Explained: ಸೈಬರ್ ಕ್ರೈಮ್ ಎಂದರೇನು? ಅದರಿಂದ ಬಚಾವಾಗೋದು ಹೇಗೆ? ಸೈಬರ್ ಕ್ರೈಮ್ ಬಗ್ಗೆ ನೀವು ತಿಳಿಯಬೇಕಾದ ಎಲ್ಲವೂ ಇಲ್ಲಿದೆ

ಸೈಬರ್ ಅಪರಾಧ ಎಂದರೇನು? ಅದರಲ್ಲೆಷ್ಟು ವಿಧಗಳಿವೆ? ಸೈಬರ್ ಕ್ರೈಮ್ ಹೇಗೆ ನಡೆಯುತ್ತದೆ? ಅದರಿಂದ ಬಚಾವಾಗೋದು ಹೇಗೆ? ಸೈಬರ್ ಅಪರಾಧಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಎಲ್ಲಾ ವಿಚಾರಗಳೂ ಇಲ್ಲಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸೈಬರ್ ಅಪರಾಧ ಎಂದರೇನು ?

ಕಂಪ್ಯೂಟರ್ ನ್ನು ಸಾಧನವಾಗಿ ಅಥವಾ ಅಪಾಧಗಳಿಗೆ ಮಾರ್ಗವಾಗಿ ಬಳಸುವ ಚಟುವಟಿಕೆ. ಇದನ್ನು ಕಾನೂನುಬಾಹಿರ ಕೃತ್ಯವೆಂದು ವ್ಯಾಖ್ಯಾನಿಸಲಾಗಿದ್ದು ಇದರಲ್ಲಿ ಕಂಪ್ಯೂಟರ್ ಸಾಧನ ಅಥವಾ ಗುರಿ ಎರಡೂ ಆಗಿದೆ.

ಸೈಬರ್ ಅಪರಾಧದ ವಿಧಾನಗಳು ಅಥವಾ ನಡವಳಿಕೆಗಲು ಯಾವುವು?

ಕಂಪ್ಯೂಟರ್ ಸಿಸ್ಟಂ ಅಥವಾ ನೆಟ್​ವರ್ಕ್​​ಗಳಿಗೆ ಅನಧಿಕೃತ ಪ್ರವೇಶ/ಹ್ಯಾಕಿಂಗ್, ಎಲೆಕ್ಟ್ರಾನಿಕ ರೂಪದಲ್ಲಿರುವ ಮಾಹಿತಿಯ ಕಳ್ಳತನ, ಈಮೇಲ್ ಬಾಂಬಿಂಗ್, ಸಲಾಮಿ ದಾಳಿ, ಸೇವೆಯ ನಿರಾಕರಣೆ, ವೈರಸ್ ಅಥವಾ ವರ್ಮ್ ದಾಳಿ, ಲಾಜಿಕ್ ಬಂಬ್ ಮತ್ತು ಇಂಟರ್ನೆಟ್ ಸಮಯ ಕಳ್ಳತನ.

ಸೈಬರ್ ಅಪರಾಧದ ವಿವಿಧ ಬಗೆಗಳು ಯಾವುವು?

ಸರ್ಕಾರದ ವಿರುದ್ಧದ ಸೈಬರ್ ಭಯೋತ್ಪಾದನೆಯಂತಹ ಅಪರಾಧ. ಸೈಬರ್ ಅಶ್ಲೀಲತೆ, ಸೈಬರ್ ಹಿಂಬಾಲಿಕೆ, ಸೈಬರ್ ಮಾನಹಾನಿಯಂಥಾ ವ್ಯಕ್ತಿಗಳ ವಿರುದ್ಧದ ಅಪರಾಧ. ಆನ್​ಲೈನ್ ಜೂಜು, ಬೌದ್ಧಿಕ ಆಸ್ತಿ ಉಲ್ಲಂಘನೆ, ಫಿಶಿಂಗ್, ಕ್ರೆಡಿಟ್ ಕಾರ್ಡ್ ವಂಚನೆಗಳಂಥಹಾ ಆಸ್ತಿಯ ವಿರುದ್ಧದ ಅಪರಾಧ.

ಐಪಿ ವಂಚನೆ ಎಂದರೇನು?

ಕಂಪ್ಯೂಟರ್​ಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಬಳಸುವ ತಂತ್ರ ಇದು. ಹಾಗೆ ಒಳನುಗ್ಗಿದವರು ಐಪಿ ವಿಳಾಸವನ್ನು ಹೊಂದಿರುವ ಕಂಪ್ಯೂಟರ್​ಗೆ ವಿಶ್ವಾಸಾರ್ಹ ಮೂಲಗಳಿಂದ ಸಂದೇಶ ಬರುತ್ತಿದೆ ಎಂದು ನಂಬುವಂತೆ ಮಾಡುತ್ತಾರೆ.

ಫಿಶಿಂಗ್ ಎಂದರೇನು?

ಬಳಕೆದಾರರ ಹೆಸರುಗಳು, ಪಾಸ್​ವರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳಂತಹಾ ಸೂಕ್ಷ್ಮ ಮಾಹಿತಿಯನ್ನು ವಿಶ್ವಾಸಾರ್ಹ ಘಟಕ ಅಥವಾ ಎಲೆಕ್ಟ್ರಾನಿಕ್ ಸಂವಹನದಲ್ಲಿ ವ್ಯಕ್ತಿಯಾಗಿ ಮರೆಮಾಚುವ ಮೂಲಕ ಮೋಸದಿಂದ ಇವುಗಳನ್ನು ಪಡೆಯಲು ಯತ್ನಿಸುವ ವಿಧಾನವಾಗಿದೆ.

ಭಾರತದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳು ಯಾವುದು?

ಅಪರಾಧ ಚಟುವಟಿಕೆಗಳಾದ ಕಳ್ಳತನ, ವಂಚನೆ, ಖೋಟಾ, ಮಾನಹಾನಿ ಮತ್ತು ಕಿಡಿಗೇಡಿತನ ಮುಂತಾದ ಸೈಬರ್​​ ಅಪರಾಧಗಳು ಐಪಿಸಿಗೆ ಒಳಪಟ್ಟಿರುತ್ತವೆ. ಕಂಪ್ಯೂಟರ್​ಗಳ ದುರುಪಯೋಗವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಮೂಲಕ ಪರಿಹರಿಸಲ್ಪಟ್ಟ ಹೊಸ ಯುಗದ ಅಪರಾಧಗಳ ಹಾದಿಗೆ ನಾಂದಿ ಹಾಡಿದೆ.

ಸೈಬರ್ ಅಪರಾಧವನ್ನು ಹೇಗೆ ವರದಿ ಮಾಡುವುದು?

ಹೆಸರು, ಮೇಲಿಂಗ್ ವಿಳಾಸ ಮತ್ತು ಸಂಪರ್ಕಿಸಬೇಕಾದ ವಿವರಗಳೊಂದಿಗೆ ಸೈಬರ್ ಅಪರಾಧ ತನಿಖಾ ಕೋಶದ ಮುಖ್ಯಸ್ಥೆರಿಗೆ ದೂರು ಸಲ್ಲಿಸಬೇಕಾಗುತ್ತದೆ. ಸಂಭಾವ್ಯ ಪಟ್ಟಿಯಲ್ಲದೆ tಉರ್ತು ಸಂದರ್ಭದಲ್ಲಿ ಅಪರಾಧವನ್ನು ಹೇಗೆ ಮಾಡಲಾಗಿದೆ ಎಂಬುದರ ಕುರಿತು ತುರ್ತು ಸಂದರ್ಭದಲ್ಲಿ ನಿರ್ದಿಷ್ಟ ವಿವರಗಳಿಗೆ ಸ್ಥಳೀಯ ಪೋಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

ಸೈಬರ್​ಸ್ಟಾಕಿಂಗ್ ಎಂದರೇನು?

ಸೈಬರ್​ಸ್ಟಾಕಿಂಗ್, ಭೌತಿಕವಾಗಿ ಹಿಂಬಾಲಿಸುವಿಕೆಯ ವಿಸ್ತರಣಾ ರೂಪ ಇದಾಗಿದೆ. ಇನ್ನೊಬ್ಬರಿಗೆ ಇರುಸುಮುರುಸಾಗುವಂತೆ ಕಿರುಕುಳ ನೀಡಲು ಅಥವಾ ಸಂಪರ್ಕಿಸಲು ಇಂಟರ್ನೆಟ್​​ನಂತಹಾ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಇಲ್ಲಿ ಬಳಸಲಾಗುತ್ತದೆ.

ಹಣಕಾಸಿನ ಅಪರಾಧ ಮತ್ತು ಅಂತಹ ಅಪರಾಧಗಳನ್ನು ಮಾಡುವ ವಿಧಾನಗಳು ಯಾವುವು?

ಹಣಕಾಸಿನ ಅಪರಾಧಗಳನ್ನು ಆಸ್ತಿಯ ವಿರುದ್ಧದ ಅಪರಾಧವೆಂದು ವ್ಯಾಖ್ಯಾನಿಸಲಾಗಿದೆ. ಆಸ್ತಿಯ ಮಾಲೀಕತ್ವವನ್ನು ಕಾನೂನುಬಾಹಿರವಾಗಿ ಒಬ್ಬರ ಸ್ವಂತ ಬಳಕೆ ಮತ್ತು ಲಾಭಕ್ಕೆ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ. ಸಾಮಾಜಿಕ ತಂತ್ರಜ್ಞಾನಗಳನ್ನು ಅಥವಾ ‘ಫಿಶಿಂಗ್’ನಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸಿ, ಮೋಸಗಾರರು ವಿಶ್ವದಾದ್ಯಂತ ಬ್ಯಾಂಕ್ ಖಾತೆಗಳನ್ನು ಲೋಟಿ ಮಾಡಲು ಸಾಧ್ಯವಾಗುತ್ತದೆ.
Published by:Soumya KN
First published: