Explained: ಅಫ್ಘಾನಿಸ್ತಾನದಲ್ಲಿ ಊಟಕ್ಕೂ ಹಾಹಾಕಾರ..! ತೀವ್ರವಾದ ಆಹಾರ ಅಭದ್ರತೆಗೆ ಕಾರಣ ಇಲ್ಲಿದೆ..

ಕುಂದುಜ್‌ನಂತಹ ಇತರ ಪ್ರದೇಶಗಳಲ್ಲಿ, ಹಿಟ್ಟಿನ (50 ಕೆಜಿ) ಬೆಲೆ ಶೇಕಡಾ 40.6ರಷ್ಟು, ಎಣ್ಣೆ (5 ಲೀಟರ್) ಶೇಕಡಾ 20ರಷ್ಟು, ಬೀನ್ಸ್ ಶೇಕಡಾ 30ರಷ್ಟು ಮತ್ತು ಗ್ಯಾಸ್ ಬೆಲೆ ಶೇಕಡಾ 63.4ರಷ್ಟು ಹೆಚ್ಚಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಅಫ್ಘಾನಿಸ್ತಾನ(Afghanistan)ದಲ್ಲಿ ಪ್ರಜಾಪ್ರಭುತ್ವ(Democracy) ಸ್ಥಾಪಿಸುವ ಯತ್ನಕ್ಕೆ ವಿಫಲವಾಗಿದ್ದು, ತಾಲಿಬಾನ್‌(Taliban) ಮರುಸ್ಥಾಪನೆಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಇದರಿಂದ ಅಲ್ಲಿನ ಜನರು ಸಾವಿಗೀಡಾಗಿರುವುದು, ಸರಣಿ ಹತ್ಯೆಗಳು, ಬಾಂಬ್‌ ಸ್ಫೋಟಗಳು, ದೇಶ ಬಿಟ್ಟು ಪರಾರಿಯಾಗಲು ನಡೆಸುತ್ತಿರುವ ಯತ್ನಗಳು ಈ ಬಗ್ಗೆ ಅನೇಕ ವರದಿಗಳನ್ನು ನೋಡಿರುತ್ತೀರಾ.. ಬರೀ ಇಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲೀಗ ಊಟ(Food)ಕ್ಕೂ ಹಾಹಾಕಾರ ಕಾಡಲಿದೆ. ಹೌದು, ಅಫ್ಘಾನಿಸ್ತಾನದ ಸುಮಾರು 22.8 ಮಿಲಿಯನ್ ಜನರು ಅಥವಾ ದೇಶದ ಅರ್ಧದಷ್ಟು ಜನಸಂಖ್ಯೆ(Population) ನವೆಂಬರ್‌ನಿಂದ ತೀವ್ರ ಆಹಾರ ಅಭದ್ರತೆ ಎದುರಿಸಬೇಕಾಗುತ್ತದೆ. ಅಫ್ಘಾನಿಸ್ತಾನದ ಆಹಾರ ಭದ್ರತೆ ಮತ್ತು ಕೃಷಿ ಕ್ಲಸ್ಟರ್ ನೀಡಿದ ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣ (IPC) ವರದಿಯ ಸಂಶೋಧನೆಗಳನ್ನು ಉಲ್ಲೇಖಿಸಿ UNನ ವಿಶ್ವ ಆಹಾರ ಕಾರ್ಯಕ್ರಮ (WFP) ಈ ಬಗ್ಗೆ ಎಚ್ಚರಿಸಿದೆ.

US ಪಡೆಗಳು ಎರಡು ದಶಕಗಳಿಂದ ಅಲ್ಲಿ ನೆಲೆಗೊಂಡ ನಂತರ ಹಿಂತೆಗೆದುಕೊಂಡಾಗ ಹಾಗೂ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವು ತಾಲಿಬಾನ್ ವಶಪಡಿಸಿಕೊಂಡ ಕೆಲವೇ ತಿಂಗಳುಗಳ ನಂತರ ಈ ಎಚ್ಚರಿಕೆಯ ಕರೆ ಬಂದಿದೆ.

ಇತ್ತೀಚೆಗೆ, ಜಾಗತಿಕ ಹಸಿವಿನ ಸೂಚ್ಯಂಕ (Global Hunger Index)(GHI) ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅಫ್ಘಾನಿಸ್ತಾನಕ್ಕೆ 103ನೇ ಸ್ಥಾನ ನೀಡಿದೆ. ಭಾರತ ಈ ಸೂಚ್ಯಂಕದಲ್ಲಿ 101ನೇ ಸ್ಥಾನ ಪಡೆದುಕೊಂಡಿದ್ದು, ಅಫ್ಘನ್‌ ನಮ್ಮ ದೇಶಕ್ಕಿಂತ ಎರಡು ಕೆಳಗಿನ ಸ್ಥಾನ ಪಡೆದುಕೊಂಡಿದೆ. ಒಟ್ಟಾರೆಯಾಗಿ, 2021ರ ಸೂಚ್ಯಂಕಕ್ಕೆ 116 ದೇಶಗಳನ್ನು ಪರಿಗಣಿಸಲಾಗಿದೆ. GHI ಸೂಚ್ಯಂಕವು ಅಫ್ಘಾನಿಸ್ತಾನವನ್ನು ಹಸಿವಿನ ಮಟ್ಟ "ಗಂಭೀರ" ಎಂದು ವರ್ಗೀಕರಿಸಿದೆ.

ಇದನ್ನೂ ಓದಿ:Explained: ಅಂಡಮಾನ್​ ಶಿಖರಕ್ಕೂ ಮಣಿಪುರಕ್ಕೂ ಇರುವ ಸಂಬಂಧವೇನು? 1891ರ ಯುದ್ಧದಲ್ಲಿ ಅಸಲಿಗೆ ನಡೆದಿದ್ದೇನು? ಇಲ್ಲಿದೆ ವಿವರ

ಅಫ್ಘಾನಿಸ್ತಾನದಲ್ಲಿ ಆಹಾರದ ಅಭದ್ರತೆಗೆ ಕಾರಣವೇನು..?

WFP ಅಫ್ಘಾನಿಸ್ತಾನದ ಬಗ್ಗೆ ಎಚ್ಚರಿಕೆ ನೀಡಲು ವಿವಿಧ ಕಾರಣಗಳಿವೆ. ಈ ಅಂಶಗಳು COVID-19 ಸಾಂಕ್ರಾಮಿಕ, ಬರ ಮತ್ತು ಸಂಘರ್ಷವನ್ನು ಒಳಗೊಂಡಿವೆ, ಇದು ದೇಶದಲ್ಲಿ ಆಹಾರ ಪ್ರವೇಶಿಸುವ ಜನರ ಸಾಮರ್ಥ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಪ್ರಮುಖ ಬರಗಳು, ಪ್ರವಾಹಗಳು ಮತ್ತು ಆರ್ಥಿಕ ಹಾಗೂ ಭದ್ರತಾ ಸವಾಲುಗಳಿಂದಾಗಿ 2014ರಿಂದ ಅಫ್ಘಾನಿಸ್ತಾನದಲ್ಲಿ ಹಸಿವು ಗಣನೀಯವಾಗಿ ಹೆಚ್ಚಾಗಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್‌ನ್ಯಾಷನಲ್‌ ಸ್ಟಡೀಸ್ (The Center for Strategic and International Studies)(CSIS) ಗಮನಿಸುತ್ತದೆ.

ಅಕ್ಟೋಬರ್‌ನಲ್ಲಿ, ನಿಕ್ಕಿ ಏಷ್ಯಾವು (Nikkei Asia)ಅಫ್ಘಾನಿಸ್ತಾನದಲ್ಲಿ ಆಹಾರದ ಬೆಲೆಗಳು ಗಗನಕ್ಕೇರುತ್ತಿವೆ ಎಂದು ವರದಿ ಮಾಡಿದೆ. ಏಕೆಂದರೆ ಸ್ಥಳೀಯ ಕರೆನ್ಸಿಯ ಮೌಲ್ಯವು ಕುಸಿಯುತ್ತಿದೆ ಮತ್ತು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿದೆ.

ಅಫ್ಘಾನಿಸ್ತಾನವು ಆಹಾರ ಉತ್ಪನ್ನಗಳ ಹೆಚ್ಚಿನ ಪಾಲನ್ನು ಪಾಕ್‌ನಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲದೆ, ಅಫ್ಘಾನಿಸ್ತಾನವು ಭಾರತ, ದಕ್ಷಿಣ ಕೊರಿಯಾ, ಯುಎಇ, ಟರ್ಕಿ ಮತ್ತು ಇರಾನ್ ಸೇರಿ ಇತರೆ ದೇಶಗಳಿಂದಲೂ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.

ಇನ್ನೊಂದೆಡೆ, ಪಾಕಿಸ್ತಾನ-ಅಫ್ಘಾನಿಸ್ತಾನ ಜಂಟಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (Pakistan-Afghanistan Joint Chamber of Commerce and Industry) (PAJCCI)ಉಪಾಧ್ಯಕ್ಷ ಜಿಯಾ-ಉಲ್-ಹಕ್ ಸರ್ಹಾದಿ ಪ್ರಕಾರ, ತಾಲಿಬಾನ್ ವಾರಕ್ಕೊಮ್ಮೆ ಬ್ಯಾಂಕ್ ಹಿಂಪಡೆಯುವಿಕೆಯನ್ನು ಸುಮಾರು $200 ಅಥವಾ 20,000 ಅಫ್ಘಾನಿಗಳಿಗೆ (ಸುಮಾರು ರೂ. 17,000)ಗೆ ಸೀಮಿತಗೊಳಿಸಿರುವುದರಿಂದ ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಆಹಾರ ಸಾಗಣೆ ಕಡಿಮೆಯಾಗಿದೆ ಎಂದು ನಿಕ್ಕಿ ಏಷ್ಯಾ ವರದಿ ಹೇಳುತ್ತದೆ.

ಇದನ್ನೂ ಓದಿ:Explainer: Kinnow ಹಣ್ಣಿನಿಂದ ಜೈವಿಕ ಕಿಣ್ವಗಳನ್ನು ಸೃಷ್ಟಿಸುತ್ತಿರುವ ಪಂಜಾಬ್ ರೈತರು..!

ಅಫ್ಘಾನಿಸ್ತಾನದಲ್ಲಿ ಆಹಾರದ ಅಭದ್ರತೆ ಇತ್ತೀಚಿನದಾ..?

ಅಫ್ಘಾನಿಸ್ತಾನದಲ್ಲಿ ಆಹಾರ ಅಭದ್ರತೆ ಇತ್ತೀಚಿನ ವಾಸ್ತವವೇನಲ್ಲ, ದೇಶವು ಕೆಲವು ವರ್ಷಗಳಿಂದಲೇ ಆಹಾರ ಅಸುರಕ್ಷಿತವಾಗಿದೆ. ಅಫ್ಘಾನಿಸ್ತಾನದಲ್ಲಿನ ಆಹಾರ ಭದ್ರತೆಯ ಪರಿಸ್ಥಿತಿಯ ಕುರಿತು 2007ರ USAID ವರದಿಯು 2005ರ ರಾಷ್ಟ್ರೀಯ ಅಪಾಯ ಮತ್ತು ದುರ್ಬಲತೆಯ ಮೌಲ್ಯಮಾಪನವನ್ನು (NRVA) ಉಲ್ಲೇಖಿಸಿದೆ. ಇದು ದೇಶದ ಆಹಾರ ಪರಿಸ್ಥಿತಿಯನ್ನು ಈ ಕೆಳಗಿನಂತೆ ಸಂಕ್ಷೇಪಿಸಿದೆ, "ಮನೆಯ ಮಟ್ಟದಲ್ಲಿ, ಅಫ್ಘಾನಿಸ್ತಾನದಲ್ಲಿ ಆಹಾರದ ಅಭದ್ರತೆಯು ಹೆಚ್ಚಾಗಿ ಮನೆಯ ಕಡಿಮೆ ಆದಾಯದ ಪರಿಣಾಮವಾಗಿ ಆಹಾರಕ್ಕೆ ಅಸಮರ್ಪಕ ಪ್ರವೇಶದಿಂದ ಉಂಟಾಗುತ್ತದೆ."

ಅಲ್ಲದೆ, "ಸಶಸ್ತ್ರ ಸಂಘರ್ಷದ ನೇರ ಪರಿಣಾಮವಾಗಿ ಸಾಯುವವರಿಗಿಂತ ಬಡತನವು ಹೆಚ್ಚು ಆಫ್ಘನ್ನರನ್ನು ಕೊಲ್ಲುತ್ತದೆ, ಇದು ಬೃಹತ್ ಮಾನವ ಹಕ್ಕುಗಳ ಕೊರತೆಯ ಒಂದು ಕಾರಣ ಮತ್ತು ಪರಿಣಾಮವಾಗಿದೆ" ಎಂದು 2010ರ UN ವರದಿಯು ಹೇಳುತ್ತದೆ.

ವಿಶ್ವ ಬ್ಯಾಂಕ್ ಮತ್ತು ಅಫ್ಘಾನಿಸ್ತಾನ ಸರ್ಕಾರ ಪ್ರಕಟಿಸಿದ ಜಂಟಿ ವರದಿಯ ಪ್ರಕಾರ, 2018ರ ಹೊತ್ತಿಗೆ, ಕೃಷಿಯು ಸಾಂಪ್ರದಾಯಿಕವಾಗಿ ಅಫ್ಘಾನಿಸ್ತಾನದ ಆರ್ಥಿಕತೆಯ ಮೇಲೆ ಪ್ರಾಬಲ್ಯ ಹೊಂದಿದೆ ಮತ್ತು ಅದರ ಬೆಳವಣಿಗೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಇದಲ್ಲದೆ, ಸುಮಾರು 70 ಪ್ರತಿಶತದಷ್ಟು ಆಫ್ಘನ್ನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಹೆಚ್ಚಾಗಿ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ, ಮತ್ತು ಸುಮಾರು 61 ಪ್ರತಿಶತದಷ್ಟು ಕುಟುಂಬಗಳು ಕೃಷಿಯಿಂದ ತಮ್ಮ ಆದಾಯ ಪಡೆಯುತ್ತಾರೆ.

ಆದರೆ, ಬೆಳೆ ಕೃಷಿ ಉಪ ವಲಯವು ಸಾಕಷ್ಟು ವೈವಿಧ್ಯತೆ ಹೊಂದಿಲ್ಲ ಮತ್ತು ಗೋಧಿಯ ಮೇಲೆ ಅತಿಯಾಗಿ ಕೇಂದ್ರೀಕೃತವಾಗಿದೆ ಎಂಬುದು ವರದಿಯ ಪ್ರಮುಖ ಸಂಶೋಧನೆಗಳಲ್ಲಿ ಒಂದಾಗಿದೆ. ಇದಲ್ಲದೆ, ಕೃಷಿಯು ಕಾರ್ಮಿಕರ ಹೆಚ್ಚಿನ ಪಾಲನ್ನು ಪ್ರತಿನಿಧಿಸುತ್ತದೆ, ಸೀಮಿತ ಮಾರುಕಟ್ಟೆ ಭಾಗವಹಿಸುವಿಕೆ ಮತ್ತು ಹೆಚ್ಚಿನ ಸಂಖ್ಯೆಯ ವೇತನವಿಲ್ಲದ ಕುಟುಂಬ ಕೆಲಸಗಾರರಿಂದ ಅವರ ಆದಾಯದ ಪಾಲು ಕಡಿಮೆಯಾಗಿದೆ.

2021ರಲ್ಲಿ ಅಫ್ಘಾನಿಸ್ತಾನದಲ್ಲಿ ಆಹಾರದ ಬೆಲೆ ಎಷ್ಟು?

ಸೇವ್ ದಿ ಚಿಲ್ಡ್ರನ್ (Save the Children) ಎಂಬ ಸಂಸ್ಥೆಯ ಸಿಬ್ಬಂದಿ ಸಂಗ್ರಹಿಸಿದ ಅಂದಾಜು ಬೆಲೆಗಳ ಪ್ರಕಾರ, ಆಗಸ್ಟ್ 2021ರ ಹೊತ್ತಿಗೆ, ಕಾಬೂಲ್‌ನಲ್ಲಿ ಹಿಟ್ಟಿನ (50 ಕೆಜಿ) ಬೆಲೆ ಸುಮಾರು 6 ಪ್ರತಿಶತದಷ್ಟು ಹೆಚ್ಚಾಗಿದೆ, ತೈಲದ ಬೆಲೆ (5 ಲೀಟರ್) 5.8 ರಷ್ಟು ಮತ್ತು ಅನಿಲದ ಬೆಲೆ ಶೇಕಡಾ 18.1 ರಷ್ಟು ಏರಿಕೆಯಾಗಿದೆ. ಕುಂದುಜ್‌ನಂತಹ ಇತರ ಪ್ರದೇಶಗಳಲ್ಲಿ, ಹಿಟ್ಟಿನ (50 ಕೆಜಿ) ಬೆಲೆ ಶೇಕಡಾ 40.6ರಷ್ಟು, ಎಣ್ಣೆ (5 ಲೀಟರ್) ಶೇಕಡಾ 20ರಷ್ಟು, ಬೀನ್ಸ್ ಶೇಕಡಾ 30ರಷ್ಟು ಮತ್ತು ಗ್ಯಾಸ್ ಬೆಲೆ ಶೇಕಡಾ 63.4ರಷ್ಟು ಹೆಚ್ಚಾಗಿದೆ. ಜುಲೈನಲ್ಲಿ ಇದ್ದ ಬೆಲೆಗಳೊಂದಿಗೆ ಆಗಸ್ಟ್‌ನಲ್ಲಿ ಹೋಲಿಕೆ ಮಾಡಲಾಗಿದ್ದು, ಈ ಏರಿಕೆ ಕಂಡುಬಂದಿದೆ.

ಇನ್ನು, ಮೇ ತಿಂಗಳಲ್ಲಿ, ಅಫ್ಘಾನಿಸ್ತಾನದಲ್ಲಿ ದುರ್ಬಲ ಸಮುದಾಯಗಳಲ್ಲಿ ಸಾಂಕ್ರಾಮಿಕವು ಆಹಾರ ಅಭದ್ರತೆಯನ್ನು ಉಲ್ಬಣಗೊಳಿಸಿದೆ ಎಂದು ವಿಶ್ವ ಬ್ಯಾಂಕ್ ಗಮನಿಸಿದೆ. ಲಾಕ್‌ಡೌನ್‌ಗಳಂತಹ ತಡೆಗಟ್ಟುವ ಕ್ರಮಗಳು ಗಡಿ ಮುಚ್ಚುವಿಕೆಗೆ ಕಾರಣವಾಗಿವೆ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಅಡ್ಡಿಪಡಿಸುತ್ತವೆ ಮತ್ತು ಬಳಕೆಯನ್ನು ಕಡಿಮೆಗೊಳಿಸಿರುವುದು ಇದಕ್ಕೆ ಕಾರಣ. "ಇದು ಘರ್ಷಣೆಗಳು, ನಿಧಾನಗತಿಯ ಬೆಳವಣಿಗೆ, ಬರ ಮತ್ತು ಕಡಿಮೆ ಆದಾಯದ ನಗರ ಹಾಗೂ ಗ್ರಾಮೀಣ ಕುಟುಂಬಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ನಿರುದ್ಯೋಗದಿಂದಾಗಿ ವ್ಯಾಪಕವಾದ ಋತುಮಾನದ ಹಸಿವಿನ ಜೊತೆಗೆ ಈ ಪರಿಣಾಮಗಳನ್ನು ಬೀರಿದೆ" ಎಂದು ವಿಶ್ವ ಬ್ಯಾಂಕ್ ಹೇಳಿದೆ.

.ದುರ್ಬಲ ಸಮುದಾಯಗಳಲ್ಲಿ ಹಸಿವು ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಪರಿಹರಿಸಲು ಅಫ್ಘಾನಿಸ್ತಾನ ದಸ್ತರ್ಖ್ವಾನ್-ಇ ಮೆಲಿ (Dastarkhwan-e Meli) ಯನ್ನು ಆರಂಭಿಸಿತು. ಅಲ್ಲದೆ, ಇದರ ಮೂಲಕ ಮೇ ವೇಳೆಗೆ, 750,000 ಅಫ್ಘಾನಿಸ್ತಾನದ ಕುಟುಂಬಗಳು ಪರಿಹಾರ ಪ್ಯಾಕೇಜ್‌ಗಳನ್ನು ಪಡೆದಿವೆ ಎಂದು ತಿಳಿದುಬಂದಿದೆ.
Published by:Latha CG
First published: