ರಾಮಾಯಣವನ್ನು(Ramayana) ಆಧರಿಸಿದ ಮಹಾಕಾವ್ಯ ರಾಮಚರಿತಮಾನಸವನ್ನು(Ramacharithamanasa) 16 ನೇ ಶತಮಾನದ ಭಾರತೀಯ ಭಕ್ತಿ ಕವಿ ತುಳಸಿದಾಸರು(Tulasidasa) ರಚಿಸಿದ್ದಾರೆ. ಮಹಾಕಾವ್ಯದಲ್ಲಿ ಕೆಲವೊಂದು ಪ್ರಸ್ತಾವನೆಗಳ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಪವಿತ್ರ ಮಹಾನ್ ಕಾವ್ಯಕ್ಕೆ ವಿರೋಧ ವ್ಯಕ್ತವಾಗಿದೆ. ಇದರಲ್ಲಿ ಕೆಳಜಾತಿಯ ವರ್ಗಕ್ಕೆ ಶಿಕ್ಷಣವನ್ನು(Education) ನಿರಾಕರಿಸಲಾಗಿದೆ ಎಂಬುದು ಹೆಚ್ಚು ಚರ್ಚಗೆ(Discuss) ಗ್ರಾಸವಾಗಿದ್ದು, ಸ್ತ್ರೀಯರನ್ನು ದುರ್ಬಲರು ಅಸಹಾಯಕರು ಎಂದು ಉಲ್ಲೇಖಿಸಲಾಗಿದೆ ಎಂಬುದು ಮತ್ತೊಂದು ಅಂಶವಾಗಿದೆ.
ಧರ್ಮದ ಹೆಸರಿನಲ್ಲಿ ಜಾತಿನಿಂದನೆ
ಭಗವಾನ್ ರಾಮ ಹಿಂದೂ ಧರ್ಮದಲ್ಲಿ ಪೂಜನೀಯವಾಗಿರುವ ದೇವರಾಗಿದ್ದಾರೆ. ಆದರೂ, ಇತ್ತೀಚಿನ ದಿನಗಳಲ್ಲಿ, ರಾಮಚರಿತಮಾನಸ ಅದರಲ್ಲಿರುವ ಕೆಲವೊಂದು ಉಲ್ಲೇಖಗಳಿಂದ ತೀವ್ರ ವಿವಾದಕ್ಕೆ ಒಳಗಾಗಿದೆ. ರಾಮನು ಹೇಳಿರುವ ಕೆಲವೊಂದು ಮಾತುಗಳು ಶೂದ್ರರನ್ನು ಕೀಳಾಗಿಸಿ ಸಂಬೋಧಿಸಿದೆ ಎಂಬುದು ಟೀಕಾಕಾರರ ಅಭಿಪ್ರಾಯವಾಗಿದೆ. ಮಹಾಕಾವ್ಯದಲ್ಲಿ ಶೂದ್ರ ಜಾತಿಯನ್ನೇ ಹೆಚ್ಚಾಗಿ ಬಿಂಬಿಸಲಾಗಿದ್ದು, ಧರ್ಮದ ಹೆಸರಿನಲ್ಲಿ ಜಾತಿನಿಂದನೆ ಮಾಡಲಾಗುತ್ತಿದೆ ಎಂಬುದು ಪ್ರಸ್ತುತ ಚರ್ಚೆಗೆ ಗ್ರಾಸವಾಗಿದೆ.
ಕೆಳವರ್ಗದವರು ಶಿಕ್ಷಿತರಾದರೆ ಹಾವಿನಂತೆ ವಿಷಕಾರಿಯಾಗುತ್ತಾರೆ
ನಳಂದಾ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಮಚರಿತಮಾನಸದಲ್ಲಿ ನಮೂದಿಸಿರುವ ಒಂದು ವಿಷಯವು ದೇಶಾದ್ಯಂತ ಗಮನಸೆಳೆಯಿತು. ಕೆಳವರ್ಗದ ಜನರು ಶಿಕ್ಷಿತರಾದರೆ ಅವರು ಹಾವಿನಂತೆ ವಿಷಕಾರಿಯಾಗುತ್ತಾರೆ ಎಂಬ ಮಾತು ರಾಮಚರಿತ ಮಾನಸವನ್ನೇ ವಿರೋಧಿಸುವಷ್ಟರ ಮಟ್ಟಿಗೆ ಗುಲ್ಲೆಬ್ಬಿಸಿತು. ಈ ಮಹಾಕಾವ್ಯದ ಬಗ್ಗೆ ಮತ್ತು ಅದನ್ನು ರಚಿಸಿದ ತುಳಸೀದಾಸರ ಕುರಿತು ಈ ಲೇಖನದಲ್ಲಿ ಮಾಹಿತಿ ತಿಳಿಸಲಾಗಿದೆ. ಜೊತೆಗೆ ಇಂತಹ ಸಂದೇಶಗಳನ್ನು ಪವಿತ್ರ ಮಹಾಕಾವ್ಯದಲ್ಲಿ ಉಲ್ಲೇಖಿಸಲಾಗಿದೆಯೇ ಎಂಬುದನ್ನು ತಿಳಿಯೋಣ.
ಮಾಜಿ ಸಚಿವರ ಹೇಳಿಕೆ ಏನು?
ಸಮಾಜವಾದಿ ಎಂಎಲ್‌ಸಿ ಪಕ್ಷ ಮತ್ತು ಬಿಜೆಪಿ ಮತ್ತು ಬಿಎಸ್‌ಪಿ ನೇತೃತ್ವದ ಯುಪಿ ಸರ್ಕಾರಗಳ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆಯೊಂದನ್ನು ನೀಡಿದ್ದು, ಧರ್ಮದ ಹೆಸರಿನಲ್ಲಿ ಜಾತಿ ನಿಂದನೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಕೋಟ್ಯಾಂತರ ಜನರು ರಾಮಚರಿತಮಾನಸವನ್ನು ಓದುವುದಿಲ್ಲ.
ಧರ್ಮವನ್ನು ಸ್ವಾಗತಿಸುತ್ತೇವೆ ಹಾಗೂ ಗೌರವಿಸುತ್ತೇವೆ. ದಲಿತರು, ಬುಡಕಟ್ಟುಗಳು, ಹಿಂದುಳಿದವರು, ಅವರ ಜಾತಿಗಳನ್ನು ಹೆಸರಿಸಿ ಅವರನ್ನು ಶೂದ್ರರು ಎಂದು ಕರೆಯುವ ಮೂಲಕ ಏಕೆ ನಿಂದಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Milk Price: ಗಗನಮುಖಿಯಾದ ಹಾಲಿನ ದರ: ಡೈರಿ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವೇನು?
ರಾಮಚರಿತಮಾನಸದ ಕುರಿತು
ಈ ಕವಿತೆಯನ್ನು 16 ನೇ ಶತಮಾನದಲ್ಲಿ ಅವಧಿ ಉಪಭಾಷೆಯಲ್ಲಿ ಬರೆಯಲಾಗಿದ್ದು ಈ ಭಾಷೆಯನ್ನು ಲಕ್ನೋ, ಪ್ರಯಾಗರಾಜ್ ಮತ್ತು ಅಯೋಧ್ಯೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಇದನ್ನು ಏಳು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ (ಕಾಂಡ್) ಇದು ಭಗವಾನ್ ರಾಮನ ಜನ್ಮದಿಂದ ಆರಂಭಿಸಿ ಆತ ಅಯೋಧ್ಯೆಯ ರಾಜನಾಗುವವರೆಗಿನ ಕಥೆಯನ್ನು ತಿಳಿಸುತ್ತದೆ.
ರಾಮಾಯಣವನ್ನು ಆಧರಿಸಿರುವ ರಾಮಚರಿತ ಮಾನಸ
ರಾಮಚರಿತಮಾನಸವು ವಾಲ್ಮೀಕಿ ಋಷಿಯ ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿದೆ. ಇಂಡೋ-ಗಂಗೆಟಿಕ್ ಪ್ರದೇಶದಲ್ಲಿ ಅತ್ಯಂತ ಪವಿತ್ರ ಪುಸ್ತಕವಾಗಿದೆ ಮತ್ತು ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಹೆಚ್ಚು ವ್ಯಾಪಕವಾಗಿ ಓದುವ ಪವಿತ್ರ ಪುಸ್ತಕಗಳಲ್ಲಿ ಒಂದೆನಿಸಿದ್ದು, ಗೀತಾ ಪ್ರೆಸ್ ಸುಮಾರು 7 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದೆ. ಹಿಂದಿಯಲ್ಲಿ ರಾಮಾಯಣದ ಉಲ್ಲೇಖವು ಸಾಮಾನ್ಯವಾಗಿ ರಾಮಚರಿತ್‌ಮಾನಸ್ ಎಂಬರ್ಥವನ್ನು ಹೊಂದಿದೆ.
ಗೊಸ್ವಾಮಿ ತುಳಸೀದಾಸರ ಕುರಿತು
ರಾಮಚರಿತಮಾನಸವನ್ನು ರಚಿಸಿರುವ ತುಳಸೀದಾಸರು ಬ್ರಾಹ್ಮಣರಾಗಿದ್ದು, ಅವರ ಮೂಲ ಹೆಸರು ರಾಮ್ ಬೋಲಾ ದುಬೆ ಎಂದಾಗಿದೆ. ಇವರು ಇಂದಿನ ಬಂದಾ ಜಿಲ್ಲೆಯ ಯಮುನಾದಿಂದ ರಾಜಪುರದಲ್ಲಿ ಜನಿಸಿದರು ಎಂದು ನಂಬಲಾಗಿದೆ.
ರಾಮನವಮಿಯ ದಿನದಂದು ರಾಮಚರಿತಮಾನಸ ರಚನೆ ಆರಂಭ
ವಾರಣಾಸಿಯ ಗಂಗಾನದಿಯ ದಡದಲ್ಲಿ ರಾಮಚರಿತಮಾನಸವನ್ನು ರಚಿಸಿದರು. 1574 ರಲ್ಲಿ ರಾಮನವಮಿಯ ದಿನದಂದು ತುಳಸೀದಾಸರು ರಾಮಚರಿತಮಾನಸವನ್ನು ಬರೆಯಲು ಆರಂಭಿಸಿದರು ಹಾಗೂ ಮುಂದಿನ ವರ್ಷಗಳಲ್ಲಿ ಕವಿತೆಯನ್ನು ಪೂರ್ಣಗೊಳಿಸಿದರು ಎಂಬುದಾಗಿ ಉಲ್ಲೇಖಗೊಂಡಿದೆ.
ಮೊದಲ ಅಧ್ಯಾಯದ (ಬಾಲ್ ಕಂಡ್) ಏಳನೇ ಶ್ಲೋಕದಲ್ಲಿ ತುಳಸೀದಾಸರು ತಮ್ಮ ಸ್ವಂತ ಸಂತೋಷಕ್ಕಾಗಿ ರಘುನಾಥನ (ಭಗವಾನ್ ರಾಮ) ಕಥೆಯನ್ನು ಬರೆದಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.
ತುಳಸಿದಾಸರು ಅಬ್ದುರ್ರಹೀಮ್ ಖಾನ್-ಎ-ಖಾನನ್ ಜೊತೆ ನಿಕಟವಾಗಿದ್ದರು
ಚಕ್ರವರ್ತಿ ಅಕ್ಬರನ ಆಳ್ವಿಕೆಯ ಸಮಯದಲ್ಲಿ ಮಹಾಕವಿ ತುಳಸೀದಾಸರು ವಾಸಿಸುತ್ತಿದ್ದು ಬೈರಾಮ್ ಖಾನ್ ಮಗ ಅಬ್ದುರ್ರಹೀಮ್ ಖಾನ್-ಎ-ಖಾನನ್ ಜೊತೆ ನಿಕಟವಾಗಿದ್ದರು ಎಂದು ವರದಿಯಾಗಿದೆ. ಇವರಿಬ್ಬರೂ ಕಾವ್ಯಾತ್ಮಕ ಸಂವಹನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದಾಗಿಯೂ ಕೆಲವು ಇತಿಹಾಸಕಾರರು ತಿಳಿಸಿದ್ದಾರೆ.
ಪ್ರಾದೇಶಿಕ ಭಾಷೆಯಲ್ಲಿ ಮಹಾಕಾವ್ಯದ ರಚನೆ
ತುಳಸಿದಾಸರು ಭಗವಾನ್ ರಾಮನ ಕಥೆಯನ್ನು ಜನಸಾಮಾನ್ಯರಲ್ಲಿ ಜನಪ್ರಿಯಗೊಳಿಸಿದರು ಇದಕ್ಕೆ ಕಾರಣ ಅವರು ಹೆಚ್ಚಿನ ಜನರಿಗೆ ಅರ್ಥವಾಗುವ ಪ್ರಾದೇಶಿಕ ಭಾಷೆಯಲ್ಲಿ ಮಹಾಕಾವ್ಯವನ್ನು ರಚಿಸಿದ್ದಾರೆ. ಇದರಿಂದ ಅವರು ಆ ಕಾಲದ ವಿದ್ವಾಂಸರ ಕ್ರೋಧವನ್ನು ಎದುರಿಸಬೇಕಾಯಿತು. ಹಾಗೂ ತಮ್ಮ ವೇದನೆಯನ್ನು ಹೊರಹಾಕಿದ್ದಾರೆ.
ನನ್ನ ಮಗನಿಗೆ ಬೇರೆ ಯಾರದೋ ಮಗಳೊಂದಿಗೆ ವಿವಾಹ ಮಾಡಬೇಕಾಗಿಲ್ಲ ಅಥವಾ ಜಾತಿಯನ್ನು ಕೀಳಾಗಿಸುವ ಪ್ರವೃತ್ತಿ ನನ್ನದಲ್ಲ. ನಾನು ಭಿಕ್ಷೆಬೇಡಿ ಬದುಕಬಲ್ಲೆ ಹಾಗೂ ಮಸೀದಿಯಲ್ಲೂ ಮಲಗಬಲ್ಲೆ ನನಗೆ ಯಾರನ್ನೂ ಯಾವುದನ್ನೂ ಚಿಂತಿಸಬೇಕಾಗಿಲ್ಲ ಎಂದು ತಮ್ಮ ಅಂತರಾಳದ ನೋವನ್ನು ಬಹಿರಂಗಪಡಿಸಿದ್ದಾರೆ.
ರಾಮಚರಿತಮಾನಸದಲ್ಲಿ ವಿರೋಧ ವ್ಯಕ್ತವಾಗಿರುವ ಭಾಗಗಳು
ರಾಮಚರಿತಮಾನಸದಲ್ಲಿ ಭಗವಾನ್ ರಾಮನು ಮರ್ಯಾದಾ ಪುರುಷೋತ್ತಮನಾಗಿದ್ದು, ಸದಾಚಾರದ ಮೂರ್ತರೂಪನಾಗಿದ್ದರು ಅವರ ನಡವಳಿಕೆಯನ್ನು ಇವಿ ರಾಮಸಾಮಿ ಪೆರಿಯಾರ್ ಅವರಂತಹ ಬ್ರಾಹ್ಮಣ ವಿರೋಧಿ ಚಳುವಳಿಗಳ ನಾಯಕರು ಟೀಕಿಸಿದ್ದಾರೆ.
ಅಕ್ಟೋಬರ್ 1956 ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳಿಗೆ ನೀಡಿದ 22 ಭರವಸೆಗಳಲ್ಲಿ, ದೇವರ ಅವತಾರವೆಂದು ಹೇಳಲಾಗುವ ರಾಮ ಮತ್ತು ಕೃಷ್ಣನಲ್ಲಿ ನನಗೆ ನಂಬಿಕೆ ಇಲ್ಲ, ಅಥವಾ ನಾನು ಅದನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಮಚರಿತಮಾನಸದ ಪುಟಗಳನ್ನು ಹರಿದು ಹಾಕಿದ ಸಂಸದ
ರಾಜಕೀಯದಲ್ಲಿ ಬಲಾಢ್ಯರಲ್ಲದ ಜಾತಿಯ ಪ್ರತಿಪಾದನೆಯು ಕೆಲವೊಮ್ಮೆ ರಾಮಚರಿತಮಾನಗಳ ಟೀಕೆಯಲ್ಲಿ ವ್ಯಕ್ತವಾಗಿದೆ. ಉನ್ನತವಲ್ಲದ ಜಾತಿಗಳು ಮತ್ತು ಮಹಿಳೆಯರ ವಿರುದ್ಧವಾಗಿರುವ ಮತ್ತು ಬ್ರಾಹ್ಮಣ ಶ್ರೇಷ್ಠತೆಯ ಕಲ್ಪನೆಯ ಮಾನದಂಡವನ್ನು ಹೊಂದಿರುವವರಿಗೆ ಪ್ರಾಶಸ್ತ್ಯ ನೀಡಿರುವ ತುಳಸಿದಾಸರನ್ನು ಖಂಡಿಸಲು ವಿಮರ್ಶಕರು ಕವಿತೆಯ ಭಾಗಗಳನ್ನು ಬಳಸಿದ್ದಾರೆ.
1974 ರಲ್ಲಿ, ಸಮಾಜವಾದಿ ಪಕ್ಷದ ದೇರಾಪುರ (ಕಾನ್ಪುರ್) ಸಂಸದ, ಚೌಧರಿ ರಾಂಪಾಲ್ ಸಿಂಗ್ ಯಾದವ್, ದಲಿತ ಸಬಲೀಕರಣದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾಗ, ಯುಪಿ ಅಸೆಂಬ್ಲಿಯಲ್ಲಿ ರಾಮಚರಿತಮಾನಸದ ಪುಟಗಳನ್ನು ಹರಿದು ಹಾಕಿದರು. ಅಧ್ಯಕ್ಷ, ಪ್ರೊಫೆಸರ್ ವಾಸುದೇವ್ ಸಿಂಗ್, ಧಾರ್ಮಿಕ ಪುಸ್ತಕದ ವಿರುದ್ಧ ಯಾದವ್ ಅವರ ನಡವಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದರು. ಮತ್ತು ಪ್ರತಿಯೊಬ್ಬ ಸದಸ್ಯರು ಎಲ್ಲಾ ಧಾರ್ಮಿಕ ಪುಸ್ತಕಗಳನ್ನು ಗೌರವಿಸಬೇಕು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ