ಭಾರತದ ಪ್ರಮುಖ ಆಹಾರಗಳಲ್ಲಿ (Food) ಗೋಧಿ (Wheat) ಹಾಗೂ ಗೋಧಿ ಉತ್ಪನ್ನ (Wheat product) ಕೂಡ ಒಂದು. ಉತ್ತರ ಭಾರತದಲ್ಲಿ (North India) ಹೆಚ್ಚಾಗಿ ಉಪಯೋಗಿಸಲ್ಪಡುವ ಗೋಧಿಯನ್ನು, ದಕ್ಷಿಣ ಭಾರತದಲ್ಲೂ (South India) ಇಷ್ಟಪಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ (Market) ದಿನಾ ದಿನ ಗೋಧಿ, ಗೋಧಿ ಹಿಟ್ಟು (Wheat flour), ಗೋಧಿ ಉತ್ಪನ್ನಗಳ ಬೆಲೆ (Price) ಏರಿಕೆಯಾಗುತ್ತಿದೆ. ಏಪ್ರಿಲ್ನಲ್ಲಿ ಪ್ರತಿ ಕೆಜಿಗೆ ರೂ 32.38 ಆಗಿತ್ತು. ಇದೀಗ 59 ರೂಪಾಯಿವರೆಗೂ ಬೆಲೆ ಇದೆ. ಭಾರತದಲ್ಲಿ ಗೋಧಿಯ ಉತ್ಪಾದನೆ (Production) ಮತ್ತು ದಾಸ್ತಾನು ಎರಡೂ ಕುಸಿದಿರುವುದರಿಂದ ಗೋಧಿ ಹಿಟ್ಟಿನ ಬೆಲೆಗಳು ಏರುತ್ತಿವೆ ಮತ್ತು ದೇಶದ ಹೊರಗೆ ಬೇಡಿಕೆ (Demand) ಹೆಚ್ಚುತ್ತಿದೆ. ಹಾಗಿದ್ರೆ ಇದಕ್ಕೆ ಮುಖ್ಯ ಕಾರಣ ಏನು? ಜನ ಸಾಮಾನ್ಯರ ಮೇಲೆ ಇದರ ಪರಿಣಾಮವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಶೇಕಡಾ 9.15ರಷ್ಟು ಬೆಲೆ ಏರಿಕೆ
ಇತ್ತೀಚಿಗೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ರಾಜ್ಯ ನಾಗರಿಕ ಸರಬರಾಜು ಇಲಾಖೆಗಳು ವರದಿ ಮಾಡಿದ ಅಂಕಿಅಂಶಗಳು ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ತೋರಿಸುತ್ತಿದೆ. 12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ಗೋಧಿ ತಲುಪಿದೆ. ಮೇ 7, ಶನಿವಾರದಂದು ಸರಾಸರಿ ಚಿಲ್ಲರೆ ದರವು ಪ್ರತಿ ಕೆಜಿಗೆ 32.78 ರೂಪಾಯಿ ಆಗಿತ್ತು. ಅಂದರೆ ಇದು ಸಾಮಾನ್ಯ ಬೆಲೆಗಿಂತ ಶೇಕಡಾ 9.15ರಷ್ಟು ಹೆಚ್ಚಾಗಿದೆ.
ಹಲವು ನಗರಗಳಲ್ಲಿ ಬೆಲೆ ಏರಿಕೆ
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ದೇಶದ 156 ಕೇಂದ್ರಗಳಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗಿದೆ. ಪೋರ್ಟ್ ಬ್ಲೇರ್ನಲ್ಲಿ ಅತಿ ಹೆಚ್ಚು ಅಂದರೆ 59 ರೂಪಾಯಿ, ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಅತೀ ಕಡಿಮೆ ಅಂದರೆ 22 ರೂಪಾಯಿ ಬೆಲೆ ನಿಗದಿಯಾಗಿದೆ. ಇನ್ನು ಮುಂಬೈನಲ್ಲಿ 49 ರೂಪಾಯಿ, ಚೆನ್ನೈನಲ್ಲಿ 34 ರೂಪಾಯಿ, ಕೋಲ್ಕತ್ತಾದಲ್ಲಿ 29 ರೂಪಾಯಿ ಹಾಗೂ ದೆಹಲಿಯಲ್ಲಿ 27 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Explained: ಶವರ್ಮಾ ತಿಂದ ಕೂಡಲೇ ಬಾಲಕಿ ಸತ್ತಿದ್ದು ಹೇಗೆ? ಶಿಗೆಲ್ಲ ಬ್ಯಾಕ್ಟೀರಿಯಾ ಎಂದರೇನು? ವೈರಸ್ ಇಷ್ಟು ಬೇಗ ಜೀವ ತೆಗೆಯುತ್ತಾ?
ಉಕ್ರೇನ್ ಯುದ್ಧದಿಂದಾಗಿ ಭಾರತದ ಗೋಧಿಗೆ ಬೇಡಿಕೆ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ ಉತ್ಪಾದನೆಯ ಕುಸಿತದ ನಡುವೆ ಗೋಧಿ ಬೆಲೆಯಲ್ಲಿನ ಏರಿಕೆ ಮತ್ತು ಭಾರತೀಯ ಗೋಧಿಗೆ ಹೆಚ್ಚಿನ ಸಾಗರೋತ್ತರ ಬೇಡಿಕೆಯಿಂದಾಗಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗಿದೆ. ಡೀಸೆಲ್ನ ಹೆಚ್ಚಿನ ದೇಶೀಯ ಬೆಲೆಯು ಗೋಧಿ ಮತ್ತು ಹಿಟ್ಟಿನ ಸಾರಿಗೆ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.
ಗೋಧಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ
ಗೋಧಿ ಹಿಟ್ಟಿನೊಂದಿಗೆ, ಬೇಕರಿ ಬ್ರೆಡ್ನ ಬೆಲೆಗಳು ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ಏರಿಕೆ ದಾಖಲಿಸಿವೆ. ಬೇಕರಿ ಬ್ರೆಡ್ನ ಚಿಲ್ಲರೆ ಹಣದುಬ್ಬರವು ಈ ವರ್ಷದ ಮಾರ್ಚ್ನಲ್ಲಿ ಶೇಕಡಾ 8.39 ರಷ್ಟಿತ್ತು. ದೇಶದಲ್ಲಿ ಗೋಧಿ ಉತ್ಪಾದನೆಯಲ್ಲಿ ಕುಸಿತವಾಗುತ್ತಿರುವ ಸಮಯದಲ್ಲಿ ಹಿಟ್ಟು ಮತ್ತು ಬ್ರೆಡ್ ಬೆಲೆಗಳು ಏರುತ್ತಿವೆ.
110 ಮಿಲಿಯನ್ ಟನ್ ಉತ್ಪಾದನೆ ಗುರಿ
ಸರ್ಕಾರವು 2021-22 ಕ್ಕೆ 110 ಮಿಲಿಯನ್ ಟನ್ ಗೋಧಿ ಉತ್ಪಾದನೆಯ ಗುರಿಯನ್ನು ಹೊಂದಿತ್ತು, ಇದು 2020-21 ರಲ್ಲಿ ಅಂದಾಜು 109.59 ಮಿಲಿಯನ್ ಟನ್ ಉತ್ಪಾದನೆಗಿಂತ ಹೆಚ್ಚಾಗಿದೆ. ವಾಸ್ತವವಾಗಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ವರ್ಷದ ಫೆಬ್ರವರಿ 16 ರಂದು ಬಿಡುಗಡೆ ಮಾಡಿದ ಎರಡನೇ ಮುಂಗಡ ಅಂದಾಜುಗಳು, 2021-22 ರ ಒಟ್ಟು ಗೋಧಿ ಉತ್ಪಾದನೆಯನ್ನು 111.32 ಮಿಲಿಯನ್ ಟನ್ಗಳಿಗೆ ನಿಗದಿಪಡಿಸಲಾಗಿದೆ.
ಬಿರು ಬಿಸಿಲಿನಿಂದ ಗೋಧಿ ಮೇಲೆ ಪರಿಣಾಮ
ಮಾರ್ಚ್ನಲ್ಲಿ ತಾಪಮಾನದಲ್ಲಿನ ಹಠಾತ್ ಹೆಚ್ಚಳವು ದಾಖಲೆಯ ಗೋಧಿ ಉತ್ಪಾದನೆಯ ಸರ್ಕಾರದ ಗುರಿಯನ್ನು ಕುಗ್ಗಿಸಿತು. 2021-22ರ ಒಟ್ಟು ಗೋಧಿ ಉತ್ಪಾದನೆಯು ಗುರಿಗಿಂತ ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಈಗ ಹೇಳುತ್ತಾರೆ. ಗೋಧಿ ಇಳುವರಿ ಕುಸಿತಕ್ಕೆ ಬೇಸಿಗೆಯ ಆರಂಭವೇ ಕಾರಣ ಎಂದು ಆಹಾರ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಖರೀದಿದಾರರಿಂದ ಹೆಚ್ಚಾದ ಬೇಡಿಕೆ
ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಖರೀದಿದಾರರಿಂದ ಹೆಚ್ಚಿನ ಬೇಡಿಕೆಯಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಬೆಲೆಗಳು ಸರ್ಕಾರವು ಘೋಷಿಸಿದ ಕ್ವಿಂಟಲ್ಗೆ ಕನಿಷ್ಠ ಬೆಂಬಲ ಬೆಲೆ 2015ರಷ್ಟಾಗಿದೆ.
ಉಚಿತ ಪಡಿತರದಿಂದ ಗೋಧಿ ಸಂಗ್ರಹಕ್ಕೆ ಹೊಡೆತ
ಉಚಿತ ಪಡಿತರದಲ್ಲಿ ಗೋಧಿ ನೀಡುತ್ತಿರುವುದೂ ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಇದರ ಅಡಿಯಲ್ಲಿ NFSA ಅಡಿಯಲ್ಲಿ ಒಳಗೊಂಡಿರುವ ವೈಯಕ್ತಿಕ ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದೂ ಗೋಧಿ ಬೆಲೆ ಏರಿಕೆಗೆ ಕಾರಣಾವಾಗಿದೆ.
ಪಡಿತರದಲ್ಲಿ ಗೋಧಿ ಪ್ರಮಾಣ ಇಳಿಕೆ
ಪರಿಷ್ಕರಣೆ ನಂತರ, PMGKAY ಅಡಿಯಲ್ಲಿ ಗೋಧಿ ಹಂಚಿಕೆ ತಿಂಗಳಿಗೆ 18.21 ಲಕ್ಷ ಟನ್ಗಳಿಂದ ಮಾಸಿಕ 7.12 ಲಕ್ಷ ಟನ್ಗಳಿಗೆ ಇಳಿಯುತ್ತದೆ, ಇದು PMGKAY ಯ ಉಳಿದ ಐದು ತಿಂಗಳ ಅವಧಿಯಲ್ಲಿ ಸುಮಾರು 55 ಲಕ್ಷ ಟನ್ಗಳಷ್ಟು ಗೋಧಿಯನ್ನು ಉಳಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಸೆಪ್ಟೆಂಬರ್ ವರೆಗೆ.
ಇದನ್ನೂ ಓದಿ: Explained: ತಾಜ್ ಮಹಲ್ಲೋ, ತೇಜೋ ಮಹಾಲಯವೋ? ಮುಚ್ಚಿದ ಆ 20 ಕೋಣೆಗಳಲ್ಲಿ ಏನಿದೆ ಗೊತ್ತಾ?
ಕಡಿಮೆಯಾದ ಗೋಧಿ ಬದಲಿಗೆ ಅಕ್ಕಿ
ಕೇಂದ್ರವು ರಾಜ್ಯಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, 'ಮೇ ನಿಂದ ಸೆಪ್ಟೆಂಬರ್ವರೆಗೆ ಉಳಿದ 5 ತಿಂಗಳವರೆಗೆ ಎಲ್ಲಾ 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಕಿ ಮತ್ತು ಗೋಧಿಯ ಹಂಚಿಕೆ ಬದಲಾಯಿಸಲು ನಿರ್ಧರಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, ಕಡಿಮೆ ಮಾಡಿದ ಗೋಧಿಯ ಪ್ರಮಾಣದ ಬದಲಿಗೆ ಅಕ್ಕಿಯನ್ನು ಒದಗಿಸಲಿದೆ. ಈ ತಿದ್ದುಪಡಿಯು ಪಿಎಂಜಿಕೆವೈಗೆ ಮಾತ್ರ ಅನ್ವಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ