ಪ್ರಶ್ನೆ: ಜಾಮೀನು ಎಂದರೇನು ಮತ್ತು ಭಾರತದಲ್ಲಿರುವ ಜಾಮೀನಿನ ವಿಧಗಳು ಯಾವುವು?
ಉತ್ತರ: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವುದಕ್ಕೆ ಜಾಮೀನು ಎನ್ನುತ್ತಾರೆ. ಇದರಲ್ಲಿ ನ್ಯಾಯಾಲದ ವಿಚಾರಣೆ ಇನ್ನೂ ಬಾಕಿ ಉಳಿದಿದ್ದು ತೀರ್ಪು ಪ್ರಕಟವಾಗಿರುವುದಿಲ್ಲ. ಭಾರತದಲ್ಲಿ ನಿಯಮಿತ, ಮಧ್ಯಂತರ ಮತ್ತು ನಿರೀಕ್ಷಣಾ ಜಾಮೀನು ಎನ್ನುವ ಮೂರು ವಿಧಗಳಿವೆ.
ಪ್ರಶ್ನೆ: ಮಧ್ಯಂತರ ಜಾಮೀನು ಎಂದರೇನು?
ಉತ್ತರ: ಮಧ್ಯಂತರ ಜಾಮೀನನ್ನು ಅಲ್ಪಾವಧಿಗೆ ನೀಡಲಾಗುತ್ತದೆ. ನಿಯಮಿತ ಅಥವಾ ನಿರೀಕ್ಷಣಾ ಜಾಮೀನು ನೀಡುವ ವಿಚಾರಣೆಯ ಮೊದು ಅದನ್ನು ನೀಡಲಾಗುತ್ತದೆ.
ಪ್ರಶ್ನೆ: ನಿರೀಕ್ಷಣಾ ಜಾಮೀನು ಎಂದರೇನು?
ಉತ್ತರ: ಜಾಮೀನುರಹಿತ ಅಪರಾಧಕ್ಕಾಗಿ ಯಾವುದೇ ವ್ಯಕ್ತಿಯನ್ನು ಆತ/ಆಕೆ ಬಂಧಿಸಬಹುದೆಂದು ನಂಬಲು ಕಾರಣವಿದ್ದರೆ, ಆತ/ಆಕೆ ಸೆಷನ್ಸ್ ನ್ಯಾಯಾಲಯ ಅಥವಾ ಉಚ್ಛ ನ್ಯಾಯಾಲಯಕ್ಕೆ ನಿರೀಕ್ಷಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು. ಬಂಧನವಾಗುವ ಸಾಧ್ಯತೆ ಇದ್ದಲ್ಲಿ ಆತ/ಆಕೆ ಜಾಮೀನಿನ ಮೇಲೆ (ಸೆಕ್ಷನ್ 438 ಸಿಆರ್ಪಿಸಿ ಅಡಿಯಲ್ಲಿ) ಬಿಡುಗಡೆಯಾಗಬೇಕೆಂದು ಪ್ರಾರ್ಥಿಸುತ್ತಾರೆ.
ಪ್ರಶ್ನೆ: ನನ್ನ ನಿರೀಕ್ಷಿತ ಜಾಮೀನನ್ನು ರದ್ದುಗೊಳಿಸಬಹುದೇ?
ಉತ್ತರ: ಹೌದು, ನಿರೀಕ್ಷಣಾ ಜಾಮೀನನ್ನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸುತ್ತದೆ. ಅವುಗಳನ್ನು ಉಲ್ಲಂಘಿಸಿದರೆ, ನ್ಯಾಯಾಲಯವು ಅಂತಹಾ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬಹುದು. ಎರಡನೆಯದಾಗಿ, ದೂರುದಾರರಿಂದ ಅಥವಾ ಪ್ರಾಸಿಕ್ಯೂಶನ್ನಿಂದ ಅರ್ಜಿಯನ್ನು ಸ್ವೀಕರಿಸುವಾಗ ನ್ಯಾಯಾಲಯವು ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬಹುದು.
ಪ್ರಶ್ನೆ: ನಾನು ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಸಾಮಾನ್ಯ ಜಾಮೀನನ್ನೂ ಪಡೆಯಬೇಕೆ?
ಉತ್ತರ: ಇಲ್ಲ, ನಿಮ್ಮ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸದ ಹೊರತು ನೀವು ಬೇರೆ ಜಾಮೀನು ಪಡೆಯುವ ಅವಶ್ಯಕತೆ ಇಲ್ಲ. ವಿಚಾರಣೆ ಮುಗಿಯುವವರಗೆ ನಿಮ್ಮ ನಿರೀಕ್ಷಣಾ ಜಾಮೀನಿಗೆ ಮಾನ್ಯತೆ ಇರುತ್ತದೆ. ಸಂದರ್ಭ ಎದುರಾದರೆ ನ್ಯಾಯಾಲಯದ ನಿರ್ದೇಶನದಂತೆ ನಿರೀಕ್ಷಣಾ ಜಾಮೀನು ಸಾಮಾನ್ಯ ಜಾಮೀನಾಗಿ ಪರಿವರ್ತನೆಗೊಳ್ಳುತ್ತದೆ.
ಪ್ರಶ್ನೆ: ವಿಚಾರಣಾಧೀನ ಖೈದಿಗಳನ್ನು ಬಂಧಿಸಬಹುದಾದ ಗರಿಷ್ಠ ಅವಧಿ ಏನು?
ಉತ್ತರ: ಸಿಆರ್ಪಿಸಿಯ ಸೆಕ್ಷನ್ 436 ಎ ಪ್ರಕಾರ ನ್ಯಾಯಾಲಯವು ವಿಚಾರಣಾಧೀನ ಖೈದಿಯನ್ನು ಅವರು ಶಿಕ್ಷೆಗೊಳಗಾಗಿದ್ದರೆ, ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಶಿಕ್ಷೆಯಾಗಿ ಈಗಾಗಲೇ ಅವರು ಪೂರೈಸಿದ್ದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ.
ಪ್ರಶ್ನೆ: ನಾನು ಜಾಮೀನುರಹಿತ ಅಪರಾಧ ಎಸಗಿದ್ದರೆ ಆಗಲೂ ಜಾಮೀನು ಪಡೆಯಬಹುದೇ?
ಉತ್ತರ: ಹೌದು, ಜಾಮೀನು ರಹಿತ ಅಪರಾಧಗಳಿಗೂ ಆರೋಪಿ ಜಾಮೀನು ಪಡೆಯಬಹುದಾಗಿದೆ. ಅಪರಾಧದ ಗಂಭೀರತೆ ಮತ್ತು ನ್ಯಾಯಾಲಯದ ವಿವೇಚನೆಗೆ ಅನುಗುಣವಾಗಿ ಸೆಷನ್ಸ್ ಕೋರ್ಟ್ ಅಥವಾ ಹೈಕೋರ್ಟ್ನಿಂದ ಜಾಮೀನು ಪಡೆಯಬಹುದು. ಜಾಮೀನು ಒಂದು ನಿಯಮ, ಆದರೆ ಕಾರಾಗ್ರಹ ಇದಕ್ಕೆ ಹೊರತಾಗಿದೆ.
ಪ್ರಶ್ನೆ: ಜಾಮೀನು ನೀಡುವ ಅಪರಾಧದಲ್ಲಿ ನಾನು ಜಾಮೀನು ಪಡೆಯಬೇಕೆ?
ಉತ್ತರ: ಹೌದು, ಜಾಮೀನು ನೀಡುವ ಅಪರಾಧದ ಆರೋಪ ನಿಮಮ್ ಮೇಲಿದ್ದರೆ ನೀವು ಖಂಡಿತವಾಗಿಯೂ ಜಾಮೀನು ಪಡೆಯಬೇಕು. ಆದರೆ ಇದಕ್ಕಾಗಿ ನೀವು ನ್ಯಾಯಾಲಯಕ್ಕೆ ಹೋಗಬೇಕಾಗಿಲ್ಲ, ಅದನ್ನು ಪೋಲೀಸ್ ಅಧಿಕಾರಿ ನೀಡುತ್ತಾರೆ.
ಪ್ರಶ್ನೆ: ನ್ಯಾಯಾಲಯಗಳು ಜಾಮೀನನ್ನು ಯಾವಾಗ ನಿರಾಕರಿಸಬಹುದು?
ಉತ್ತರ: ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧಕ್ಕೆ ಆರೋಪಿಯು ತಪ್ಪಿತಸ್ಥನಂತೆ ಕಂಡುಬಂದರೆ ಆರೋಪಿಯನ್ನು ಬಿಡುಗಡೆ ಮಾಡುವುದಿಲ್ಲ. ಮತ್ತು ಈ ಹಿಂದೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಿಕ್ಷಗೊಳಗಾಗಿದ್ದರೆ ಅಥವಾ ಈ ಹಿಂದೆ ಮರಣದಂಡನೆ, ಜೀವಾವಧಿ ಶಿಕ್ಷೆ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲದ ಜೈಲು ಶಿಕ್ಷೆಗೆ ಗುರಿಯಾಗಿದ್ದರೆ ಜಾಮೀನು ನೀಡುವುದಿಲ್ಲ.
ಪ್ರಶ್ನೆ: ಜಾಮೀನು ರದ್ದತಿ ಎಂದರೇನು?
ಉತ್ತರ: ನ್ಯಾಯಾಲಯಕ್ಕೆ ಜಾಮೀನನ್ನು ನಂತರದ ಹಂತಗಳಲ್ಲೂ ರದ್ದು ಮಾಡುವ ಅಧಿಕಾರವಿದೆ. ಸಿಆರ್ಪಿಸಿ ಸೆಕ್ಷನ್ 437(5) ಮತ್ತು 439(2) ಅಡಿಯಲ್ಲಿ ನ್ಯಾಯಾಲಯಕ್ಕೆ ಈ ಅಧಿಕಾರವಿದೆ. ಸೂಕ್ತ ಕಾರಣಗಳನ್ನು ನೀಡುವ ಮೂಲಕ ನ್ಯಾಯಾಲಯವು ಜಾಮೀನನ್ನು ರದ್ದುಗೊಳಿಸಿ ವ್ಯಕ್ತಿಯನ್ನು ಬಂಧಿಸುವಂತೆ ಪೋಲೀಸರಿಗೆ ನಿರ್ದೇಶಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ