HOME » NEWS » Explained » EXPLAINED WHAT IS ABORTION WHAT DOES THE LAW SAY ON ABORTION AND HOW TO GO FOR IT LEGALLY SKTV

Explained: ಗರ್ಭಪಾತ ಎಂದರೇನು? ಭಾರತದ ಕಾನೂನಿನಲ್ಲಿ ಇದಕ್ಕಿರುವ ನಿಯಮಗಳೇನು?

ಗರ್ಭಪಾತ ಎಂದರೇನು? ನಮ್ಮ ದೇಶದ ಕಾನೂನು ಗರ್ಭಪಾತದ ಬಗ್ಗೆ ಏನು ಹೇಳುತ್ತದೆ? ಯಾವ ವಯಸ್ಸಿನವರು, ಯಾವ ಪರಿಸ್ಥಿತಿಯಲ್ಲಿ, ಯಾರ ಉಪಸ್ಥಿತಿಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದು? ಈ ಎಲ್ಲಾ ಅನುಮಾನಗಳಿಗೆ ಸೂಕ್ತ ಪರಿಹಾರ ಇಲ್ಲಿದೆ.

news18-kannada
Updated:May 11, 2021, 11:57 AM IST
Explained: ಗರ್ಭಪಾತ ಎಂದರೇನು? ಭಾರತದ ಕಾನೂನಿನಲ್ಲಿ ಇದಕ್ಕಿರುವ ನಿಯಮಗಳೇನು?
ಸಾಂದರ್ಭಿಕ ಚಿತ್ರ
  • Share this:
ಗರ್ಭಪಾತ ಎಂದರೇನು?

ಗರ್ಭಧಾರಣೆಯನ್ನು ಕೊನೆಗೊಳಿಸುವ ವಿಧಾನವನ್ನು ಗರ್ಭಪಾತ ಎನ್ನುತ್ತಾರೆ. ಗರ್ಭಾಶಯದಿಂದ ಭ್ರೂಣ ಅಥವಾ ಜರಾಯುವನ್ನು ತೆಗೆದುಹಾಕಲು ಔಷಧ ಅಥವಾ ಶಸ್ತ್ರಚಿಕಿತ್ಸೆಯನ್ನು ಬಳಸುವ ವಿಧಾನವಾಗಿದೆ.

ಭಾರತದಲ್ಲಿ ಗರ್ಭಪಾತ ಕಾನೂನುಬದ್ಧವಾಗಿದೆಯೇ?

ಹೌದು, ಇದು ವೈದ್ಯಕೀಯವಾಗಿ ಸೂಚಿಸಿದಾಗ ಮಾತ್ರ ಕಾನೂನುಬದ್ಧವಾಗಿರುತ್ತದೆ ಆದರೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

ನೋಂದಾಯಿತ ವೈದ್ಯರಿಂದ ಗರ್ಭಧಾರಣೆಯನ್ನು ಯಾವಾಗ ಕೊನೆಗೊಳಿಸಬಹುದು?

ಗರ್ಭಧಾರಣೆಯನ್ನು ಎರಡು ಹಂತಗಳಲ್ಲಿ ಕೊನೆಗಾಣಿಸಬಹುದು:

1)ಗರ್ಭವು 20 ವಾರಗಳಿಗಿಂತ ಕಡಿಮೆಯದ್ದಾಗಿದ್ದರೆ ಓರ್ವ ತಜ್ಞ ವೈದ್ಯರು ಅದನ್ನು ಕೊನೆಗಾಣಿಸಬಹುದು.2)ಗರ್ಭವು 20 ವಾರಗಳಿಗಿಂತ ಹೆಚ್ಚು ಮತ್ತು 24 ವಾರಗಳಿಗಿಂತ ಕಡಿಮೆಯದ್ದಾಗಿದ್ದರೆ ಕನಿಷ್ಠ ಇಬ್ಬರು ವೈದ್ಯರ ಉಪಸ್ಥಿತಿಯಲ್ಲಿ ಗರ್ಭವನ್ನು ಕೊನೆಗೊಳಿಸಬಹುದಾಗಿದೆ.

ಗರ್ಭಧಾರಣೆಯನ್ನು ಕೊನೆಗೊಳಿಸಬಹುದಾದ ಸ್ಥಳ:

ಸರ್ಕಾರವು ಸ್ಥಾಪಿಸಿದ ಅಥವಾ ನಿರ್ವಹಿಸುವ ಆಸ್ಪತ್ರೆಯಲ್ಲಿ ಅಥವಾ ಈ ಉದ್ದೇಶಕ್ಕಾಗಿ ಸರ್ಕಾರವು ಅನುಮೋದಿಸಿದ ಸ್ಥಳದಲ್ಲಿ ಮಾತ್ರ ಗರ್ಭಧಾರಣೆಯನ್ನು ಕೊನೆಗೊಳಿಸಬಹುದು.

ನನ್ನ ವಯಸ್ಸು 18 ವರ್ಷಗಳಿಗಿಂತ ಕಡಿಮೆ ಇದ್ದರೆ ನಾನು ಗರ್ಭಪಾತ ಮಾಡಿಸಿಕೊಳ್ಳಬಹುದೇ?

ಹೌದು, 18 ವರ್ಷಗಳಿಗಿಂತ ಕಡಿಮೆ ಮಯಸ್ಸಿನ ಹೆಣ್ಣುಮಕ್ಕಳು ಗರ್ಭಪಾತವನ್ನು ಆಯ್ದುಕೊಳ್ಳಬಹುದು, ಆದರೆ ಪಾಲಕರ ಒಪ್ಪಿಗೆ ಕಡ್ಡಾಯವಾಗಿದೆ.

ಅವಿವಾಹಿತ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳಬಹುದೇ?

ಭಾರತದಲ್ಲಿ ಗರ್ಭಪಾತವು ಮಹಿಳೆ ಮತ್ತು ಭ್ರೂಣದ ಆರೋಗ್ಯದ ಬಗೆಗಿನ ಕಾಳಜಿಯಿಂದ ಪ್ರೇರೇಪಿತವಾಗಿದೆ. ಗರ್ಭಧಾರಣೆಯ ಮುಂದುವರಿಕೆಯಿಂದ ಗರ್ಭಿಣಿಯ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ ಅಥವಾ ಆಕೆಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರವಾಗಿ ಘಾಸಿ ಉಂಟುಮಾಡುತ್ತದೆ ಎಂದಾದಲ್ಲಿ ಆಕೆಯ ಗರ್ಭಧಾರಣೆಯನ್ನು ಕೊನೆಗಾಣಿಸಲು ಕಾನೂನಿನಲ್ಲಿ ಅವಕಾಶವಿದೆ.

ಗರ್ಭಪಾತಕ್ಕೆ ಯಾರ ಒಪ್ಪಿಗೆ ಬೇಕು ?

ಗರ್ಭಪಾತಕ್ಕೆ ಗರ್ಭಿಣಿ ಮಹಿಳೆಯ ಒಪ್ಪಿಗೆ ಮಾತ್ರ ಸಾಕಾಗುತ್ತದೆ, ಆಕೆಯ ಹೆತ್ತವರು ಅಥವಾ ಪತಿಯ ಒಪ್ಪಿಗೆ ಕೂಡಾ ಬೇಡ. ಆದರೆ ಮಹಿಳೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದರೆ ಅಥವಾ ಮಾನಸಿಕ ಅಸ್ವಸ್ಥಳಾಗಿದ್ದರೆ ಮಾತ್ರ ಆಕೆಯ ಜವಾಬ್ದಾರಿ ತೆಗೆದುಕೊಂಡಿರುವ ಹಿತೈಷಿಯ ಒಪ್ಪಿಗೆ ಕಡ್ಡಾಯವಾಗಿರುತ್ತದೆ.
Youtube Video

24 ವಾರಗಳ ಮಿತಿಯ ನಂತರ ಗರ್ಭಪಾತಕ್ಕೆ ಅನುಮತಿ ಸಿಗುವುದಿಲ್ಲವೇ?

ಮಹಿಳೆಯ ಜೀವಕ್ಕೆ ಹೆಚ್ಚಿನ ಅಪಾಯವಿದ್ದರೆ ಮತ್ತು ಭ್ರೂಣಕ್ಕೆ ಭವಿಷ್ಯದಲ್ಲಿ ಗಮನೀಯ ವಿರೂಪಗಳು ಉಂಟಾಗುವ ಸಾಧ್ಯತೆಗಳು ಕಂಡುಬಂದರೆ ನ್ಯಾಯಾಲಯವು 24 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶ ನೀಡುತ್ತದೆ.
Published by: Soumya KN
First published: May 11, 2021, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories