದೇಶವನ್ನೇ ತ್ಯಜಿಸುವ ನಿರ್ಧಾರದಿಂದ ಇದ್ದಬಿದ್ದ ವಿಮಾನಗಳನ್ನು ಹತ್ತಿ ರೆಕ್ಕೆಗಳನ್ನು ಹಿಡಿದುಕೊಂಡು ಪ್ರಾಣದ ಹಂಗನ್ನೂ ತೊರೆದೂ ಪಲಾಯನಗೈಯ್ಯುತ್ತಿದ್ದಾರೆ. ತಾಲಿಬಾನಿಗಳು ಕಾಬೂಲ್ ಅನ್ನು ನಿಯಂತ್ರಣಕ್ಕೆ ಪಡೆದುಕೊಂಡ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಹಾಗೂ ಮಹಿಳೆಯರ ಹಕ್ಕುಗಳನ್ನು ಇಸ್ಲಾಂ ಕಾನೂನಿನ ನಿಯಮಗಳ ವ್ಯಾಪ್ತಿಯಲ್ಲಿ ಸಂರಕ್ಷಿಸಲಾಗುತ್ತದೆ ಎಂದು ತಿಳಿಸಿದೆ.


ಆದರೆ ಈ ತಾಲಿಬಾನ್ ಸಂಘಟನೆಯು ಈ ನಿಯಮಗಳ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಮಹಿಳೆಯರನ್ನು ಕಂಡಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯುತ್ತಿರುವ ತಾಲಿಬಾನಿಗಳು ಇಸ್ಲಾಂ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಇದುವೇ ಶಿಕ್ಷೆ ಎಂಬುದಾಗಿ ತಿಳಿಸಿದೆ. ಇನ್ನು ಮುಂದೆ ತಪ್ಪು ಮಾಡುವವರು ಇದರಿಂದ ಅರಿತುಕೊಳ್ಳುತ್ತಾರೆ ಎಂಬುದಾಗಿ ರಾಜಾರೋಷವಾಗಿ ತಿಳಿಸಿದೆ.


ತಾಲಿಬಾನ್ ಗುಂಪು ಶರಿಯಾ ಕಾನೂನನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದು ಈ ನಿಯಮಗಳಿಗೆ ಅನ್ವಯವಾಗಿ ಪ್ರಜೆಗಳು ನಡೆದುಕೊಳ್ಳಬೇಕು ಎಂಬುದಾಗಿ ತಾಲಿಬಾನ್ ತಿಳಿಸಿದೆ. ಶರಿಯಾ ಕಾನೂನು ಎಂದರೇನು? ಶರಿಯಾ ಕಾನೂನಿನ ಅನ್ವಯ ಶಿಕ್ಷೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ? ಜನಸಾಮಾನ್ಯರ ಮೇಲೆ ಕಾನೂನಿನ ಪರಿಣಾಮವೇನು? ಎಂಬುದನ್ನು ತಿಳಿದುಕೊಳ್ಳೋಣ.


ಶರಿಯಾ ಕಾನೂನು ಎಂದರೇನು?


ಶರಿಯಾ ಕಾನೂನು ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆಯಾಗಿದೆ. ಕುರಾನ್ ಹಾಗೂ ಇಸ್ಲಾಂ ಧರ್ಮದ ಕೇಂದ್ರ ಪಠ್ಯವಾದ ಫತ್ವಾಗಳಿಂದ ವಿಭಾಗಿಸಲಾಗಿದೆ. ಇಸ್ಲಾಂ ವಿದ್ವಾಂಸರ ತೀರ್ಪುಗಳನ್ನು ಕಾನೂನು ಒಳಗೊಂಡಿದೆ.


ಇದನ್ನೂ ಓದಿ: Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

ಷರಿಯಾ ಕಾನೂನಿನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ, ಉಪವಾಸ ಹಾಗೂ ಬಡವರಿಗೆ ನೀಡುವ ದಾನದ ಮಹತ್ವವನ್ನು ತಿಳಿಸುತ್ತದೆ. ಇದರಲ್ಲಿರುವ ನಿಬಂಧನೆಗಳು ಜೀವನ ಸಂಹಿತೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಆಶಯದಂತೆ ಪ್ರತಿಯೊಬ್ಬ ಮುಸ್ಲಿಂ ಧರ್ಮೀಯನು ಜೀವನವನ್ನು ಹೇಗೆ ನಡೆಸಬೇಕು? ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ತಿಳಿಸುತ್ತದೆ.


ಶರಿಯಾ ಕಾನೂನಿನ ಆಚರಣೆ ಹೇಗಿದೆ?


ಮುಸ್ಲಿಂ ಧರ್ಮೀಯರ ಜೀವನ ಕ್ರಮವನ್ನು ಇದು ತಿಳಿಸುತ್ತದೆ. ಪಾಶ್ಚಾತ್ಯ ಜೀವನ ಕ್ರಮದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಈ ಕಾನೂನು ತಿಳಿಸುತ್ತದೆ. ಶರಿಯಾ ನಿಯಮಕ್ಕೆ ಅನುಗುಣವಾಗಿ ತನ್ನ ನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಕಡ್ಡಾಯವಾಗಿದೆ.


ಕಾನೂನಿನಲ್ಲಿ ತಿಳಿಸಿರುವ ಕಠಿಣ ಶಿಕ್ಷೆಗಳೇನು?


ಶರಿಯಾ ಕಾನೂನಿನ ಪ್ರಕಾರ ಅಪರಾಧಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಹದ್’ ಅಪರಾಧಗಳು ಹಾಗೂ ‘ತಜೀರ್’ ಅಪರಾಧಗಳು ಎಂದಾಗಿದೆ. ಹದ್ ಅಪರಾಧಗಳಿಗೆ ನಿಗದಿತ ದಂಡಗಳೊಂದಿಗೆ ಗಂಭೀರ ಅಪರಾಧ ಎಂದು ಕರೆಯಿಸಿಕೊಳ್ಳುತ್ತದೆ. ಇನ್ನು ತಜೀರ್ ಅಪರಾಧಗಳ ಶಿಕ್ಷೆ ಹಾಗೂ ತೀರ್ಪನ್ನು ನ್ಯಾಯಾಧೀಶರ ವಶಕ್ಕೆ ಒಪ್ಪಿಸಲಾಗುತ್ತದೆ. ಹದ್ ಅಪರಾಧಗಳಲ್ಲಿ ಕಳ್ಳತನದ ಶಿಕ್ಷೆಗೆ ಕೈಗಳನ್ನು ಕತ್ತರಿಸುವ ದಂಡನೆಯನ್ನು ವಿಧಿಸಲಾಗುತ್ತದೆ. ವ್ಯಭಿಚಾರ ಅಪರಾಧಕ್ಕೆ ಕಲ್ಲೆಸೆದು ಹತ್ಯೆಗೈಯ್ಯುವ ಶಿಕ್ಷೆಯನ್ನು ವಿಧಿಸಲಾಗಿದೆ.


ಮತಾಂತರಕ್ಕಾಗಿ ಮುಸ್ಲಿಮರನ್ನು ಗಲ್ಲಿಗೇರಿಸುವ ಶಿಕ್ಷೆ ಇದೆಯೇ?


ನಂಬಿಕೆ ತ್ಯಜಿಸುವುದು, ಧರ್ಮಭ್ರಷ್ಟತೆಯನ್ನು ಮುಸ್ಲಿಂ ಧರ್ಮದಲ್ಲಿ ಮರಣದಂಡನೆಗೆ ಸಮನವಾಗಿ ಕಾಣಲಾಗುತ್ತದೆ. ಆಧುನೀಕತೆಯ ಪರಿಣಾಮದಿಂದ ಕೆಲವೊಬ್ಬರು ಮುಸ್ಲಿಂ ಧರ್ಮೀಯರು ಆ ದೇವರು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಾರೆ ಎಂಬುದಾಗಿ ವಾದಿಸುತ್ತಾರೆ.
ತೀರ್ಪುಗಳನ್ನು ಹೇಗೆ ನೀಡಲಾಗುತ್ತದೆ?


ಶರಿಯಾ ಕಾನೂನು ಕ್ಲಿಷ್ಟಕರವಾಗಿದ್ದು ಕಾನೂನಿನ ಅಭ್ಯಾಸವು ಪರಿಣಿತರ ತರಬೇತಿಯನ್ನು ಆಧರಿಸಿದೆ. ಇಸ್ಲಾಂನ ನ್ಯಾಯಾಶಾಸ್ತ್ರಜ್ಞರು ತೀರ್ಪುಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡುತ್ತಾರೆ. ಈ ರೀತಿಯ ಔಪಚಾರಿಕ ಕಾನೂನು ತೀರ್ಪಿನ ಮಾರ್ಗದರ್ಶನವನ್ನು ಫತ್ವಾ ಎಂದು ಕರೆಯಲಾಗುತ್ತದೆ. ಶರಿಯಾ ಕಾನೂನು ಬೋಧಿಸುವ ಐದು ಶಾಲೆಗಳಿವೆ ಹಾಗೂ ನಾಲ್ಕು ಸುನ್ನಿ ಸಿದ್ಧಾಂತಗಳಿವೆ. ಹನ್ಬಲಿ, ಮಾಲಿಕಿ, ಶಾಫಿ ಮತ್ತು ಹನಾಫಿ, ಮತ್ತು ಶಿಯಾ ಸಿದ್ಧಾಂತ, ಶಿಯಾ ಜಾಫರಿ ಎಂಬುದಾಗಿ ಇವುಗಳನ್ನು ಹೆಸರಿಸಲಾಗಿದೆ.


top videos
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು